ಒಂದು ಗುಂಡು ಸಾಕು ಮಾತುಕತೆಗೆ ಯಾರೂ ಉಳಿಯುವುದಿಲ್ಲ: ಖಮೇನಿ ಅಂತ್ಯಕ್ರಿಯೆಯ ನಡುವೆ ಇರಾನ್ ಗೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆ
ಇರಾನಿನ ಮಾಜಿ ಸರ್ವೋಚ್ಚ ನಾಯಕ, ಕಳೆದ ಫೆಬ್ರವರಿಯಲ್ಲಿ ಕೊಲಲ್ಪಟ್ಟ ಅಯತೊಲ್ಲಾ ಸಯ್ಯದ್ ಅಲಿ ಹುಸೇನಿ ಖಮೇನಿ ಅವರ ಅಂತ್ಯಕ್ರಿಯೆ ಟೆಹರಾನ್ ನಲ್ಲಿ ಶನಿವಾರ ಆರಂಭಗೊಂಡಿದೆ. ಇದರಲ್ಲಿ ಸಾವಿರಾರು ಜನರು ಪಾಲ್ಗೊಳ್ಳುತ್ತಿರುವುದನ್ನು ನೋಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಒಂದು ಗುಂಡು ಸಾಕು ಮಾತುಕತೆ ನಡೆಸಲು ಇರಾನ್ ನಲ್ಲಿ ಯಾರೂ ಉಳಿಯುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಅವರು ಇರಾನ್ ಗೆ ಮತ್ತೆ ಬೆದರಿಕೆಯೊಡ್ಡಿದ್ದಾರೆ.
ಸಂಗ್ರಹ ಚಿತ್ರ -
ವಾಷಿಂಗ್ಟನ್: ಆಲೋಚನಾಶೀಲ ಜನರು ಇರಾನಿನ (Iran) ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಸಯ್ಯದ್ ಅಲಿ ಹುಸೇನಿ ಖಮೇನಿ (Ayatollah Sayyed Ali Husseini Khamenei) ಅವರನ್ನು ದ್ವೇಷಿಸಿದರು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಹೇಳಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಇಸ್ರೇಲ್ ಮತ್ತು ಯುಎಸ್ ಸೇನಾ ಪಡೆ ನಡೆಸಿದ ದಾಳಿಯಲ್ಲಿ ಕೊಲಲ್ಪಟ್ಟ ಅಯತೊಲ್ಲಾ ಸಯ್ಯದ್ ಅಲಿ ಹುಸೇನಿ ಖಮೇನಿ ಅವರ ಅಂತ್ಯಕ್ರಿಯೆ ಟೆಹರಾನ್ ನಲ್ಲಿ ಶನಿವಾರ ಆರಂಭಗೊಂಡಿದ್ದು, ಇದರಲ್ಲಿ ಸಾವಿರಾರು ಜನರು ಪಾಲ್ಗೊಳ್ಳುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಡೊನಾಲ್ಡ್ ಟ್ರಂಪ್, ಒಂದೇ ಒಂದು ಗುಂಡು ಸಾಕು ಮಾತುಕತೆ ನಡೆಸಲು ಇರಾನ್ ನಲ್ಲಿ ಯಾರೂ ಉಳಿಯುವುದಿಲ್ಲ ಎಂದು ಮತ್ತೆ ಯುದ್ಧದ ಬೆದರಿಕೆ ಮಾತುಗಳನ್ನಾಡಿದ್ದಾರೆ.
ಅಲಿ ಖಮೇನಿ ಅವರ ಹತ್ಯೆ ಕೇವಲ ಒಂದು ಗುಂಡಿನಿಂದ ಆಗಿದೆ. ಕೇವಲ ಒಂದೇ ಒಂದು ಗುಂಡು ದೇಶದಲ್ಲಿ ಉಳಿದಿರುವ ನಾಯಕತ್ವವನ್ನು ನಿರ್ಮೂಲನೆ ಮಾಡಬಹುದು. ಆಗ ಮಾತುಕತೆ ನಡೆಸಲು ಯಾರೂ ಉಳಿಯುವುದಿಲ್ಲ. ಹೀಗಾಗಿ ಇರಾನ್ ಶಾಂತಿ ಮಾತುಕತೆಯನ್ನು ಒಪ್ಪಿಕೊಂಡಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದರು.
