ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Melania Trump: ಟ್ರಂಪ್‌ ಪತ್ನಿಯ ವೆಡ್ಡಿಂಗ್‌ ಗೌನ್‌ ಹರಾಜಿಗೆ? ಬೆಲೆ ಕೇಳಿದ್ರೆ ಶಾಕ್‌ ಆಗೋದು ಗ್ಯಾರಂಟಿ!

Melania Trump: 2010ರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ವಿವಾಹವಾಗಿದ್ದ ಮೆಲಾನಿಯಾ ಟ್ರಂಪ್‌ ಅವರು ತಮ್ಮ ಮದುವೆಗೆ ಧರಿಸಿದ್ದ ಡ್ರೆಸ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದ್ದು, ಮೆಲಾನಿಯಾ ಹಾಕಿದ ಉಡುಪನ್ನೇ ಹೋಲುವ ಡ್ರೆಸ್ ಅನ್ನು ಒಬ್ಬರು ಆನ್‌ಲೈನ್‌ನಲ್ಲಿ ಹರಾಜಿಗಿಟ್ಟಿದ್ದಾರೆ. ಇದೀಗ ಅದೇ ರೀತಿಯ ಡ್ರೆಸ್‌ ಹರಾಜಿಗೆ ಬಂದಿರುವುದು ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಶನ್ ಹುಟ್ಟಿಹಾಕಿದೆ.

ವೆಡ್ಡಿಂಗ್‌ ಗೌನ್‌ ಹರಾಜಿಗಿಟ್ಟ  ಟ್ರಂಪ್ ಪತ್ನಿ- ಬೆಲೆ ಎಷ್ಟು ಗೊತ್ತಾ?

Profile Sushmitha Jain Mar 26, 2025 11:21 AM

ವಾಷಿಂಗ್ಟನ್: 2010ರಲ್ಲಿ ಅಮೆರಿಕ ಅಧ್ಯಕ್ಷ(America President) ಡೊನಾಲ್ಡ್‌ ಟ್ರಂಪ್‌(Donald Trump) ಅವರ ವಿವಾಹ ಮೆಲಾನಿಯಾ ಟ್ರಂಪ್‌(Melania Trump) ಅವರೊಂದಿಗೆ ನಡೆದಿತ್ತು. ಆ ಸಂದರ್ಭದಲ್ಲಿ ʼಕ್ರಿಶ್ಚಿಯನ್‌ ಡಿಯೋರ್‌ʼ ಎಂಬ ಖ್ಯಾತ ಫ್ಯಾಶನ್‌ ಡಿಸೈನರ್‌ ತಯಾರಿಸಿದ ಮದುವೆಯ ಡ್ರೆಸ್‌ನಲ್ಲಿ ಮೆಲಾನಿಯಾ ಕಂಗೊಳಿಸಿದ್ದರು. ಈಗ ಅದೇ ರೀತಿಯ ಡ್ರೆಸ್‌ ಅನ್ನು ಒಬ್ಬರು ಆನ್‌ಲೈನ್‌ನಲ್ಲಿ ಹರಾಜಿಗಿಟ್ಟಿದ್ದು, ಇದರ ಬೆಲೆ ನೋಡಿದರೆ ನೀವು ಹುಬ್ಬೇರಿಸುವುದು ಗ್ಯಾರಂಟಿ. ಈ ಸಂಗತಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಅಮೆರಿಕದಲ್ಲಿ ಜನರು ಅತಿ ಹೆಚ್ಚಾಗಿ ಬಳಸುವ ʼಇಬೇʼ ಪ್ಲಾಟ್‌ಫಾರ್ಮ್‌ನಲ್ಲಿ, Svjabc1 ಎಂಬ ಅಕೌಂಟ್‌ನಿಂದ ಈ ಡ್ರೆಸ್‌ ಹರಾಜಿಗೆ ಹಾಕಲಾಗಿದೆ. ಮೆಲಾನಿಯಾ ಅವರು 20 ವರ್ಷಗಳ ಹಿಂದೆ ಖರೀದಿಸಿದ್ದ ಈ ಡ್ರೆಸ್‌ ಅನ್ನು ಮದುವೆಯ ಗೌನ್‌ ಆಗಿಯೂ ಬಳಸಿದ್ದರು ಎಂದು ಆ ವ್ಯಕ್ತಿ ಹೇಳಿಕೊಂಡಿದ್ದಾನೆ. ಇಬೇ ಮಾರಾಟಗಾರರ ಪ್ರಕಾರ ಈ ಡ್ರೆಸ್‌ನ ಆರಂಭಿಕ ಬೆಲೆ 45,000 ಡಾಲರ್‌, ಎಂದರೆ ಭಾರತೀಯ ರೂಪಾಯಿಗಳಲ್ಲಿ 38.5 ಲಕ್ಷ. ಹರಾಜಿನ ವೇಳೆ ಈ ಮೊತ್ತ ಎಷ್ಟು ಬೇಕಾದರೂ ಏರಬಹುದು ಎಂದು ಅವರು ಅಂದಾಜಿಸಿದ್ದಾರೆ.

