ಆಪರೇಷನ್ ಸಿಂದೂರ್: ಭಾರತದ ವಾಯುದಾಳಿಯಿಂದ ನಾಶವಾದ ಕಟ್ಟಡ ಮರು ನಿರ್ಮಿಸುತ್ತಿರುವ ಪಾಕಿಸ್ತಾನ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನ ಬೈಸರನ್ ಕಣಿವೆಯಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತೀಯ ವಾಯುಸೇನೆಯು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಈ ವೇಳೆ ನಾಶವಾದ ಕಟ್ಟಡಗಳನ್ನು ಪಾಕಿಸ್ತಾನ ಮರು ನಿರ್ಮಾಣ ಮಾಡುತ್ತಿರುವುದು ಉಪಗ್ರಹ ಚಿತ್ರದಲ್ಲಿ ಸೆರೆಯಾಗಿದೆ.
(ಸಂಗ್ರಹ ಚಿತ್ರ) -
ನವದೆಹಲಿ: ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆ ವೇಳೆ ಭಾರತೀಯ ವಾಯುಸೇನೆಯು (Indian air force) ನಾಶ ಪಡಿಸಿರುವ ಕಟ್ಟಡಗಳ ಮರು ನಿರ್ಮಾಣ ಕಾರ್ಯ ನಡೆಯುತ್ತಿರುವ ಪಾಕಿಸ್ತಾನದ (pakistan) ಚಿತ್ರಗಳನ್ನು ಉಪಗ್ರಹವು ಸೆರೆಹಿಡಿದಿದೆ. ಜಮ್ಮು ಮತ್ತು ಕಾಶ್ಮೀರದ (jammu and kashmir) ಪಹಲ್ಗಾಮ್ ನ ಬೈಸರನ್ ಕಣಿವೆಯಲ್ಲಿ ಕಳೆದ ಏಪ್ರಿಲ್ ತಿಂಗಳಾಂತ್ಯಕ್ಕೆ ನಡೆದ ಭಯೋತ್ಪಾದಕ ದಾಳಿಗೆ (terror attack) ಪ್ರತಿಯಾಗಿ ಭಾರತೀಯ ವಾಯುಸೇನೆಯು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಈ ವೇಳೆ ನಾಶವಾದ ಕಟ್ಟಡಗಳನ್ನು ಪಾಕಿಸ್ತಾನ ಮರು ನಿರ್ಮಾಣ ಮಾಡುತ್ತಿದೆ.
ಭಾರತೀಯ ವಾಯುಪಡೆಯು ಹೊಡೆದು ಉರುಳಿಸಿರುವ ಸುಕ್ಕೂರ್‌ನಲ್ಲಿರುವ ವಾಯುನೆಲೆಯಲ್ಲಿನ ಹ್ಯಾಂಗರ್‌ನ ಅವಶೇಷಗಳನ್ನು ಪಾಕಿಸ್ತಾನ ತೆರವುಗೊಳಿಸುತ್ತಿರುವುದು ಉಪಗ್ರಹದ ಚಿತ್ರದಲ್ಲಿ ಸೆರೆಯಾಗಿದೆ. ಇಲ್ಲಿ ಮಾನವರಹಿತ ವೈಮಾನಿಕ ವಿಮಾನಗಳನ್ನು ಸ್ಥಾಪಿಸಿರುವ ಕುರಿತು ಶಂಕೆಯ ಹಿನ್ನೆಲೆಯಲ್ಲಿ ಮೇ 10 ರಂದು ಮುಂಜಾನೆ ಭಾರತೀಯ ವಾಯುಪಡೆ ದಾಳಿ ನಡೆಸಿತ್ತು. ಇದರ ಬಳಿಕ ಪಾಕಿಸ್ತಾನ ಕದನ ವಿರಾಮಕ್ಕೆ ಮುಂದಾಯಿತು. ಈ ದಾಳಿಯು ಎರಡು ರಾಷ್ಟ್ರಗಳ ನಡುವಿನ ಯುದ್ಧವನ್ನು ಕೊನೆಗೊಳಿಸಿತ್ತು.
