ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಹಣಕ್ಕಾಗಿ ಬೆಡ್‍ ರೂಂನಲ್ಲಿ ಪತಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಪತ್ನಿ; ಎಂಥಾ ಕಾಲ ಬಂತು ನೋಡಿ!

ಮಹಿಳೆಯೊಬ್ಬಳು 10ಲಕ್ಷ ರೂಪಾಯಿಗೋಸ್ಕರ ತನ್ನ ಪತಿಯನ್ನು ಬೆಡ್‍ರೂಂನಲ್ಲಿ ಕ್ರೂರವಾಗಿ ಥಳಿಸಿದ ಘಟನೆ ಮಧ್ಯಪ್ರದೇಶದ ಸತ್ನಾದಲ್ಲಿ ನಡೆದಿದೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡು ವೈರಲ್(Viral Video) ಆಗಿದೆ. ಈ ವಿಡಿಯೊವನ್ನು ಸಂತ್ರಸ್ತ ಪತಿ ರೆಕಾರ್ಡ್ ಮಾಡಿದ್ದಾನೆ.

ಹಣಕ್ಕಾಗಿ ಪತಿಗೆ ಪತ್ನಿ ಹೀಗಾ ಮಾಡೋದು!

Profile pavithra Mar 26, 2025 11:31 AM

ಭೋಪಾಲ್: ಗಂಡ-ಹೆಂಡತಿಯ ಜಗಳ ಉಂಡು ಮಲಗುವ ತನಕ ಅನ್ನುವ ಮಾತಿದೆ.ಆದರೆ ಈಗ ಅದು ಕೊಲೆಯ ಹಂತಕ್ಕೆ ಮುಟ್ಟಿದೆ.ಇತ್ತೀಚೆಗಷ್ಟೆ ಪತ್ನಿಯೊಬ್ಬಳು ಪ್ರಿಯಕರನ ಜೊತೆ ಸೇರಿಕೊಂಡು ನೇವಿ ಆಫೀಸರ್‌ ಪತಿಯನ್ನು ಕೊಂದು 15 ತುಂಡುಗಳನ್ನಾಗಿ ಮಾಡಿದ ಭೀಕರವಾದ ಘಟನೆಯೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು.ಅದರ ಬೆನ್ನಲ್ಲೇ ಇತ್ತೀಚೆಗಷ್ಟೇ ಮಹಿಳೆಯೊಬ್ಬಳು ಹಣಕ್ಕಾಗಿ ತನ್ನ ಪತಿಯನ್ನು ಬೆಡ್‍ರೂಂನಲ್ಲಿ ಕ್ರೂರವಾಗಿ ಥಳಿಸಿದ ಘಟನೆಯ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡು ವೈರಲ್(Viral Video) ಆಗಿದೆ. ಮಧ್ಯಪ್ರದೇಶದ ಸತ್ನಾದಿಂದ ವರದಿಯಾಗಿರುವ ಈ ವಿಡಿಯೊವನ್ನು ಸಂತ್ರಸ್ತ ಪತಿ ರೆಕಾರ್ಡ್ ಮಾಡಿದ್ದಾನೆ. ತನ್ನ ಪತ್ನಿ ಪದೇ ಪದೇ ತನ್ನ ಮೇಲೆ ಹಲ್ಲೆ ನಡೆಸಿ 10 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾಳೆ ಎಂದು ಪತಿ ಆರೋಪಿಸಿದ್ದಾನೆ. ಇದಲ್ಲದೆ, ಹಣ ನೀಡದಿದ್ದರೆ ಅವನ ವಿರುದ್ಧ ಸುಳ್ಳು ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸುವುದಾಗಿ ಅವಳು ಬೆದರಿಕೆ ಹಾಕಿದ್ದಾಳೆ ಎಂದು ಆರೋಪಿಸಿದ್ದಾನೆ.

ವೈರಲ್‌ ವಿಡಿಯೊದಲ್ಲಿ ಮಹಿಳೆಯೊಬ್ಬಳು ಪುರುಷನನ್ನು ಹಿಗ್ಗಾಮುಗ್ಗಾ ಥಳಿಸುವ ದೃಶ್ಯ ಸೆರೆಯಾಗಿದೆ. ವಿಡಿಯೊದಲ್ಲಿ, ಪತ್ನಿ ರೆಕಾರ್ಡಿಂಗ್ ನಿಲ್ಲಿಸುವಂತೆ ಪದೇ ಪದೇ ಹೇಳಿದ್ದಾಳೆ ಹಾಗೇ ಅವನಿಗೆ ಸಿಕ್ಕಾಪಟ್ಟೆ ಹೊಡೆದಿದ್ದಾಳೆ.‌ಹಣಕ್ಕಾಗಿ ಪತಿಯನ್ನು ಕ್ರೂರವಾಗಿ ಥಳಿಸಿದ ವಿಡಿಯೊ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಪತ್ನಿಯು ಪತಿಯನ್ನು ಥಳಿಸಿದ ವಿಡಿಯೊ ಇಲ್ಲಿದೆ ನೋಡಿ...



