ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಕಣ್ಣೀರು ಹಾಕಿದ ಕೆನಡಾ ಎನ್‌ಡಿಪಿ ನಾಯಕ ಖಲಿಸ್ತಾನಿ ಜಗಮೀತ್ ಸಿಂಗ್; ಕಾರಣವೇನು?

ಕೆನಡಾ ಫೆಡರಲ್ ಚುನಾವಣೆಯಲ್ಲಿ ನ್ಯೂ ಡೆಮಾಕ್ರಟಿಕ್ ಪಕ್ಷದ ನಾಯಕ ಮತ್ತು ಕೆನಡಾ ರಾಜಕೀಯದಲ್ಲಿ ಖಲಿಸ್ತಾನ್ ಪರ ವ್ಯಕ್ತಿಯಾಗಿದ್ದ ಜಗಮೀತ್ ಸಿಂಗ್ ಚುನಾವಣೆಯಲ್ಲಿ ಸೋತ ಬಳಿಕ ಮಧ್ಯಂತರ ನಾಯಕನನ್ನು ನೇಮಿಸಿದ ತಕ್ಷಣ ತಾವು ಪಕ್ಷದ ಸ್ಥಾನದಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದಾರೆ. ಇದೇ ವೇಳೆ ಅವರು ಕಣ್ಣೀರು ಹಾಕುತ್ತಾ ಬರ್ನಾಬಿ ಸೆಂಟ್ರಲ್‌ನಲ್ಲಿ ತಮ್ಮ ಸ್ಥಾನ ಕಳೆದುಕೊಂಡಿರುವುದನ್ನು ತಿಳಿಸಿದರು.

ಚುನಾವಣೆ ಸೋತ ಬಳಿಕ ಖಲಿಸ್ತಾನಿ ಜಗಮೀತ್ ಸಿಂಗ್ ಕಣ್ಣೀರು

ಒಟ್ಟಾವಾ: ಕೆನಡಾ (Canada) ಫೆಡರಲ್ ಚುನಾವಣೆಯಲ್ಲಿ (Canada Election 2025) ನ್ಯೂ ಡೆಮಾಕ್ರಟಿಕ್ ಪಕ್ಷದ (New Democratic Party) ಮುಖಂಡ ಮತ್ತು ಖಲಿಸ್ತಾನ್ ಪರ ಒಲವು ಹೊಂದಿರುವ ಜಗಮೀತ್ ಸಿಂಗ್ (Jagmeet Singh) ಸೋತ ಬಳಿಕ ಮಧ್ಯಂತರ ನಾಯಕನನ್ನು ನೇಮಿಸಿದ ತಕ್ಷಣ ತಾವು ತಮ್ಮ ಪಕ್ಷದ ಸ್ಥಾನದಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದಾರೆ. ಇದೇ ವೇಳೆ ಅವರು ಬರ್ನಾಬಿ ಸೆಂಟ್ರಲ್‌ನಲ್ಲಿ ತಮ್ಮ ಸ್ಥಾನ ಕಳೆದುಕೊಂಡಿರುವುದನ್ನು ತಿಳಿಸಿದರು. ಪ್ರಧಾನ ಮಂತ್ರಿ ಮಾರ್ಕ್ ಕಾರ್ನಿ (Mark Carney) ನೇತೃತ್ವದ ಲಿಬರಲ್ ಪಕ್ಷ (Liberal Party) ಕೆನಡಾ ಫೆಡರಲ್ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದೆ.

ಬರ್ನಾಬಿಯಲ್ಲಿರುವ ಪ್ರಚಾರ ಪ್ರಧಾನ ಕಚೇರಿಯಲ್ಲಿ ಮಂಗಳವಾರ ಮಾತನಾಡಿದ ಅವರು, ತಮ್ಮ ಬೆಂಬಲಿಗರು ಮತ್ತು ಅವರ ಕುಟುಂಬಕ್ಕೆ ಧನ್ಯವಾದ ಹೇಳಿ ಬಳಿಕ ಲಿಬರಲ್ ನಾಯಕ ಮಾರ್ಕ್ ಕಾರ್ನಿ ಅವರ ಗೆಲುವಿಗೆ ಅಭಿನಂದನೆ ಸಲ್ಲಿಸಿದರು.



