ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pakistan: ಪಾಕ್‌ ಕುತಂತ್ರಕ್ಕೆ ಮಲೇಷ್ಯಾದಿಂದ ತಕ್ಕ ಪಾಠ; ಮತ್ತೆ ತೀವ್ರ ಮುಖಭಂಗ

Pak Islamic nations call ಭಾರತದ ನಿಯೋಗಕ್ಕೆ ಅಡ್ಡಿಯನ್ನುಂಟು ಮಾಡಲು ಮುಂದಾಗಿರುವ ಕುತಂತ್ರಿ ಪಾಕಿಸ್ತಾನ ʻಇಸ್ಲಾಂ ಧರ್ಮʼ ಎಂಬ ಟ್ರಂಪ್‌ ಕಾರ್ಡ್‌ ಪ್ಲೇ ಮಾಡಲು ಸಂಚು ರೂಪಿಸಿದೆ. ಇಸ್ಲಾಂ ರಾಷ್ಟ್ರಗಳು ಭಾರತದ ವಿರುದ್ಧ ಒಗ್ಗಟ್ಟಾಗಬೇಕು ಎಂದು ಕರೆ ನೀಡಿದೆ. ಪಾಕಿಸ್ತಾನ ಭಾರತೀಯ ನಿಯೋಗದ ಮಲೇಷ್ಯಾ ಭೇಟಿಯನ್ನು ಹಳಿತಪ್ಪಿಸಲು ಪ್ರಯತ್ನಿಸಿತು. ಆದರೆ ಪಾಕಿಸ್ತಾನದ ಹಸ್ತಕ್ಷೇಪವನ್ನು ಮಲೇಷ್ಯಾ ತಿರಸ್ಕರಿಸಿದೆ.

ಪಾಕ್‌ ಕುತಂತ್ರಕ್ಕೆ ಮಲೇಷ್ಯಾದಿಂದ ತಕ್ಕ ಪಾಠ; ಮತ್ತೆ ತೀವ್ರ ಮುಖಭಂಗ

Rakshita Karkera Rakshita Karkera Jun 4, 2025 10:56 AM

ನವದೆಹಲಿ: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ಬಳಿಕ ಭಾರತ ಪ್ರಪಂಚಾದ್ಯಂತ ಸರ್ವಪಕ್ಷ ಸದಸ್ಯರ ನಿಯೋಗವನ್ನು ಭಾರತ ಕಳಿಸಿರುವುದು ಪಾಕಿಸ್ತಾನದ(Pakistan) ಕಿಚ್ಚು ಹೊತ್ತಿ ಉರಿಯುವಂತೆ ಮಾಡಿದೆ. ಇದೀಗ ಭಾರತದ ನಿಯೋಗಕ್ಕೆ ಅಡ್ಡಿಯನ್ನುಂಟು ಮಾಡಲು ಮುಂದಾಗಿರುವ ಕುತಂತ್ರಿ ಪಾಕಿಸ್ತಾನ ʻಇಸ್ಲಾಂ ಧರ್ಮʼ ಎಂಬ ಟ್ರಂಪ್‌ ಕಾರ್ಡ್‌ ಪ್ಲೇ ಮಾಡಲು ಸಂಚು ರೂಪಿಸಿದೆ. ಇಸ್ಲಾಂ ರಾಷ್ಟ್ರಗಳು ಭಾರತದ ವಿರುದ್ಧ ಒಗ್ಗಟ್ಟಾಗಬೇಕು ಎಂದು ಕರೆ ನೀಡಿದೆ. ಪಾಕಿಸ್ತಾನ ಭಾರತೀಯ ನಿಯೋಗದ ಮಲೇಷ್ಯಾ ಭೇಟಿಯನ್ನು ಹಳಿತಪ್ಪಿಸಲು ಪ್ರಯತ್ನಿಸಿತು. ಆದರೆ ಪಾಕಿಸ್ತಾನದ ಹಸ್ತಕ್ಷೇಪವನ್ನು ಮಲೇಷ್ಯಾ ತಿರಸ್ಕರಿಸಿದೆ ಆ ಮೂಲಕ ಪಾಕ್‌ ತೀವ್ರ ಮುಖಭಂಗ ಎದುರಿಸುವಂತಾಗಿದೆ.

ಭಾರತೀಯ ನಿಯೋಗದ ಕಾರ್ಯಕ್ರಮಗಳನ್ನು ರದ್ದುಗೊಳಿಸುವಂತೆ ಮಲೇಷ್ಯಾದ ಅಧಿಕಾರಿಗಳನ್ನು ಪಾಕಿಸ್ತಾನಿ ರಾಯಭಾರ ಕಚೇರಿಯು ಒತ್ತಾಯಿಸಿತು. ಆದರೆ ಪಾಕ್‌ನ ಈ ಕುತಂತ್ರ ಕೆಲಸ ಮಾಡಲಿಲ್ಲ ಮತ್ತು ಭಾರತದ ನಿಯೋಗಕ್ಕೆ ಮಲೇಷ್ಯಾದಿಂದ ಸಂಪೂರ್ಣ ಬೆಂಬಲ ದೊರೆಯಿತು ಎಂದು ಮೂಲಗಳು ತಿಳಿಸಿವೆ. ನಿಯೋಗದ ಎಲ್ಲಾ ಕಾರ್ಯಕ್ರಮಗಳು ಯೋಜಿಸಿದಂತೆ ನಡೆದವು. ಈ ಬೆಳವಣಿಗೆಯನ್ನು ಇಸ್ಲಾಮಾಬಾದ್‌ಗೆ ದೊಡ್ಡ ರಾಜತಾಂತ್ರಿಕ ಹಿನ್ನಡೆ ಎಂದು ಕರೆಯಲಾಗಿದೆ.