ಖಮೇನಿ ಅಂತ್ಯಕ್ರಿಯೆಯಲ್ಲಿ ಕಂಡು ಬಂತು 14 ತಿಂಗಳ ಕಂದನ ಶವ ಪೆಟ್ಟಿಗೆ ; ದೃಶ್ಯ ನೋಡಿ ಇಡೀ ಇರಾನ್ ಕಣ್ಣೀರು
ಈಗ ಇರಾನ್ ನಲ್ಲಿ ಎಲ್ಲರೂ ಇದ್ದಾರೆ. ಆದರೆ ಒಂದು ಗುಂಡಿನಿಂದ ನಾವು ಅವರೆಲ್ಲರನ್ನೂ ಹೊರಹಾಕಬಹುದು. ಆದರೆ ನಾವು ಹಾಗೆ ಮಾಡುವುದಿಲ್ಲ. ಯಾಕೆಂದರೆ ಆಗ ನಮಗೆ ಮಾತುಕತೆ ನಡೆಸಲು ಯಾರೂ ಇರುವುದಿಲ್ಲ. ಅವರು ಒಪ್ಪಂದ ಮಾಡಿಕೊಳ್ಳಲು ಬೇಡಿಕೊಳ್ಳುತ್ತಿದ್ದಾರೆ ಎಂದು ಗತಿಳಿಸಿದರು.
ಅಯತೊಲ್ಲಾ ಸಯ್ಯದ್ ಅಲಿ ಹುಸೇನಿ ಖಮೇನಿ ಅವರ ಅಂತ್ಯಕ್ರಿಯೆಯ ವೇಳೆ ಡೊನಾಲ್ಡ್ ಟ್ರಂಪ್ ಈ ಹೇಳಿಕೆಯನ್ನು ನೀಡಿದ್ದು, ಖಮೇನಿ ಅವರ ಅಂತ್ಯಕ್ರಿಯೆ ಮುಗಿಯುವವರೆಗೆ ಎರಡು ಕಡೆಯವರು ಮಾತುಕತೆಗೆ ವಿಶ್ರಾಂತಿ ನೀಡಲು ನಿರ್ಧರಿಸಿದರು. ಈ ನಡುವೆ ಯಾವುದೇ ಕಡೆಯವರು ಇನ್ನೊಬ್ಬರ ಮೇಲೆ ದಾಳಿ ಮಾಡುವುದಿಲ್ಲ ಎಂದು ತಿಳಿಸಿದರು.
ಸುಮಾರು 36 ವರ್ಷಗಳ ಕಾಲ ಇರಾನ್ ಅನ್ನು ಆಳಿದ ಅಲಿ ಖಮೇನಿ ಅವರನ್ನು ಫೆಬ್ರವರಿ 28ರಂದು ಕೊಲ್ಲಲಾಗಿತ್ತು. ಇದರಿಂದ ಮಧ್ಯಪ್ರಾಚ್ಯ ಭಾಗದಲ್ಲಿ ಸಂಘರ್ಷ ಆರಂಭವಾಗಿತ್ತು. ಇದೀಗ ಎರಡು ಪಕ್ಷಗಳು ಶಾಂತಿ ಮಾತುಕತೆ ಯಶಸ್ವಿ ಹಂತದಲ್ಲಿರುವುದರಿಂದ ಇರಾನ್ ನ ಮಾಜಿ ಸರ್ವೋಚ್ಚ ನಾಯಕನ ಅಂತ್ಯಕ್ರಿಯೆಯನ್ನು ಒಂದು ವಾರಗಳ ಕಾಲ ಇರಾನ್ ನಲ್ಲಿ ನಡೆಸಲಾಗುತ್ತಿದೆ.
