ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Guinness World Record: ಮೆದುಳಿನ ಕ್ಯಾನ್ಸರ್‌ನಿಂದ ಮೃತಪಟ್ಟ ಬಾಲಕಿಗೆ ಆಟದ ಮೂಲಕ ಗೌರವ

ಮೆದುಳಿನ ಕ್ಯಾನ್ಸರ್‌ನಿಂದ 2017ರಲ್ಲಿ ನಿಧನಳಾದ ಆರು ವರ್ಷದ ಅಲೆಗ್ರಾ ವಾಸಿಲಿಯೊ ತನ್ನ ಹೆತ್ತವರೊಂದಿಗೆ ಮೊನೊಪೊಲಿ ಆಟ ಆಡಬೇಕೆಂದು ಬಯಸಿದ್ದಳು. ಅವಳ ಜೀವನ ಮತ್ತು ಆಟದ ಮೇಲಿನ ಅವಳ ಪ್ರೀತಿಯನ್ನು ಗೌರವಿಸುವ ಸಲುವಾಗಿ ಅವಳ ಪೋಷಕರು ಲಿಟಲ್ ಲೆಗ್ಸ್ ಫೌಂಡೇಶನ್‌ನ ಸಹಯೋಗದೊಂದಿಗೆ ಮಾರ್ಚ್ 30ರಂದು ಬೃಹತ್ ಸ್ಪರ್ಧೆಯನ್ನು ಆಯೋಜಿಸಿದರು. ಈ ಸ್ಪರ್ಧೆಯಲ್ಲಿ 918 ಭಾಗವಹಿಸಿದ್ದರು. ಇದು ಈಗ ಗಿನ್ನೆಸ್‌ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿದೆ.

ಮೊನೊಪೊಲಿ ಆಟದಲ್ಲಿ ಗಿನ್ನೆಸ್ ದಾಖಲೆ

ಸಿಡ್ನಿ: ಮೆದುಳಿನ ಕ್ಯಾನ್ಸರ್ (Brain cancer)ನಿಂದ 2017ರಲ್ಲಿ ಮೃತಪಟ್ಟ ಆರು ವರ್ಷದ ಅಲೆಗ್ರಾ ವಾಸಿಲಿಯೊ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಆಸ್ಟ್ರೇಲಿಯಾದ (Australia) ಸಿಡ್ನಿಯಲ್ಲಿ (Sydney) 900ಕ್ಕೂ ಹೆಚ್ಚು ಜನರು ಸೇರಿ ಮೊನೊಪೊಲಿ (Monopoly) ಆಟವನ್ನು ಆಡಿದರು. ಸಾಯುವ ಮುನ್ನ ಬಾಲಕಿಯು ಹೆತ್ತವರೊಂದಿಗೆ ಈ ಆಟವನ್ನು ಆಡಲು ಬಯಸಿದ್ದಳು. ಆದರೆ ಅದು ಸಾಧ್ಯವಾಗದ ಕಾರಣ ಮೃತ ಬಾಲಕಿಗೆ ಗೌರವ ಸೂಚಿಸಲು ಈ ಆಟವನ್ನು ಆಯೋಜಿಸಲಾಗಿದ್ದು, ಇದರಲ್ಲಿ 900ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರಿಂದ ಇದು ಈಗ ವಿಶ್ವ ದಾಖಲೆ (Guinness World Record)ಯಾಗಿದೆ.

ಮೊನೊಪೊಲಿ ಆಟವು ಬೋರ್ಡ್ ಮೇಲೆ ಆಡುವ ಆಟ. ಇದರಲ್ಲಿ ಆಟಗಾರರು ಗೇಮ್ ಬೋರ್ಡ್ ಸುತ್ತಲೂ ಚಲಿಸಲು ಎರಡು ದಾಳಗಳನ್ನು ಬಳಸುತ್ತಾರೆ. ಇದರಲ್ಲಿ ಸಂಪತ್ತು ಖರೀದಿ ಮತ್ತು ಮಾರಾಟ ಮಾಡಲಾಗುತ್ತದೆ. ಮನೆ, ಹೊಟೇಲ್‌ಗಳನ್ನೂ ಗಳಿಸಬಹುದು. ಆಟಗಾರರು ತಮ್ಮ ಎದುರಾಳಿಗಳಿಂದ ಬಾಡಿಗೆ ವಸೂಲಿ ಮಾಡುತ್ತಾರೆ. ಅವರನ್ನು ದಿವಾಳಿ ಮಾಡುವ ಗುರಿಯನ್ನು ಹೊಂದಿರುತ್ತಾರೆ.

