ಪತಿಯಿಂದ 2ನೇ ವಿವಾಹಕ್ಕೆ ತಯಾರಿ; ಮೋದಿಯ ಸಹಾಯ ಕೋರಿದ ಪಾಕಿಸ್ತಾನ ಮಹಿಳೆ: ಏನಿದು ʼಗಡಿʼ ಮೀರಿದ ವೈವಾಹಿಕ ಸಂಬಂಧದ ಕಥೆ?
ಪಾಕಿಸ್ತಾನ ಮೂಲದ ವ್ಯಕ್ತಿಯೊಬ್ಬ ಭಾರತದಲ್ಲಿ ವಾಸಿಸುತ್ತಿದ್ದು ಎರಡನೇ ಮದುವೆಯಾಗಲು ಮುಂದಾಗಿದ್ದಾನೆ. ಈ ವಿಚಾರ ತಿಳಿದು ಪಾಕಿಸ್ತಾನದಲ್ಲಿರುವ ಆತನ ಮೊದಲ ಪತ್ನಿ ಸಹಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಸಹಾಯ ಕೋರಿದ್ದಾಳೆ. ಸದ್ಯ ಈ ವಿಚಾರ ಭಾರಿ ಸದ್ದು ಮಾಡುತ್ತಿದೆ.
ನಿಖಿತಾ ನಾಗ್‌ದೇವ್ ಮತ್ತು ನರೇಂದ್ರ ಮೋದಿ -
ದೆಹಲಿ, ಡಿ. 6: ಆಕೆ ಪಾಕಿಸ್ತಾನದ ಮಹಿಳೆ. ಆಕೆಯನ್ನು ಪಾಕಿಸ್ತಾನ ಮೂಲದ ಇಂದೋರ್‌ನ ವ್ಯಕ್ತಿ ಕರಾಚಿಯಲ್ಲಿ ಮದುವೆಯಾಗಿದ್ದ. ಬಳಿಕ ಆಕೆಯನ್ನು ಕರೆದುಕೊಂಡು ಭಾರತಕ್ಕೆ ಬಂದಿದ್ದ. ನಂತರ ಆಕೆಯನ್ನು ಪಾಕಿಸ್ತಾನಕ್ಕೆ ಕಳುಹಿಸಿ ಆತ ಇಲ್ಲೇ ಉಳಿದುಕೊಂಡಿದ್ದ. ಈ ಮದುವೆಯಾಗಿ 5 ವರ್ಷಗಳ ಬಳಿಕ ಆತ ಮತ್ತೆ ಇದೀಗ ದೆಹಲಿಯ ಮತ್ತೊಬ್ಬ ಮಹಿಳೆಯನ್ನು ವರಿಸಲು ಮುಂದಾಗಿದ್ದಾನೆ. ಈ ಮದುವೆಯನ್ನು ನಿಲ್ಲಿಸುವಂತೆ ಪಾಕಿಸ್ತಾನದ ಮಹಿಳೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಮೊರೆ ಹೋಗಿದ್ದಾಳೆ. ಇದು ಪಾಕಿಸ್ತಾನದ ಮಹಿಳೆ ನಿಖಿತಾ ನಾಗ್‌ದೇವ್ (Nikita Nagdev) ಎನ್ನುವ ಮಹಿಳೆಯೊಬ್ಬಳ ಕರುಣಾಜನಕ ಕಥೆ. ಸದ್ಯ ಆಕೆ ತನ್ನ ಪರಿಸ್ಥಿತಿಯನ್ನು ವಿವರಿಸಿ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಗಡಿ ಮೀರಿದ ಈ ವೈವಾಹಿಕ ಬದುಕಿನ ದುರಂತ ಕಥೆ ಕೇಳಿ ಹಲವರ ಮನಸ್ಸು ಮಿಡಿದಿದೆ. ಆಕೆಗೆ ಕೈಕೊಟ್ಟು ಮರು ಮದುವೆಯಾಗಲು ಹೊರಟಾತನನ್ನು ವಿಕ್ರಂ ನಾಗ್‌ದೇವ್ (Vikram Nagdev) ಎಂದು ಗುರುತಿಸಲಾಗಿದೆ.