Mobile Safety Alert: ಮೊಬೈಲ್‌ನಲ್ಲಿ ಸುರಕ್ಷತಾ ಎಚ್ಚರಿಕೆ ವ್ಯವಸ್ಥೆ; ರಿಲಯನ್ಸ್ ಜಿಯೋ ಜತೆ ಎನ್ಎಚ್ಎಐ ಒಪ್ಪಂದ
ಸುಕ್ಕೂರ್ ಮೇಲೆ ನಡೆದ ದಾಳಿಯ ಬಳಿಕದ ತೆಗೆದಿರುವ ಉಪಗ್ರಹ ಚಿತ್ರದಲ್ಲಿ ಬೆಂಕಿಗೆ ಆಹುತಿಯಾಗಿರುವ ಸಸ್ಯಗಳು, ಹ್ಯಾಂಗರ್ ಸಂಪೂರ್ಣ ನಾಶವಾಗಿರುವುದನ್ನು ತೋರಿಸಿತ್ತು. ಇದೀಗ ಬಿಡುಗಡೆಯಾದ ಚಿತ್ರದಲ್ಲಿ ಹ್ಯಾಂಗರ್ ಇರುವ ಸ್ಥಳವನ್ನು ನೆಲಸಮಗೊಳಿಸಲಾಗಿದೆ. ಇಲ್ಲಿ ಯಾವುದೇ ಹೊಸ ರಚನೆಯಾಗಿಲ್ಲ. ಹಾನಿಗೊಳಗಾದ ಹ್ಯಾಂಗರ್ ಪಕ್ಕದಲ್ಲಿರುವ ಇನ್ನೊಂದು ಹ್ಯಾಂಗರ್ ಕಾಣುತ್ತಿದೆ.
ಇಲ್ಲಿ ಮರು ನಿರ್ಮಾಣ ಕಾರ್ಯವು ಅಕ್ಟೋಬರ್ ತಿಂಗಳಲ್ಲಿ ಪ್ರಾರಂಭವಾಗಿದೆ. ಇಲ್ಲಿ ದೀರ್ಘಕಾಲದ ಸುರಕ್ಷತಾ ಮೌಲ್ಯಮಾಪನ ಅಥವಾ ಅವಶೇಷಗಳ ಅಡಿಯಲ್ಲಿ ಉಳಿದಿರುವ ಅಪಾಯಕಾರಿ ವಸ್ತುಗಳ ಕಾರಣದಿಂದಾಗಿ ಇವುಗಳನ್ನು ತೆರವುಗೊಳಿಸವುದು ಅನಿವಾರ್ಯವಾಗಿತ್ತು ಎಂದು ಪ್ರಸಿದ್ಧ ಜಿಯೋ-ಇಂಟೆಲಿಜೆನ್ಸ್ ಸಂಶೋಧಕ ಮತ್ತು ದಿ ಇಂಟೆಲ್ ಲ್ಯಾಬ್‌ನ ಓಎಸ್ಎನ್ ಐಟಿ ತಜ್ಞ ಡೇಮಿಯನ್ ಸೈಮನ್ ತಿಳಿಸಿದ್ದಾರೆ.
🚨Pakistan Constructs New Buildings, Removes Destroyed Hangar At Bases Struck By IAF pic.twitter.com/A4ejG3I3Wa
— Indian Infra Report (@Indianinfoguide) December 2, 2025
ಬಿಡುಗಡೆಯಾಗಿರುವ ಇನ್ನೊಂದು ಚಿತ್ರದಲ್ಲಿ ಚಕ್ಲಾಲಾದ ಪಾಕಿಸ್ತಾನ ವಾಯುಪಡೆಯ ನೂರ್ ಖಾನ್ ನೆಲೆಯಲ್ಲಿರುವ ಕಮಾಂಡ್-ಅಂಡ್-ಕಂಟ್ರೋಲ್ ಕೇಂದ್ರದ ಸ್ಥಳವನ್ನು ತೋರಿಸಲಾಗಿದೆ. ಇಲ್ಲಿ ಈಗ ಹೊಸ ರಚನೆಗಳು ಕಾಣಿಸಿಕೊಳ್ಳುತ್ತವೆ. ಚಕ್ಲಾಲಾದಲ್ಲಿರುವ ಪಾಕಿಸ್ತಾನದ ನೂರ್ ಖಾನ್ ನೆಲೆಯು ಇಸ್ಲಾಮಾಬಾದ್‌ನಿಂದ ಕೇವಲ 10 ಕಿ.ಮೀ ಆಗ್ನೇಯದಲ್ಲಿದೆ.
