ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Los Angeles Protest: ಲಾಸ್ ಏಂಜಲೀಸ್‌ ಧಗ ಧಗ- ಕಾರುಗಳಿಗೆ ಬೆಂಕಿ ಉಗ್ರ ಪ್ರತಿಭಟನೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಲಸಿಗರ ವಿರುದ್ಧದ ಕಠಿಣ ಕ್ರಮ ಮತ್ತು ನ್ಯಾಷನಲ್ ಗಾರ್ಡ್‌ ನಿಯೋಜನೆಯಿಂದ ಲಾಸ್ ಏಂಜಲೀಸ್‌ನಲ್ಲಿ ಉದ್ವಿಗ್ನತೆ ತಾರಕಕ್ಕೇರಿದೆ. ಭಾನುವಾರ ಸಾವಿರಾರು ಪ್ರತಿಭಟನಾಕಾರರು ಬೀದಿಗಿಳಿದು, ಪ್ರಮುಖ ಹೆದ್ದಾರಿಯ 101 ರಸ್ತೆಯನ್ನು ಬಂದ್‌ ಮಾಡಿ ವಾಹನಗಳಿಗೆ ಬೆಂಕಿ ಹಚ್ಚಿದರು.

ಲಾಸ್ ಏಂಜಲೀಸ್‌ ಧಗ ಧಗ- ಕಾರುಗಳಿಗೆ ಬೆಂಕಿ ಉಗ್ರ ಪ್ರತಿಭಟನೆ

Profile Sushmitha Jain Jun 9, 2025 12:36 PM

ಲಾಸ್ ಏಂಜಲೀಸ್: ಅಮೆರಿಕ (America) ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ವಲಸಿಗರ(immigration agents) ವಿರುದ್ಧದ ಕಠಿಣ ಕ್ರಮ ಮತ್ತು ನ್ಯಾಷನಲ್ ಗಾರ್ಡ್‌ ನಿಯೋಜನೆಯಿಂದ ಲಾಸ್ ಏಂಜಲೀಸ್‌ನಲ್ಲಿ ಉದ್ವಿಗ್ನತೆ ತಾರಕಕ್ಕೇರಿದೆ. ಭಾನುವಾರ ಸಾವಿರಾರು ಪ್ರತಿಭಟನಾಕಾರರು ಬೀದಿಗಿಳಿದು, ಪ್ರಮುಖ ಹೆದ್ದಾರಿಯ 101 ರಸ್ತೆಯನ್ನು ಬಂದ್‌ ಮಾಡಿ ವಾಹನಗಳಿಗೆ ಬೆಂಕಿ ಹಚ್ಚಿದರು. ಸ್ಥಳೀಯ ಪೊಲೀಸರು ಟಿಯರ್ ಗ್ಯಾಸ್, ರಬ್ಬರ್ ಗುಂಡುಗಳು, ಮತ್ತು ಫ್ಲಾಶ್ ಬ್ಯಾಂಗ್‌ಗಳನ್ನು ಬಳಸಿ ಜನರನ್ನು ನಿಯಂತ್ರಿಸಿದರು.

ಪ್ರತಿಭಟನೆಯ ಹಿನ್ನೆಲೆ

ಟ್ರಂಪ್ ಅವರ ವಲಸಿಗರ ವಿರುದ್ಧದ ಕಾರ್ಯಾಚರಣೆಯನ್ನು ವಿರೋಧಿಸಿ ಮೂರನೇ ದಿನ ಪ್ರತಿಭಟನೆ ನಡೆದಿತ್ತು. ಶುಕ್ರವಾರದಿಂದ ಆರಂಭವಾದ ಈ ಆಂದೋಲನವು ಶನಿವಾರ ಪ್ಯಾರಾಮೌಂಟ್ ಮತ್ತು ಕಾಂಪ್ಟನ್‌ಗೆ ವ್ಯಾಪಿಸಿತ್ತು. ಶನಿವಾರ ವಲಸೆ ಗಸ್ತು ವಾಹನಗಳನ್ನು ತಡೆಯಲು ಕೆಲವರು ಕಲ್ಲು ಮತ್ತು ಸಿಮೆಂಟ್ ತುಂಡುಗಳನ್ನು ಎಸೆದಿದ್ದರು. ಇದಕ್ಕೆ ಪ್ರತಿಯಾಗಿ ಫೆಡರಲ್ ಏಜೆಂಟ್‌ಗಳು ಟಿಯರ್ ಗ್ಯಾಸ್ ಬಳಸಿದ್ದರು. ಕಳೆದ ವಾರದಲ್ಲಿ 100ಕ್ಕೂ ಹೆಚ್ಚು ವಲಸಿಗರನ್ನು ಬಂಧಿಸಲಾಗಿತ್ತು.

