ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪಾಕಿಸ್ತಾನದಲ್ಲಿ ವಿದ್ಯುತ್ ಬಿಕ್ಕಟ್ಟು: ವಿಐಪಿ ಕೊಠಡಿಗಳಿಗೆ ಬೆಳಕು; ಆಪರೇಷನ್ ಥಿಯೇಟರ್‌ಗಳಲ್ಲಿ ಕತ್ತಲು

ಇರಾನ್ ಯುದ್ಧದ ಪರಿಣಾಮ ಪಾಕಿಸ್ತಾನದಲ್ಲಿ ವಿದ್ಯುತ್ ಕೊರತೆ ತೀವ್ರವಾಗಿ ಬಾಧಿಸುತ್ತಿದೆ. ಈ ನಡುವೆ ವಿದ್ಯುತ್ ಕಡಿತದಲ್ಲಿ ತಾರತಮ್ಯ ಮಾಡಲಾಗುತ್ತಿದ್ದು, ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಪಾಕಿಸ್ತಾನದಲ್ಲಿ ದಿನದಲ್ಲಿ 2 ರಿಂದ 2.5 ಗಂಟೆಗಳವರೆಗೆ ವಿದ್ಯುತ್ ಕಡಿತ ಮಾಡಲಾಗುತ್ತಿದ್ದು, ಇದು ಪಾಕಿಸ್ತಾನದ ಆಸ್ಪತ್ರೆಗಳ ಮೇಲೆ ಗಂಭೀರ ಪರಿಣಾಮವನ್ನು ಬೀರಿದೆ. ಆಪರೇಷನ್ ಥಿಯೇಟರ್ ಗಳಲ್ಲಿ ರೋಗಿಗಳು ಕತ್ತಲೆಯಲ್ಲಿರುವಂತಾಗಿದೆ.

ಪಾಕಿಸ್ತಾನದಲ್ಲಿ ವಿದ್ಯುತ್ ಕಡಿತ: ಜನರ ಪರದಾಟ

ಸಂಗ್ರಹ ಚಿತ್ರ -

ಇಸ್ಲಾಮಾಬಾದ್: ಇಂಧನ ಕೊರತೆಯಿಂದಾಗಿ (Oil crisis) ಪಾಕಿಸ್ತಾನದಲ್ಲಿ ಆಪರೇಷನ್ ಥಿಯೇಟರ್ (operation theatres) ಗಳಲ್ಲಿ ರೋಗಿಗಳು ಕತ್ತಲೆಯಲ್ಲಿರುವಂತಾಗಿದೆ. ಇರಾನ್ ಯುದ್ಧ (Iran war) ಪರಿಣಾಮ ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಏರಿಕೆಯಾಗುತ್ತಿದ್ದು,ಇಂಧನ ಕೊರತೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಪಾಕಿಸ್ತಾನ ಸರ್ಕಾರವು ದೇಶದ ವಿವಿಧ ಭಾಗಗಳಲ್ಲಿ ವಿದ್ಯುತ್ ಕಡಿತವನ್ನು (Power cut) ಘೋಷಿಸಿದೆ. ಆದರೆ ಇದು ಗ್ರಾಮಸ್ಥರು, ಆಸ್ಪತ್ರೆಯಲ್ಲಿರುವ ಬಡ ರೋಗಿಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ವಿದ್ಯುತ್ ಕಡಿತದ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿರುವ ವಿಐಪಿ ಕೊಠಡಿಗಳಿಗೆ ಬೆಳಕು ಒದಗಿಸಲಾಗುತ್ತಿದ್ದು, ಆಪರೇಷನ್ ಥಿಯೇಟರ್ ಗಳು ಕತ್ತಲಾಗಿವೆ ಎಂದು ಶಸ್ತ್ರಚಿಕಿತ್ಸಕರೊಬ್ಬರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ದೇಶದಲ್ಲಿ ವಿದ್ಯುತ್ ಕೊರತೆ ತೀವ್ರವಾಗಿದ್ದು, ಸರ್ವಿಸಸ್ ಆಸ್ಪತ್ರೆಯ ಆಪರೇಷನ್ ಥಿಯೇಟರ್ ಗಳಲ್ಲಿರುವ ರೋಗಿಗಳು ವಿದ್ಯುತ್ ಕಡಿತದಿಂದಾಗಿ ಕತ್ತಲೆಯಲ್ಲಿ ಸಮಯ ಕಳೆಯುತ್ತಿದ್ದಾರೆ. ಆದರೆ ವಿಐಪಿ ಕೊಠಡಿಗಳಿಗೆ ಜನರೇಟರ್ ಮೂಲಕ ನಿರಂತರ ವಿದ್ಯುತ್ ಒದಗಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿ 5 ತೀವ್ರತೆಯ ಭೂಕಂಪ; ಕಾಶ್ಮೀರದಲ್ಲಿಯೂ ಕಂಪನದ ಅನುಭವ

ಈ ಕುರಿತು ವಿಡಿಯೊ ಸಂದೇಶ ನೀಡಿರುವ ಅವರು, ಶಸ್ತ್ರಚಿಕಿತ್ಸೆಗಳು ನಡೆಯುತ್ತಿದ್ದಾಗ ಆಪರೇಷನ್ ಥಿಯೇಟರ್ ಗಳಲ್ಲಿ ಜನರೇಟರ್ ಇಂಧನ ಖಾಲಿಯಾಗಿದೆ. ಆದರೆ ವಿಐಪಿ ಬ್ಲಾಕ್ ಗಳಿಗೆ ಜನರೇಟರ್ ಬೆಳಕು ನೀಡಲಾಗಿತ್ತು. ಇಲ್ಲಿ ರೋಗಿಗಳು ಹೇಗೆ ಬದುಕುಳಿಯುತ್ತಾರೆ ಎಂದು ಗೊತ್ತಿಲ್ಲ. ಇದು ಈ ದೇಶದ ಸ್ಥಿತಿ. 30 ನಿಮಿಷಗಳಿಗೂ ಕಾಲ ವಿದ್ಯುತ್ ಕಡಿತವಾಗಿದೆ. ರೋಗಿಗಳೊಂದಿಗೆ ಏನು ಮಾಡಬೇಕೆಂದು ತಿಳಿದಿಲ್ಲ ಎಂದು ಅವರು ಹೇಳಿದರು.