ಕೆಲವು ವರದಿಗಳ ಪ್ರಕಾರ, ಮೆಲಾನಿಯಾ ಈ ಡ್ರೆಸ್‌ ಅನ್ನು 70,000 ಡಾಲರ್ (ಸುಮಾರು 60 ಲಕ್ಷ) ಕೊಟ್ಟು ಖರೀದಿಸಿದ್ದರು. ʼಡಿಯೋರ್ ಹಾಟ್ ಕೌಚರ್ ಗೌನ್ʼ ಎಂದು ಕರೆಯಲ್ಪಡುವ ಜಾನ್‌ ಗ್ಯಾಲಿಯಾನೋ ವಿನ್ಯಾಸಗೊಳಿಸಿದ ಈ ಡ್ರೆಸ್ ಅನ್ನು ಅಮೆರಿಕದ ಖ್ಯಾ ರೆಸಾರ್ಟ್ ʼಮಾರ್-ಎ-ಲಾಗೋʼದಲ್ಲಿ ಇರಿಸಲಾಗಿದೆ. 2005ರಲ್ಲಿ ಮೆಲಾನಿಯಾ ಟ್ರಂಪ್ ಮತ್ತು ಡೊನಾಲ್ಡ್ ಟ್ರಂಪ್ ಅವರ ವಿವಾಹಕ್ಕಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾದ ಈ ಮದುವೆಯ ಉಡುಪನ್ನು ಕೈಯಿಂದಲೇ ಹೊಲಿಯಲಾಗಿತ್ತು ಎಂದು ಇಬೇ ಮಾರಾಟಗಾರರು ಹೇಳಿದ್ದಾರೆ. ಇದರಲ್ಲಿ ಸ್ವರೋವ್ಸ್ಕಿ ಕ್ರಿಸ್ಟಲ್‌ ಮತ್ತು 13 ಅಡಿ ಉದ್ದದ ಟ್ರೇಲ್‌ ಇತ್ತು ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಓದಿ: Viral Video: ಹಣಕ್ಕಾಗಿ ಬೆಡ್‍ ರೂಂನಲ್ಲಿ ಪತಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಪತ್ನಿ; ಎಂಥ ಕಾಲ ಬಂತು ನೋಡಿ!

ತಾವು ಮಾರಾಟಕ್ಕಿಟ್ಟಿರುವ ಡ್ರೆಸ್‌ ಮೆಲಾನಿಯಾ ಅವರಿಗೇ ಸೇರಿದ್ದು ಎಂದು ಸಾಬೀತುಪಡಿಸಲು ಅವರು ಮೂಲ ಡ್ರೆಸ್‌ ಮತ್ತು ಮಾರಾಟಕ್ಕಿಟ್ಟ ಡ್ರೆಸ್‌ನ ಫೋಟೋಗಳನ್ನು ಶೇರ್‌ ಮಾಡಿದ್ದಾರೆ. ಈಗಾಗಲೇ 143 ಜನರು ಈ ಡ್ರೆಸ್‌ ಖರೀದಿಸುವ ಕುರಿತು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಆದರೆ, ಮಾರಾಟಕ್ಕಿಟ್ಟ ಗೌನ್‌ ಮತ್ತು ಮೆಲಾನಿಯಾ ಧರಿಸಿದ ಗೌನ್‌ ಒಂದೇ ಎಂದು ಹೇಳಿಕೊಳ್ಳುವ ಯಾವುದೇ ಅಧಿಕೃತ ಮತ್ತು ದೃಢೀಕೃತ ಪ್ರಮಾಣಪತ್ರವನ್ನು ಅವರು ಹಂಚಿಕೊಳ್ಳದೇ ಇರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಇನ್ನು ಅಮೆರಿಕಾದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್‌ ಗದ್ದುಗೆ ಏರಿದ ದಿನದಿಂದ ಭಾರೀ ಸದ್ದು ಮಾಡುತ್ತಲೇ ಇದ್ದಾರೆ.. ಅಂದಿನಿಂದ ಗೆಲುವಿನ ಕುದುರೆ ಹತ್ತಿದ್ದವರು ಇಂದು ಅವರ ಯಶಸ್ಸಿನ ಬೆನ್ನತ್ತಿ ಓಡುತ್ತಲೇ ಇದ್ದಾರೆ... ಈ ಮಧ್ಯೆ ಡೊನಾಲ್ಡ್ ಟ್ರಂಪ್ ದಾಂಪತ್ಯ ಜೀವನದ ಬಗ್ಗೆ ಎಲ್ಲೆಡೆಯೂ ಚರ್ಚೆಯಾಗುತ್ತಿದ್ದು, ಡೊನಾಲ್ಡ್ ಟ್ರಂಪ್ ಒಟ್ಟು ಮೂವರನ್ನು ಮದುವೆಯಾಗಿದ್ದಾರೆ. ಟ್ರಂಪ್​ ಅವರ ಮೂವರು ಪತ್ನಿಯರು ಕೂಡ ಮಾಡೆಲ್ ಕಮ್ ನಟಿಯರಾಗಿದ್ದು, ಸದ್ಯ ಈಗಿರುವ ಮೂರನೇ ಹೆಂಡತಿ ಸಹ ಸ್ಲೋವೇನಿಯಾ-ಅಮೆರಿಕನ್ ಮಾಡೆಲ್ ಆಗಿದ್ದಾರೆ.