ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಐಡಿ ತೋರಿಸಿ... ಮ್ಯೂನಿಚ್‌ನಲ್ಲಿ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ತಡೆದ ಭದ್ರತಾ ಸಿಬ್ಬಂದಿ

ಪಾಕಿಸ್ತಾನದ ಸೇನಾ ಮುಖ್ಯಸ್ಥರಿಗೆ ಜರ್ಮನಿಯ ಮ್ಯೂನಿಚ್‌ನಲ್ಲಿ ಭಾರಿ ಅವಮಾನವಾಗಿದೆ. ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಭಾಗವಹಿಸಲು ಬಂದಿದ್ದ ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರನ್ನು ಭದ್ರತಾ ಸಿಬ್ಬಂದಿ ತಡೆದು ಐಡಿ ಕೇಳಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇದು ಪಾಕಿಸ್ತಾನಕ್ಕೆ ಬಹುದೊಡ್ಡ ಅವಮಾನ ಎಂದು ಅನೇಕರು ಕಾಮೆಂಟ್ ಕೂಡ ಮಾಡಿದ್ದಾರೆ.

ಪಾಕಿಸ್ತಾನ ನಾಯಕನಿಗೆ ಜರ್ಮನಿಯಲ್ಲಿ  ಅವಮಾನ

ಸಂಗ್ರಹ ಚಿತ್ರ -

ಮ್ಯೂನಿಚ್‌: ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ (Pak Army Chief Asim Munir) ಅವರಿಗೆ ಗುರುತಿನ ಚೀಟಿ ತೋರಿಸುವಂತೆ ಭದ್ರತಾ ಸಿಬ್ಬಂದಿ ತಡೆದ ಘಟನೆ ಜರ್ಮನಿಯ ಮ್ಯೂನಿಚ್‌ನಲ್ಲಿ (Munich) ನಡೆದಿದೆ. ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ (Munich Security Conference) ಭಾಗವಹಿಸಲು ಬಂದಿದ್ದ ಅವರನ್ನು ಭದ್ರತಾ ಸಿಬ್ಬಂದಿ ತಡೆದಿದ್ದಾರೆ. ಗುರುತು ಚೀಟಿ ತೋರಿಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ಗುರುತು ಚೀಟಿಯನ್ನು ಸ್ಪಷ್ಟವಾಗಿ ಕಾಣುವಂತೆ ಕುತ್ತಿಗೆಗೆ ಹಾಕಿಕೊಳ್ಳಬೇಕು ಎಂದು ಸಮ್ಮೇಳನದ ಭದ್ರತಾ ಅಧಿಕಾರಿ ಆದೇಶಿಸಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral video) ಆಗಿದೆ.

ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಭಾಗವಹಿಸಲು ಆಗಮಿಸಿದ ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರನ್ನು ಪ್ರವೇಶ ದ್ವಾರದಲ್ಲಿ ತಡೆದ ಭದ್ರತಾ ಅಧಿಕಾರಿಗಳು ಗುರುತು ಚೀಟಿ ತೋರಿಸುವಂತೆ ಕೇಳಿದ್ದಾರೆ. ಇದರ ವಿಡಿಯೊ ವೈರಲ್ ಆಗಿದೆ. ಈ ವಿಡಿಯೊದಲ್ಲಿ ಭದ್ರತಾ ಅಧಿಕಾರಿಗಳು ಅಸಿಮ್ ಮುನೀರ್ ಅವರನ್ನು ತಡೆದು ಪ್ರಶ್ನಿಸುವುದನ್ನು ಕಾಣಬಹುದು. ಭದ್ರತಾ ಅಧಿಕಾರಿ ಅವರ ಹೆಸರಿನ ಬ್ಯಾಡ್ಜ್ ಅನ್ನು ಟ್ಯಾಪ್ ಮಾಡಿದ ಮೇಲೆ ಅವರ ಕುತ್ತಿಗೆಯಲ್ಲಿ ನೇತಾಡುತ್ತಿದ್ದ ಐಡಿ ಕಾರ್ಡ್ ಅನ್ನು ತೋರಿಸುತ್ತಾ, ನೀವು ಅದನ್ನು ತಿರುಗಿಸಬಹುದೇ? ಎಂದು ಕೇಳಿದ್ದಾರೆ.

