ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಭಾರತ, ಚೀನಾ ಮೇಲೆ ಶೇ.500ರಷ್ಟು ತೆರಿಗೆ ದಾಳಿ; ಟ್ರಂಪ್‌ ಎಚ್ಚರಿಕೆ

Trump Tariff: ಟ್ರಂಪ್ ಈ ಮಸೂದೆಯನ್ನು ಅನುಮೋದಿಸಿದ್ದರೂ, ಇದು ಇನ್ನೂ ಕಾನೂನಾಗಿ ಜಾರಿಯಾಗಿಲ್ಲ. ಮಸೂದೆ ಮುಂದಿನ ವಾರ ಯುಎಸ್ ಕಾಂಗ್ರೆಸ್‌ನಲ್ಲಿ ಮಂಡಿಸಿ ಮತದಾನ ನಡೆಸುವ ನಿರೀಕ್ಷೆಯಿದೆ. ಸಂಸತ್ತಿನ ಎರಡೂ ಸದನಗಳಲ್ಲಿ ಮಸೂದೆ ಅಂಗೀಕಾರವಾದರೆ ಮಾತ್ರ, ಈ ಭಾರೀ ಸುಂಕ ಅಧಿಕೃತವಾಗಿ ಜಾರಿಗೆ ಬರಲಿದೆ.

ಭಾರತ, ಚೀನಾ ಮೇಲೆ ಶೇ.500ರಷ್ಟು ತೆರಿಗೆ ದಾಳಿ; ಟ್ರಂಪ್‌ ಎಚ್ಚರಿಕೆ

trump tariff -

Abhilash BC
Abhilash BC Jan 8, 2026 10:14 AM

ವಾಷಿಂಗ್ಟನ್‌, ಜ.8: ರಷ್ಯಾದಿಂದ ತೈಲ ಖರೀದಿಸುವ ದೇಶಗಳನ್ನು ಶಿಕ್ಷಿಸಲು ವಾಷಿಂಗ್ಟನ್‌ಗೆ ಅವಕಾಶ ನೀಡುವ ದ್ವಿಪಕ್ಷೀಯ ನಿರ್ಬಂಧ ಮಸೂದೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Trump Tariff) ಹಸಿರು ನಿಶಾನೆ ತೋರಿದ ಬೆನ್ನಲ್ಲೇ ಮುಂದಿನ ವಾರದ ಆರಂಭದಲ್ಲಿ ಭಾರತ ಮತ್ತು ಚೀನಾ ಮೇಲಿನ ಅಮೆರಿಕದ ಸುಂಕಗಳು ಶೇ 500 ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ, ಬುಧವಾರ ನಡೆದಿದ್ದ ಉತ್ಪಾದಕ ಸಭೆಯ ಬಳಿಕ ಮಾತನಾಡಿ, ಅಧ್ಯಕ್ಷರು ರಷ್ಯಾದ ಯುರೇನಿಯಂ ಖರೀದಿಸುವ ದೇಶಗಳಿಗೆ ನಿರ್ಬಂಧ ಹೇರುವ ಶಾಸನವನ್ನು ಅಂಗೀಕರಿಸಿದ್ದಾರೆ ಎಂದು ಹೇಳಿದರು ಮತ್ತು ಮುಂದಿನ ವಾರದ ಆರಂಭದಲ್ಲಿ ಇದನ್ನು ಮತಕ್ಕೆ ಹಾಕಬಹುದು ಎಂದು ಹೇಳಿದರು.

ರಷ್ಯಾ- ಉಕ್ರೇನ್ ಯುದ್ಧ ಸ್ಥಗಿತದ ನಿಟ್ಟಿನಲ್ಲಿ ಪುಟಿನ್‌ ಮತ್ತು ಅವರ ಗ್ರಾಹಕರ ಮೇಲೆ ಒತ್ತಡ ಹೇರುವುದು ಅಗತ್ಯ. ಹೀಗಾಗಿ ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವ ಚೀನ, ಭಾರತ ಮತ್ತು ಬ್ರೆಜಿಲ್‌ ರಾಷ್ಟ್ರಗಳ ವಿರುದ್ಧ ಭಾರೀ ಆರ್ಥಿಕ ಕ್ರಮ ಕೈಗೊಳ್ಳಲು ಅಮೆರಿಕ ಸಿದ್ಧತೆ ನಡೆಸಿದೆ. ಈಗಾಗಲೇ ಅಮೆರಿಕ ಭಾರತದಿಂದ ಆಗುವ ಕೆಲವು ರಫ್ತುಗಳ ಮೇಲೆ ಶೇ. 50 ರಷ್ಟು ಸುಂಕ ವಿಧಿಸುತ್ತಿದೆ. ಆದರೆ ಹೊಸ ಮಸೂದೆ ಜಾರಿಯಾದರೆ, ಇದು ವ್ಯಾಪಾರ ಯುದ್ಧವನ್ನು ಇನ್ನಷ್ಟು ತೀವ್ರಗೊಳಿಸುವ ಸಾಧ್ಯತೆ ಇದೆ.