ಮೆಟ್ರೋಪಾಲಿಟನ್ ಡಿಟೆನ್ಶನ್ ಸೆಂಟರ್‌ನಲ್ಲಿ 300 ನ್ಯಾಷನಲ್ ಗಾರ್ಡ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಪ್ರತಿಭಟನಾಕಾರರು “ಶೇಮ್” ಮತ್ತು “ಗೋ ಹೋಮ್” ಘೋಷಣೆಗಳೊಂದಿಗೆ ಗಾರ್ಡ್‌‌ಗಳನ್ನು ಎದುರಿಸಿದರು. ಕೆಲವರು ಗಾರ್ಡ್‌‌ಗಳ ಸಮೀಪಕ್ಕೆ ತೆರಳಿದಾಗ, ಪೊಲೀಸರು ಸ್ಮೋಕ್ ತುಂಬಿದ ಕ್ಯಾನಿಸ್ಟರ್‌ಗಳನ್ನು ಎಸೆದರು. ಲಾಸ್ ಏಂಜಲೀಸ್ ಪೊಲೀಸರು ಅಕ್ರಮ ಗುಂಪಿನ ಆರೋಪದ ಮೇಲೆ ಚದುರಿಸಲು ಯತ್ನಿಸಿದರು.

ಗವರ್ನರ್ ಗಾವಿನ್ ನ್ಯೂಸಮ್, ಗಾರ್ಡ್‌‌ಗಳ ನಿಯೋಜನೆಯನ್ನು “ರಾಜ್ಯ ಸಾರ್ವಭೌಮತೆಯ ಗಂಭೀರ ಉಲ್ಲಂಘನೆ” ಎಂದು ಟೀಕಿಸಿ, ಟ್ರಂಪ್‌ಗೆ ಪತ್ರ ಬರೆದು ಗಾರ್ಡ್‌‌ಗಳನ್ನು ವಾಪಸ್ ಕರೆಯಲು ಒತ್ತಾಯಿಸಿದ್ದಾರೆ. ಮೇಯರ್ ಕಾರೆನ್ ಬಾಸ್, “ಇದು ಸಾರ್ವಜನಿಕ ಸುರಕ್ಷತೆಯ ಬಗ್ಗೆ ಅಲ್ಲ, ಇದು ಟ್ರಂಪ್‌ರ ರಾಜಕೀಯ ಅಜೆಂಡಾ” ಎಂದಿದ್ದಾರೆ. ಟ್ರಂಪ್, “ಲಾಸ್ ಏಂಜಲೀಸ್‌ನಲ್ಲಿ ಹಿಂಸಾಚಾರಿಗಳಿಗೆ ಯಾವುದೇ ರಿಯಾಯಿತಿಯಿಲ್ಲ” ಎಂದು ಹೇಳಿದ್ದಾರೆ. ಗವರ್ನರ್ ಒಪ್ಪಿಗೆ ಇಲ್ಲದೆ ಗಾರ್ಡ್‌‌ಗಳು ನಿಯೋಜನೆಯಾದದ್ದು 1965ರ ಬಳಿಕ ಮೊದಲ ಬಾರಿಗೆ ಎಂದು ಬ್ರೆನನ್ ಸೆಂಟರ್ ಫಾರ್ ಜಸ್ಟಿಸ್ ತಿಳಿಸಿದೆ.

ಈ ಸುದ್ದಿಯನ್ನೂ ಓದಿ: Los Angeles Wildfire: ಲಾಸ್‌ ಏಂಜಲಿಸ್‌ನಲ್ಲಿ ನಿಲ್ಲದ ಕಾಡ್ಗಿಚ್ಚು; ಸಾವಿನ ಸಂಖ್ಯೆ 24ಕ್ಕೆ ಏರಿಕೆ- ಮತ್ತೊಂದೆಡೆ ಮನೆಗಳಿಗೆ ಖದೀಮರು ಕನ್ನ

ವರ್ಮಾಂಟ್ ಸೆನೆಟರ್ ಬರ್ನಿ ಸ್ಯಾಂಡರ್ಸ್, ಟ್ರಂಪ್‌ರ ಕ್ರಮವನ್ನು “ದೇಶವನ್ನು ಸರ್ವಾಧಿಕಾರದತ್ತ ಕೊಂಡೊಯ್ಯುವ ಕ್ರಮ” ಎಂದಿದ್ದಾರೆ. ಮಾಜಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, “ವಲಸಿಗರ ಬಂಧನ ಮತ್ತು ನ್ಯಾಷನಲ್ ಗಾರ್ಡ್‌ ನಿಯೋಜನೆಯು ಭಯ ಮತ್ತು ವಿಭಜನೆಯನ್ನು ಹರಡುವ ಯೋಜನೆ” ಎಂದಿದ್ದಾರೆ. ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್‌ಸೆತ್, “ಹಿಂಸೆ ಮುಂದುವರಿದರೆ ಸಕ್ರಿಯ ಕರ್ತವ್ಯದ ಮೆರೀನ್ಸ್‌ ಅನ್ನು ನಿಯೋಜಿಸಲಾಗುವುದು” ಎಂದು ಬೆದರಿಕೆ ಹಾಕಿದ್ದಾರೆ.