Mehul Choksi: ಸ್ವಿಟ್ಜರ್ಲೆಂಡ್‌ಗೆ ಪಲಾಯನ ಮಾಡುತ್ತಿದ್ದ ಮೆಹುಲ್ ಚೋಕ್ಸಿಯ ಬಂಧನ ಆಗಿದ್ದಾದರೂ ಹೇಗೆ? ಭಾರತ-ಬೆಲ್ಜಿಯಂ ಜಂಟಿ ಕಾರ್ಯಾಚರಣೆ ಹೇಗಿತ್ತು?
ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಗೆ 13,500 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಬೇಕಾಗಿದ್ದ ಪ್ರಮುಖ ಆರೋಪಿ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ಬೆಲ್ಜಿಯಂ ಪೊಲೀಸರು ಬಂಧಿಸಿದ್ದಾರೆ. ವೈದ್ಯಕೀಯ ಚಿಕಿತ್ಸೆ ಪಡೆಯುವ ನೆಪದಲ್ಲಿ ಸ್ವಿಟ್ಜರ್‌ಲ್ಯಾಂಡ್‌ಗೆ ಪಲಾಯನ ಮಾಡಲು ಸಿದ್ಧತೆ ನಡೆಸುತ್ತಿದ್ದಾಗ ಆತನನ್ನು ಬಂಧನ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಬ್ರಸೆಲ್ಸ್ : ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಗೆ 13,500 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಬೇಕಾಗಿದ್ದ ಪ್ರಮುಖ ಆರೋಪಿ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು (Mehul Choksi) ಬೆಲ್ಜಿಯಂ ಪೊಲೀಸರು ಬಂಧಿಸಿದ್ದಾರೆ. ವೈದ್ಯಕೀಯ ಚಿಕಿತ್ಸೆ ಪಡೆಯುವ ನೆಪದಲ್ಲಿ ಸ್ವಿಟ್ಜರ್‌ಲ್ಯಾಂಡ್‌ಗೆ ಪಲಾಯನ ಮಾಡಲು ಸಿದ್ಧತೆ ನಡೆಸುತ್ತಿದ್ದಾಗ ಆತನನ್ನು ಬಂಧನ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ಅಧಿಕಾರಿಗಳು ಏಳು ವರ್ಷಗಳ ನಿರಂತರ ಹುಡುಕಾಟದಲ್ಲಿ ಈ ಬಂಧನವು ಒಂದು ಪ್ರಮುಖ ಪ್ರಗತಿಯಾಗಿದೆ.
ಗೀತಾಂಜಲಿ ಗ್ರೂಪ್‌ನ ಮಾಲೀಕ ಮತ್ತು ಭಾರತದ ಅತಿದೊಡ್ಡ ಬ್ಯಾಂಕ್ ವಂಚನೆಗಳಲ್ಲಿ ಒಂದಾದ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಹಗರಣದಲ್ಲಿ ಪ್ರಮುಖ ಆರೋಪಿಯಾಗಿರುವ ಮೆಹುಲ್ ಚೋಕ್ಸಿ 2018 ರಲ್ಲಿ ತಮ್ಮ ಸೋದರಳಿಯ ನೀರವ್ ಮೋದಿ , ಅವರ ಪತ್ನಿ ಅಮಿ ಮೋದಿ ಮತ್ತು ಸಹೋದರ ನೀಶಾಲ್ ಮೋದಿ ಅವರೊಂದಿಗೆ ಭಾರತ ಬಿಟ್ಟು ಪರಾರಿಯಾಗಿದ್ದ. ನಂತರ ಅವರೆಲ್ಲರೂ ಆಂಟಿಗುವಾನ್ ಪೌರತ್ವ ಪಡೆದುಕೊಂಡಿದ್ದರು. ಆತನ ಬಂಧನವು , ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಸೇರಿದಂತೆ ಭಾರತೀಯ ಸಂಸ್ಥೆಗಳಿಗೆ ಹಲವಾರು ಸಂಸ್ಥೆಗಳಿಗೆ ಅನೂಕೂಲಕರವಾಗಲಿದೆ.
