ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʼʼಭಾರತ ಎಂದರೆ ಇದುʼʼ: ಗ್ರಾಮೀಣ ಭಾರತದ ವಿಶೇಷ ಆತಿಥ್ಯಕ್ಕೆ ಮನಸೋತ ನೆದರ್‌ಲ್ಯಾಂಡ್ಸ್‌ ಮಹಿಳೆ; ವಿಡಿಯೊ ನೋಡಿ

Viral Video: ನೆದರ್‌ಲ್ಯಾಂಡ್ಸ್‌ನಿಂದ ಒಬ್ಬಂಟಿಯಾಗಿ ಆಗಮಿಸಿದ ವಿದೇಶಿ ಮಹಿಳೆಯೊಬ್ಬರು ಭಾರತದ ಆತಿಥ್ಯವನ್ನು ಕೊಂಡಾಡಿದ್ದಾರೆ. ಅಸ್ಸಾಂನ ಹಳ್ಳಿಯಲ್ಲಿ ಜನರು ನೀಡಿದ ಔದಾರ್ಯದ ಕ್ಷಣವನ್ನು ಅವರು ಹಂಚಿಕೊಂಡಿದ್ದು, ತನ್ನ ಪರಿಚಯವೇ ಇಲ್ಲದೆ ಇದ್ದರೂ ಮನೆಯವರಂತೆ ಸತ್ಕರಿಸಿದ್ದಾರೆ ಎಂದು ಭಾವುಕರಾಗಿದ್ದಾರೆ.

ಅಸ್ಸಾಂ ಹಳ್ಳಿಗರ ಪ್ರೀತಿ ಕಂಡು ಬೆರಗಾದ ವಿದೇಶಿ ಮಹಿಳೆ ಹೇಳಿದ್ದೇನು?

ಅಸ್ಸಾಂ ಹಳ್ಳಿಗರ ಪ್ರೀತಿ ಕಂಡು ಬೆರಗಾದ ವಿದೇಶಿ ಮಹಿಳೆ -

Profile
Pushpa Kumari Jul 27, 2026 9:11 PM

ನವದೆಹಲಿ, ಜು. 27: ಭಾರತಕ್ಕೆ ಭೇಟಿ ನೀಡಿದ ಅನೇಕ ವಿದೇಶಿಗರು ಇಲ್ಲಿನ ಪ್ರಕೃತಿ ಸೌಂದರ್ಯ ಹಾಗೂ ಇಲ್ಲಿನ ಆಚರಣೆಗೆ ಮನಸೋಲುತ್ತಾರೆ. ಅದೇ ರೀತಿ ಇಲ್ಲಿನ ಆತಿಥ್ಯವು ವಿದೇಶಿಗರನ್ನು ಮತ್ತೆ- ಮತ್ತೆ ಕೈ ಬೀಸಿ ಕರೆಯುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ನೆದರ್‌ಲ್ಯಾಂಡ್ಸ್‌ನಿಂದ ಭಾರತಕ್ಕೆ ಒಬ್ಬಂಟಿಯಾಗಿ ಬಂದ ವಿದೇಶಿ ಮಹಿಳೆಯೊಬ್ಬರು ಭಾರತದ ಆತಿಥ್ಯವನ್ನು ಕೊಂಡಾಡಿದ್ದಾರೆ. ಅಸ್ಸಾಂನ ಹಳ್ಳಿಯಲ್ಲಿ ಜನರು ನೀಡಿದ ಔದಾರ್ಯದ ಕ್ಷಣವನ್ನು ಹಂಚಿಕೊಂಡಿದ್ದು (Viral News) ತನ್ನ ಪರಿಚಯ ಇಲ್ಲದಿದ್ದರೂ ಅವರ ಮನೆಯವರಂತೆ ತಮ್ಮನ್ನು ಸತ್ಕಾರ ಮಾಡಿರುವ ರೀತಿಗೆ ಭಾವುಕರಾಗಿದ್ದಾರೆ.

