ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sunita Williams: ಸುನಿತಾ ವಿಲಿಯಮ್ಸ್ ಭೂಮಿಗೆ ಮರಳಲು ಡೇಟ್ ಫಿಕ್ಸ್! – ಇಲ್ಲಿದೆ ಕಂಪ್ಲೀಟ್ ಡಿಲೇಟ್ಸ್

ಕೇವಲ ಒಂದು ವಾರಗಳಿಗೆಂದು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್‌ ಮತ್ತು ಬುಚ್ ವಿಲ್ಮೋರ್ ಗಗನ ನೌಕೆಯಲ್ಲಿನ ತಾಂತ್ರಿಕ ತೊಂದರೆಯಿಂದಾಗಿ ಕಳೆದ 8 ತಿಂಗಳುಗಳಿಂದ ಅಲ್ಲೇ ಸಿಲುಕಿಕೊಂಡಿದ್ದು, ಇದೀಗ ಸ್ಪೇಸ್ ಎಕ್ಸ್ ನೌಕೆ ಅವರನ್ನು ಭೂಮಿಗೆ ಕರೆತರಲು ಸಿದ್ಧವಾಗಿದೆ.

ಸುನೀತಾ ವಿಲಿಯಮ್ಸ್ 8 ತಿಂಗಳ ಬಾಹ್ಯಾಕಾಶ ವಾಸಕ್ಕೆ ಶೀಘ್ರ ತೆರೆ!

ನಾಸಾ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್

Profile Sushmitha Jain Feb 15, 2025 12:45 PM

ನ್ಯೂಯಾರ್ಕ್: ಕೆಲವೇ ದಿನಗಳಿಗೆಂದು ಅಂತರಿಕ್ಷದಲ್ಲಿರುವ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಭಾರತೀಯ ಮೂಲದ ನಾಸಾ ಗಗನ ಯಾತ್ರಿ ಸುನಿತಾ ವಿಲಿಯಮ್ಸ್‌ ಹಾಗೂ ಬುಚ್ ವಿಲ್ಮೋರ್ ಕಳೆದ ಎಂಟು ತಿಂಗಳುಗಳಿಂದ ಅಲ್ಲಿಯೇ ಉಳಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಬೋಯಿಂಗ್‌ನ ಹೊಸ ಸ್ಟಾರ್ ಲೈನರ್ ಕ್ಯಾಪ್ಸೂಲ್‌ನಲ್ಲಿ ಅವರಿಬ್ಬರನ್ನು ಕೇವಲ ಒಂದು ವಾರದ ಪರೀಕ್ಷಾರ್ಥ ಹಾರಾಟಕ್ಕಾಗಿ ಅಂತರಿಕ್ಷಕ್ಕೆ ಕಳೆದ ಜೂನ್ ತಿಂಗಳಿನಲ್ಲಿ ಕಳುಹಿಸಲಾಗಿತ್ತು. ಆದರೆ, ಈ ಗಗನ ನೌಕೆಯಲ್ಲಿ ಕೆಲವೊಂದು ತಾಂತ್ರಿಕ ತೊಂದರೆಗಳು ಕಂಡುಬಂದಿದ್ದ ಕಾರಣ, ಇವರಿಬ್ಬರು ಭೂಮಿಗೆ ಮರಳುವುದನ್ನು ತಾತ್ಕಾಲಿಕವಾಗಿ ನಾಸಾ ಮುಂದೂಡಿತ್ತು.

ವಿಲಿಯಮ್ಸ್ ಮತ್ತು ಬುಚರ್ ಈ ಗಗನನೌಕೆಯಲ್ಲಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ತಲುಪಿದ್ದ ಸಂದರ್ಭದಲ್ಲಿ ಅವರ ನೌಕೆಯ 28 ಥ್ರಸ್ಟರ್ ಗಳ ಪೈಕಿ ಐದು ಕಾರ್ಯ ವೈಫಲ್ಯತೆಗೆ ಒಳಗಾಗಿತ್ತು. ಹಾಗಾಗಿ ಅವರು ಭೂಮಿಗೆ ಮರಳುವ ಯೊಜನೆಯನ್ನು ನಾಸಾ ಅನಿರ್ಧಿಷ್ಟಾವಧಿಗೆ ಮುಂದೂಡಿತ್ತು. ಸರಿಯಾಗಿ ಪರೀಕ್ಷೆಗೊಳಪಟ್ಟ ಬಳಿಕ ಸ್ಟಾರ್ ಲೈನರ್ ಸಿಬ್ಬಂದಿ ರಹಿತವಾಗಿ ಭೂಮಿಗೆ ಹಿಂತಿರುಗಿಸಲು ನಾಸಾ ನಿರ್ಧರಿಸಿತ್ತು.

