ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಲೆಬನಾನ್, ಗಾಜಾದಲ್ಲಿ ನಾಗರಿಕರ ಮೇಲೆ ಆಕ್ರಮಣ ಮಾಡಿದರೆ ಭಾರೀ ದಾಳಿಗಳ ಬಗ್ಗೆ ಇಸ್ರೇಲ್‌ಗೆ ಇರಾನ್ ಎಚ್ಚರಿಕೆ

Iran Warns Israel: ಲೆಬನಾನ್ ಮತ್ತು ಗಾಜಾದಲ್ಲಿ ನಾಗರಿಕರ ಮೇಲೆ ದಾಳಿ ಮಾಡುವುದನ್ನು ಮುಂದುವರಿಸಿದರೆ, ಇಸ್ರೇಲ್ ಮೇಲೆ ಭಾರಿ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸುವುದಾಗಿ ಇರಾನ್ ಎಚ್ಚರಿಕೆ ನೀಡಿದೆ. ಇರಾನ್ ಜೊತೆ ಯುದ್ಧ ನಡೆಸುತ್ತಿರುವ ಇಸ್ರೇಲ್, ಲೆಬನಾನ್ ಹಾಗೂ ಗಾಜಾದಲ್ಲಿರುವ ಹೆಜ್ಬೊಲ್ಲಾ ಮೇಲೂ ಸಮರ ಸಾರುತ್ತಿದೆ.

ಭಾರೀ ದಾಳಿಗಳ ಬಗ್ಗೆ ಇಸ್ರೇಲ್‌ಗೆ ಇರಾನ್ ಎಚ್ಚರಿಕೆ

ಇಸ್ರೇಲ್‌ಗೆ ಇರಾನ್ ಎಚ್ಚರಿಕೆ -

Priyanka P
Priyanka P Mar 24, 2026 6:06 PM

ಟೆಹರಾನ್, ಮಾ.24: ಇರಾನ್-ಅಮೆರಿಕ-ಇಸ್ರೇಲ್ ನಡುವಿನ ಯುದ್ಧವು (Iran-Israel-US war) 25ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಲೆಬನಾನ್ ಮತ್ತು ಗಾಜಾದಲ್ಲಿ ನಾಗರಿಕರ ಮೇಲೆ ದಾಳಿ ಮಾಡುವುದನ್ನು ಮುಂದುವರಿಸಿದರೆ, ಇಸ್ರೇಲ್ ಮೇಲೆ ಭಾರಿ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು (drone attack) ನಡೆಸುವುದಾಗಿ ಇರಾನ್ ಬೆದರಿಕೆ ಹಾಕಿದೆ. ಲೆಬನಾನ್ ಮತ್ತು ಪ್ಯಾಲೆಸ್ಟೀನಿಯನ್ ನಾಗರಿಕರ ಮೇಲಿನ ಅಪರಾಧಗಳು ಮುಂದುವರಿದರೆ, ಇಸ್ರೇಲ್ ವಿರುದ್ಧ ಕ್ರಾಂತಿಕಾರಿ ಗಾರ್ಡ್‌ಗಳಿಂದ ಭಾರಿ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಲಾಗುತ್ತದೆ ಎಂದು ಎಚ್ಚರಿಸಿದೆ. ಲೆಬನಾನ್ ರಾಜಧಾನಿಯ ಆಗ್ನೇಯದಲ್ಲಿರುವ ವಸತಿ ಅಪಾರ್ಟ್‌ಮೆಂಟ್ ಮೇಲೆ ನಡೆದ ದಾಳಿಯಲ್ಲಿ 3 ವರ್ಷದ ಬಾಲಕಿ ಸೇರಿದಂತೆ ಕನಿಷ್ಟ ಮೂವರು ಸಾವಿಗೀಡಾಗಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ತಿಳಿಸಿದೆ.

ದಕ್ಷಿಣದಲ್ಲಿ ಇನ್ನೂ ಐದು ಜನರು ಮೃತಪಟ್ಟಿದ್ದಾರೆ. ಇಸ್ರೇಲಿ ದಾಳಿಗಳು ಲೆಬನಾನ್‌ನಲ್ಲಿ 1,000 ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಿ 1 ಮಿಲಿಯನ್‌ಗಿಂತಲೂ ಹೆಚ್ಚು ಜನರನ್ನು ಸ್ಥಳಾಂತರಿಸಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ದಾಳಿ ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ನಡೆದಿದ್ದು, ಬೈರೂತ್ ನಗರದ ದಕ್ಷಿಣ ಉಪನಗರಗಳ ಹೊರಭಾಗದ ಪ್ರದೇಶವನ್ನು ಗುರಿಯಾಗಿಸಿತು. ಈ ಪ್ರದೇಶಕ್ಕೆ ಮೊದಲು ಇಸ್ರೇಲಿ ಸೇನೆ ತೆರವುಗೊಳಿಸುವ ಸೂಚನೆ ನೀಡಿದ್ದರೂ, ಈ ಬಾರಿ ಯಾವುದೇ ಎಚ್ಚರಿಕೆ ನೀಡಲಾಗಲಿಲ್ಲ.