ಚೋಕ್ಸಿ ಕ್ಯಾನ್ಸರ್ ಚಿಕಿತ್ಸೆಗಾಗಿ ಸ್ವಿಟ್ಜರ್ಲೆಂಡ್‌ಗೆ ಹಿರ್ಸ್‌ಲ್ಯಾಂಡೆನ್ ಕ್ಲಿನಿಕ್ ಆರಾವ್‌ನಲ್ಲಿ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಸ್ಪಷ್ಟವಾದ ನಂತರ ಭಾರತೀಯ ಅಧಿಕಾರಿಗಳು ನೀಡಿದ ಮಾಹಿತಿಯ ಮೇರೆಗೆ ಬೆಲ್ಜಿಯಂ ಪೊಲೀಸರು ತ್ವರಿತವಾಗಿ ಕಾರ್ಯನಿರ್ವಹಿಸಿದರು ಎಂದು ಮೂಲಗಳು ತಿಳಿಸಿವೆ. ಕಳೆದ ವರ್ಷ ನವೆಂಬರ್‌ನಲ್ಲಿ ಚೋಕ್ಸಿ ಬೆಲ್ಜಿಯಂನಿಂದ ನಕಲಿ ದಾಖಲೆಗಳನ್ನು ಬಳಸಿ ಎಫ್ ರೆಸಿಡೆನ್ಸಿ ಕಾರ್ಡ್ ಪಡೆದಿದ್ದರು, ಇದರಲ್ಲಿ ಬೆಲ್ಜಿಯಂ ಪ್ರಜೆಯಾಗಿರುವ ಆತ ಪತ್ನಿ ಪ್ರೀತಿ ಚೋಕ್ಸಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಅವರು ರೆಸಿಡೆನ್ಸಿ ಪಡೆಯಲು ಮಾನವೀಯ ಕಾರಣಗಳು ಮತ್ತು ಗಂಭೀರ ವೈದ್ಯಕೀಯ ಸ್ಥಿತಿಗಳನ್ನು ನಕಲಿ ದಾಖಲೆಗಳನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಸುದ್ದಿಯನ್ನೂ ಓದಿ: Mehul Choksi: ಪಿಎನ್‌ಬಿ 'ವಂಚನೆ' ಪ್ರಕರಣದ ಆರೋಪಿ ಮೆಹುಲ್ ಚೋಕ್ಸಿ ಬೆಲ್ಜಿಯಂನಲ್ಲಿ ಬಂಧನ
2018 ಮತ್ತು 2021 ರಲ್ಲಿ ಮುಂಬೈ ನ್ಯಾಯಾಲಯವು ಹೊರಡಿಸಿದ ಎರಡು ಜಾಮೀನು ರಹಿತ ವಾರಂಟ್‌ಗಳ ಆಧಾರದ ಮೇಲೆ ಆಂಟ್ವೆರ್ಪ್‌ನಲ್ಲಿ ಚೋಕ್ಸಿಯನ್ನು ಬಂಧಿಸಲಾಗಿದೆ. ಪ್ರಸ್ತುತ ಬೆಲ್ಜಿಯಂ ಜೈಲಿನಲ್ಲಿರುವ ಚೋಕ್ಸಿ ಜಾಮೀನು ಅರ್ಜಿ ವಿಚಾರಣೆ ಒಂದು ವಾರದ ನಂತರ ನಡೆಯುವ ನಿರೀಕ್ಷೆಯಿದೆ. ಆತನ ಬಂಧನವನ್ನು ವಕೀಲ ವಿಜಯ್ ಅಗರ್ವಾಲ್ ದೃಢಪಡಿಸಿದ್ದಾರೆ. ಇದರ ವಿರುದ್ಧ ನಾವು ಮೇಲ್ಮನವಿ ಸಲ್ಲಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತೇವೆ, ಮತ್ತು ನಂತರ... ಅವರನ್ನು ಜೈಲಿನಿಂದ ಹೊರಗೆ ಕರೆದೊಯ್ಯುವಂತೆ ನಾವು ವಿನಂತಿಸುತ್ತೇವೆ. ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಅವರಿಗೆ ಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿದ್ದಾರೆ.