ತಮ್ಮ ಮಾತಿನ ವೇಳೆ ಕಣ್ಣೀರು ಹಾಕಿದ ಸಿಂಗ್, ಎನ್‌ಡಿಪಿ ಮೇಲಿನ ತಮ್ಮ ಪ್ರೀತಿ ಮತ್ತು ಭವಿಷ್ಯದ ಭರವಸೆಯ ಬಗ್ಗೆ ಮಾತನಾಡಿದರು.

ಇದನ್ನೂ ಓದಿ: Canada Election 2025: ಕೆನಡಾದಲ್ಲಿ ಲಿಬರಲ್ ಪಕ್ಷಕ್ಕೆ ಜಯ; ಪ್ರಧಾನಿ ಮೋದಿ ಅಭಿನಂದನೆ

ಇಲ್ಲಿರುವ ಎಲ್ಲರಿಗೂ ಧನ್ಯವಾದಗಳು. ನೀವೆಲ್ಲ ನನ್ನ ಹೃದಯದಲ್ಲಿದ್ದೀರಿ. ನೀವು ಮಾಡಿದ ಎಲ್ಲ ಕಾರ್ಯಗಳಿಗೂ ತುಂಬು ಹೃದಯದ ಧನ್ಯವಾದಗಳು ಎಂದ ಅವರು ತಮ್ಮ ಮಾತು ಮುಂದುವರಿಸುತ್ತಾ, ಇದು ನಿರಾಶಾದಾಯಕ ರಾತ್ರಿ. ಸೋತಿರುವ ಒಳ್ಳೆಯ ಅಭ್ಯರ್ಥಿಗಳು ಇಂದು ನಮ್ಮೊಡನೆ ಇದ್ದಾರೆ. ಎಲ್ಲರೂ ಎಷ್ಟು ಕಷ್ಟಪಟ್ಟು ಕೆಲಸ ಮಾಡಿದ್ದೀರಿ ಎಂಬುದು ನನಗೆ ತಿಳಿದಿದೆ. ನಿಮ್ಮೊಂದಿಗೆ ಸಾಕಷ್ಟು ಸಮಯ ಕಳೆದಿದ್ದೇನೆ. ನೀವೆಲ್ಲರೂ ಅದ್ಭುತ. ನಿಮ್ಮ ಸಮುದಾಯಗಳನ್ನು ಪ್ರತಿನಿಧಿಸಲು ಇನ್ನು ಸಾಧ್ಯವಾಗುವುದಿಲ್ಲ ಎಂದು ನನಗೆ ತುಂಬಾ ವಿಷಾದವಿದೆ. ಆದರೆ ನೀವು ಹೋರಾಡುವುದನ್ನು ಮುಂದುವರಿಸುತ್ತೀರಿ ಎಂದು ನನಗೆ ತಿಳಿದಿದೆ ಎಂದು ಸಿಂಗ್ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಹೇಳಿದರು.

ಸಿಂಗ್ 2019ರಿಂದ ಹೌಸ್ ಆಫ್ ಕಾಮನ್ಸ್‌ನಲ್ಲಿ ಬರ್ನಾಬಿ ಸೆಂಟ್ರಲ್‌ನ ಸ್ಥಾನವನ್ನು ಹೊಂದಿದ್ದು, ಇದೀಗ ಅದನ್ನು ಬಿಟ್ಟುಕೊಟ್ಟಿದ್ದಾರೆ. ಬರ್ನಾಬಿ ಸೆಂಟ್ರಲ್‌ನಲ್ಲಿ ಈ ಬಾರಿ ಎನ್‌ಡಿಪಿ ಮೂರನೇ ಸ್ಥಾನದಲ್ಲಿದೆ. ಕೇವಲ 7 ಸ್ಥಾನಗಳನ್ನು ಗೆದ್ದಿರುವ ಸಿಂಗ್ ಅವರ ನೇತೃತ್ವದ ಎನ್‌ಡಿಪಿ ಹೌಸ್ ಆಫ್ ಕಾಮನ್ಸ್‌ ಪ್ರವೇಶಿಸಲು ಅಗತ್ಯವಿರುವ 12 ಸ್ಥಾನಗಳನ್ನು ಪಡೆಯುವಲ್ಲಿ ವಿಫಲವಾಗಿದೆ.