ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pak Ambassador: ಪಾಕ್‌ ರಾಯಭಾರಿಗೆ ಅಮೆರಿಕದಲ್ಲಿ ನೋ ಎಂಟ್ರಿ; ವೀಸಾ ಇದ್ರೂ ಗಡಿಪಾರು- ಏನಿದು ಈ ಘಟನೆ?

Pak Ambassador: ಪಾಕ್‌ ರಾಯಭಾರಿ ಕೆ.ಕೆ. ಅಹ್ಸಾನ್ ವಾಗನ್ ರಜೆಯ ಮೇಲೆ ಲಾಸ್ ಏಂಜಲೀಸ್‌ಗೆ ತೆರಳುತ್ತಿದ್ದಾಗ, ಅಮೆರಿಕದ ವಲಸೆ ಅಧಿಕಾರಿಗಳು ಅವರನ್ನು ತಡೆದಿದ್ದು, ಪ್ರವೇಶ ನಿರಾಕರಿಸಿದ್ದಾರೆ. ಅಲ್ಲದೇ ಅವರನ್ನು ಲಾಸ್ ಏಂಜಲೀಸ್‌ನಿಂದ ಗಡಿಪಾರು ಮಾಡಲಾಗಿದೆ.

ಪಾಕ್‌ಗೆ ಭಾರೀ ಮುಖಭಂಗ; ರಾಯಭಾರಿಯನ್ನು ದೇಶದಿಂದ ಹೊರಗಟ್ಟಿದ ಅಮೆರಿಕ

Profile Rakshita Karkera Mar 11, 2025 11:46 AM

ಇಸ್ಲಮಾಬಾದ್‌: ಅಪರೂಪದ ರಾಜತಾಂತ್ರಿಕ ಘಟನೆಯಲ್ಲಿ, ತುರ್ಕಮೆನಿಸ್ತಾನದಲ್ಲಿರುವ ಪಾಕಿಸ್ತಾನದ ರಾಯಭಾರಿಗೆ ಅಮೆರಿಕ ಪ್ರವೇಶವನ್ನು ನಿರಾಕರಿಸಿರುವ ಘಟನೆ ವರದಿಯಾಗಿದೆ. ಅಲ್ಲದೇ ಆತನನ್ನು ಲಾಸ್ ಏಂಜಲೀಸ್‌ನಿಂದ ಗಡಿಪಾರು ಮಾಡಲಾಯಿತು. ಪಾಕ್‌ ರಾಯಭಾರಿ(Pak Ambassador) ಕೆ.ಕೆ. ಅಹ್ಸಾನ್ ವಾಗನ್ ರಜೆಯ ಮೇಲೆ ಲಾಸ್ ಏಂಜಲೀಸ್‌ಗೆ ತೆರಳುತ್ತಿದ್ದಾಗ, ಅಮೆರಿಕದ ವಲಸೆ ಅಧಿಕಾರಿಗಳು ಅವರನ್ನು ವಿಮಾನ ನಿಲ್ದಾಣದಲ್ಲಿ ತಡೆದಿದ್ದಾರೆ. ಅಲ್ಲದೇ ವೀಸಾ ಹಾಗೂ ಸೂಕ್ತ ದಾಖಲೆಗಳಿದ್ದರೂ ಅವರನ್ನು ಲಾಸ್‌ ಏಂಜಲೀಸ್‌ನಿಂದ ಗಡಿಪಾರು ಮಾಡಲಾಯಿತು.