ಪಾಕಿಸ್ತಾನ ಮೂಲಕ ವಿಕ್ರಂ ಮತ್ತು ನಿಖಿತಾ 2020ರ ಜನವರಿಯಲ್ಲಿ ಕರಾಚಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಹಿಂದೂ ಸಂಪ್ರದಾಯದಂತೆ ಮದುವೆ ನಡೆದಿತ್ತು. 5 ವರ್ಷಗಳ ಬಳಿಕ ಈ ವೈವಾಹಿಕ ಜೀವನ ಮುರಿದು ಬೀಳುವ ಹಂತಕ್ಕೆ ಬಂದಿದ್ದು, ನಿಖಿತಾ ಅವರ ಕಣ್ಣೀರ ಕಥೆಗೆ ಎರಡೂ ದೇಶಗಳ ಹಲವರು ಸ್ಪಂದಿಸಿದ್ದಾರೆ.
ತಮ್ಮ ದುಃಖದ ಕಥೆ ವಿವರಿಸಿದ ನಿಖಿತಾ:
⚠️ Heartbreaking Plea: Pakistani Wife Begs PM Modi for Justice as Hubby Plans Delhi Remarriage 💔
— Voice Of Bharat 🇮🇳🌍 (@Kunal_Mechrules) December 6, 2025
•Nikita, left stranded in Pakistan after hubby Vikram ditched her at the border in 2020, now fights back over his secret affair and new wedding plans.
• "Women deserve justice!"… pic.twitter.com/E1RHMHj0lq
ಘಟನೆ ವಿವರ
ಕರಾಚಿ ಮೂಲದ ನಿಖಿತಾ ಮತ್ತು ಮಧ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಪಾಕಿಸ್ತಾನದ ಪ್ರಜೆ ವಿಕ್ರಂನ ವಿವಾಹ 2020ರ ಜನವರಿ 26ರಂದು ಕರಾಚಿಯಲ್ಲಿ ನಡೆಯಿತು. ಅದಾದ ಸರಿಯಾದ 1 ತಿಂಗಳ ನಂತರ ಅಂದರೆ ಫೆಬ್ರವರಿ 26ರಂದು ವಿಕ್ರಂ ಆಕೆಯನ್ನು ಕರೆದುಕೊಂಡು ಭಾರತಕ್ಕೆ ಬಂದ. ಅದಾಗಿ ಕೆಲವೇ ದಿನಗಳಲ್ಲಿ ನಿಖಿತಾ ಬಾಳಲ್ಲಿ ಬಿರುಗಾಳಿಯೇ ಎದ್ದಿತು.
ಭಾರತದ ವಾಯುದಾಳಿಯಿಂದ ನಾಶವಾದ ಕಟ್ಟಡ ಮರು ನಿರ್ಮಿಸುತ್ತಿರುವ ಪಾಕಿಸ್ತಾನ
2020ರ ಜುಲೈ 9ರಂದು ವೀಸಾದಲ್ಲಿ ಸಮಸ್ಯೆ ಇದೆ ಎಂದು ಹೇಳಿ ಬಲವಂತವಾಗಿ ಆಕೆಯನ್ನು ವಿಕ್ರಂ ಪಾಕಿಸ್ತಾನಕ್ಕೆ ಕಳುಹಿಸಿದ. ಅದಾಗಿ ಇಷ್ಟು ವರ್ಷವಾದರೂ ತನ್ನನ್ನು ವಿಕ್ರಂ ಭಾರತಕ್ಕೆ ಕರೆತರಲೇ ಇಲ್ಲ ಎಂದು ನಿಖಿತಾ ಆರೋಪಿಸಿದ್ದಾಳೆ. ʼʼನನ್ನನ್ನೂ ಭಾರತಕ್ಕೆ ಕರೆದುಕೊಂಡು ಹೋಗು ಎಂದು ಅನೇಕ ಸಲ ಮನವಿ ಮಾಡಿದ್ದಾನೆ. ಆದರೆ ಆತ ಅದನ್ನು ಕಿವಿಗೇ ಹಾಕಿಕೊಂಡಿಲ್ಲʼʼ ಎಂದು ವಿಡಿಯೊದಲ್ಲಿ ಹೇಳಿದ್ದಾಳೆ. ವಿಕ್ರಂ ಇದೀಗ ದೆಹಲಿ ಮೂಲದ ಮಹಿಳೆಯನ್ನು ಮದುವೆಯಾಗಲು ಮುಂದಾಗಿದ್ದಾನೆ. ತನಗೆ ನ್ಯಾಯ ಬೇಕು ಎಂದಿದ್ದಾಳೆ.
