Pahalgam Terror attack: ಭಯೋತ್ಪಾದನೆಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕು ಭಾರತಕ್ಕಿದೆ ಎಂದ ಜರ್ಮನಿ
ನಾಗರಿಕರ ಸಾವಿಗೆ ಕಾರಣವಾದ ಪಹಲ್ಗಾಮ್ ದಾಳಿಯನ್ನು ಖಂಡಿಸಿರುವ ಜರ್ಮನ್ ವಿದೇಶಾಂಗ ಸಚಿವ (German Foreign Minister) ಜೋಹಾನ್ ವಾಡೆಫುಲ್ ( Johann Wadephul), ಭಯೋತ್ಪಾದನೆಯ ವಿರುದ್ಧ ಸಮರವನ್ನು ಮುಂದುವರಿಸಿರುವ ಭಾರತವನ್ನು ಜರ್ಮನಿ (germany) ಬೆಂಬಲಿಸಿದೆ. ಭಯೋತ್ಪಾದನೆಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕು ಭಾರತಕ್ಕೆ ಇದೆ ಎಂದು ಹೇಳಿದ್ದಾರೆ.


ಬರ್ಲಿನ್: ಕಾಶ್ಮೀರದ (kashmir) ಪಹಲ್ಗಾಮ್ (pahalgam) ನ ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯಿಂದ (terror attack) 27 ಮಂದಿ ಸಾವನ್ನಪ್ಪಿದ ಬಳಿಕ ಭಾರತೀಯ ಸೇನೆ ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆಯನ್ನು ನಡೆಸಿ ಪಾಕಿಸ್ತಾನ (pakistan) ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ (POK) ಒಂಬತ್ತು ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಇದರ ಬಳಿಕವೂ ಭಯೋತ್ಪಾದನೆಯ ವಿರುದ್ಧ ಸಮರವನ್ನು ಮುಂದುವರಿಸಿರುವ ಭಾರತವನ್ನು ಜರ್ಮನಿ (germany) ಬೆಂಬಲಿಸಿದೆ. ಭಯೋತ್ಪಾದನೆಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕು ಭಾರತಕ್ಕೆ ಇದೆ ಎಂದು ಜರ್ಮನ್ ವಿದೇಶಾಂಗ ಸಚಿವ (German Foreign Minister) ಜೋಹಾನ್ ವಾಡೆಫುಲ್ ( Johann Wadephul) ಹೇಳಿದ್ದಾರೆ.
ನಾಗರಿಕರ ಸಾವಿಗೆ ಕಾರಣವಾದ ಪಹಲ್ಗಾಮ್ ದಾಳಿಯನ್ನು ಖಂಡಿಸಿರುವ ಅವರು ಶುಕ್ರವಾರ ಬರ್ಲಿನ್‌ನಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನು ನಡೆಸಿದರು. ಭಾರತ ಮತ್ತು ಪಾಕಿಸ್ತಾನದ ನಡುವಿನ ಪ್ರಸ್ತುತ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕಿದೆ. ಎರಡು ರಾಷ್ಟ್ರಗಳು ಸಂಘರ್ಷಗಳನ್ನು ಪರಿಹರಿಸಲು ಸ್ಥಿರವಾದ ಮಾತುಕತೆ ನಡೆಸುವಂತೆ ಸಚಿವ ಜೋಹಾನ್ ವಾಡೆಫುಲ್ ಕರೆ ನೀಡಿದರು.
ಎರಡೂ ಕಡೆಯ ಮಿಲಿಟರಿ ದಾಳಿಗಳ ಅನಂತರ ಭಾರತವು ಭಯೋತ್ಪಾದನೆಯ ವಿರುದ್ಧ ತನ್ನನ್ನು ತಾನು ರಕ್ಷಿಸಿಕೊಳ್ಳುವ ಎಲ್ಲ ಹಕ್ಕನ್ನು ಹೊಂದಿದೆ. ಈಗ ಕದನ ವಿರಾಮ ಜಾರಿಯಲ್ಲಿರುವುದು ತುಂಬಾ ಮೆಚ್ಚುಗೆಯ ಸಂಗತಿ ಎಂದು ವಾಡೆಫುಲ್ ಹೇಳಿದರು. ಮೂರು ರಾಷ್ಟ್ರಗಳ ಯುರೋಪ್ ಭೇಟಿಯ ಭಾಗವಾಗಿ ಪ್ರಸ್ತುತ ಜರ್ಮನಿಗೆ ಭೇಟಿ ನೀಡಿರುವ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್, ಭಯೋತ್ಪಾದನೆಯ ಬಗ್ಗೆ ಭಾರತದ ದೃಢ ನಿಲುವನ್ನು ಪುನರುಚ್ಚರಿಸಿದರು.
ಇದನ್ನೂ ಓದಿ: Viral Video: ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯ ತಲೆಗೆ ಬಂದು ಗುದ್ದಿದ ವ್ಯಕ್ತಿ; ವಿಡಿಯೊ ವೈರಲ್
ಭಾರತ ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ. ಭಾರತ ಎಂದಿಗೂ ಪರಮಾಣು ದಾಳಿ ಬೆದರಿಕೆಗೆ ಮಣಿಯುವುದಿಲ್ಲ ಎಂದು ಅವರು ಹೇಳಿದರು. ಭಾರತವು ದ್ವಿಪಕ್ಷೀಯ ಮಾರ್ಗಗಳ ಮೂಲಕ ಮಾತ್ರ ಪಾಕಿಸ್ತಾನದೊಂದಿಗೆ ವ್ಯವಹರಿಸುತ್ತದೆ. ಆ ವಿಷಯದಲ್ಲಿ ಯಾವುದೇ ಗೊಂದಲ ಇರಬಾರದು ಎಂದ ಜೈಶಂಕರ್, ಭಾರತದ ನಿಲುವಿನ ಬಗ್ಗೆ ಜರ್ಮನಿಯ ತಿಳುವಳಿಕೆಯನ್ನು ಸ್ವಾಗತಿಸಿ, ಜರ್ಮನಿಯ ತಿಳುವಳಿಕೆಯನ್ನು ನಾವು ಗೌರವಿಸುತ್ತೇವೆ ಎಂದು ಅವರು ಹೇಳಿದರು.