ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಭಾರತಕ್ಕೆ ಶೀಘ್ರದಲ್ಲೇ ಗುಡ್‌ನ್ಯೂಸ್‌ ನೀಡ್ತಾರಾ ಡೊನಾಲ್ಡ್‌ ಟ್ರಂಪ್‌? ಸುಂಕ ಕಡಿತದ ಬಗ್ಗೆ ಭಾರತೀಯ ರಾಯಭಾರಿ ಹೇಳಿದ್ದೇನು?

ಭಾರತೀಯ ರಾಯಭಾರಿ ವಿನಯ್ ಕ್ವಾಟ್ರಾ ಅವರು ರಷ್ಯಾದಿಂದ ತೈಲ ಖರೀದಿಗೆ ಸಂಬಂಧಿಸಿ ಭಾರತಕ್ಕೆ ಸುಂಕ ಕಡಿತ ಮಾಡುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ನನ್ನ ಒಳ್ಳೆಯ ಸ್ನೇಹಿತ. ನಾನು ಸಂತೋಷವಾಗಿಲ್ಲ ಎಂಬುದು ಅವರಿಗೆ ಗೊತ್ತಿದೆ ಎಂದು ಹೇಳಿದರು.

ಅಮೆರಿಕದಿಂದ ಭಾರತಕ್ಕೆ ಸುಂಕ ಕಡಿತವಾಗುವುದೇ?

(ಸಂಗ್ರಹ ಚಿತ್ರ) -

ವಾಷಿಂಗ್ಟನ್: ರಷ್ಯಾದಿಂದ ತೈಲ ಖರೀದಿಗೆ (Russian oil purchase) ಸಂಬಂಧಿಸಿ ಭಾರತಕ್ಕೆ ಸುಂಕ ಕಡಿತಗೊಳಿಸಲು (US tariff) ಅಮೆರಿಕದ ಭಾರತೀಯ ರಾಯಭಾರಿ (Indian Ambassador) ವಿನಯ್ ಕ್ವಾಟ್ರಾ (Vinay Kwatra) ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರಿಗೆ ಮನವಿ ಮಾಡಿದ್ದು ಇದಕ್ಕೆ ಪ್ರತಿಕ್ರಿಯಿಸಿರುವ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ (PM Narendra Modi) ನನ್ನ ಒಳ್ಳೆಯ ಸ್ನೇಹಿತ. ನಾನು ಸಂತೋಷವಾಗಿಲ್ಲ ಎಂಬುದು ಅವರಿಗೆ ಗೊತ್ತಿದೆ ಎಂದು ಹೇಳಿದ್ದಾರೆ ಎಂಬುದಾಗಿ ಅಮೆರಿಕದ ಸೆನೆಟರ್ ಲಿಂಡ್ಸೆ ಗ್ರಹಾಂ (US Senator Lindsey Graham) ತಿಳಿಸಿದ್ದಾರೆ. ಏರ್ ಫೋರ್ಸ್ ಒನ್‌ನಲ್ಲಿ ಭಾನುವಾರ ಟ್ರಂಪ್ ಜೊತೆಗೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಅಮೆರಿಕದ ಭಾರತೀಯ ರಾಯಭಾರಿ ವಿನಯ್ ಕ್ವಾಟ್ರಾ ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ರಷ್ಯಾದ ತೈಲ ಖರೀದಿಗೆ ಸಂಬಂಧಿಸಿ ಭಾರತದ ಮೇಲೆ ವಿಧಿಸಲಾಗಿರುವ ಸುಂಕವನ್ನು ಕಡಿತಗೊಳಿಸುವಂತೆ ತಿಳಿಸಿದ್ದಾರೆ. ಕಳೆದ ಡಿಸೆಂಬರ್ ನಲ್ಲಿ ವಾಷಿಂಗ್ಟನ್‌ನಲ್ಲಿರುವ ರಾಯಭಾರಿಯ ಅಧಿಕೃತ ನಿವಾಸವಾದ ಇಂಡಿಯಾ ಹೌಸ್‌ನಲ್ಲಿ ತಮ್ಮನ್ನು ಭೇಟಿಯಾಗಿ ಅವರು ಈ ವಿನಂತಿಯನ್ನು ಸಲ್ಲಿಸಿದ್ದಾರೆ ಎಂದರು.

