Sunita Williams : ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಭೂಮಿಗೆ ಬರಲು ಕ್ಷಣಗಣನೆ; ಕಾರ್ಯಾಚರಣೆ ಶುರು ಮಾಡಿದ ನಾಸಾ, ಸ್ಪೇಸ್‌ಎಕ್ಸ್
ಒಂಬತ್ತು ತಿಂಗಳಿನಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದ ಅಮೆರಿಕದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಮರಳಿ ಕರೆತರಲು ನಾಸಾ ಮತ್ತು ಸ್ಪೇಸ್‌ಎಕ್ಸ್ ಶುಕ್ರವಾರ ಕಾರ್ಯಾಚರಣೆ ಪ್ರಾರಂಭಿಸಿದೆ. ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಭೂಮಿಗೆ ಬರಲು ಕ್ಷಣಗಣನೆ ಪ್ರಾರಂಭವಾಗಿದೆ.

ನಾಸಾ

ವಾಷಿಂಗ್ಟನ್: ಒಂಬತ್ತು ತಿಂಗಳಿನಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸಿಲುಕಿಕೊಂಡಿದ್ದ ಅಮೆರಿಕದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ (Sunita Williams) ಮತ್ತು ಬುಚ್ ವಿಲ್ಮೋರ್ ಅವರನ್ನು ಮರಳಿ ಕರೆತರಲು ನಾಸಾ ಮತ್ತು ಸ್ಪೇಸ್‌ಎಕ್ಸ್ ಶುಕ್ರವಾರ ಕಾರ್ಯಾಚರಣೆ ಪ್ರಾರಂಭಿಸಿದೆ. ಕ್ರೂ ಡ್ರ್ಯಾಗನ್ ಕ್ಯಾಪ್ಸುಲ್ ಅನ್ನು ಅದರ ಮೇಲ್ಭಾಗಕ್ಕೆ ಜೋಡಿಸಲಾದ ಫಾಲ್ಕನ್ 9 ರಾಕೆಟ್ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ನಾಸಾ ಗಗನಯಾತ್ರಿಗಳಾದ ಆನ್ ಮೆಕ್‌ಕ್ಲೇನ್ ಮತ್ತು ನಿಕೋಲ್ ಅಯರ್ಸ್, JAXA (ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿ) ಗಗನಯಾತ್ರಿ ಟಕುಯಾ ಒನಿಶಿ ಮತ್ತು ರೋಸ್ಕೋಸ್ಮೋಸ್ ಗಗನಯಾತ್ರಿ ಕಿರಿಲ್ ಪೆಸ್ಕೋವ್ ಸೇರಿದಂತೆ ನಾಲ್ವರು ವಿಜ್ಞಾನಿಗಳನ್ನು ಅಧಿಕಾರಿಗಳು ಕಾರ್ಯಾಚರಣೆಯ ಭಾಗವಾಗಿ ISS ಗೆ ಕಳುಹಿಸಿದರು.
ಆರಂಭದಲ್ಲಿ ಉಡಾವಣೆಯನ್ನು ವಾರದ ಆರಂಭಿಕ ದಿನಗಳಲ್ಲಿ ನಿಗದಿಪಡಿಸಲಾಗಿತ್ತು ಆದರೆ ತಾಂತ್ರಿಕ ಸಮಸ್ಯೆಗಳು ಮತ್ತು ಕಳಪೆ ಹವಾಮಾನದಿಂದಾಗಿ ವಿಳಂಬವಾಯಿತು. ಬಾಹ್ಯಾಕಾಶಕ್ಕೆ ತೆರಳುವ ಯೋಜನೆಯೊಂದಿಗೆ ನಾಸಾ ಗಗನಯಾನಿಗಳಾದ ಆನ್ ಮೆಕ್ಲೇನ್ ಮತ್ತು ನಿಕೋಲ್ ಅಯರ್ಸ್, ಜಾಕ್ಸಾದ (ಜಪಾನ್ ಏರೋಸ್ಪೇಸ್) ಗಗನಯಾನಿ ಟಕುಯಾ ಒನಿಶಿ ಮತ್ತು ರೋಸ್ಕೋಸ್ಮೋಸ್ ಗಗನಯಾನಿ ಕಿರಿಲ್ ಪೆಸ್ಕೋವ್ ಅವರು ಫ್ಲೋರಿಡಾದ ನಾಸಾ ಕೆನಡಿಯಲ್ಲಿರುವ ಗಗನಯಾನಿಗಳ ಕ್ವಾಟರ್ಸ್‌ನಲ್ಲಿಯೇ ಉಳಿಯಲಿದ್ದಾರೆ.
ಈ ಸುದ್ದಿಯನ್ನೂ ಓದಿ: Sunita Williams: ಬಾಹ್ಯಾಕಾಶದಲ್ಲಿಯೇ ಸುನಿತಾ ವಿಲಿಯಮ್ಸ್ ಕ್ರಿಸ್ಮಸ್ ಆಚರಣೆ ; ವಿಡಿಯೊ ಹಂಚಿಕೊಂಡ ನಾಸಾ
ಕ್ರೂ-9 ತಂಡವು ಬುಧವಾರ ಐಎಸ್‌ಎಸ್‌ನಿಂದ ನಿರ್ಗಮಿಸಿ ಫ್ಲೋರಿಡಾ ಕರಾವಳಿಯಲ್ಲಿ ಇಳಿಯುವ ಸಾಧ್ಯತೆಯಿದೆ. ಶುಕ್ರವಾರದಂದು, ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರು ಸಿಬ್ಬಂದಿಗೆ ಬೆಂಬಲ ವ್ಯಕ್ತಪಡಿಸಲು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಸಂದೇಶವನ್ನು ಹಂಚಿಕೊಂಡಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಅವರು ಬಾಹ್ಯಾಕಾಶದಲ್ಲಿ ಸಿಲುಕಿದವರ ಸ್ವಾಗತಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಎಂಟು ದಿನಗಳ ಭೇಟಿಗಾಗಿ ತೆರಳಿ, ಈಗ ಫೆಬ್ರವರಿವರೆಗೂ ಅಲ್ಲಿ ಕಾಲ ಕಳೆಯಬೇಕಾದ ಸವಾಲಿನ ಸನ್ನಿವೇಶಕ್ಕೆ ಸಿಲುಕಿರುವ ನಾಸಾ ಗಗನಯಾನಿ ಸುನೀತಾ ವಿಲಿಯಮ್ಸ್ ಅವರು ಇತ್ತೀಚೆಗಷ್ಟೇ ಬಾಹ್ಯಾಕಾಶದಲ್ಲಿಯೇ ತಮ್ಮ 59ನೇ ಜನ್ಮದಿನವನ್ನು ವಿಭಿನ್ನವಾಗಿ ಆಚರಿಸಿಕೊಂಡಿದ್ದರು.