ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇರಾನ್ ವಿರುದ್ಧ ಅಮೆರಿಕ, ಇಸ್ರೇಲ್‌ ಬಲ ಹೆಚ್ಚಿಸಿದ ಸೌದಿ ಅರೇಬಿಯಾ, ಯುಎಇ

ಇರಾನ್ ವಿರುದ್ಧ ಯುಎಸ್ ಮತ್ತು ಇಸ್ರೇಲ್ ನಡೆಸುತ್ತಿರುವ ಸಂಘರ್ಷದ ಪರಿಣಾಮ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಯಾಕೆಂದರೆ ಇದೀಗ ಇರಾನ್ ವಿರುದ್ಧ ಸೌದಿ ಅರೇಬಿಯಾ, ಯುಎಇ ರಣಾಂಗಣಕ್ಕೆ ಇಳಿದಿದ್ದು, ಇದರಿಂದ ಅಮೆರಿಕ, ಇಸ್ರೇಲ್‌ ಹೋರಾಟಕ್ಕೆ ಬಲ ಸಿಕ್ಕಂತಾಗಿದೆ.

ಇರಾನ್ ವಿರುದ್ದ ಕಣಕ್ಕಿಳಿದ ಗಲ್ಫ್ ರಾಷ್ಟ್ರಗಳು

ಸಂಗ್ರಹ ಚಿತ್ರ -

ವಾಷಿಂಗ್ಟನ್: ಇರಾನ್ (Iran) ವಿರುದ್ಧ ಯುಎಸ್ (US) ನಡೆಸುತ್ತಿರುವ ಸಂಘರ್ಷಕ್ಕೆ ಇದೀಗ ಸೌದಿ ಅರೇಬಿಯಾ (Saudi Arabia), ಯುಎಇ (UAE) ಕೂಡ ಧುಮುಕಿದೆ. ಕಳೆದ ಫೆಬ್ರವರಿ ತಿಂಗಳಾಂತ್ಯಕ್ಕೆ ಇರಾನ್ ಮೇಲೆ ಯುಎಸ್ ಮತ್ತು ಇಸ್ರೇಲ್ ಸೇನಾ ಪಡೆಯು ನೇರವಾಗಿ ದಾಳಿ (Iran war) ನಡೆಸಿತ್ತು. ಇದರ ಬಳಿಕ ಯುಎಸ್ ಮಿಲಿಟರಿ ನೆಲೆ ಹೊಂದಿರುವ ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ದಾಳಿ ನಡೆಸಿದ್ದು, ಇದರ ಪರಿಣಾಮ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿತ್ತು. ಆದರೆ ಇದೀಗ ಇರಾನ್ ವಿರುದ್ಧ ಯುಎಸ್ ಸೇನೆಯು ನಡೆಸುತ್ತಿರುವ ಹೋರಾಟಕ್ಕೆ ಸೌದಿ ಅರೇಬಿಯಾ, ಯುಎಇ ಜೊತೆಯಾಗಿದೆ. ಇದರಿಂದ ಅಮೆರಿಕ, ಇಸ್ರೇಲ್‌ ಬಲ ಮತ್ತಷ್ಟು ಹೆಚ್ಚಾಗಿದೆ.

ಪರ್ಷಿಯನ್ ಕೊಲ್ಲಿಯಲ್ಲಿರುವ ಅಮೆರಿಕದ ಮಿತ್ರ ರಾಷ್ಟ್ರಗಳು ಇದೀಗ ಇರಾನ್ ವಿರುದ್ಧ ಹೋರಾಟಕ್ಕೆ ಇಳಿಯುವ ಸೂಚನೆಯನ್ನು ನೀಡಿದೆ. ಯಾಕೆಂದರೆ ಯುಎಸ್ ದಾಳಿ ನಡೆಸಿದ ಬಳಿಕ ಇರಾನ್ ಯುಎಸ್ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಗಲ್ಫ್ ರಾಷ್ಟ್ರಗಳ ಮೇಲೆ ದಾಳಿ ನಡೆಸಿತ್ತು. ಇದರಿಂದ ಕೆರಳಿರುವ ಗಲ್ಫ್ ರಾಷ್ಟ್ರಗಳು ಇದೀಗ ಸಂಘರ್ಷದಲ್ಲಿ ಇಳಿಯುವ ಸೂಚನೆ ಸಿಕ್ಕಿದೆ.

ಲೆಬನಾನ್, ಗಾಜಾದಲ್ಲಿ ನಾಗರಿಕರ ಮೇಲೆ ಆಕ್ರಮಣ ಮಾಡಿದರೆ ಭಾರೀ ದಾಳಿಗಳ ಬಗ್ಗೆ ಇಸ್ರೇಲ್‌ಗೆ ಇರಾನ್ ಎಚ್ಚರಿಕೆ

ಇರಾನ್‌ ಜೊತೆಗೆ ಕದನ ವಿರಾಮಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚಿಸಿದ್ದರೂ ಕೂಡ ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸಂಘರ್ಷಕ್ಕೆ ಸೇರಲು ಸನ್ನದ್ಧವಾಗಿದೆ. ಇದು ಈಗ ಸಂಘರ್ಷದಲ್ಲಿ ಹೊಸ ಬೆಳವಣಿಗೆಯನ್ನು ತೋರಿಸಿದೆ.

ಸೌದಿ ಅರೇಬಿಯಾ ಕಿಂಗ್ ಫಹಾದ್ ವಾಯುನೆಲೆಗೆ ಯುಎಸ್ ಮಿಲಿಟರಿ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಈ ಮೂಲಕ ಸೌದಿ ಅರೇಬಿಯಾವು ಇರಾನ್ ವಿರುದ್ಧ ತನ್ನ ನೆಲೆಗಳನ್ನು ಬಳಸಲು ಬಿಡುವುದಿಲ್ಲ ಎಂದು ನೀಡಿದ್ದ ಹೇಳಿಕೆಯಿಂದ ಅದು ಹಿಂದೆ ಸರಿದಂತಾಗಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್ ಇರಾನ್ ಒಡೆತನದ ಆಸ್ಪತ್ರೆ ಮತ್ತು ಕ್ಲಬ್ ಅನ್ನು ಮುಚ್ಚಿದೆ. ಹೀಗಾಗಿ ಅದು ಕೂಡ ಈಗ ಟೆಹರಾನ್ ವಿರುದ್ಧ ಯುಎಸ್ ಮತ್ತು ಇಸ್ರೇಲ್ ಜೊತೆ ಸೇರುವ ಸೂಚನೆಯನ್ನು ನೀಡಿದೆ ಎನ್ನಲಾಗುತ್ತಿದೆ.

ಕೊನೆಗೂ ಕದನ ವಿರಾಮಕ್ಕೆ ಒಪ್ಪಿದ್ರಾ ಮೊಜ್ತಬಾ ಖಮೇನಿ? ಇಸ್ರೇಲ್‌ ಹೇಳಿದ್ದೇನು?

ಇದರೊಂದಿಗೆ ಇರಾನ್ ಮೇಲೆ ದಾಳಿಗೆ ಯುಎಸ್ ಕ್ಷಿಪಣಿಗಳನ್ನು ಬಹ್ರೇನ್‌ನಿಂದ ಹಾರಿಸುತ್ತಿದೆ ಎಂದು ತೋರಿಸುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆದರೆ ಈ ಕುರಿತು ಯುಎಸ್ ಮಿಲಿಟರಿ ದೃಢಪಡಿಸಿಲ್ಲ.