Barack Obama: ಬರಾಕ್ ಒಬಾಮ ಒಬ್ಬ ಸಲಿಂಗಿ, ಆತನ ಹೆಂಡತಿ ಹೆಣ್ಣಲ್ಲ, ಗಂಡು! ಎಲಾನ್ ಮಸ್ಕ್ ತಂದೆಯಿಂದ ಇದೆಂತಾ ಹೇಳಿಕೆ!?
ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ (Barack Obama) ಮತ್ತು ಅವರ ಪತ್ನಿ ಮಿಶೆಲ್ ಒಬಾಮ ಕುರಿತು, ಎಲಾನ್ ಮಸ್ಕ್ ಅವರ ತಂದೆ ಎರೋಲ್ ಮಸ್ಕ್ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದು, ಮಿಚೆಲ್ ಒಬಾಮಾ ಮಹಿಳೆಯಂತೆ ಉಡುಗೆ ತೊಡುವ ಪುರುಷ ಎಂದು ಅಚ್ಚರಿಯ ಹೇಳಿಕೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಎರೋಲ್ ಮಸ್ಕ್

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ (Barack Obama) ಮತ್ತು ಅವರ ಪತ್ನಿ ಮಿಶೆಲ್ ಒಬಾಮ ಕುರಿತು, ಬಿಲೆನಿಯರ್ ಉದ್ಯಮಿ ಎಲಾನ್ ಮಸ್ಕ್ ಅವರ ತಂದೆ ಎರೋಲ್ ಮಸ್ಕ್ (Errol Musk) ವಿಚಿತ್ರ ಹೇಳಿಕೆಯೊಂದನ್ನು ನೀಡಿದ್ದು, ಇದೀಗ ಎಲ್ಲಡೆ ವೈರಲ್ ಆಗಿದೆ. ಎರೋಲ್ ಮಸ್ಕ್, ಮಿಶೆಲ್ ಒಬಾಮ ಅವರ ಲಿಂಗದ ಬಗ್ಗೆ ಮಾತನಾಡಿದ್ದು, ಅವರು ಮಹಿಳೆಯಂತೆ ಉಡುಗೆ ತೊಡುವ ಪುರುಷ ಎಂದು ಹೇಳಿದ್ದಾರೆ. ಅಷ್ಟಕ್ಕೇ ಸುಮ್ಮನಾಗದ ಎರೋಲ್ ಮಸ್ಕ್ ಬರಾಕ್ ಒಬಾಮ ಬಗ್ಗೆ ಮಾತನಾಡಿ ಅವರನ್ನು ಸಲಿಂಗಿ ಎಂದು ಕರೆದಿದ್ದಾರೆ. ಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುವ ಎರೋಲ್ ಮಸ್ಕ್ ಇದೀಗ ಮತ್ತೊಂದು ವಿವಾದವನ್ನು ಮೈ ಮೇಲೆಳೆದುಕೊಂಡಿದ್ದಾರೆ.
ವೈಡ್ ಅವೇಕ್ ಪಾಡ್‌ಕ್ಯಾಸ್ಟ್‌ನಲ್ಲಿ ಜೋಶುವಾ ರೂಬಿನ್ ಅವರೊಂದಿಗೆ ಮಾತನಾಡಿದ ಮಸ್ಕ್ ಬರಾಕ್ ಒಬಾಮಾ ಅವರನ್ನು ಓರ್ವ ಸಲಿಂಗಕಾಮಿ ಎಂದು ಹೇಳಿದ್ದಾರೆ. ಬರಾಕ್ ಒಬಾಮಾ ಮಹಿಳೆಯಂತೆ ವೇಷ ಧರಿಸುವ ಪುರುಷನನ್ನು ಮದುವೆಯಾದ ಸಲಿಂಗಕಾಮಿ ಎಂಬುದನ್ನು ನಾವು ಅರಿತುಕೊಂಡಿದ್ದೇವೆ. 2014ರಲ್ಲಿ ಹಾಸ್ಯನಟ ಜಾನ್ ರಿವರ್ಸ್ ಮಾಜಿ ಪ್ರಥಮ ಮಹಿಳೆಯ ಲಿಂಗದ ಬಗ್ಗೆ ತಮಾಷೆ ಮಾಡಿದಾಗ, ನಮಗೆ ಈ ಪಿತೂರಿ ಸಿದ್ಧಾಂತದ ಸತ್ಯ ಗೊತ್ತಾಯಿತು. ಬರಾಕ್ ಒಬಾಮ ಸಲಿಂಗಕಾಮಿಯಾಗಿದ್ದು, ಮಿಶೆಲ್ ಮಹಿಳೆಯರಂತೆ ವೇಷ ಧರಿಸಿ ಜನರ ಕಣ್ಣಿಗೆ ಮಣ್ಣೆರೆಚುತ್ತಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆ ಆಶ್ಚರ್ಯಚಕಿತನಾದ ನಿರೂಪಕ ಇದು ನಿಜವೇ ಎಂದು ಕೇಳಿದ್ದಾರೆ. ಅದಕ್ಕವರು ಹೌದು ನಿಮಗೆ ಇದು ತಿಳಿದಿಲ್ಲವೇ ಎಂದು ಹೇಳಿದ್ದಾರೆ.
