ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Plane Crash: ಅಮೆರಿಕದಲ್ಲಿ ಮತ್ತೊಂದು ದುರಂತ; ಚಿಕಿತ್ಸೆಗೆ ತೆರಳುತ್ತಿದ್ದ ಮಗು ಇದ್ದ ವಿಮಾನ ಪತನ

ಈಶಾನ್ಯ ಫಿಲಿಡೆಲ್ಫಿಯಾದ ಶಾಪಿಂಗ್ ಸೆಂಟರ್ ಬಳಿ ಶುಕ್ರವಾರ ರಾತ್ರಿ ಆರು ಜನರನ್ನು ಹೊತ್ತ ಲಘು ವೈದ್ಯಕೀಯ ವಿಮಾನವೊಂದು ಅಪಘಾತಕ್ಕೀಡಾಗಿದ್ದು, ಅದರಲ್ಲಿದ್ದವರೆಲ್ಲರೂ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ವಿಮಾನ ಶಾಪಿಂಗ್ ಮಾಲ್‍ನ ಮೇಲೆ ಬಿದ್ದ ಪರಿಣಾಮ ಅಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಂಕಿ ಆವರಿಸಿಕೊಂಡಿದೆ. ಈ ದೃಶ್ಯ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದೆ.

ಮಾಲ್ ಬಳಿಯೇ ನೆಲಕ್ಕಪ್ಪಳಿಸಿದ ಲಘು ವಿಮಾನ- ವಿಡಿಯೋ ಇದೆ

plane crashes viral video

Profile pavithra Feb 1, 2025 10:05 AM

ವಾಷಿಂಗ್ಟನ್‌: ಅಮೆರಿಕದ ವಾಷಿಂಗ್ಟನ್‍ನಲ್ಲಿ ನಡೆದ ವಿಮಾನ ದುರಂತದ ನೆನೆಪು ಮಾಸುವ ಮುನ್ನ ಈಶಾನ್ಯ ಫಿಲಿಡೆಲ್ಫಿಯಾದ ಶಾಪಿಂಗ್ ಸೆಂಟರ್ ಬಳಿ ಶುಕ್ರವಾರ ರಾತ್ರಿ ಆರು ಜನರನ್ನು ಹೊತ್ತ ಲಘು ವೈದ್ಯಕೀಯ ವಿಮಾನವೊಂದು ಅಪಘಾತಕ್ಕೀಡಾಗಿದೆ(Plane Crash). ವಿಮಾನದ ಒಳಗೆ ಇದ್ದ ಯಾರೂ ಬದುಕುಳಿದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನ ಶಾಪಿಂಗ್ ಮಾಲ್‍ನ ಮೇಲೆ ಬಿದ್ದ ಪರಿಣಾಮ ಅಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಂಕಿ ಆವರಿಸಿಕೊಂಡಿದೆ ಎಂದು ವರದಿಯಾಗಿದೆ. ಈ ದೃಶ್ಯ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದೆ.

ಅಪಘಾತವು ನೆರೆಹೊರೆಯನ್ನು ನಡುಗಿಸಿದ್ದಲ್ಲದೇ ಇದರಿಂದ ಸುತ್ತಮುತ್ತಲಿನ ಮನೆಗಳಿಗೆ ಬೆಂಕಿ ಹತ್ತಿಕೊಂಡಿದೆ. ವಿಮಾನದ ಅವಶೇಷಗಳು ಶಾಪಿಂಗ್ ಮಾಲ್ ಮತ್ತು ಪ್ರಮುಖ ರಸ್ತೆಯ ಬಳಿಯ ಜಂಕ್ಷನ್‍ನಲ್ಲಿ ಹರಡಿಕೊಂಡಿದೆ. ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್ಎಎ) ಪ್ರಕಾರ, ಮಿಸ್ಸೌರಿಯ ಸ್ಪ್ರಿಂಗ್ಫೀಲ್ಡ್-ಬ್ರಾನ್ಸನ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವಿಮಾನವು ರಾತ್ರಿ 11:30 ರ ಸುಮಾರಿಗೆ ಅಪಘಾತಕ್ಕೀಡಾಗಿದೆ ಎನ್ನಲಾಗಿದೆ. ಎಫ್ಎಎ ಮತ್ತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (ಎನ್‍ಟಿಎಸ್‍ಬಿ) ಎರಡೂ ಅಪಘಾತದ ಕಾರಣವನ್ನು ತನಿಖೆ ನಡೆಸಲಿವೆ ಎಂದು ಎಫ್ಎಎ ದೃಢಪಡಿಸಿದೆ.