ನಾಸಾದಿಂದ ಹೊಸ ದಿನಾಂಕದ ಘೋಷಣೆ:

ಇದೀಗ ನಾಸಾ ಘೋಷಿಸಿರುವಂರೆ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ಇಬ್ಬರು ಗಗನಯಾನಿಗಳು ನಿಗದಿತ ದಿನಾಂಕಕ್ಕಿಂತ ಮೊದಲೇ ಭೂಮಿಗೆ ಮರಳುವುದು ದೃಢವಾಗಿದೆ. ಮಾರ್ಚ್ ಕೊನೆಯ ಅಥವಾ ಎಪ್ರಿಲ್ ತಿಂಗಳಿಗೆ ಬದಲಾಗಿ, ವಿಲಿಯಮ್ಸ್ ಮತ್ತು ಮಿಲ್ಮೋರ್, ಸ್ಪೇಸ್ ‘ಎಕ್ಸ್’ನ ಕ್ರ್ಯೂ ಡ್ರಾಗನ್ ಕ್ಯಾಪ್ಸೂಲ್, ಎಂಡೀವರ್ ಮೂಲಕ ಮಾರ್ಚ್ ತಿಂಗಳ ಮಧ್ಯಭಾಗದಲ್ಲೇ ಭೂಮಿಗೆ ಮರಳುವ ನಿರೀಕ್ಷೆಗಳಿವೆ.

ಇದಕ್ಕಾಗಿ ಕ್ರ್ಯೂ-10 ಮಿಷನ್ ಸಿದ್ಧಗೊಂಡಿದ್ದು, ಇದು ಮಾರ್ಚ್ 10ರಂದು ಭೂಮಿಯಿಂದ ಹೊರಡಲಿದೆ. ಇದರಲ್ಲಿ ನಾಲ್ಕು ಜನರ ತಂಡ ಅಂತರಾಷ್ಟ್ರೀಯ ಬಾಹ್ಯಾಕಾಶ ತಾಣಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ನಾಸಾ ಗಗನಯಾತ್ರಿಗಳಾದ ಅನ್ನೆ ಮೆಕ್ ಕ್ಲೈನ್, ನಿಕೋಲ್ ಐಯೆರ್ಸ್, ಜಾಕ್ಸಾ ಗಗನ ಯಾತ್ರಿ ಟೋಕುಯಾ ಒನಿಶಿ ಹಾಗು ರೋಸ್ಕೋಸ್ಮೋಸ್ ಕಾಸ್ಮೋನೌಟ್ ಕಿರಿಲ್ ಪೆಸ್ಕೋ ಈ ತಂಡದಲ್ಲಿರಲಿದ್ದಾರೆ.

ಇದನ್ನು ಓದಿ: Vastu Tips: ಹನುಮಂತನ ಫೋಟೋವನ್ನು ಯಾವ ದಿಕ್ಕಿನಲ್ಲಿ ಇಡಬೇಕು ತಿಳಿದಿದೆಯೇ?

ಇವರು ಅಲ್ಲಿ ತಲುಪಿದ ಬಳಿಕ, ಒಂದು ವಾರ ಪರ್ಯಂತದ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ. ಇದು, ವಿಲಿಯಮ್ಸ್ ಮತ್ತು ವಿಮ್ಲೋರ್ ಕ್ರ್ಯೂ-10 ನ್ನು ಅಂತರಿಕ್ಷಕ್ಕೆ ಕರೆದೊಯ್ದ ಡ್ರಾಗನ್ ಸ್ಪೇಸ್ ಕ್ರಾಫ್ಟ್ ನಲ್ಲಿ ಇವರಿಬ್ಬರು ಮರಳಲಿದ್ದಾರೆ. ವಿಮಿಯಮ್ಸ್ ಮತ್ತು ಬುಚರ್ ಮಾ.19ರಂದು ISSನಿಂದ ಹೊರಬಂದು ಬಳಿಕ ಭೂಮಿಗೆ ಮರಳುವ ಸಾಧ್ಯತೆಗಳಿವೆ.



