Giorgia Meloni: ಭಾರತೀಯರಂತೆ ನಮಸ್ತೆ ಮಾಡಿದ ಮೆಲೋನಿ- ಇಟಲಿ ಪ್ರಧಾನಿಯ ಈ ವಿಡಿಯೊ ಎಷ್ಟು ವೈರಲ್ ಆಗ್ತಿದೆ ಗೊತ್ತಾ?
ರಷ್ಯಾದೊಂದಿಗಿನ ಉಕ್ರೇನಿಯನ್ ಯುದ್ಧದ ಕುರಿತು ಉನ್ನತ ಮಟ್ಟದ ಮಾತುಕತೆಗಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಕರೆದಿದ್ದ ಯುರೋಪಿಯನ್ ನಾಯಕರ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಟ್ರಂಪ್ ಸಹಾಯಕರಿಗೆ ನಮಸ್ತೆ ಮಾಡಿದರು. ಇದು ಅಲ್ಲಿದ್ದವರಿಗೆ ಅಚ್ಚರಿಯನ್ನು ಉಂಟು ಮಾಡಿತು.


ವಾಷಿಂಗ್ಟನ್: ಶ್ವೇತಭವನಕ್ಕೆ ( White House ) ಸೋಮವಾರ ಆಗಮಿಸಿದ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ( Italian Prime Minister Giorgia Meloni) ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರ ಸಹಾಯಕರಿಗೆ ಎರಡು ಕೈಗಳನ್ನು ಜೋಡಿಸಿ ನಮಸ್ತೆ ಮಾಡಿದರು. ಇದು ಅಲ್ಲಿದ್ದವರಿಗೆ ಅಚ್ಚರಿ ಮೂಡಿಸಿತ್ತು. ರಷ್ಯಾದೊಂದಿಗಿನ (Russia) ಉಕ್ರೇನಿಯನ್ (Ukraine) ಯುದ್ಧದ ಕುರಿತು ಉನ್ನತ ಮಟ್ಟದ ಮಾತುಕತೆಗಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಕರೆದಿದ್ದ ಯುರೋಪಿಯನ್ ನಾಯಕರ ಸಭೆಯಲ್ಲಿ ಪಾಲ್ಗೊಳ್ಳಲು ಅವರು ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ.
ಶ್ವೇತಭವನದಲ್ಲಿ ಟ್ರಂಪ್ ಸಹಾಯಕರಿಗೆ ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ನಮಸ್ತೆ ಮಾಡಿದರು. ಇದನ್ನು ನೋಡಿ ಅಲ್ಲಿದ್ದವರು ಅಚ್ಚರಿ ವ್ಯಕ್ತಪಡಿಸಿದರು. ರಷ್ಯಾದೊಂದಿಗಿನ ಯುದ್ಧದ ಕುರಿತು ಚರ್ಚಿಸಲು ಟ್ರಂಪ್ ಆಯೋಜಿಸಿದ್ದ ಸಭೆಗೆ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕೂಡ ಆಗಮಿಸಿದ್ದರು.
ಸಾಮಾನ್ಯವಾಗಿ ಟ್ರಂಪ್ ಅವರೊಂದಿಗಿನ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸುವ ನಾಯಕರು ಸಾಮಾನ್ಯವಾಗಿ ಹಸ್ತ ಲಾಘವ ಮಾಡಿಕೊಳ್ಳುವುದು ವಾಡಿಕೆ. ಆದರೆ ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು "ನಮಸ್ತೆ" ಮೂಲಕ ಟ್ರಂಪ್ ಸಹಾಯಕರಿಗೆ ಶುಭಾಶಯ ಕೋರಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಉಳಿದವರು ಹಸ್ತ ಲಾಘವ ಮಾಡಿ, ಪರಸ್ಪರ ಅಪ್ಪಿಕೊಂಡು ಔಪಚಾರಿಕವಾಗಿ ಪರಿಚಯ ಮಾಡಿಕೊಳ್ಳುತ್ತಿದ್ದಾಗ ಇಟಲಿ ಪ್ರಧಾನಿಯ ಈ ನಡೆಗೆ ಸಾಕಷ್ಟು ಅಚ್ಚರಿ ವ್ಯಕ್ತವಾಯಿತು.
ಈ ವಿಡಿಯೊ ನೋಡಿ
ಯುರೋಪಿಯನ್ ನಾಯಕರೊಂದಿಗೆ ಶ್ವೇತಭವನಕ್ಕೆ ಬಂದ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಡೊನಾಲ್ಡ್ ಟ್ರಂಪ್ ಆತ್ಮೀಯವಾಗಿ ಬರಮಾಡಿಕೊಂಡರು. ರಷ್ಯಾದೊಂದಿಗಿನ ಯುದ್ಧದ ಕುರಿತು ಉನ್ನತ ಮಟ್ಟದ ಸಭೆಗೆ ಆಗಮಿಸಿದ ಝೆಲೆನ್ಸ್ಕಿ ಕಪ್ಪು ಸೂಟ್ ನೊಂದಿಗೆ ಜಾಕೆಟ್ ಮತ್ತು ಶರ್ಟ್ ಧರಿಸಿದ್ದರು. ಆದರೆ ಅವರು ಟೈ ಧರಿಸಿರಲಿಲ್ಲ. ಈ ಉಡುಗೆಯು ಸಾಮಾನ್ಯ ಮಿಲಿಟರಿ ಉಡುಪಿನಂತೆ ಕಾಣುತ್ತದೆ. ಜೂನ್ ಆರಂಭದಲ್ಲಿ ಹೇಗ್‌ನಲ್ಲಿ ನಡೆದ ನ್ಯಾಟೋ ಶೃಂಗಸಭೆಯಲ್ಲಿ ಅವರು ಇದೇ ರೀತಿಯ ಉಡುಗೆಯನ್ನು ಧರಿಸಿದ್ದರು.
ಈ ಸುದ್ದಿಯನ್ನೂ ಓದಿ: Miss Universe India: ಮಣಿಕಾ ಮುಡಿಗೆ ಮಿಸ್ ಯುನಿವರ್ಸ್ ಇಂಡಿಯಾ 2025 ಕಿರೀಟ
ರಷ್ಯಾದೊಂದಿಗೆ ಶಾಂತಿ ಒಪ್ಪಂದ ಮಾಡಿಸುವ ಸಲುವಾಗಿ ಟ್ರಂಪ್ ಅವರು ಝೆಲೆನ್ಸ್ಕಿ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಕಳೆದ ವಾರ ಅಲಾಸ್ಕಾದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗಿನ ಶೃಂಗಸಭೆಯಲ್ಲಿ ಟ್ರಂಪ್ ಭಾಗವಹಿಸಿದ್ದರು. ಈ ವೇಳೆ ಮಾಸ್ಕೊ ಎರಡು ಬೇಡಿಕೆಗಳನ್ನು ಇಟ್ಟಿದ್ದು, ಇದರಲ್ಲಿ ಉಕ್ರೇನ್ ಕ್ರೈಮಿಯಾ ಮತ್ತು ನ್ಯಾಟೋದಲ್ಲಿ ಸ್ಥಾನ ಪಡೆಯುವ ಮಹತ್ವಾಕಾಂಕ್ಷೆಗಳನ್ನು ತ್ಯಜಿಸಬೇಕು ಎಂದು ಹೇಳಿದೆ.