ಆಪರೇಷನ್ ಸಿಂದೂರ್ ವೇಳೆ ಭಾರತವು ನೂರ್ ಖಾನ್ ಮೇಲೆ ದಾಳಿ ನಡೆಸಿದ್ದು, ವಿಶೇಷ ಮಿಲಿಟರಿ ವಾಹನಗಳನ್ನು ಗುರಿಯಾಗಿಸಿಕೊಂಡಿತ್ತು. ಇದರಿಂದ ಅಪಾರ ಹಾನಿಯುಂಟಾಗಿತ್ತು. ಈ ದಾಳಿಯ ಬಳಿಕ ಘರ್ಷಣಾ ಸ್ಥಳದ ಸುತ್ತಲಿನ ಕಟ್ಟಡಗಳನ್ನು ನೆಲಸಮಗೊಳಿಸಲಾಗಿದ್ದು, ಹೊಸ ರಚನೆಯನ್ನು ಮಾಡಲಾಗಿದೆ. ಹೊಸದಾಗಿ ನಿರ್ಮಿಸಲಾದ ಕಟ್ಟಡವು ಸುಮಾರು 20×25 ಮೀಟರ್ ಉದ್ದವಿದ್ದು ಎರಡು ಸ್ವತಂತ್ರ ಆದರೆ ಪಕ್ಕದ ವಿಭಾಗಗಳನ್ನು ಒಳಗೊಂಡಿರುವಂತೆ ಕಾಣುತ್ತದೆ ಎಂದು ಡೇಮಿಯನ್ ಸೈಮನ್ ತಿಳಿಸಿದ್ದಾರೆ.
ಸ್ಕೂಟರ್ ರಿಪೇರಿಗಾಗಿ ತೆರಳುತ್ತಿದ್ದಾಗ ಹೃದಯಾಘಾತ: ಕುಸಿದು ಬಿದ್ದು ಯುವಕ ಸ್ಥಳದಲ್ಲೇ ಸಾವು
ಭಾರತ ಮತ್ತು ಪಾಕಿಸ್ತಾನ ನಡುವಿನ ಸಣ್ಣ ಯುದ್ಧವು 88 ಗಂಟೆಗಳ ಕಾಲ ನಡೆದಿದ್ದು, ಈ ವೇಳೆ ಬಹಾವಲ್ಪುರ್ ಮತ್ತು ಮುರಿಡ್ಕೆಯಲ್ಲಿರುವ ಜೈಶ್-ಎ-ಮೊಹಮ್ಮದ್ (ಜೆಇಎಂ) ಮತ್ತು ಲಷ್ಕರ್-ಎ-ತೈಬಾ (ಎಲ್‌ಇಟಿ) ಪ್ರಧಾನ ಕಚೇರಿ ಸೇರಿದಂತೆ ಒಂಬತ್ತು ಪಾಕಿಸ್ತಾನಿ ಭಯೋತ್ಪಾದಕ ಶಿಬಿರಗಳನ್ನು ಭಾರತ ನಾಶ ಪಡಿಸಿದೆ. ಇದರ ಮರು ನಿರ್ಮಾಣ ಕಾರ್ಯವು ಕೂಡ ಅಷ್ಟೇ ವೇಗದಲ್ಲಿ ಪ್ರಾರಂಭವಾಗಿರುವುದನ್ನು ಉಪಗ್ರಹ ಚಿತ್ರಗಳು ತೋರಿಸಿವೆ.