ಜಾನ್ ರಿವರ್ಸ್ ಅವರು ಮಿಶೆಲ್ ಅವರ ನೈಜ ಲಿಂಗದ ಬಗ್ಗೆ ಸತ್ಯ ಹೇಳಿದ ಎರಡು ವಾರಗಳ ಬಳಿಕ ತೀರಿಕೊಂಡರು. ಆಕೆಯನ್ನು ಒಬಾಮ ಅವರ ಕಡೆಯವರೇ ಕೊಂದು ಹಾಕಿದರು. ಜಾನ್ ರಿವರ್ಸ್ 2014ರ ಸೆಪ್ಟೆಂಬರ್ 4ರಂದು ಮೆದುಳು ಸಂಬಂಧಿ ರೋಗಕ್ಕೆ ತುತ್ತಾಗಿ ಮರಣ ಹೊಂದಿದರು ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಮಿಶೆಲ್ ಓರ್ವ ಗಂಡು ಎಂಬ ಸತ್ಯವನ್ನು ನಾನು ಈಗ ಧೈರ್ಯವಾಗಿ ಹೇಳಬಲ್ಲೆ. ನನಗೆ ಯಾರ ಭಯವೂ ಇಲ್ಲ ಎಂದು ಎರೋಲ್ ಮಸ್ಕ್ ಹೇಳಿದ್ದಾರೆ.
ಪಾಡ್‌ಕಾಸ್ಟ್‌ನಲ್ಲಿ ತಮ್ಮ ತಮ್ಮ ಪುತ್ರ ಎಲಾನ್ ಮಸ್ಕ್ ಅವರ ಬಗ್ಗೆಯೂ ಮಾತನಾಡಿರುವ ಎರೋಲ್ ಮಸ್ಕ್, "ಎಲಾನ್ ಮಸ್ಕ್ ಒಬ್ಬ ಒಳ್ಳೆಯ ತಂದೆಯಲ್ಲ ಎಂಬ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ಎಲಾನ್ ಮಸ್ಕ್‌ಗೆ ಒಬ್ಬ ಪೋಷಕನಿಗಿರುವ ಯಾವ ಗುಣ ಹಾಗೂ ಕೌಶಲ್ಯಗಳೂ ಇಲ್ಲ ಎಂದು ಹೇಳಿದ್ದಾರೆ. ಆತ ತನ್ನ ಕೆಲಸದಲ್ಲಿಯೇ ಹೆಚ್ಚಾಗಿ ತೊಡಗಿಸಿಕೊಂಡಿದ್ದಾನೆ. ಅವನಿಗೆ ತನ್ನ ಮಕ್ಕಳ ಬಗ್ಗೆ ಗಮನವಿಲ್ಲ ಲಾನ್ ಮಸ್ಕ್ ಅವರ ಮೊದಲ ಮಗು ನೆವಾಡಾ ಅಲೆಕ್ಸಾಂಡರ್ ಜನನದ ಕೆಲವೇ ದಿನಗಳಲ್ಲಿ ನಿಧನ ಹೊಂದಿದ್ದು, ಇದಕ್ಕೆ ಎಲಾನ್ ಮಸ್ಕ್‌ನ ನಿರ್ಲಕ್ಷ್ಯ ಧೋರಣೆಗಳೇ ಕಾರಣ ಎಂದು ಅವರು ಆರೋಪಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Vivek Ramswamy: ವಿವೇಕ್ ರಾಮಸ್ವಾಮಿ ಟ್ರಂಪ್ ಸಂಪುಟ ಬಿಡಲು ಎಲಾನ್ ಮಸ್ಕ್ ಕಾರಣನಾ?
ನಾನು ಹೀಗೆ ಹೇಳುವುದನ್ನು ಕೇಳಿದರೆ, ಅವನು ನನ್ನನ್ನು ಗುಂಡಿಕ್ಕಬಹುದು. ಆದರೆ ನಾನು ಸಾವಿಗೆ ಹೆದರಿ ಸುಳ್ಳು ಹೇಳಲು ಸಾಧ್ಯವಿಲ್ಲ. ಎಲಾನ್ ಮಸ್ಕ್ ಖಂಡಿತವಾಗಿಯೂ ಓರ್ವ ಉತ್ತಮ ತಂದೆಯಲ್ಲ ಎಂದು ಹೇಳಿದ್ದಾರೆ. ಸದ್ಯ ಅವರ ಈ ಹೇಳಿಕೆಗೆ ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗಿದೆ. ಕೆಲವರು ಮಸ್ಕ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.