ನೆದರ್‌ಲ್ಯಾಂಡ್ಸ್‌ನ ಮೈಕೆ ಎಂಬ ಪರವಾಸಿ ಮಹಿಳೆ ಅಸ್ಸಾಂನ ಹಳ್ಳಿಯೊಂದಕ್ಕೆ ಅಲ್ಲಿನ ಸೌಂದರ್ಯ ಸವಿಯಲು ಭೇಟಿ ನೀಡಿದ್ದರು. ಆದರೆ ಇಲ್ಲಿಗೆ ಆಗಮಿಸಿದಾಗ ಜನರು ಅವರನ್ನು ಆದರದಿಂದ ಸತ್ಕರಿಸಿದರು. ವೈರಲ್ ವಿಡಿಯೊವೊದಲ್ಲಿ ಅವರಿಗೆ ಒಂದಲ್ಲ ಎರಡು ಮನೆಯಿಂದ ಭೋಜನ ಬಂದಿತ್ತು ಎನ್ನುವುದನ್ನು ತಿಳಿಸಿದ್ದಾರೆ.

ವಿಡಿಯೊ ನೋಡಿ:

ವೈರಲ್ ಆಗಿರುವ ವಿಡಿಯೊದಲ್ಲಿ ಅವರು, ʼʼಮೊದಲು ನನಗೆ ಬಿಸಿಬಿಸಿ ಅನ್ನ ಮತ್ತು ಮೊಟ್ಟೆಯ ಸಾರನ್ನು ಸವಿಯುವ ಅವಕಾಶ ಸಿಕ್ಕಿತ್ತು. ಇದು ಮೊದಲ ಊಟ, ಇಲ್ಲಿಂದ ನಾನು ಮತ್ತೊಂದು ಮನೆಯ ಊಟಕ್ಕೆ ಹೋಗಬೇಕು‌. ಭಾರತೀಯ ಜನರೇ ನನಗೆ ತುಂಬಾ ತಿನ್ನಿಸುತ್ತಾರೆ. ತುಂಬಾ ರುಚಿಯಾದ ಆಹಾರ" ಎಂದು ಅವರು ಹೇಳಿದ್ದಾರೆ. ಅಡುಗೆ ಮಾಡಿದ ಮಹಿಳೆಯ ಮಗನ ಬಳಿ ಮಾತನಾಡುತ್ತಾ, "ನಿಮ್ಮ ತಾಯಿ ತುಂಬಾ ಅದ್ಭುತವಾಗಿ ಅಡುಗೆ ಮಾಡುತ್ತಾರೆ" ಎಂದು ಮೆಚ್ಚುಗೆ ಸೂಚಿಸಿದ್ದಾರೆ,

ಬ್ಲಿಂಕ್‌ಇಟ್‌ ಉಚಿತ ಆಂಬ್ಯುಲೆನ್ಸ್‌ ಸೇವೆಯಿಂದ ಉಳಿಯಿತು ವೃದ್ಧೆಯ ಪ್ರಾಣ

ವಿಡಿಯೊದಲ್ಲಿ, ಒಂದೇ ಸಂಜೆ ಎರಡು ಭೋಜನಗಳನ್ನು ಏಕೆ ಮಾಡುತ್ತಿದ್ದೇನೆ ಎಂದು ವಿವರಿಸುತ್ತಾ, "ಎಲ್ಲರೂ ನಾನು ಅವರ ಆಹಾರವನ್ನು ಸವಿಯಬೇಕೆಂದು ಬಯಸಿದ್ದರು. ಅದಕ್ಕಾಗಿಯೇ ನಾನು ಎರಡು ಬಾರಿ ಭೋಜನ ಮಾಡುತ್ತೇನೆ. ಇಲ್ಲಿನ ಜನರು ತುಂಬಾ ಒಳ್ಳೆಯವರು" ಎಂದು ಹೇಳುತ್ತಾ, ನೆಲದ ಮೇಲೆ ಕುಳಿತು ಕುಟುಂಬದೊಂದಿಗೆ ತಮ್ಮ ಎರಡನೇ ಸುತ್ತಿನ ಭೋಜನವನ್ನು ಆನಂದಿಸಿದರು.

ಈ ಹೃದಯಸ್ಪರ್ಶಿ ಕ್ಲಿಪ್ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದ್ದು ಅನೇಕರು ಭಾರತೀಯರ ಆತಿಥ್ಯವನ್ನು ಹೊಗಳಿದ್ದಾರೆ. ಒಬ್ಬರು, ʼʼಶುದ್ಧ ಪ್ರೀತಿ ಹಾಗೂ ಆತಿಥ್ಯ ಇಲ್ಲಿ ಮಾತ್ರ ಕಾಣಲು ಸಾಧ್ಯʼʼ ಎಂದರು.