ಇನ್ನು ಈ ಘಟನೆ ಬಗ್ಗೆ ಅಮೆರಿಕ ಅಧಿಕಾರಿಗಳು ಮಾಹಿತಿ ಸ್ಪಷ್ಟ ಮಾಹಿತಿ ನೀಡಿಲ್ಲ. ವೀಸಾ ಸಮಸ್ಯೆಯಿಂದಾಗಿ ಕೆ.ಕೆ. ಅಹ್ಸಾನ್ ವಾಗನ್ ಅವರನ್ನು ಗಡಿಪಾರು ಮಾಡಲಾಗಿತ್ತು ಎಂದಷ್ಟೇ ಹೇಳಿದ್ದಾರೆ. ಆದರೆ ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, ರಾಯಭಾರಿ ಕೆ.ಕೆ. ವಾಗನ್ ಅವರನ್ನು ಅಮೆರಿಕದಿಂದ ಗಡಿಪಾರು ಮಾಡಲಾಗಿದೆ. ಅವರ ಬಳಿಕ ಸೂಕ್ತ ದಾಖಲೆಗಳಿದ್ದರೂ ಅವರನ್ನು ಈ ರೀತಿಯಾಗಿ ನಡೆಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಮತ್ತು ಕಾರ್ಯದರ್ಶಿ ಅಮಿನಾ ಬಲೋಚ್ ಅವರಿಗೆ ಘಟನೆಯ ಬಗ್ಗೆ ತಿಳಿಸಲಾಯಿತು. ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಲಾಸ್ ಏಂಜಲೀಸ್‌ನಲ್ಲಿರುವ ತನ್ನ ದೂತಾವಾಸಕ್ಕೆ ಈ ವಿಷಯದ ಬಗ್ಗೆ ತನಿಖೆ ನಡೆಸುವಂತೆ ಸೂಚನೆ ನೀಡಿದೆ. ಪರಿಸ್ಥಿತಿಯನ್ನು ವಿವರಿಸಲು ವಾಗನ್ ಅವರನ್ನು ಇಸ್ಲಾಮಾಬಾದ್‌ಗೆ ಮರಳಿ ಕರೆಯುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.

ಈ ಸುದ್ದಿಯನ್ನೂ ಓದಿ: ಪಾಕಿಸ್ತಾನ ಮಿಲಿಟರಿ ಕ್ಯಾಂಪ್‌ ಮೇಲೆ ಆತ್ಮಾಹುತಿ ಬಾಂಬ್‌ ದಾಳಿ; ಕನಿಷ್ಠ 9 ಸಾವು

ಅನುಭವಿ ರಾಜತಾಂತ್ರಿಕರಾದ ವಾಗನ್, ಪಾಕಿಸ್ತಾನದ ವಿದೇಶಾಂಗ ಸೇವೆಯಲ್ಲಿ ಹಲವಾರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ತುರ್ಕಮೆನಿಸ್ತಾನದ ರಾಯಭಾರಿಯಾಗಿ ಬಡ್ತಿ ಪಡೆಯುವ ಮೊದಲು, ವಾಗನ್ ಅವರು ಕಠ್ಮಂಡುವಿನಲ್ಲಿರುವ ಪಾಕಿಸ್ತಾನಿ ರಾಯಭಾರ ಕಚೇರಿಯಲ್ಲಿ ಎರಡನೇ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಅವರು ಲಾಸ್ ಏಂಜಲೀಸ್‌ನಲ್ಲಿರುವ ಪಾಕಿಸ್ತಾನಿ ದೂತಾವಾಸದಲ್ಲಿ ಉಪ ಕಾನ್ಸುಲ್ ಜನರಲ್ ಕೂಡ ಆಗಿದ್ದರು.

ಈ ಘಟನೆಯು ಯಾವುದೇ ರಾಜತಾಂತ್ರಿಕ ನೀತಿ ಅಥವಾ ಎರಡು ರಾಷ್ಟ್ರಗಳಿಗೆ ಸಂಬಂಧಿಸಿದ ನಡೆಯುತ್ತಿರುವ ಬಿಕ್ಕಟ್ಟಿಗೆ ಸಂಬಂಧಿಸಿಲ್ಲ ಎಂದು ಪಾಕಿಸ್ತಾನಿ ಮಾಧ್ಯಮಗಳು ಮೂಲಗಳನ್ನು ಉಲ್ಲೇಖಿಸಿವೆ. ಕಳೆದ ವಾರ, ಡೊನಾಲ್ಡ್ ಟ್ರಂಪ್ ಆಡಳಿತವು ಪಾಕಿಸ್ತಾನದ ಮೇಲೆ ಶೀಘ್ರದಲ್ಲೇ ಹೊಸ ಪ್ರಯಾಣ ನಿಷೇಧವನ್ನು ಘೋಷಿಸಲಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ, ಅದು ಅದರ ಪ್ರಜೆಗಳು ಅಮೆರಿಕಕ್ಕೆ ಪ್ರವೇಶವನ್ನು ನಿರ್ಬಂಧಿಸಬಹುದು.