ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Spider Web: ಆಪರೇಷನ್ ಸ್ಪೈಡರ್: ಉಕ್ರೇನ್ ದಾಳಿಗೆ ಸಂಪೂರ್ಣ ನಾಶವಾಯಿತು ರಷ್ಯಾದ 5 ವಾಯುನೆಲೆ

ಉಕ್ರೇನ್ ಡ್ರೋನ್ ದಾಳಿಯನ್ನು ತಪ್ಪಿಸಲು ರಷ್ಯಾ ಹೇಗೆ ವಿಫಲವಾಯಿತು ಎಂಬುದರ ಕುರಿತು ಇದೀಗ ಉಪಗ್ರಹ ಚಿತ್ರಗಳು ಬಿಡುಗಡೆಯಾಗಿವೆ. ಉಕ್ರೇನ್ ಸೇನೆಯು ರಷ್ಯಾದ ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸ್ಪೈಡರ್ ಕಾರ್ಯಾಚರಣೆಯನ್ನು ನಡೆಸಿತ್ತು. ತನ್ನ ಭೂಪ್ರದೇಶಕ್ಕೆ ನುಸುಳಿದ್ದಕ್ಕೆ ಪ್ರತಿಯಾಗಿ ಉಕ್ರೇನ್ ನಡೆಸಿದ ಈ ಕಾರ್ಯಾಚರಣೆಯ ವೇಳೆ ರಷ್ಯಾದ ಐದು ವಾಯುನೆಲೆಗಳನ್ನು ಗುರಿಯಾಗಿ ಮಾಡಲಾಗಿದೆ. ಈ ನೆಲೆಗಳಲ್ಲಿ ಕೆಲವು ರಷ್ಯಾದೊಳಗೆ ನೂರಾರು ಕಿಲೋಮೀಟರ್ ದೂರದಲ್ಲಿವೆ. ಆದರೆ ಅತ್ಯಂತ ದೂರದ ನೆಲೆ ರಷ್ಯಾ- ಉಕ್ರೇನ್ ಗಡಿಯಿಂದ ಸುಮಾರು 8,000 ಕಿ.ಮೀ. ದೂರದಲ್ಲಿತ್ತು.

ರಷ್ಯಾದ 5 ವಾಯುನೆಲೆಗಳ ಮೇಲೆ ಉಕ್ರೇನ್ ದಾಳಿ; ಅಪಾರ ಹಾನಿ

ಮಾಸ್ಕೋ/ಕೀವ್: ರಷ್ಯಾದ ಐದು ವಾಯು ನೆಲೆಯನ್ನು (Russian Air Force) ಗುರಿಯಾಗಿಸಿಕೊಂಡು ಉಕ್ರೇನ್‌ (Ukraine) ನಡೆಸಿದ ಆಪರೇಷನ್ ಸ್ಪೈಡರ್ ವೆಬ್ (Operation Spider Web) ಕಾರ್ಯಾಚರಣೆ ಯಶಸ್ವಿಯಾಗಿದೆ. ಇದರ ಉಪಗ್ರಹ ಚಿತ್ರಗಳು ಈಗ ಬಿಡುಗಡೆಯಾಗಿದ್ದು, ಉಕ್ರೇನ್ ಮಿಲಿಟರಿ ಇತಿಹಾಸದಲ್ಲಿ ಇಂದೊಂದು ಅತ್ಯಂತ ಧೈರ್ಯಶಾಲಿ ಕಾರ್ಯಾಚರಣೆಎನ್ನುವ ಶ್ಲಾಘನೆಗೆ ಪಾತ್ರವಾಗಿದೆ. ಆಪರೇಷನ್ ಸ್ಪೈಡರ್ ವೆಬ್ ಕಾರ್ಯಾಚರಣೆಗೂ ಮೊದಲಿನ ಉಪಗ್ರಹ ಚಿತ್ರದಲ್ಲಿ ರಷ್ಯಾದ ಯುದ್ಧವಿಮಾನಗಳಾದ ಟು-160, ಟು-95 ಬಾಂಬರ್‌ಗಳು, ಟು-22 ವಿಮಾನಗಳು ಮತ್ತು ಎ-50ಎಡಬ್ಲ್ಯುಎಸಿಎಸ್ ವಿಮಾನಗಳು ಟಾರ್ಮ್ಯಾಕ್‌ನಲ್ಲಿ ನಿಲ್ಲಿಸಿರುವುದನ್ನು ತೋರಿಸಲಾಗಿದೆ.

ತನ್ನ ಗಡಿ ಪ್ರದೇಶದೊಳಗೆ ರಷ್ಯಾ ನುಸುಳಿದ ಬಳಿಕ ಅದಕ್ಕೆ ಪ್ರತಿಯಾಗಿ ಉಕ್ರೇನ್ ನಡೆಸಿದ ಆಪರೇಷನ್ ಸ್ಪೈಡರ್ ವೆಬ್ ಕಾರ್ಯಾಚರಣೆಯಲ್ಲಿ ಐದು ರಷ್ಯಾದ ವಾಯುನೆಲೆಗಳನ್ನು ಗುರಿಯಾಗಿಸಲಾಗಿತ್ತು. ಇದರಲ್ಲಿ ಕೆಲವು ರಷ್ಯಾದೊಳಗೆ ನೂರಾರು ಕಿಲೋ ಮೀಟರ್‌ಗಳ ದೂರದಲ್ಲಿವೆ. ಅದರಲ್ಲೂ ಒಂದು ಅತ್ಯಂತ ದೂರದಲ್ಲಿದ್ದು ಇದು ರಷ್ಯಾ-ಉಕ್ರೇನ್ ಗಡಿಯಿಂದ ಸುಮಾರು 8,000 ಕಿ.ಮೀ. ಅಂತರದಲ್ಲಿದೆ.