ಇಸ್ಲಾಮಿಕ್ ನ್ಯಾಯಶಾಸ್ತ್ರದ ಪ್ರಕಾರ ಸಾಮಾನ್ಯವಾಗಿ ಸತ್ತ ವ್ಯಕ್ತಿಯನ್ನು ಸಾಧ್ಯವಾದಷ್ಟು ಬೇಗ ಅಂದರೆ 24 ಗಂಟೆಗಳ ಒಳಗೆ ಸಮಾಧಿ ಮಾಡಬೇಕು. ಆದರೆ ಯುದ್ಧದ ಪರಿಸ್ಥಿತಿಯ ಕಾರಣದಿಂದ ಖಮೇನಿಯವರ ಅಂತ್ಯಕ್ರಿಯೆಯನ್ನು ನಡೆಸಿರಲಿಲ್ಲ.
ಜುಲೈ 4ರಿಂದ ಇರಾನ್ ನಲ್ಲಿ ಖಮೇನಿ ಅವರ ಅಂತ್ಯಕ್ರಿಯೆ ವಿಧಿವಿಧಾನಗಳು ಆರಂಭಗೊಂಡಿದ್ದು, ಜುಲೈ 9 ರಂದು ಖಮೇನಿಯವರ ತವರು ಈಶಾನ್ಯ ಪವಿತ್ರ ನಗರವಾದ ಮಶಾದ್‌ನಲ್ಲಿ ಅವರ ಸಮಾಧಿಯೊಂದಿಗೆ ಕೊನೆಗೊಳಲ್ಲಿದೆ. ಖಮೇನಿಯವರ ಅಂತಿಮ ದರ್ಶನಕ್ಕಾಗಿ ಲಕ್ಷಾಂತರ ಇರಾನಿಯನ್ನರು ಬೀದಿಗಳಲ್ಲಿ ಸೇರುತ್ತಿದ್ದಾರೆ. ಇದನ್ನು ವಿಶ್ವವೇ ನಿಕಟವಾಗಿ ಗಮನಿಸುತ್ತಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಡೊನಾಲ್ಡ್ ಟ್ರಂಪ್, ಅಂತ್ಯಕ್ರಿಯೆಯಲ್ಲಿ ಇರಾನಿಯನ್ನರು ಅಳುತ್ತಿರುವುದನ್ನು ಆಶ್ಚರ್ಯವಾಗುತ್ತಿದೆ. ಅಲ್ಲಿನ ಜನರು ಅವರನ್ನು ದ್ವೇಷಿಸುತ್ತಾರೆ ಎಂದೇ ಭಾವಿಸಿದ್ದೆ. ಅವರದ್ದು ನಕಲಿ ಕಣ್ಣೀರು. ಅವರಿಗಾಗಿ ಒಂದು ವಾರ ಯುದ್ಧ ಮುಕ್ತಾಯ ಒಪ್ಪಂದದ ಮಾತುಕತೆಗಾಗಿ ಒಂದು ವಾರ ರಜೆ ನೀಡಿದೆ ಎಂದು ತಿಳಿಸಿದರು.
ಖಮೇನಿ ಅಂತ್ಯಕ್ರಿಯೆಯಲ್ಲಿ ಕಂಡು ಬಂತು 14 ತಿಂಗಳ ಕಂದನ ಶವ ಪೆಟ್ಟಿಗೆ ; ದೃಶ್ಯ ನೋಡಿ ಇಡೀ ಇರಾನ್ ಕಣ್ಣೀರು
ಒಂದೇ ದಿನದಲ್ಲಿ ನಾವು ವೆನೆಜುವೆಲಾವನ್ನು ಸೋಲಿಸಿದ್ದೇವೆ. ಇರಾನ್ ಅನ್ನು ಸೋಲಿಸಿದ್ದೇವೆ. ಈಗ ಅವರು ಅಲ್ಲಿ ನೆಲೆಯಾಗಲು ತುಂಬಾ ಕಷ್ಟ ಪಡುತ್ತಿದ್ದಾರೆ. ನಾವು ಒಳ್ಳೆಯವರು ಎಂಬ ಕಾರಣಕ್ಕೆ ಅವರ ಅಂತ್ಯಕ್ರಿಯೆಗಾಗಿ ಒಂದು ವಾರ ರಜೆ ನೀಡಿದೆವು ಎಂದು ತಿಳಿಸಿದರು.