ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: ರಾಜಕಾರಣಿಗಳಲ್ಲಿ ನಾಲ್ಕೇ ದಿನಗಳಲ್ಲಿ ಗಮನಾರ್ಹ ಬದಲಾವಣೆ ತರಬಲ್ಲೆ: ಸದ್ಗುರು

ವ್ಯಕ್ತಿಗಳು ತಮ್ಮ ದೇಹ, ಆಲೋಚನೆಗಳು, ಭಾವನೆಗಳು ಮತ್ತು ಶಕ್ತಿಯನ್ನು ಸಮರ್ಪಕವಾಗಿ ನಿರ್ವಹಿಸಲು ವಿಫಲರಾದಾಗ ಒತ್ತಡ, ಆತಂಕ ಹಾಗೂ ದುಃಖ ಎದುರಾಗುತ್ತವೆ. ನಮ್ಮದೇ ಬುದ್ಧಿವಂತಿಕೆ ನಮಗೆ ಪೂರಕವಾಗಿ ಕೆಲಸ ಮಾಡುವ ಬದಲು ವಿರುದ್ಧವಾಗಿ ತಿರುಗಿರುವುದೇ ಇಂತಹ ಸ್ಥಿತಿಗಳಿಗೆ ಕಾರಣ. ಅದನ್ನು ನಮ್ಮ ಒಳಿತಿಗಾಗಿ ಬಳಸಿಕೊಳ್ಳುವ ಕಲೆಯನ್ನು ಅರಿತುಕೊಳ್ಳಬೇಕು

ತಮ್ಮನ್ನು ತಾವು ನಿರ್ವಹಿಸಿಕೊಳ್ಳಲಾಗದಿರುವುದೇ ಒತ್ತಡಕ್ಕೆ ಮೂಲ

-

Profile
Ashok Nayak Nov 23, 2026 12:26 AM

ಚಿಕ್ಕಬಳ್ಳಾಪುರ: ಮನುಷ್ಯನಿಗೆ ತನ್ನ ದೇಹ, ಮನಸ್ಸು, ಆಲೋಚನೆ ಹಾಗೂ ಭಾವನೆಗಳನ್ನು ಸಮರ್ಪಕವಾಗಿ ನಿರ್ವಹಿಸಿಕೊಳ್ಳಲು ಸಾಧ್ಯವಾಗದಿರುವುದೇ ಒತ್ತಡ, ಆತಂಕ ಮತ್ತು ದುಃಖಕ್ಕೆ ಪ್ರಮುಖ ಕಾರಣ ಎಂದು ಸದ್ಗುರು ತಿಳಿಸಿದರು.

ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್(Devendra Fadnavis) ಅವರೊಂದಿಗೆ ನಡೆದ ಸಂವಾದದಲ್ಲಿ ವೃತ್ತಿಜೀವನದ ಸವಾಲುಗಳು, ಯುವಜನರ ಒತ್ತಡ, ಸಾಮಾಜಿಕ ಜಾಲತಾಣ ಗಳ ಪ್ರಭಾವ ಹಾಗೂ ಆಂತರಿಕ ನೆಮ್ಮದಿಯ ಕುರಿತು ಮಾತನಾಡಿದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ(Eknath Shinde) ಹಾಗೂ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಆಶಿಶ್ ಶೇಲಾರ್ ಅವರಿಂದ 2026ನೇ ಸಾಲಿನ ಪ್ರತಿಷ್ಠಿತ ‘ಗ್ಲೋಬಲ್ ಪೀಸ್ ಆನರ್ಸ್’ ಪ್ರಶಸ್ತಿಯನ್ನು ಸ್ವೀಕರಿಸಿದರು.

ಇಂದಿನ ಯುವಜನತೆ ವೃತ್ತಿಜೀವನ, ಸಾಮಾಜಿಕ ಜಾಲತಾಣಗಳು ಹಾಗೂ ಹೆಚ್ಚುತ್ತಿರುವ ನಿರೀಕ್ಷೆಗಳಿಂದ ಎದುರಿಸುತ್ತಿರುವ ಒತ್ತಡದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸದ್ಗುರು, ಖಿನ್ನತೆ ಅಥವಾ ಒತ್ತಡಕ್ಕೆ ಸಾಮಾಜಿಕ ವಾತಾವರಣವಾಗಲಿ, ಕೆಲಸದ ಸ್ವರೂಪವಾಗಲಿ ನೇರ ಕಾರಣವಲ್ಲ. ನಮ್ಮದೇ ದೇಹ ಮತ್ತು ಮನಸ್ಸನ್ನು ಸರಿಯಾಗಿ ನಿರ್ವಹಿಸಿಕೊಳ್ಳಲು ಸಾಧ್ಯವಾಗದಿರುವುದು ಇದಕ್ಕೆ ಮೂಲ ಕಾರಣ ಎಂದು ವಿಶ್ಲೇಷಿಸಿದರು.

