Plane Crash: ತಾಂತ್ರಿಕ ದೋಷದಿಂದ ರಷ್ಯಾ ವಿಮಾನ ಪತನ; ಮಕ್ಕಳು ಸೇರಿ 49 ಜನರ ಸಾವು?
ತಾಂತ್ರಿಕ ದೋಷದಿಂದ ಚೀನಾದ ಗಡಿಯ ಸಮೀಪ ದೇಶದ ಫಾರ್ ಈಸ್ಟರ್ನ್ ಪ್ರದೇಶದಲ್ಲಿ ಹಾರಾಡುತ್ತಿದ್ದ ರಷ್ಯಾದ ಪ್ರಯಾಣಿಕ ವಿಮಾನವು ಸೋಮವಾರ (Plane Crash) ಪತನಗೊಂಡಿದೆ. ವಿಮಾನದಲ್ಲಿದ್ದ ಮಕ್ಕಳು ಸೇರಿದಂತೆ 49 ಜನ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.


ಮಾಸ್ಕೋ: ತಾಂತ್ರಿಕ ದೋಷದಿಂದ ಚೀನಾದ ಗಡಿಯ ಸಮೀಪ ದೇಶದ ಫಾರ್ ಈಸ್ಟರ್ನ್ ಪ್ರದೇಶದಲ್ಲಿ ಹಾರಾಡುತ್ತಿದ್ದ ರಷ್ಯಾದ (Russia) ಪ್ರಯಾಣಿಕ ವಿಮಾನವು ಸೋಮವಾರ ಪತನಗೊಂಡಿದೆ (Plane Crash) . ವಿಮಾನದಲ್ಲಿದ್ದ ಮಕ್ಕಳು ಸೇರಿದಂತೆ 49 ಜನ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸೈಬೀರಿಯಾ ಮೂಲದ ಅಂಗಾರ (Angara) ಎಂಬ ವಿಮಾನಯಾನ ಸಂಸ್ಥೆಯಿಂದ ನಿರ್ವಹಿಸಲ್ಪಡುತ್ತಿದ್ದ AN-24 ಸಂಖ್ಯೆಯ ವಿಮಾನ ಚೀನಾದ ಗಡಿಯಲ್ಲಿರುವ ಅಮುರ್ ಪ್ರದೇಶದ ಟಿಂಡಾ ಪಟ್ಟಣದ ಬಳಿ ರಾಡಾರ್‌ನಿಂದ ಸಂಪರ್ಕ ಕಳೆದುಕೊಂಡಿತು. ಇದಾದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿರುವುದು ತಿಳಿದುಬಂದಿದೆ.
ವಿಮಾನ ಹಾರಾಟದ ಮಧ್ಯದಲ್ಲಿ ವಾಯು ಸಂಚಾರ ನಿಯಂತ್ರಕರು ವಿಮಾನದ ಸಂಪರ್ಕವನ್ನು ಕಳೆದುಕೊಂಡಿದ್ದರು. ನಂತರ ವಿಮಾನವನ್ನು ಪತ್ತೆ ಮಾಡಲಾಗಿದ್ದು, ಉರಿಯುತ್ತಿರುವ ವಿಮಾನದ ಭಾಗಗಳು ಕಾಣಿಸಿವೆ. ಲ್ಯಾಂಡಿಂಗ್ ಸಮಯದಲ್ಲಿ ಪೈಲಟ್ ದೋಷವು ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಪ್ರಾಥಮಿಕವಾಗಿ ಹೇಳಲಾಗಿದೆ. ವಿಮಾನವು ಸೋವಿಯತ್ ಯುಗದದ್ದಾಗಿದ್ದು ಸುಮಾರು 50 ವರ್ಷ ಹಳೆಯದಾಗಿತ್ತು ಮತ್ತು ಅದರ ಬಾಲ ಸಂಖ್ಯೆಯು ಇದನ್ನು 1976 ರಲ್ಲಿ ನಿರ್ಮಿಸಲಾಗಿತ್ತು.
