ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅತಿ ಹೆಚ್ಚು ಯುದ್ಧಗಳನ್ನು ಮಾಡಿರುವ ರಾಷ್ಟ್ರ ಯಾವುದು ಗೊತ್ತಾ? ಅಮೆರಿಕ, ರಷ್ಯಾ ಅಲ್ಲವೇ ಅಲ್ಲ

ಪ್ರಪಂಚದ ವಿವಿಧ ಭಾಗಗಳಲ್ಲಿಹಲವು ಯುದ್ಧಗಳು ನಡೆದು ಹೋಗಿವೆ. ಈಗಲೂ ನಡೆಯುತ್ತಿವೆ. ಇತಿಹಾಸ ಗಮನಿಸಿದರೆ ಅನಾದಿ ಕಾಲದಿಂದಲೂ ಯುದ್ಧದ ಪೃವೃತ್ತಿ ಇತ್ತು ಎನ್ನುವುದು ಗೋಚರಿಸುತ್ತದೆ. ಹಾಗಾದರೆ ಇದುವರೆಗೆ ಅತಿ ಹೇಚ್ಚು ಯುದ್ಧ ನಡೆಸಿದ ದೇಶ ಯಾವುದು ಎನ್ನುವ ಕುತೂಹಲ ಮೂಡುವುದು ಸಹಜ. ಇಲ್ಲಿದೆ ಉತ್ತರ.

ಅತಿ ಹೆಚ್ಚು ಯುದ್ಧಗಳನ್ನು ಮಾಡಿರುವ ರಾಷ್ಟ್ರ ಯಾವುದು?

ಸಾಂದರ್ಭಿಕ ಚಿತ್ರ.

Profile Sushmitha Jain Jun 7, 2025 7:36 PM

ನವದೆಹಲಿ: ಇತಿಹಾಸವನ್ನು (History) ಗಮನಿಸಿದರೆ ಯುದ್ಧಗಳು (Wars) ಮತ್ತು ಸಶಸ್ತ್ರ ಸಂಘರ್ಷಗಳಿಂದ (Armed Conflict) ತುಂಬಿರುವುದು ಕಾಣುತ್ತದೆ. ಯುದ್ಧಗಳು ಒಂದು ಕಡೆಯ ಜನರ ಬದುಕು ಅಥವಾ ಪ್ರಾಬಲ್ಯವನ್ನು ನಿರ್ಧರಿಸಿವೆ. ಎರಡು ಮಹಾಯುದ್ಧಗಳು (Two World Wars) ವಿಶ್ವದಲ್ಲಿ ಲಕ್ಷಾಂತರ ಜೀವಗಳನ್ನು ಮತ್ತು ಮೂಲ ಸೌಕರ್ಯವನ್ನು ನಾಶಪಡಿಸಿವೆ. ಯುದ್ಧಗಳು ವ್ಯಕ್ತಿಯ ಜೀವನದಲ್ಲಿ ಮತ್ತು ವಿಶ್ವ ರಾಜಕೀಯವನ್ನು ರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿವೆ. ಸಂಸ್ಕೃತಿಗಳ ಸ್ಥಾಪನೆ, ಧ್ವಂಸ, ಮತ್ತು ರಾಷ್ಟ್ರಗಳ ವಿಸ್ತರಣೆಗಾಗಿ ಯುದ್ಧಗಳು ನಡೆದಿವೆ. ಆದರೆ ಹಲವು ಯುದ್ಧಗಳು ಮತ್ತು ಕದನಗಳು ದಾಖಲಾಗದೇ ಉಳಿದಿರಬಹುದು, ಹಾಗೆಯೇ ಅವುಗಳಲ್ಲಿ ಸಾಯಲ್ಪಟ್ಟವರ ಸಂಖ್ಯೆಯೂ ಸ್ಪಷ್ಟವಾಗಿಲ್ಲ.