ಮಲೇಷ್ಯಾ ಸರ್ಕಾರಕ್ಕೆ ಪತ್ರ ಬರೆದಿರುವ ಪಾಕಿಸ್ತಾನ, ಆಪರೇಷನ್ ಸಿಂಧೂರ್ ಸಂಪರ್ಕ ಕಾರ್ಯಕ್ರಮಗಳನ್ನು ರದ್ದುಗೊಳಿಸಬೇಕೆಂಬ ಪಾಕಿಸ್ತಾನ ಪಾಕಿಸ್ತಾನ ಮನವಿ ಮಾಡಿತ್ತು. ಅಲ್ಲದೇ ಸಂಜಯ್ ಝಾ ನೇತೃತ್ವದ ನಿಯೋಗದ ಎಲ್ಲಾ 10 ಕಾರ್ಯಕ್ರಮಗಳನ್ನು ರದ್ದುಗೊಳಿಸುವಂತೆ ಮಲೇಷ್ಯಾ ಸರ್ಕಾರಿ ಅಧಿಕಾರಿಗಳನ್ನು ಒತ್ತಾಯಿಸಿತು, "ನಾವು ಇಸ್ಲಾಮಿಕ್ ದೇಶ, ನೀವು ಇಸ್ಲಾಮಿಕ್ ದೇಶ... ಭಾರತೀಯ ನಿಯೋಗದ ಮಾತನ್ನು ಕೇಳಬೇಡಿ, ಮಲೇಷ್ಯಾದಲ್ಲಿ ಅವರ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ" ಎಂದು ಮನವಿ ಮಾಡಿತ್ತು. ಆದರೆ ಪಾಕಿಸ್ತಾನದ ವಿನಂತಿಯನ್ನು ತಿರಸ್ಕರಿಸಿದ ಮಲೇಷ್ಯಾ ಸರ್ಕಾರವು ಒಂಬತ್ತು ಸದಸ್ಯರ ನಿಯೋಗಕ್ಕೆ ಎಲ್ಲಾ 10 ಪ್ರಸ್ತಾವಿತ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಮತಿ ನೀಡಿತು. ಈ ನಿಯೋಗ ಜಪಾನ್‌, ದಕ್ಷಿಣ ಕೊರಿಯಾ, ಸಿಂಗಾಪುರ ಮತ್ತು ಇಂಡೋನೇಷ್ಯಾ ಭೇಟಿ ಬಳಿಕ ಕೊನಯ ಭೇಟಿಯಾಗಿ ಮಲೇಷ್ಯಾಕ್ಕೆ ಬಂದಿಳಿದಿದೆ.

ಈ ಸುದ್ದಿಯನ್ನೂ ಓದಿ: Pakistani TikToker: ಪಾಕಿಸ್ತಾನಿ ಟಿಕ್‌ಟಾಕ್‌ ಸ್ಟಾರ್‌ ಶೂಟೌಟ್‌; ಮರ್ಯಾದಾ ಹತ್ಯೆ ಶಂಕೆ

ಜೆಡಿಯು ಸಂಸದ ಸಂಜಯ್ ಝಾ ನೇತೃತ್ವದಲ್ಲಿ ಮಲೇಷ್ಯಾಕ್ಕೆ ತೆರಳಿದ್ದ ಭಾರತೀಯ ನಿಯೋಗದಲ್ಲಿ ಬಿಜೆಪಿ ಸಂಸದರಾದ ಅಪರಾಜಿತಾ ಸಾರಂಗಿ, ಬ್ರಿಜ್ ಲಾಲ್, ಪ್ರದಾನ್ ಬರುವಾ ಮತ್ತು ಹೇಮಾಂಗ್ ಜೋಶಿ, ತೃಣಮೂಲ ಕಾಂಗ್ರೆಸ್‌ನ ಅಭಿಷೇಕ್ ಬ್ಯಾನರ್ಜಿ, ಸಿಪಿಎಂನ ಜಾನ್ ಬ್ರಿಟ್ಟಾಸ್, ಕಾಂಗ್ರೆಸ್‌ನ ಸಲ್ಮಾನ್ ಖುರ್ಷಿದ್ ಮತ್ತು ಬಹ್ರೇನ್ ಮತ್ತು ಫ್ರಾನ್ಸ್‌ನ ಮಾಜಿ ಭಾರತೀಯ ರಾಯಭಾರಿ ಮೋಹನ್ ಕುಮಾರ್ ಇದ್ದರು. ಈ ನಿಯೋಗ ಮಲೇಷ್ಯಾದ ಪ್ರಧಾನಿ ಮಹಾತಿರ್ ಮೊಹಮ್ಮದ್ ಅವರ ಸಂಪುಟದಲ್ಲಿ ಮಾಜಿ ಸಚಿವರಾಗಿದ್ದ ವೈಬಿ ಸಿಮ್ ತ್ಜೆ ತ್ಜಿನ್ ಅವರನ್ನು ಭಾರತೀಯ ನಿಯೋಗ ಭೇಟಿ ಮಾಡಿತು ಮತ್ತು ಆಪರೇಷನ್ ಸಿಂದೂರ್ ಅಡಿಯಲ್ಲಿ ಭಾರತದ "ದೃಢ ನಿಲುವನ್ನು" ಒತ್ತಿ ಹೇಳಿತು ಮತ್ತು ಭಯೋತ್ಪಾದನೆಯ ಬಗ್ಗೆ ತನ್ನ ಶೂನ್ಯ-ಸಹಿಷ್ಣುತೆಯ ನಿಲುವನ್ನು ಪುನರುಚ್ಚರಿಸಿತು.