ʼʼಒಂದುವೇಳೆ ನನಗೆ ನ್ಯಾಯ ದೊರೆಯದೇ ಹೋದರೆ ಮಹಿಳೆಯರು ನ್ಯಾಯಾಂಗ ವ್ಯವಸ್ಥೆಯ ಮೇಲಿನ ನಂಬಿಕೆ ಕಳೆದುಕೊಳ್ಳುವ ಅಪಾಯವಿದೆ. ಅನೇಕ ಹುಡುಗಿಯರು ವೈವಾಹಿಕ ಜೀವನದ ನಂತರ ದೈಹಿಕ ಮತ್ತು ಮಾನಸಿಕ ಕಿರುಕುಳ ಅನುಭವಿಸುತ್ತಿದ್ದಾರೆ. ಎಲ್ಲರೂ ನನ್ನ ಜತೆಗೆ ನಿಲ್ಲಬೇಕುʼʼ ಎಂದು ಮನವಿ ಮಾಡಿದ್ದಾಳೆ. ಈ ಬಗ್ಗೆ ಅಧಿಕೃತ ದೂರನ್ನೂ ಕೊಟ್ಟಿದ್ದಾಳೆ.
ಬಾಯ್ ಫ್ರೆಂಡ್‌ಗಾಗಿ ಭಾರತಕ್ಕೆ ಬಂದ ಸೀಮಾ ಹೈದರ್ ಪಾಕಿಸ್ತಾನಕ್ಕೆ ಹೋಗ್ತಾಳಾ?
ಮದುವೆಯಾದ ತಕ್ಷಣ ತಾವು ಎದುರಿಸಿದ ಆಘಾತಕಾರಿ ಸನ್ನವೇಶವನ್ನೂ ನಿಖಿತಾ ವಿವರಿಸಿದ್ದಾರೆ. "ನಾನು ಪಾಕಿಸ್ತಾನದಿಂದ ಗಂಡನ ಮನೆಗೆ ಬಂದಾಗ ಆತನ ನಡವಳಿಕೆ ಸಂಪೂರ್ಣವಾಗಿ ಬದಲಾಗಿತ್ತು. ನನ್ನ ಗಂಡನಿಗೆ ಸಂಬಂಧಿಕರೊಬ್ಬರೊಂದಿಗೆ ಅಕ್ರಮ ಸಂಬಂಧವಿದೆ ಎನ್ನುವ ವಿಚಾರ ತಿಳಿಯಿತು. ಈ ಬಗ್ಗೆ ಮಾವನಿಗೆ ಹೇಳಿದಾಗ, 'ಹುಡುಗರಿಗೆ ಅಕ್ರಮ ಸಂಬಂಧವಿರುತ್ತದೆ, ಏನೂ ಮಾಡಲು ಸಾಧ್ಯವಿಲ್ಲ' ಎಂದು ಇದು ಸಾಮಾನ್ಯ ಎಂಬಂತೆ ಹೇಳಿದರುʼʼ ಎಂಬುದಾಗಿ ನಿಖಿತಾ ತಿಳಿಸಿದ್ದಾಳೆ.