ಗಗನ ಯಾನಿಗಳಿಬ್ಬರ ಮೇಲೆ ಆಗಬಹುದಾದ ಆರೋಗ್ಯ ಪರಿಣಾಮಗಳು:

ಬಾಹ್ಯಾಕಾಶದಲ್ಲಿ ತಿಂಗಳುಗಟ್ಟಲೆ ಇದ್ದ ಕಾರಣದಿಂದ ಸುನೀತಾ ವಿಲಿಯಮ್ಸ್ ಅವರು ಗಣನೀಯವಾಗಿ ತಮ್ಮ ತೂಕವನ್ನು ಕಳೆದುಕೊಂಡಿದ್ದಾರೆ. ಇದನ್ನು ಹೊರತಾಗಿಸಿ, ಇಬ್ಬರು ಗಗನ ಯಾನಿಗಳೂ ತಾವಿರುವ ಕಡೆ ಹೆಚ್ಚು ಉಲ್ಲಸಿತರಾಗಿಯೇ ಇದ್ದಾರೆ. ತಮಗಿಲ್ಲಿ ಸಾಕಷ್ಟು ಆಹಾರ ಪದಾರ್ಥಗಳಿವೆ ಮತ್ತು ಬಾಹ್ಯಾಕಾಶ ನಿಲ್ದಾಣದಲ್ಲಿ ತಮ್ಮ ಖುಷಿಯಿಮಂದಲೇ ಸಮಯ ಕಳೆಯುತ್ತಿರುವುದಾಗಿ ವಿಲಿಯಮ್ಸ್ ಮತ್ತು ಬುಚರ್ ಅವರು ಕಳೆದ ಜನವರಿಯಲ್ಲೇ ಹೇಳಿಕೊಂಡಿದ್ದರು.

ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ಗಗನ ಯಾನಿಗಳಿಬ್ಬರನ್ನು ವಾಪಾಸು ಭೂಮಿಗೆ ಕರೆತರುವ ಜವಾಬ್ದಾರಿಯನ್ನು ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಸಂಸ್ಥೆಗೆ ನೀಡುತ್ತಿರುವುದಾಗಿ ನಾಸಾ ಆಗಸ್ಟ್ ತಿಂಗಳಲ್ಲೇ ಘೋಷಿಸಿತ್ತು. ಕ್ರ್ಯೂ-10 ಮಿಷನ್ ನ ತಯಾರಿಗಳು ಈಗಾಗಲೇ ಭರದಿಂದ ನಡೆಯುತ್ತಿದೆ.



ಹಿಂದಿನ ಮಿಷನ್ ಗಳೊಂದಿಗೆ ಹೋಲಿಸಿದಾಗ

ವಿಲಿಯಮ್ಸ್ ಮತ್ತು ಬುಚರ್ ಅವರು ದೀರ್ಘಕಾಲದಿಂದ ಅನಿವಾರ್ಯವಾಗಿ ಬಾಹ್ಯಾಕಾಶ ನಿಲ್ದಾಣದಲ್ಲಿ ಉಳಿಯುವಂತಾಗಿದೆ. ಆದರೆ, ಇದಕ್ಕೂ ಮೊದಲು ಫ್ರ್ಯಾಂಕ್ ರೂಬಿಯೋ 371 ದಿನಗಳನ್ನು ಐಎಸ್.ಎಸ್. ನಲ್ಲಿ ಕಳೆದಿರುವುದು ಒಂದು ದಾಖಲೆಯಾಗಿಯೇ ಉಳಿದುಕೊಂಡಿದೆ. ನಾಸಾ ಗಗನ ಯಾನಿಯಾಗಿದ್ದ ಫ್ರ್ಯಾಂಕ್ ನ್ನು ಕರೆತರಲು ಹೋಗಿದ್ದ ರಷ್ಯಾದ ಗಗನ ನೌಕೆಯಲ್ಲಿ ಕೂಲೆಂಟ್ ಸೋರಿಕೆ ಕಾರಣದಿಂದಾಗಿ ಅವರು ಒಂದು ವರ್ಷಗಳಿಗೂ ಹೆಚ್ಚು ಸಮಯ ಅಲ್ಲಿ ಉಳಿದುಕೊಳ್ಳುವಂತಾಗಿತ್ತು.

ಇದೀಗ ಸುನೀತಾ ಮತ್ತು ಬುಚರ್ ಅವರ ಅನಿರೀಕ್ಷಿತ ಸುದೀರ್ಘ ಬಾಹ್ಯಾಕಾಶ ನಿಲ್ದಾಣದ ವಾಸ ಶೀಘ್ರವೇ ಕೊನೆಗೊಳ್ಳುವ ನಿರಿಕ್ಷಯಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಈ ಇಬ್ಬರು ಗಗನ ಯಾನಿಗಳು ಸ್ಪೇಸ್ ಎಕ್ಸ್ ನ ನಂಬಿಕಾರ್ಹ ಡ್ರಾಗನ್ ಗಗನನೌಕೆಯಲ್ಲಿ ಭೂಮಿಗೆ ವಾಪಾಸಾಗಲಿದ್ದಾರೆ.