ಸೋಶಿಯಲ್ ಮೀಡಿಯಾದಲ್ಲಿ ವಿಡಿಯೊವನ್ನು ಅಪ್ಲೋಡ್ ಮಾಡಿದ ನಂತರ, ಸಂತ್ರಸ್ತ ಪತಿ ಪೊಲೀಸರನ್ನು ಸಂಪರ್ಕಿಸಿ ಪತ್ನಿಯ ವಿರುದ್ಧ ದೂರು ದಾಖಲಿಸಿದ್ದಾನೆ. ದೂರಿನಲ್ಲಿ ತನ್ನ ತಂದೆಯ ನಿಧನದ ನಂತರ, ತನ್ನ ಹೆಂಡತಿ 10 ಲಕ್ಷ ರೂಪಾಯಿಗಾಗಿ ಒತ್ತಡ ಹೇರಲು ಶುರುಮಾಡಿದ್ದಾಳೆ. ಅದನ್ನು ನಿರಾಕರಿಸಿದಾಗ, ನನ್ನ ಮೇಲೆ ಹಲ್ಲೆ ಮಾಡಿದ್ದಾಳೆ ಎಂದು ಆರೋಪಿಸಿದ್ದಾನೆ. ತನ್ನ ಮತ್ತು ತನ್ನ ಕುಟುಂಬದ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವುದಾಗಿ ಪದೇ ಪದೇ ಬೆದರಿಕೆ ಹಾಕುತ್ತಿದ್ದಾಳೆ ಎಂದು ಆತ ಹೇಳಿದ್ದಾನೆ.

ಈ ಸುದ್ದಿಯನ್ನೂ ಓದಿ:Sonu Sood: ಬಾಲಿವುಡ್‌ ನಟ ಸೋನು ಸೂದ್ ಪತ್ನಿಗೆ ಅಪಘಾತ; ನುಜ್ಜುಗುಜ್ಜಾದ ಕಾರಿನ ಫೋಟೋ ವೈರಲ್‌

ಪತ್ನಿ ಪತಿಯ ಜೊತೆ ಕ್ರೂರವಾಗಿ ನಡೆದುಕೊಂಡ ಘಟನೆ ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ನಡೆದಿರುವುದು ಇದೇ ಮೊದಲಲ್ಲ. ಈ ಹಿಂದೆ ಜಿಲ್ಲೆಯ ಉಸ್ರಾರ್ ಗ್ರಾಮದಲ್ಲಿ ಪುರುಷನೊಬ್ಬನ ಅಸ್ಥಿಪಂಜರ ಪತ್ತೆಯಾಗಿದ್ದು, ನಂತರ ಆ ಅಸ್ಥಿಪಂಜರದ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ. ಈ ಅಸ್ಥಿಪಂಜರವು ಶಿವಕುಮಾರ್ ಕುಶ್ವಾಹ ಅವನಾಗಿದ್ದು, ಅಸ್ಥಿಪಂಜರದ ಮೇಲೆ ಸುತ್ತಿದ ಒಳ ಉಡುಪುಗಳನ್ನು ನೋಡಿದ ನಂತರ ಮೃತನ ಸಹೋದರ ಅವನನ್ನು ಗುರುತಿಸಿದ್ದಾನೆ.ಆತನ ಪತ್ನಿ ತನ್ನ ಪ್ರಿಯಕರ ಜೊತೆ ಇರಲು ಪತಿ ತಡೆದಿದ್ದರಿಂದ ಆತನನ್ನು ಕೊಲೆ ಮಾಡಿದ್ದಳು. 8 ತಿಂಗಳ ನಂತರ ಮೃತನ ಶವ ಪತ್ತೆಯಾದಾಗ, ಗ್ರಾಮದಲ್ಲಿ ಕೋಲಾಹಲ ಉಂಟಾಯಿತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ. ಮತ್ತು ಪೊಲೀಸರು ಕೊಲೆಯ ಸಂಪೂರ್ಣ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.