ಈ ಅಪಘಾತವು ಈಶಾನ್ಯ ಫಿಲಿಡೆಲ್ಫಿಯಾ ವಿಮಾನ ನಿಲ್ದಾಣದಿಂದ ಸುಮಾರು 4.8 ಕಿಲೋಮೀಟರ್ ದೂರದಲ್ಲಿ ನಡೆದಿದೆ ಎನ್ನಲಾಗಿದೆ. ಈ ಘಟನೆಯಲ್ಲಿ ಕೆಲವು ಮನೆ ಮತ್ತು ಕಾರಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ವರದಿಯಾಗಿದೆ.



ವೈದ್ಯಕೀಯ ಸಾರಿಗೆಗಾಗಿ ಸಾಮಾನ್ಯವಾಗಿ ಬಳಸಲಾಗುವ ಲಿಯರ್ಜೆಟ್ 55, ಮೆಕ್ಸಿಕೊ ಮೂಲದ ಏರ್ ಆಂಬ್ಯುಲೆನ್ಸ್ ಸೇವೆಯಾದ ಜೆಟ್ ರೆಸ್ಕ್ಯೂ ಒಡೆತನದಲ್ಲಿದೆ. ಗಂಭೀರ ಅನಾರೋಗ್ಯದ ರೋಗಿಗಳಿಗೆ ತುರ್ತು ವಾಯು ಸಾರಿಗೆಯನ್ನು ಒದಗಿಸುವಲ್ಲಿ ಜೆಟ್ ರೆಸ್ಕ್ಯೂ ಹೆಸರುವಾಸಿಯಾಗಿದೆ. ಚಿಕಿತ್ಸೆಗೆಂದು ತೆರಳುತ್ತಿದ್ದ ಬಾಲಕ ಸೇರಿದಂತೆ ಆರು ಮಂದಿ ವಿಮಾನದಲ್ಲಿದ್ದರು ಎನ್ನಲಾಗಿದೆ

ಈ ಸುದ್ದಿಯನ್ನೂ ಓದಿ: Plane Crash: ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದು ನದಿಗೆ ಅಪ್ಪಳಿಸಿದ ವಿಮಾನ- 65ಪ್ರಯಾಣಿಕರು ಸಾವನಪ್ಪಿರುವ ಶಂಕೆ

ವಾಷಿಂಗ್ಟನ್ ಡಿ.ಸಿ.ಯಲ್ಲಿ ಅಮೆರಿಕನ್ ಏರ್‌ಲೈನ್ಸ್‌ ಜೆಟ್ ಮತ್ತು ಸೇನಾ ಹೆಲಿಕಾಪ್ಟರ್ ನಡುವೆ ಮಿಡ್ಏರ್ ಡಿಕ್ಕಿಯಾದ ಎರಡು ದಿನಗಳ ನಂತರ ಈ ವಿಮಾನ ಅಪಘಾತ ಸಂಭವಿಸಿದ್ದು, ವಿಮಾನದಲ್ಲಿದ್ದ ಎಲ್ಲಾ 67 ಜನರು ಸಾವನ್ನಪ್ಪಿದ್ದಾರೆ, ಇದು ಸುಮಾರು 25 ವರ್ಷಗಳಲ್ಲಿ ಯುಎಸ್‍ನಲ್ಲಿ ಸಂಭವಿಸಿದ ಭೀಕರ ವಿಮಾನ ದುರಂತವಾಗಿದೆ.