ಇದನ್ನೂ ಓದಿ: Chikkaballapur News: 53 ಗ್ರಾಮಗಳ ಜನರಿಗೆ ತುರ್ತು ಚಿಕಿತ್ಸೆ ಮರೀಚಿಕೆ: ಕೂಡಲೇ ವೈದ್ಯರ ನೇಮಕಕ್ಕೆ ರೈತ ಸಂಘ ಆಗ್ರಹ

ವ್ಯಕ್ತಿಗಳು ತಮ್ಮ ದೇಹ, ಆಲೋಚನೆಗಳು, ಭಾವನೆಗಳು ಮತ್ತು ಶಕ್ತಿಯನ್ನು ಸಮರ್ಪಕವಾಗಿ ನಿರ್ವಹಿಸಲು ವಿಫಲರಾದಾಗ ಒತ್ತಡ, ಆತಂಕ ಹಾಗೂ ದುಃಖ ಎದುರಾಗುತ್ತವೆ. ನಮ್ಮದೇ ಬುದ್ಧಿವಂತಿಕೆ ನಮಗೆ ಪೂರಕವಾಗಿ ಕೆಲಸ ಮಾಡುವ ಬದಲು ವಿರುದ್ಧವಾಗಿ ತಿರುಗಿರುವುದೇ ಇಂತಹ ಸ್ಥಿತಿಗಳಿಗೆ ಕಾರಣ. ಅದನ್ನು ನಮ್ಮ ಒಳಿತಿಗಾಗಿ ಬಳಸಿಕೊಳ್ಳುವ ಕಲೆಯನ್ನು ಅರಿತುಕೊಳ್ಳ ಬೇಕು ಎಂದು ಹೇಳಿದರು.

ರಾಜಕಾರಣಿಗಳು ಉತ್ತಮ ನಾಯಕರು ಹಾಗೂ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ನೀಡಬಹು ದಾದ ಸಲಹೆ ಏನು ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪ್ರಶ್ನಿಸಿದಾಗ, ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ ಸದ್ಗುರು, ರಾಜಕಾರಣಿಗಳು ಕೆಲ ದಿನಗಳ ಕಾಲ ಆಶ್ರಮದಲ್ಲಿ ಬಂದು ಉಳಿಯಬೇಕು. ಇದರಿಂದ ಅವರಲ್ಲಿ ಬದಲಾವಣೆ ತರಬಹುದು ಎಂದರು.

1627417 ok

ಮುಂದುವರಿದು, ಕೇವಲ ಒಂದು ಸಲಹೆಯಿಂದ ಎಲ್ಲ ರಾಜಕಾರಣಿಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ನಾಲ್ಕು ದಿನಗಳ ಕಾಲಾವಕಾಶ ನೀಡಿದರೆ, ಅವರು ಯಾರೇ ಆಗಿರಲಿ ಅವರಲ್ಲಿ ಮಹತ್ವದ ಬದಲಾವಣೆ ತರಬಲ್ಲೆ. ನಿಮ್ಮೆಲ್ಲ ರಾಜಕಾರಣಿಗಳನ್ನು ನಾಲ್ಕೈದು ದಿನಗಳ ಕಾಲ ನನ್ನ ಬಳಿಗೆ ಕಳುಹಿಸಿಕೊಡಿ. ಅವರಲ್ಲಿ ಗಮನಾರ್ಹ ಪರಿವರ್ತನೆ ತರುವ ಜವಾಬ್ದಾರಿ ನನ್ನದು ಎಂದು ಹಾಸ್ಯಭರಿತವಾಗಿ ನುಡಿದರು. ಅವರ ಮಾತಿಗೆ ಸಭಾಂಗಣದಲ್ಲಿ ನಗೆ ಅಲೆ ಎದ್ದಿತು.

ವೈಯಕ್ತಿಕ ಪರಿವರ್ತನೆ ಮತ್ತು ಆಂತರಿಕ ನೆಮ್ಮದಿಯೇ ಜೀವನದ ಸವಾಲುಗಳನ್ನು ಎದುರಿಸಲು ಹಾಗೂ ಶಾಂತಿಯುತ ಸಮಾಜ ನಿರ್ಮಿಸಲು ಭದ್ರ ಬುನಾದಿಯಾಗಿವೆ ಎಂಬ ಸಂದೇಶವನ್ನು ಸಂವಾದ ಸಾರಿತು.

ದಿವ್ಯಾಜ್ ಫೌಂಡೇಶನ್ ಆಯೋಜಿಸುವ ‘ಗ್ಲೋಬಲ್ ಪೀಸ್ ಆನರ್ಸ್’ ವಾರ್ಷಿಕ ಕಾರ್ಯಕ್ರಮದಲ್ಲಿ ಶಾಂತಿ, ಮಾನವೀಯತೆ ಹಾಗೂ ಸಮಾಜಕ್ಕೆ ಗಣನೀಯ ಕೊಡುಗೆ ನೀಡಿದ ಸಾಧಕರನ್ನು ಗುರುತಿಸಿ ಗೌರವಿಸಲಾಗುತ್ತದೆ. ಭಯೋತ್ಪಾದನೆಗೆ ಬಲಿಯಾದವರಿಗೆ ಶ್ರದ್ಧಾಂಜಲಿ ಸಲ್ಲಿಸುವುದರ ಜತೆಗೆ ಶಾಂತಿ ಮತ್ತು ಮಾನವೀಯತೆಗಾಗಿ ಶ್ರಮಿಸುವವರ ಧೈರ್ಯ ಹಾಗೂ ಸೇವಾ ಮನೋಭಾವ ಗುರುತಿಸುವ ಉದ್ದೇಶವನ್ನೂ ಈ ಕಾರ್ಯಕ್ರಮ ಹೊಂದಿದೆ.