ಅತಿ ಹೆಚ್ಚು ಯುದ್ಧಗಳನ್ನು ಮಾಡಿರುವ ರಾಷ್ಟ್ರ

ವಿಶ್ವದಲ್ಲಿ ಅತಿ ಹೆಚ್ಚು ಯುದ್ಧಗಳನ್ನು ಮಾಡಿರುವ ರಾಷ್ಟ್ರ ಫ್ರಾನ್ಸ್ ಎಂದು ಹಲವು ವರದಿಗಳು ಉಲ್ಲೇಖಿಸಿವೆ. ಫ್ರಾನ್ಸ್‌ನ ವಸಾಹತುಶಾಹಿ ಇತಿಹಾಸವು ವಿಶಾಲವಾಗಿದ್ದು, ಅನೇಕ ರಾಷ್ಟ್ರಗಳನ್ನು ಗುಲಾಮಗಿರಿಗೆ ಒಳಪಡಿಸಿತ್ತು. ಈ ವೇಳೆ ಹಲವು ಕದನಗಳು ನಡೆದಿವೆ. 20ನೇ ಶತಮಾನದಲ್ಲಿ ಫ್ರಾನ್ಸ್ 13 ಯುದ್ಧಗಳಲ್ಲಿ ಭಾಗವಹಿಸಿದೆ. ಇವುಗಳಲ್ಲಿ 2001ರಿಂದ 2021ರವರೆಗೆ NATO ಸದಸ್ಯ ರಾಷ್ಟ್ರವಾಗಿ ಆಫ್ಘಾನಿಸ್ತಾನದ ಯುದ್ಧವೂ ಸೇರಿದೆ.

ಈ ಸುದ್ದಿಯನ್ನೂ ಓದಿ: Operation Spider Web: ಆಪರೇಷನ್ ಸ್ಪೈಡರ್: ಉಕ್ರೇನ್ ದಾಳಿಗೆ ಸಂಪೂರ್ಣ ನಾಶವಾಯಿತು ರಷ್ಯಾದ 5 ವಾಯುನೆಲೆ

ಫ್ರಾನ್ಸ್‌ನ ಸೇನೆ ಆಫ್ರಿಕಾದ ಮಾಘ್ರೆಬ್ ಪ್ರದೇಶದ ಸಂಘರ್ಷಗಳಲ್ಲಿ ದೀರ್ಘಕಾಲ ತೊಡಗಿತ್ತು. ಐವರಿ ಕೋಸ್ಟ್‌ನ ಅಂತರ್ಯುದ್ಧ, ಚಾಡ್‌ನ ಅಂತರ್ಯುದ್ಧ, ಸೊಮಾಲಿಯ ಅಂತರ್ಯುದ್ಧ, ಬೊಕೊ ಹರಾಮ್ ವಿರುದ್ಧದ ಕದನ, ಲಿಬಿಯಾದ ಅಂತರ್ಯುದ್ಧ, ಮಾಲಿಯ ಯುದ್ಧ, ಸಿರಿಯಾದ ಅಂತರ್ಯುದ್ಧ ಮತ್ತು ಇರಾಕಿನ ಅಂತರ್ಯುದ್ಧ ಫ್ರಾನ್ಸ್‌ನ ಸೇನೆ ಸಕ್ರಿಯವಾಗಿ ಭಾಗವಹಿಸಿತ್ತು.

ಭಾರತದ ಸ್ಥಾನ

20ನೇ ಶತಮಾನದ ಯುದ್ಧಗಳನ್ನು ಗಮನಿಸಿದರೆ, ಭಾರತವು ಪಾಕಿಸ್ತಾನ ಮತ್ತು ಚೀನಾದೊಂದಿಗೆ ಯುದ್ಧಗಳನ್ನು ಮಾಡಿದೆ. 1947, 1962, 1965, 1971, ಮತ್ತು 1999ರ ಪ್ರಮುಖ ಯುದ್ಧಗಳ ಜತೆಗೆ, ಭಾರತೀಯ ಸೇನೆಯು ಚೀನಾ ಮತ್ತು ಪಾಕಿಸ್ತಾನದ ಸೇನೆಯೊಂದಿಗೆ ಸಾಂದರ್ಭಿಕ ಘರ್ಷಣೆಗಳನ್ನು ಎದುರಿಸಿದೆ. ಯುದ್ಧಗಳ ಭಾಗವಹಿಸುವಿಕೆಯ ಆಧಾರದ ಮೇಲೆ ಭಾರತವು ವಿಶ್ವದಲ್ಲಿ ಐದನೇ ಸ್ಥಾನದಲ್ಲಿದೆ ಎಂದು ಪರಿಗಣಿಸಲಾಗಿದೆ.