uk1

ಗುರಿಯಾದ ವಾಯುನೆಲೆಗಳು ಮತ್ತು ಅಂತರ

  1. ಸೈಬೀರಿಯಾದ ಬೆಲಾಯಾ ವಾಯುನೆಲೆ - ಗಡಿಯಿಂದ 4,500 ಕಿ.ಮೀ. ದೂರ
  2. ಆರ್ಕ್ಟಿಕ್‌ನ ಒಲೆನಿಯಾ ವಾಯುನೆಲೆ- 2,000 ಕಿ.ಮೀ. ದೂರ
  3. ಇವಾನೊವೊ ಸೆವೆರ್ನಿ ವಾಯುನೆಲೆ- 800 ಕಿ.ಮೀ. ದೂರ
  4. ರಿಯಾಝಾನ್‌ನ ಡೈಗಿಲೆವೊ ವಾಯುನೆಲೆ - 520 ಕಿ.ಮೀ. ದೂರ
  5. ಪೂರ್ವದ ಉಕ್ರೈನ್ಕಾ ವಾಯುನೆಲೆ- 8,000 ಕಿ.ಮೀ. ದೂರ

ರಕ್ಷಣಾ ಕ್ರಮಕೈಗೊಳ್ಳುವಲ್ಲಿ ವಿಫಲವಾದ ರಷ್ಯಾ

ಉಕ್ರೇನ್‌ನ ಯೋಚಿತ ದಾಳಿಯನ್ನು ತಡೆಯುವಲ್ಲಿ ರಷ್ಯಾ ವಿಫಲವಾಗಿದೆ. ದಾಳಿಗೆ ಒಳಗಾದ ರಷ್ಯಾದ ಐದು ವಾಯು ನೆಲೆಗಳಲ್ಲಿ ಡ್ರೋನ್ ದಾಳಿಯಿಂದ ರಕ್ಷಿಸಲು ವಿಮಾನಗಳನ್ನು ಸಿದ್ದಪಡಿಸಿ ಇಡಲಾಗಿತ್ತು. ಆದರೆ ಯುಕ್ರೇನ್‌ನ ದಾಳಿಯನ್ನು ತಡೆಯಲು ಇವು ವಿಫಲವಾದವು. ಬಿಡುಗಡೆಯಾದ ವಿಡಿಯೊಗಳಲ್ಲಿ ಬೆಲಾಯಾ ಮತ್ತು ಒಲೆನಿಯಾ ನೆಲೆಗಳ ಮೇಲಿನ ದಾಳಿಯ ಬಳಿಕ ಕಪ್ಪು ಹೊಗೆ ಮತ್ತು ಸುಟ್ಟನಂತರ ಹಬ್ಬಿದ ಗಾಳಿಯನ್ನು ತೋರಿಸಿವೆ.

ಇದನ್ನೂ ಓದಿ: Indians rescued: ಇರಾನ್‌ನಲ್ಲಿ ಮೂವರು ಭಾರತೀಯರ ಕಿಡ್ನ್ಯಾಪ್‌- ಇವ್ರು ಬದುಕುಳಿದಿದ್ದೇ ರೋಚಕ!

ದಾಳಿಯ ಪರಿಣಾಮ

ಉಕ್ರೇನ್ ಪ್ರಕಾರ 41 ರಷ್ಯಾದ ಯುದ್ಧವಿಮಾನಗಳು ಧ್ವಂಸಗೊಂಡಿವೆ. ಒಲೆನಿಯಾದ ಟು-95 ಬಾಂಬರ್‌ಗಳು, ಇವಾನೊವೊದ ಎ-50ಎಡಬ್ಲ್ಯೂಎಸಿಎಸ್, ಡೈಗಿಲೆವೊದ ಐಎಲ್ -78 ಟ್ಯಾಂಕರ್‌ಗಳು, ಮತ್ತು ಉಕ್ರೈನ್ಕಾದ ಟು-95ಗಳು ನಾಶವಾಗಿವೆ. ಟ್ರೋಜನ್-ಹಾರ್ಸ್ ಶೈಲಿಯ ಈ ದಾಳಿಯಲ್ಲಿ ಡ್ರೋನ್‌ಗಳನ್ನು ಕಂಟೇನರ್ ಟ್ರಕ್‌ಗಳಲ್ಲಿ ರಹಸ್ಯವಾಗಿ ಕಳುಹಿಸಲಾಗಿತ್ತು.

ರಷ್ಯಾಗೆ ಭಾರಿ ಆಘಾತ

ರಷ್ಯಾದ ಆಂತರಿಕ ನೆಲೆಗಳ ದೂರದಿಂದಾಗಿ ದಾಳಿಯ ಸಾಧ್ಯತೆ ಕಡಿಮೆ ಎಂದು ಮಾಸ್ಕೋ ಭಾವಿಸಿತ್ತು. ಅಮೆರಿಕದ ಎಟಿಎಸಿಎಂಎಸ್ ಮತ್ತು ಬ್ರಿಟಿಷ್- ಫ್ರೆಂಚ್ ಸ್ಟಾರ್ಮ್ ಶ್ಯಾಡೋ ಕ್ಷಿಪಣಿಗಳ ಶ್ರೇಣಿಯೂ ಈ ನೆಲೆಗಳನ್ನು ತಲುಪಲಾರದು. ಆದರೆ ಉಕ್ರೇನ್‌ನ ಈ ಡ್ರೋನ್ ದಾಳಿಯು ಅದರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.