"ಇರಾನ್‌ ಮೇಲೆ ದಾಳಿ ಮಾಡಿದ್ದು ನಾನಲ್ಲ"; ಯುದ್ಧ ಆರಂಭಕ್ಕೆ ರಕ್ಷಣಾ ಮುಖ್ಯಸ್ಥನ್ನೇ ಹೊಣೆ ಮಾಡಿದ ಟ್ರಂಪ್‌

ಮಂಗಳವಾರ (ಮಾ.24) ಮುಂಜಾನೆ, ಇಸ್ರೇಲಿ ಪಡೆಗಳು ದಕ್ಷಿಣ ಲೆಬನಾನ್‌ನ ಹಲವಾರು ಪ್ರದೇಶಗಳ ಮೇಲೆ ದಾಳಿ ಮಾಡಿದವು. ಇದರಲ್ಲಿ ಬಂದರು ನಗರವಾದ ಟೈರ್ ಬಳಿಯ ರಶೀದಿಹ್‌ನಲ್ಲಿರುವ ಅಮಾನಾ ಕಂಪನಿಗೆ ಸೇರಿದ ಗ್ಯಾಸ್ ಸ್ಟೇಷನ್ ಕೂಡ ಸೇರಿತ್ತು. ಇರಾನ್ ದೇಶವು ಇಸ್ರೇಲ್ ಮತ್ತು ಅಮೆರಿಕದೊಂದಿಗೆ ಯುದ್ಧದಲ್ಲಿದೆ. ಆದರೆ ಇಸ್ರೇಲ್, ಲೆಬನಾನ್‌ನಲ್ಲಿ ಟೆಹರಾನ್ ಬೆಂಬಲಿತ ಹೆಜ್ಬೊಲ್ಲಾ ವಿರುದ್ಧವೂ ಹೋರಾಡುತ್ತಿದೆ.

ಇರಾನ್ ಜೊತೆ ಉತ್ತಮ ಮಾತುಕತೆ ನಡೆದಿದೆ ಎಂದ ಟ್ರಂಪ್

ಇದಕ್ಕೂ ಮೊದಲು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ನ ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ಮಾಡುವ ಯೋಜನೆಯನ್ನು ರದ್ದುಗೊಳಿಸಿರುವುದಾಗಿ ಘೋಷಿಸಿದರು. ಇದು ಯುದ್ಧವನ್ನು ಕೊನೆಗೊಳಿಸಲು ಇರಾನಿನ ಅಧಿಕಾರಿಗಳೊಂದಿಗೆ ಉತ್ತಮ ಮಾತುಕತೆಗಳು ನಡೆದಿವೆ ಎಂದು ಅವರು ಹೇಳಿದರು.

ಇರಾನ್ ಸುಪ್ರೀಂ ಲೀಡರ್ ಖಮೇನಿಯ ಹತ್ಯೆ ನಡೆದಿದ್ದು ಹೇಗೆ? ರಾಜಕೀಯ ಚಿತ್ರಣವನ್ನೇ ಬದಲಿಸಿದ ಟ್ರಂಪ್-ನೆತನ್ಯಾಹು ನಡುವಿನ ಆ ಒಂದು ಫೋನ್ ಕರೆ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಟ್ರಂಪ್ ಅವರೊಂದಿಗೆ ಮಾತನಾಡಿದ್ದಾರೆ. ನಮ್ಮ ಪ್ರಮುಖ ಹಿತಾಸಕ್ತಿಗಳನ್ನು ಕಾಪಾಡುವ ಒಪ್ಪಂದದ ಮೂಲಕ ಯುದ್ಧದ ಉದ್ದೇಶಗಳನ್ನು ಸಾಕಾರಗೊಳಿಸಲು (ಇಸ್ರೇಲಿ ಮಿಲಿಟರಿ) ಮತ್ತು ಯುಎಸ್ ಮಿಲಿಟರಿಯ ಅದ್ಭುತ ಸಾಧನೆಗಳನ್ನು ಬಳಸಿಕೊಳ್ಳುವ ಅವಕಾಶವಿದೆ ಎಂದು ಅಧ್ಯಕ್ಷ ಟ್ರಂಪ್ ನಂಬುತ್ತಾರೆ ಎಂದು ನೆತನ್ಯಾಹು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇನ್ನು ಯುದ್ಧದಿಂದ ಇರಾನ್‌ನಲ್ಲಿ ಸಾವಿನ ಸಂಖ್ಯೆ 1,500 ಮೀರಿದೆ ಎಂದು ಅದರ ಆರೋಗ್ಯ ಸಚಿವಾಲಯ ತಿಳಿಸಿದೆ. ಇಸ್ರೇಲ್‌ನಲ್ಲಿ, ಇರಾನಿನ ದಾಳಿಯಿಂದ 15 ಜನರು ಮೃತಪಟ್ಟಿದ್ದಾರೆ. ಕನಿಷ್ಠ 13 ಯುಎಸ್ ಮಿಲಿಟರಿ ಸದಸ್ಯರು ಸಾವನ್ನಪ್ಪಿದ್ದಾರೆ. ಜೊತೆಗೆ ಆಕ್ರಮಿತ ಪಶ್ಚಿಮ ದಂಡೆ ಮತ್ತು ಗಲ್ಫ್ ಅರಬ್ ರಾಜ್ಯಗಳಲ್ಲಿ 6ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿದ್ದಾರೆ.