ಮಸೂದೆ ಜಾರಿಗೆ ಬಂದರೆ ಭಾರತಕ್ಕೆ ಸಂಕಷ್ಟ

ಟ್ರಂಪ್ ಈ ಮಸೂದೆಯನ್ನು ಅನುಮೋದಿಸಿದ್ದರೂ, ಇದು ಇನ್ನೂ ಕಾನೂನಾಗಿ ಜಾರಿಯಾಗಿಲ್ಲ. ಮಸೂದೆ ಮುಂದಿನ ವಾರ ಯುಎಸ್ ಕಾಂಗ್ರೆಸ್‌ನಲ್ಲಿ ಮಂಡಿಸಿ ಮತದಾನ ನಡೆಸುವ ನಿರೀಕ್ಷೆಯಿದೆ. ಸಂಸತ್ತಿನ ಎರಡೂ ಸದನಗಳಲ್ಲಿ ಮಸೂದೆ ಅಂಗೀಕಾರವಾದರೆ ಮಾತ್ರ, ಈ ಭಾರೀ ಸುಂಕ ಅಧಿಕೃತವಾಗಿ ಜಾರಿಗೆ ಬರಲಿದೆ. ಈ ಮಸೂದೆ ಜಾರಿಯಾದರೆ, ಭಾರತದ ರಫ್ತು ವ್ಯಾಪಾರಕ್ಕೆ ಭಾರೀ ಹೊಡೆತ ಬೀಳುವ ಸಾಧ್ಯತೆ ಇದೆ.

ವೆನೆಜುವೆಲಾಗೆ ತೆರಳುತ್ತಿದ್ದ ರಷ್ಯಾದ ತೈಲ ಟ್ಯಾಂಕರ್ ವಶಪಡಿಸಿಕೊಂಡ ಅಮೆರಿಕ; ರಷ್ಯಾ ಜೊತೆ ಚಕಮಕಿಗೆ ಸಜ್ಜು?

ಔಷಧ, ಉಕ್ಕು, ಐಟಿ ಉತ್ಪನ್ನಗಳು ಸೇರಿದಂತೆ ಹಲವು ಕ್ಷೇತ್ರಗಳು ಪರಿಣಾಮ ಎದುರಿಸಬಹುದು. ಇದೇ ವೇಳೆ, ಚೀನಾ ಮತ್ತು ಬ್ರೆಜಿಲ್‌ನ ಆರ್ಥಿಕತೆಯ ಮೇಲೂ ಇದು ದೊಡ್ಡ ಒತ್ತಡ ತರಲಿದೆ. ವಿಶ್ಲೇಷಕರ ಪ್ರಕಾರ, ಇದು ಕೇವಲ ಆರ್ಥಿಕ ನಿರ್ಧಾರವಲ್ಲ, ಭೌಗೋಳಿಕ ರಾಜಕೀಯ ಒತ್ತಡ ತಂತ್ರದ ಭಾಗ. ಅಮೆರಿಕ ತನ್ನ ಮಿತ್ರ ರಾಷ್ಟ್ರಗಳನ್ನು ರಷ್ಯಾದಿಂದ ದೂರ ಇಡಲು ಆರ್ಥಿಕ ದಂಡದ ಮಾರ್ಗವನ್ನು ಆಯ್ಕೆ ಮಾಡುತ್ತಿದೆ.

ರಷ್ಯಾದ ತೈಲ ಟ್ಯಾಂಕರ್‌ ಅಮೆರಿಕ ವಶ

ತನ್ನ ನಿರ್ಬಂಧಗಳಿಗೆ ಒಳಪಟ್ಟಿದ್ದ, ರಷ್ಯಾದಲ್ಲಿ ನೊಂದಾಯಿತ ಮರಿನೇರಾ ಎಂಬ ತೈಲ ಟ್ಯಾಂಕರ್‌ ಅನ್ನು ಅಮೆರಿಕದ ಕರಾವಳಿ ಪಡೆಗಳು ಉತ್ತರ ಅಟ್ಲಾಂಟಿಕ್‌ನಲ್ಲಿ ವಶಕ್ಕೆ ಪಡೆದಿದೆ. ಈ ಮೊದಲು ‘ಬೆಲ್ಲಾ-1’ ಎಂಬ ಹೆಸರು ಹೊಂದಿದ್ದ ಈ ಹಡಗಿಗೆ ವೆನಿಜುವೆಲಾ ನಂಟಿತ್ತೂ ಎಂಬುದೂ ತಿಳಿದುಬಂದಿದೆ. ಇರಾನ್‌ ಬೆಂಬಲಿತ ಲೆಬನಾನ್‌ನ ಹಿಜ್ಬುಲ್ಲಾ ಸಂಘಟನೆಗೆ ಸರಕನ್ನು ಕಳ್ಳಸಾಗಣೆ ಮಾಡಿದ್ದಕ್ಕಾಗಿ ಬೆಲ್ಲಾ-1ರ ಮೇಲೆ 2024ರಲ್ಲಿ ಅಮೆರಿಕ ನಿರ್ಬಂಧ ವಿಧಿಸಿತ್ತು. ಅದು ಕಳೆದ ಡಿಸೆಂಬರ್‌ನಲ್ಲಿ ವೆನಿಜುವೆಲಾ ಕಡೆ ಹೊರಟಿದ್ದಾಗ ಅಮೆರಿಕದ ಕರಾವಳಿ ಪಡೆ ಅದರ ಮೇಲೆ ಹತ್ತಿ ನಿಯಂತ್ರಣಕ್ಕೆ ಪಡೆಯಲು ಯತ್ನಿಸಿ ವಿಫಲರಾಗಿದ್ದವು. ಈ ಬಾರಿ ಅದರ ಹೆಸರನ್ನು ಮರಿನೆರಾ ಎಂದು ಬದಲಿಸಿ, ರಷ್ಯಾದ ಧ್ವಜವನ್ನು ಅಳವಡಿಸಲಾಗಿತ್ತು. ಆದರೆ ಇದನ್ನು ಅಮೆರಿಕ ಪತ್ತೆ ಮಾಡಿದ್ದು, ವಾಯುಪಡೆ ಬಳಸಿ ಬೆನ್ನಟ್ಟಿ ವಶಕ್ಕೆ ಪಡೆದಿದೆ.