ಮೊನೊಪೊಲಿ ಆಟವನ್ನು ಆಡಲು ಸಿಡ್ನಿಯಲ್ಲಿ 900ಕ್ಕೂ ಹೆಚ್ಚು ಜನರು ಸೇರಿ ಈ ಆಟವನ್ನು ಪ್ರೀತಿಸುತ್ತಿದ್ದ ಬಾಲಕಿಗೆ ಗೌರವ ಸಲ್ಲಿಸಿದರು.

re

ಮೆದುಳಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಆರು ವರ್ಷದ ಅಲೆಗ್ರಾ ವಾಸಿಲಿಯೊ 2017ರಲ್ಲಿ ನಿಧನ ಹೊಂದಿದ್ದಳು. ಅಲೆಗ್ರಾ ವಾಸಿಲಿಯೊ ತನ್ನ ಹೆತ್ತವರೊಂದಿಗೆ ಈ ಆಟ ಆಡಬೇಕೆಂದು ಬಯಸಿದ್ದಳು. ಅವಳ ಜೀವನ ಮತ್ತು ಆಟದ ಮೇಲಿನ ಅವಳ ಪ್ರೀತಿಯನ್ನು ಗೌರವಿಸುವ ಸಲುವಾಗಿ ಅವಳ ಪೋಷಕರು ಲಿಟಲ್ ಲೆಗ್ಸ್ ಫೌಂಡೇಶನ್‌ನ ಸಹಯೋಗದೊಂದಿಗೆ ಮಾರ್ಚ್ 30ರಂದು ಬೃಹತ್ ಸ್ಪರ್ಧೆಯನ್ನು ಆಯೋಜಿಸಿದರು.

ಲಿಟಲ್ ಲೆಗ್ಸ್ ಫೌಂಡೇಶನ್ ಮಕ್ಕಳಲ್ಲಿ ಕಾಣಿಸುವ ಮೆದುಳಿನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಆಸ್ಟ್ರೇಲಿಯಾದ ದತ್ತಿ ಸಂಸ್ಥೆಯಾಗಿದೆ. ಮಾರ್ಚ್ 30ರಂದು ನಡೆದ ಮೊನೊಪೊಲಿ ಸ್ಪರ್ಧೆಯಲ್ಲಿ 918 ಭಾಗವಹಿಸಿದ್ದರು. ಅವರು 150 ಟೇಬಲ್‌ಗಳಲ್ಲಿ ಕುಳಿತು ಆಡಿ ಗಿನ್ನೆಸ್ ವಿಶ್ವ ದಾಖಲೆಯನ್ನು ಬರೆದರು.

ಇದನ್ನೂ ಓದಿ: Viral Video: ಕ್ರೂರಿಗಳ ಚಿತ್ರಹಿಂಸೆಗೆ ನರಳಿ ನರಳಿ ಪ್ರಾಣ ಬಿಟ್ಟ ಹೋರಿ- ಆಘಾತಕಾರಿ ವಿಡಿಯೊ ಇಲ್ಲಿದೆ

ಈ ಕುರಿತು ಪ್ರತಿಕ್ರಿಯಿಸಿರುವ ವಾಸಿಲಿಯೊ ಅವರ ತಾಯಿ ಸ್ಯೂ ಎಲ್ಲಾನ್ ವಾಸಿಲಿಯೊ, ಯುವಕರು ಮತ್ತು ಹಿರಿಯರು ಒಟ್ಟಿಗೆ ಸೇರಿ ಮಗಳ ಆಸೆಯನ್ನು ಪೂರೈಸಿದ್ದೇವೆ. ಎಲ್ಲರೂ ಹೆಮ್ಮೆ ಪಡುವಂತಹದನ್ನು ಸಾಧಿಸಲು ಸಂತೋಷವಾಗಿದೆ. ನಮ್ಮ ಮಗಳನ್ನು ಕೊಂದ ಕಾಯಿಲೆ ಬಗ್ಗೆ ಈ ರೀತಿ ಜಾಗೃತಿ ಮೂಡಿಸುತ್ತಿರುವುದು ಸಂತೋಷ ತಂದಿದೆ ಎಂದರು.

ಲಿಟಲ್ ಲೆಗ್ಸ್ ಫೌಂಡೇಶನ್ ಅನ್ನು ಬೆಂಬಲಿಸಲು ಒಟ್ಟು 918 ಮಂದಿ ಈ ಆಟವನ್ನು ಆಡಿದರು. ಈ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು ಬರೆದರು. ಈ ಹಿಂದೆ ಲಿಟಲ್ ಲೆಗ್ಸ್ ಫೌಂಡೇಶನ್ ಆಯೋಜಿಸಿದ್ದ ಮೊನೊಪೊಲಿ ಆಟದಲ್ಲಿ 733 ಮಂದಿ ಪಾಲ್ಗೊಂಡಿದ್ದರು. ಲಿಟಲ್ ಲೆಗ್ಸ್ ಫೌಂಡೇಶನ್ ಎರಡನೇ ಬಾರಿಗೆ ಈ ಸ್ಪರ್ಧೆಯನ್ನು ಆಯೋಜಿಸಿದೆ.

ವಾಸಿಲಿಯೊ ಕುಟುಂಬವು ಪ್ರಸ್ತುತ ಭವಿಷ್ಯದಲ್ಲಿ ಮತ್ತೊಮ್ಮೆ ಮೊನೊಪೊಲಿ ಪಂದ್ಯಗಳನ್ನು ಆಯೋಜಿಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ. ಆದರೆ ಇನ್ನೊಂದು ಸ್ಪರ್ಧೆ ನಡೆಸಲು ಸಿದ್ಧರಾಗಿರುವುದಾಗಿ ಹೇಳಿದರು.