An-24 crash site in Russia's Far East seen from helicopter — social media footage
— RT (@RT_com) July 24, 2025
49 on board, including 5 children and 6 crew — no survivors reported
Malfunction or human error considered as possible causes https://t.co/pLMgFY7kBG pic.twitter.com/rU5VWLOnXH
ವಿಮಾನದಲ್ಲಿದ್ದ ಎಲ್ಲಾ 50 ಮಂದಿ ಸಾವನ್ನಪ್ಪಿರುವುದಾಗಿ ರಷ್ಯಾದ ಸುದ್ದಿ ಸಂಸ್ಥೆ TASS ಹೇಳಿದೆ. ಆದ್ರೆ ಅಧಿಕೃತವಾಗಿ ಸಾವನ್ನಪ್ಪಿರುವುದು ಬಹಿರಂಗವಾಗಿಲ್ಲ. ಈ ನಡುವೆ ಹೆಲಿಕಾಪ್ಟರ್‌ನ ಅವಶೇಷಗಳನ್ನು ರಕ್ಷಣಾ ಹೆಲಿಕಾಪ್ಟರ್‌ಗಳು ಪತ್ತೆಹಚ್ಚಿರುವುದಾಗಿ ರಷ್ಯಾದ ತುರ್ತು ಸಚಿವಾಲಯ ತಿಳಿಸಿದೆ. ಹೆಲಿಕಾಪ್ಟರ್‌ನಿಂದ ಚಿತ್ರೀಕರಿಸಲ್ಪಟ್ಟು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಅಪಘಾತದ ವೀಡಿಯೊವು ದಟ್ಟವಾದ ಅರಣ್ಯ ಪ್ರದೇಶದಲ್ಲಿ ವಿಮಾನದ ಅವಶೇಷಗಳನ್ನು ತೋರಿಸುತ್ತದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಆರು ಸಿಬ್ಬಂದಿ ಮತ್ತು ಐದು ಮಕ್ಕಳು ಸೇರಿದಂತೆ 43 ಪ್ರಯಾಣಿಕರು ವಿಮಾನದಲ್ಲಿದ್ದರು ಎಂದು ಪ್ರಾದೇಶಿಕ ಗವರ್ನರ್ ವಾಸಿಲಿ ಓರ್ಲೋವ್ ಹೇಳಿದ್ದಾರೆ. "ವಿಮಾನವನ್ನು ಹುಡುಕಲು ಅಗತ್ಯವಿರುವ ಎಲ್ಲಾ ಪಡೆಗಳು ಮತ್ತು ಸಂಪನ್ಮೂಲಗಳನ್ನು ನಿಯೋಜಿಸಲಾಗಿದೆ" ಎಂದು ಓರ್ಲೋವ್ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: AI-171 Crash: ಪೈಲಟ್‌ಗಳ ತಪ್ಪಿನಿಂದಲೇ ನಡೀತಾ ವಿಮಾನ ದುರಂತ? ಗೊಂದಲಕ್ಕೆ ಬಲಿಯಾದವಾ 241 ಜೀವಗಳು?
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಮೂರು ಜನರನ್ನು ಹೊತ್ತೊಯ್ಯುತ್ತಿದ್ದ ರಾಬಿನ್ಸನ್ R66 ಹೆಲಿಕಾಪ್ಟರ್ ಅದೇ ಅಮುರ್ ಪ್ರದೇಶದಲ್ಲಿ ನೋಂದಾಯಿಸದ ಹಾರಾಟದ ಸಮಯದಲ್ಲಿ ಕಾಣೆಯಾಗಿತ್ತು. ಈ ಪ್ರದೇಶವು ಮಾಸ್ಕೋದಿಂದ ಪೂರ್ವಕ್ಕೆ ಸರಿಸುಮಾರು 6,600 ಕಿ.ಮೀ ದೂರದಲ್ಲಿದೆ.