ನಿಯಮಿತ ತಪಾಸಣೆಗಾಗಿ ಬೆಂಗಳೂರಿನಲ್ಲಿ ಮಹಿಳಾ ಬೈಕರ್‌ನನ್ನು ನಿಲ್ಲಿಸಿದ ಪೊಲೀಸ್; ಮುಂದೇನಾಯ್ತು, ಇಲ್ಲಿದೆ ವಿಡಿಯೊ

ಭದ್ರತಾ ಅಧಿಕಾರಿ ಮಾತಿಗೆ ಉತ್ತರಿಸದ ಅಸಿಮ್‌ ಮುನೀರ್‌ ಮುನ್ನಡೆದರು. ಆದರೆ ಅವರ ಸಹಾಯಕ ಗುರುತಿನ ಚೀಟಿ ತೋರಿಸಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ಸಂವಾದ ಮತ್ತು ಸಂಘರ್ಷ ಪರಿಹಾರಕ್ಕಾಗಿ ಹಾಗೂ ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತಾ ಸವಾಲುಗಳನ್ನು ಎದುರಿಸಲು ವಾರ್ಷಿಕವಾಗಿ ನಡೆಯುವ ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ವಿಶ್ವ ನಾಯಕರು, ರಾಜತಾಂತ್ರಿಕರು ಮತ್ತು ಭದ್ರತಾ ತಜ್ಞರು ಪಾಲ್ಗೊಳ್ಳುತ್ತಾರೆ. ಅಮೆರಿಕದಲ್ಲಿ ಪರಮಾಣು ಬೆದರಿಕೆ ಹಾಕಿದ್ದ ಅಸಿಮ್‌ ಮುನೀರ್‌ಗೆ ಇದೇ ಸಮ್ಮೇಳನದಲ್ಲಿ ಕಳೆದ ವರ್ಷ ಛೀಮಾರಿ ಹಾಕಲಾಗಿತ್ತು.



ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಫೀಲ್ಡ್ ಮಾರ್ಷಲ್ ಮುನೀರ್ ಭಾಗವಹಿಸುವುದನ್ನು ತೀವ್ರವಾಗಿ ಆಕ್ಷೇಪಿಸಿರುವ ಜರ್ಮನಿ ಮೂಲದ ಸಿಂಧಿ ರಾಜಕೀಯ ಸಂಘಟನೆಯಾದ ಜೀ ಸಿಂಧ್ ಮುತ್ತಹಿದಾ ಮಹಾಜ್ (JSMM) ಇದು ತೀವ್ರ ವಿಷಾದನೀಯ. ಅಂತಾರಾಷ್ಟ್ರೀಯ ಪಾಲುದಾರರು ಈ ಕುರಿತು ಗಮನಿಸುವಂತೆ ಒತ್ತಾಯಿಸಿದೆ.

ಬಾಂಗ್ಲಾದೇಶ ಪ್ರಧಾನಿ ತಾರಿಕ್ ರೆಹಮಾನ್ ಪ್ರಮಾಣವಚನ ಸಮಾರಂಭಕ್ಕೆ ಪ್ರಧಾನಿ ಮೋದಿ ಹೋಗ್ತಾರಾ?

ವಿಶ್ವಸಂಸ್ಥೆ, ಯುರೋಪಿಯನ್ ಒಕ್ಕೂಟ, ಜರ್ಮನ್ ಸರ್ಕಾರ ಮತ್ತು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳನ್ನು ಉದ್ದೇಶಿಸಿ ಮಾತನಾಡಿರುವ ಜೀ ಸಿಂಧ್ ಮುತ್ತಹಿದಾ ಮಹಾಜ್ ಅಧ್ಯಕ್ಷ ಶಫಿ ಬರ್ಫತ್, ಉನ್ನತ ಮಟ್ಟದ ಜಾಗತಿಕ ವೇದಿಕೆಯಲ್ಲಿ ಫೀಲ್ಡ್ ಮಾರ್ಷಲ್ ಅಸಿಮ್‌ ಮುನೀರ್ ಅವರ ಉಪಸ್ಥಿತಿ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಹೇಳಿದ್ದಾರೆ.

ಸಮ್ಮೇಳನದ ಹೊರ ಆವರಣದಲ್ಲಿ ಜೀ ಸಿಂಧ್ ಮುತ್ತಹಿದಾ ಮಹಾಜ್ ಸದಸ್ಯರು ಪಾಕಿಸ್ತಾನದಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಪ್ರತಿಭಟನೆ ನಡೆಸಿದರು. ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದದ ಬಳಿಕ ಪಾಕಿಸ್ತಾನದ ನಾಯಕರ ಬಗ್ಗೆ ದೇಶದಲ್ಲೇ ಅಸಮಾಧಾನ ವ್ಯಕ್ತವಾಗಿತ್ತು.