Israeli hostages: ಹಮಾಸ್ ಬಂಡುಕೋರರ ಹಣೆಗೆ ಮುತ್ತಿಟ್ಟು ಗುಡ್‌ಬೈ ಹೇಳಿದ ಇಸ್ರೇಲ್ ಒತ್ತೆಯಾಳು- ಈ ವಿಡಿಯೊ ಫುಲ್ ವೈರಲ್
ಕದನವಿರಾಮ ಒಪ್ಪಂದದ ಪ್ರಕಾರ ಮೂವರು ಇಸ್ರೇಲ್ ಒತ್ತೆಯಾಳುಗಳನ್ನು ಹಮಾಸ್ ಬಂಡುಕೋರರು ಇಂದು ರಿಲೀಸ್ ಮಾಡಿದ್ದಾರೆ. ಈ ವೇಳೆ ಒಂದು ಹೃದಯಸ್ಪರ್ಶಿ ಘಟನೆಯೊಂದು ನಡೆದಿದ್ದು, ಬಿಡುಗಡೆಯಾಗುತ್ತಿದ್ದಂತೆ ಒತ್ತೆಯಾಳು ಒಬ್ಬ ಹಮಾಸ್ ಉಗ್ರರ ಹಣೆಗೆ ಮುತ್ತಿಟ್ಟು, ಗುಡ್‌ಬೈ ಹೇಳಿದ್ದಾನೆ. ಇದರ ವಿಡಿಯೋ ಬಹಳ ವೈರಲ್ ಆಗಿದೆ.


ನುಸೈರಾತ್: ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ(Hamas Operatives) ನಡುವಿನ ಕದನ ವಿರಾಮ ಒಪ್ಪಂದದ ಬಳಿಕ ಒತ್ತೆಯಾಳುಗಳ(Israeli hostages) ಹಸ್ತಾಂತರ ಪ್ರಕ್ರಿಯೆ ನಡೆಯುತ್ತಿದೆ. ಇಂದು ಕೂಡ ಒಪ್ಪಂದದ ಭಾಗವಾಗಿ ಹಮಾಸ್ ಬಂಡುಕೋರರು ಮೂವರು ಇಸ್ರೇಲ್ ಒತ್ತೆಯಾಳುಗಳನ್ನು ರೆಡ್ ಕ್ರಾಸ್ ಗೆ ಹಸ್ತಾಂತರಿಸಿದೆ. ಈ ವೇಳೆ ಒಂದು ಹೃದಯಸ್ಪರ್ಶಿ ಘಟನೆಯೊಂದು ನಡೆದಿದ್ದು, ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬಿಡುಗಡೆಯಾಗುತ್ತಿದ್ದಂತೆ ಒತ್ತೆಯಾಳು ಒಬ್ಬ ಹಮಾಸ್ ಉಗ್ರರ ಹಣೆಗೆ ಮುತ್ತಿಟ್ಟು, ಗುಡ್‌ಬೈ ಹೇಳಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
⚡️#BREAKING Israeli “hostage” kisses the forehead of 2 Hamas members pic.twitter.com/Icg6TDEyEQ
— War Monitor (@WarMonitors) February 22, 2025
ಕದನವಿರಾಮ ಒಪ್ಪಂದದ ಪ್ರಕಾರ ಮೂವರು ಇಸ್ರೇಲ್ ಒತ್ತೆಯಾಳುಗಳನ್ನು ಹಮಾಸ್ ಬಂಡುಕೋರರು ಇಂದು ರಿಲೀಸ್ ಮಾಡಿದ್ದರು. 20 ವರ್ಷದ ಓಮರ್ ವೆಂಕರ್ಟ್, ಒಮರ್ ಶೆಮ್ ಟೋವ್ ಮತ್ತು ಎಲಿಯಾ ಕೊಹೆನ್ ಅವರನ್ನು ಹಮಾಸ್ ಹಸ್ತಾಂತರಿಸಿದೆ. ಕೇಂದ್ರ ಪಟ್ಟಣವಾದ ನುಸೈರಾತ್‌ನಲ್ಲಿ ನೂರಾರು ಪ್ಯಾಲೆಸ್ಟೇನಿಯರ ಮುಂಭಾಗ ವೇದಿಕೆಯ ಮೇಲೆ ಮುಖವಾಡ ಧರಿಸಿದ, ಶಸ್ತ್ರಸಜ್ಜಿತ ಹಮಾಸ್ ಬಂಡಕೋರರು ಮೂವರು ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದರು. ಈ ವೇಳೆ ವೇದಿಕೆಯ ಕೆಳಗೆ ಕುಟುಂಬಸ್ಥರು ಮತ್ತು ಸ್ನೇಹಿತರ ಸಂಭ್ರಮ ಮುಗಿಲು ಮುಟ್ಟಿತ್ತು. ಆದರೆ ವೇದಿಕೆ ಮೇಲೊಂದು ಅತ್ಯಂತ ಅಪರೂಪವಾದ ದೃಶ್ಯವೊಂದು ಎಲ್ಲರನ್ನೂ ಅಚ್ಚರಿಗೊಳಪಡಿಸಿತ್ತು. 20 ವರ್ಷದ ಓಮರ್ ವೆಂಕರ್ಟ್ ಜತೆಗಿದ್ದ ಹಮಾಸ್ ಬಂಡುಕೋರರ ಹಣೆಗೆ ಮುತ್ತಿಟ್ಟು ಗುಡ್‌ಬೈ ಹೇಳಿದ್ದಾನೆ. ಇದಕ್ಕೆ ಪ್ರತಿಯಾಗಿ ಹಮಾಸ್ ಉಗ್ರ ಕೂಡ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾನೆ.
ಈ ಸುದ್ದಿಯನ್ನೂ ಓದಿ: Yahya Sinwar : ಇಸ್ರೇಲ್ ಸೇನೆ ಹೊಡೆದುರುಳಿಸಿದ ಹಮಾಸ್ ನಾಯಕ ಯಾಹ್ಯಾ ಸಿನ್ವಾರ್‌ನ ಮತ್ತೊಂದು ವಿಡಿಯೋ ವೈರಲ್
ಬಿಡುಗಡೆಯಾದ ಒತ್ತೆಯಾಳುಗಳಾದ ಓಮರ್ ಶೆಮ್ ಟೋವ್, ಎಲಿಯಾ ಕೊಹೆನ್ ಮತ್ತು ಓಮರ್ ವೆಂಕರ್ಟ್ ಹಮಾಸ್ ಸೆರೆಯಲ್ಲಿ 505 ದಿನಗಳನ್ನು ಕಳೆದಿದ್ದಾರೆ ಮತ್ತು ಈಗ ಇಸ್ರೇಲ್‌ಗೆ ಗಡಿಯನ್ನು ದಾಟಿದ್ದಾರೆ. ಈ ಸಂದರ್ಭದಲ್ಲಿ ಅವರ ಕುಟುಂಬಸ್ಥರು , ಸ್ನೇಹಿತರು ಘೋಷಣೆ ಕೂಗಿ ಸಂಭ್ರಮ ಪಟ್ಟರು. ಬಿಡುಗಡೆಯಾದ ಒತ್ತೆಯಾಳುಗಳು ದೈಹಿಕ ಮತ್ತು ಮಾನಸಿಕ ತಪಾಸಣೆಗೊಳಪಡಿಸಲಾಗಿದೆ.