'ಮೊದಲು ಕಾರಣಗಳನ್ನು ಗುರುತಿಸಿ'; ದೆಹಲಿ ವಾಯು ಮಾಲಿನ್ಯದ ಬಗ್ಗೆ ಸುಪ್ರೀಂ ಕೋರ್ಟ್ ತರಾಟೆ

ವಿನಯ್ ಕ್ವಾಟ್ರಾ ಅವರು ಭಾರತವು ಹೇಗೆ ರಷ್ಯಾದ ತೈಲವನ್ನು ಕಡಿಮೆ ಬೆಲೆಗೆ ಖರೀದಿ ಮಾಡುತ್ತಿದೆ ಎಂಬುದರ ಬಗ್ಗೆ ಅವರು ಮಾತನಾಡಲು ಬಯಸಿದ್ದರು ಎಂದು ಗ್ರಹಾಂ ತಿಳಿಸಿದರು.

ಅಗ್ಗದ ರಷ್ಯಾ ತೈಲವನ್ನು ನೀವು ಖರೀದಿಸುತ್ತಿದ್ದರೆ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಅವರ ಯುದ್ಧಕ್ಕೆ ನೀವು ಪ್ರೋತ್ಸಾಹ ಕೊಟ್ಟಂತೆ ಅಲ್ಲವೇ ಎಂದ ಅವರು ಈ ಸಂದರ್ಭದಲ್ಲಿ ರಿಚರ್ಡ್ ಬ್ಲೂಮೆಂಥಾಲ್, ಶೆಲ್ಡನ್ ವೈಟ್‌ಹೌಸ್, ಪೀಟರ್ ವೆಲ್ಚ್, ಡ್ಯಾನ್ ಸುಲ್ಲಿವನ್ ಮತ್ತು ಮಾರ್ಕ್‌ವೇನ್ ಮುಲ್ಲಿನ್ ಸೇರಿದಂತೆ ಕೆಲವು ಯುಎಸ್ ಸೆನೆಟರ್‌ಗಳನ್ನು ಇದ್ದರು. ಇವರನ್ನು ಕೇಳಿ ಎಂದಿದ್ದಕ್ಕೆ ಕ್ವಾಟ್ರಾ ಅವರಿಂದ ತಕ್ಷಣದ ಯಾವುದೇ ಪ್ರತಿಕ್ರಿಯೆಗಳು ಬಂದಿಲ್ಲ. ಟ್ರಂಪ್ ಅವರು ಸುಂಕ ವಿಧಿಸಿದ್ದರಿಂದ ಭಾರತ ಈಗ ರಷ್ಯಾದಿಂದ ಗಣನೀಯವಾಗಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ತೈಲವನ್ನು ಖರೀದಿಸುತ್ತಿದೆ ಎಂದು ನಂಬುತ್ತೇನೆ. ರಷ್ಯಾ ಮತ್ತು ಉಕ್ರೇನ್ ಸಂಘರ್ಷವನ್ನು ಕೊನೆಗೊಳಿಸಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮೇಲೆ ಒತ್ತಡ ಹೇರಬೇಕು ಎಂದು ಲಿಂಡ್ಸೆ ಗ್ರಹಾಂ ಅವರು ತಿಳಿಸಿದರು.

ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ: ಇರಾನ್‌ಗೆ ಅನಗತ್ಯ ಪ್ರಯಾಣ ತಪ್ಪಿಸುವಂತೆ ನಾಗರಿಕರಿಗೆ ಭಾರತ ಸಲಹೆ

ನಾನು ಸಂತೋಷವಾಗಿಲ್ಲ ಎಂದ ಟ್ರಂಪ್

ಇದೇ ಸಂದರ್ಭದಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ರಷ್ಯಾದಿಂದ ಭಾರತ ತೈಲ ಖರೀದಿ ಮಾಡುತ್ತಿರುವುದರಿಂದ ನಾನು ಸಂತೋಷವಾಗಿಲ್ಲ ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೊತ್ತಿದೆ ಎಂಬುದು ನನಗೆ ತಿಳಿದಿದೆ ಎಂದು ಹೇಳಿದರು.

ಭಾರತ ನನ್ನನ್ನು ಸಂತೋಷಪಡಿಸಲು ಬಯಸಿತ್ತು. ಮೋದಿ ತುಂಬಾ ಒಳ್ಳೆಯ ವ್ಯಕ್ತಿ. ಅವರಿಗೆ ನನ್ನನ್ನು ಸಂತೋಷಪಡಿಸುವುದು ಮುಖ್ಯವಾಗಿತ್ತು. ಅವರು ಇದನ್ನು ವ್ಯಾಪಾರದ ದೃಷ್ಟಿಕೋನದಲ್ಲಿ ನೋಡಿದರೆ ನಾವು ಅವರ ಮೇಲೆ ಸುಂಕವನ್ನು ಬಹಳ ಬೇಗನೆ ಹೆಚ್ಚಿಸಬಹುದು. ಅದು ಅವರಿಗೆ ತುಂಬಾ ಕೆಟ್ಟದಾಗಿರುತ್ತದೆ ಎಂದು ತಿಳಿಸಿದರು.