ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sunita Williams: ಬಾಹ್ಯಾಕಾಶದಿಂದ ಭೂಮಿಯೆಡೆಗೆ...17 ಗಂಟೆಗಳ ಜರ್ನಿ; ಸುನಿತಾ ವಿಲಿಯಮ್ಸ್‌ ಎಕ್ಸ್‌ಕ್ಲೂಸಿವ್‌ ಫೋಟೋಸ್‌ ಇಲ್ಲಿದೆ

ಕಳೆದ 9 ತಿಂಗಳಿನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿದ್ದ ನಾಸಾದ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್‌ ಹಾಗೂ ಬುಚ್ ವಿಲ್ಮೋರ್ ಅವರು ಬುಧವಾರ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಇದೀಗ ಅವರು ಬಾಹ್ಯಾಕಾಶದಿಂದ ಹೊರಟು ಭೂಮಿಗೆ ತಲುಪುವ ವರೆಗಿನ ಫೋಟೋಗಳು ವೈರಲ್‌ ಆಗಿವೆ.

ಬಾಹ್ಯಾಕಾಶ-ಭೂಮಿ ;ಸುನಿತಾ ವಿಲಿಯಮ್ಸ್‌ ಎಕ್ಸ್‌ಕ್ಲೂಸಿವ್‌ ಫೋಟೋಸ್‌

ಸುನಿತಾ ವಿಲಿಯಮ್ಸ್

Profile Vishakha Bhat Mar 19, 2025 11:14 AM

ವಾಷಿಂಗ್ಟನ್‌: ಕಳೆದ 9 ತಿಂಗಳಿನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿದ್ದ ನಾಸಾದ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್‌ (Sunita Williams) ಹಾಗೂ ಬುಚ್ ವಿಲ್ಮೋರ್ ಅವರು ಬುಧವಾರ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಅವರ ಸ್ಪೇಸ್‌ಎಕ್ಸ್ ಕ್ರೂ ಡ್ರ್ಯಾಗನ್ ಕ್ಯಾಪ್ಸುಲ್ ಮಾರ್ಚ್ 19ರಂದು ಬೆಳಗಿನ ಜಾವ 3:27ಕ್ಕೆ ಫ್ಲೋರಿಡಾದ ಸಮೀಪ ಮೆಕ್ಸಿಕೋ ಕೊಲ್ಲಿಯಲ್ಲಿ ಯಶಸ್ವಿಯಾಗಿ ಕೆಳಗೆ ಇಳಿದಿದೆ. ಅವರು ಬಾಹ್ಯಾಕಾಶದಿಂದ ಹೊರಟು ಭೂಮಿಗೆ ಬರುತ್ತಿರುವ ಅಪರೂಪದ ಫೋಟೋಗಳು ಇಲ್ಲಿವೆ.

Sunita Williams & Team

ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್, ನಾಸಾ ಗಗನಯಾತ್ರಿ ನಿಕ್ ಹೇಗ್ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಗೋರ್ಬುನೋವ್ (ನಾಸಾ/ಎಕ್ಸ್) ಅವರೊಂದಿಗೆ ಸ್ಪೇಸ್‌ಎಕ್ಸ್ ಕ್ರೂ ಡ್ರ್ಯಾಗನ್‌ನಲ್ಲಿ ಭೂಮಿಗೆ ಮರಳಿದರು.

Space X (1)

ಮಾರ್ಚ್ 18 ರಂದು, ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಮತ್ತು ಇತರ ಇಬ್ಬರು ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್‌ಎಕ್ಸ್ ಕ್ಯಾಪ್ಸುಲ್ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಹೊರಟಿರುವ ಚಿತ್ರ

ISIS (1)

ಫ್ಲೋರಿಡಾ ಕರಾವಳಿಯತ್ತ ಹೊರಟ ನೌಕೆ

Sunita Williams (7)

ಬುಚ್ ವಿಲ್ಮೋರ್, ಅಲೆಕ್ಸಾಂಡರ್ ಗೋರ್ಬುನೋವ್, ನಿಕ್ ಹೇಗ್ ಮತ್ತು ಸುನಿತಾ ವಿಲಿಯಮ್ಸ್ ಅವರು ಸ್ಪೇಸ್‌ಎಕ್ಸ್‌ನ ಹಡಗಿನ ಮೇಲೆ ಕುಳಿತಿರುವುದು.

Space X (2)

ಗಗನಯಾತ್ರಿಗಳು ಪ್ಯಾರಾಚೂಟ್‌ನಿಂದ ಜಿಗಿಯುತ್ತಿರುವುದು

Sunita Williams (8)

ಸುನಿತಾ ವಿಲಿಯಮ್ಸ್ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಸ್ಟ್ರೆಚರ್‌ಗಳ ಮೇಲೆ ಕರೆದೊಯ್ಯಲಾಯಿತು.

Space X (3)

ಸ್ಪೇಸ್‌ಎಕ್ಸ್ ಕ್ಯಾಪ್ಸುಲ್ ನೀರಿಗೆ ಇಳಿದ ನಂತರ ಸಿಬ್ಬಂದಿಗಳನ್ನು ಅದನ್ನು ಸ್ವಚ್ಛಗೊಳಿಸಿದರು.

Sunita Williams (9)

ಸುನಿತಾ ವಿಲಿಯಮ್ಸ್‌ ಅವರು ಭೂಮಿಗೆ ಸುರಕ್ಷಿತವಾಗಿ ಮರಳಿದ ನಂತರ ಅವರ ಪೂರ್ವಜರ ಗ್ರಾಮವಾದ ಗುಜರಾತ್‌ನ ಜುಲಾಸನ್‌ನಲ್ಲಿ ಪಟಾಕಿ ಸಿಡಿಸಿ, ನೃತ್ಯ ಮಾಡಿ ಜನರು ಸಂಭ್ರಮಿಸಿದರು.