ಪಾಕಿಸ್ತಾನದಲ್ಲಿ ವಿದ್ಯುತ್ ಕೊರತೆ ತೀವ್ರವಾಗಿದ್ದು, ದೇಶದ ಹೆಚ್ಚಿನ ಭಾಗಗಳಿಗೆ ಸುಮಾರು 15 ಗಂಟೆಗಳ ಕಾಲ ಅಘೋಷಿತ ವಿದ್ಯುತ್ ಕಡಿತವನ್ನು ಮಾಡಲಾಗುತ್ತಿದೆ. ವಿವಿಧ ನಗರಗಳಲ್ಲಿ ಸಂಜೆ ಅವಧಿಯಲ್ಲಿ ಸುಮಾರು 2 ರಿಂದ 2.5 ಗಂಟೆಗಳವರೆಗೆ ವಿದ್ಯುತ್ ಕಡಿತ ಮಾಡುವುದಾಗಿ ಹೇಳಿದ್ದರೂ ಅದಕ್ಕಿಂತ ಹೆಚ್ಚು ಸಮಯದವರೆಗೆ ವಿದ್ಯು ಕಡಿತ ಮಾಡಲಾಗುತ್ತಿದೆ ಎಂದು ಅನೇಕರು ದೂರಿದ್ದಾರೆ.

ಏಪ್ರಿಲ್ 16 ಮತ್ತು 17 ರಂದು ನಗರ ಪ್ರದೇಶಗಳಲ್ಲಿ 3 ರಿಂದ 8 ಅಥವಾ ಅದಕ್ಕಿಂತ ಹೆಚ್ಚು ಗಂಟೆಗಳ ಕಾಲ ವಿದ್ಯುತ್ ಕಡಿತ ಮಾಡಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ 10 ರಿಂದ 16 ಗಂಟೆಗಳವರೆಗೆ ವಿದ್ಯುತ್ ಕಡಿತವನ್ನು ಮಾಡಲಾಗಿದೆ. ವಿದ್ಯುತ್ ಕಡಿತದ ತೀವ್ರವಾಗಿ ಲಾಹೋರ್ ಮತ್ತು ಕರಾಚಿಯನ್ನು ಕೂಡ ಬಾಧಿಸಿವೆ.

ದೇಶದಲ್ಲಿ ಸುಮಾರು 3,400 ಮೆಗಾವ್ಯಾಟ್ ವಿದ್ಯುತ್ ಕೊರತೆ ಕಾಡುತ್ತಿದೆ. ಏಪ್ರಿಲ್ ಆರಂಭದಲ್ಲಿ 9,000 ಮೆಗಾವ್ಯಾಟ್ ಗಳಷ್ಟು ವಿದ್ಯುತ್ ಬೇಡಿಕೆ ಇದ್ದು ಇದು ಈಗ ಸುಮಾರು 20,000 ಮೆಗಾವ್ಯಾಟ್ ಗೆ ಎಂದಿದೆ. ಎಲ್ಎನ್ ಜಿ ಪೂರೈಕೆ ಕೂಡ ದೇಶದಲ್ಲಿ ಈಗ ಸಮಸ್ಯೆಯಾಗಿದೆ.

ಪಾಕಿಸ್ತಾನದಲ್ಲಿ ಮತ್ತೆ ಇರಾನ್‌- ಅಮೆರಿಕ ಎರಡನೇ ಸುತ್ತಿನ ಮಾತುಕತೆ; ಸಮಯ, ದಿನಾಂಕ ಯಾವಾಗ?

ಈ ಕುರಿತು ಮಾತನಾಡಿರುವ ಪಾಕಿಸ್ತಾನದ ಫೆಡರಲ್ ವಿದ್ಯುತ್ ಸಚಿವ ಸರ್ದಾರ್ ಅವೈಸ್ ಅಹ್ಮದ್ ಖಾನ್ ಲೆಘಾರಿ, ಗಲ್ಫ್ ಪರಿಸ್ಥಿತಿಯು ದೇಶದ ಅನಿಲ ಪೂರೈಕೆ ಮೇಲೆ ಪರಿಣಾಮ ಬೀರಿದೆ. 6,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವಿರುವ ಸ್ಥಾವರಗಳು ಪ್ರಸ್ತುತ ಕೇವಲ 500 ಮೆಗಾವ್ಯಾಟ್ ವಿದ್ಯುತ್ ಅನ್ನು ಮಾತ್ರ ಉತ್ಪಾದಿಸುತ್ತಿವೆ. ಈ ಕೊರತೆಯನ್ನು ನಿರ್ವಹಿಸಲು ಸರ್ಕಾರವು ಫರ್ನೇಸ್ ಎಣ್ಣೆಯಂತಹ ದುಬಾರಿ ಪರ್ಯಾಯಗಳತ್ತ ಮುಖ ಮಾಡುತ್ತಿದೆ. ಆದರೆ ಪೂರೈಕೆ ಕೊರತೆ ಕಾಡುತ್ತಿದೆ ಎಂದು ತಿಳಿಸಿದರು.