ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಐಸಿಸ್ ಕಮಾಂಡರ್ ಅಬು-ಬಿಲಾಲ್ ಅಲ್-ಮಿನುಕಿ ಹತ್ಯೆ: ಡೊನಾಲ್ಡ್ ಟ್ರಂಪ್ ಘೋಷಣೆ

ಅಮೆರಿಕ ಮತ್ತು ನೈಜೀರಿಯಾ ಪಡೆಗಳು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಐಸಿಸ್‌ನ ಎರಡನೇ ಕಮಾಂಡರ್ ಅಬು-ಬಿಲಾಲ್ ಅಲ್-ಮಿನುಕಿ ಸಾವನ್ನಪ್ಪಿದ್ದಾನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ಐಸಿಸ್ ನಾಯಕ ಇನ್ಮುಂದೆ ಆಫ್ರಿಕಾದ ಜನರನ್ನು ಭಯಭೀತರನ್ನಾಗಿಸಲು ಅಥವಾ ಅಮೆರಿಕನ್ನರ ವಿರುದ್ಧ ದಾಳಿ ನಡೆಸಲು ಸಂಚು ರೂಪಿಸಲು ಸಾಧ್ಯವಿಲ್ಲ ಎಂದು ಟ್ರಂಪ್‌ ಹೇಳಿದರು.

ಐಸಿಸ್ ಕಮಾಂಡರ್ ಅಬು-ಬಿಲಾಲ್ ಅಲ್-ಮಿನುಕಿ ಹತ್ಯೆ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar May 16, 2026 10:34 AM

ವಾಷಿಂಗ್ಟನ್‌: ಅಮೆರಿಕ ಮತ್ತು ನೈಜೀರಿಯಾ ಪಡೆಗಳು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಐಸಿಸ್‌ನ (Abu-Bilal Al-Minuki) ಎರಡನೇ ಕಮಾಂಡರ್ ಅಬು-ಬಿಲಾಲ್ ಅಲ್-ಮಿನುಕಿ ಸಾವನ್ನಪ್ಪಿದ್ದಾನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಘೋಷಿಸಿದ್ದಾರೆ. ಈ ಕಾರ್ಯಾಚರಣೆ ಆಫ್ರಿಕಾದಲ್ಲಿ ನಡೆದಿದೆ ಮತ್ತು ಈ ಕಾರ್ಯಾಚರಣೆಯು ಐಸಿಸ್‌ನ ಅಂತಾರಾಷ್ಟ್ರೀಯ ಜಾಲವನ್ನು ಗಮನಾರ್ಹವಾಗಿ ದುರ್ಬಲಗೊಳಿಸಿದೆ ಎಂದು ಟ್ರಂಪ್‌ ಹೇಳಿದ್ದಾರೆ. ತಮಗೆ ಬೆಂಬಲ ಸೂಚಿಸಿದ ನೈಜೀರಿಯಾದ ಸರ್ಕಾರಕ್ಕೆ ಧನ್ಯವಾದವನ್ನು ತಿಳಿಸಿದ್ದಾರೆ.

ಈ ಕುರಿತು ಟ್ರೂತ್ ಸೋಶಿಯಲ್‌ನಲ್ಲಿನ ಪೋಸ್ಟ್‌ ಮಾಡಿದ ಟ್ರಂಪ್‌, "ಇಂದು ರಾತ್ರಿ, ನನ್ನ ನಿರ್ದೇಶನದ ಮೇರೆಗೆ, ಧೈರ್ಯಶಾಲಿ ಅಮೇರಿಕನ್ ಪಡೆಗಳು ಮತ್ತು ನೈಜೀರಿಯಾದ ಸಶಸ್ತ್ರ ಪಡೆಗಳು ಯುದ್ಧಭೂಮಿಯಿಂದ ವಿಶ್ವದ ಅತ್ಯಂತ ಸಕ್ರಿಯ ಭಯೋತ್ಪಾದಕನನ್ನು ನಿರ್ಮೂಲನೆ ಮಾಡಲು ನಿಖರವಾಗಿ ಯೋಜಿಸಲಾದ ಮತ್ತು ಅತ್ಯಂತ ಸಂಕೀರ್ಣವಾದ ಕಾರ್ಯಾಚರಣೆಯನ್ನು ನಡೆಸಿವೆ ಎಂದು ಹೇಳಿದ್ದಾರೆ. ಅಬು-ಬಿಲಾಲ್ ಅಲ್-ಮಿನುಕಿ ಆಫ್ರಿಕಾದಲ್ಲಿ ಅಡಗಿಕೊಂಡಿರಬಹುದು ಎಂಬ ಊಹೆ ಮೇರೆಗೆ ಕಾರ್ಯಚರಣೆ ನಡೆಸಲಾಗಿತ್ತು ಎಂದು ಅವರು ಹೇಳಿದರು.

ಅಮೆರಿಕದ ಗುಪ್ತಚರ ಇಲಾಖೆಯ ಮೂಲಗಳು ಆತನ ಪ್ರತಿಯೊಂದು ಚಲನವಲನದ ಮೇಲೂ ನಿರಂತರ ಕಣ್ಣಿಟ್ಟಿದ್ದವು ಈಗ ಕಾರ್ಯಾಚರಣೆಯಲ್ಲಿ ಆತನನ್ನು ಹೊಡೆದುರುಳಿಸಲಾಗಿದೆ ಎಂದು ಟ್ರಂಪ್‌ ಮಾಹಿತಿ ನೀಡಿದರು.

ಈ ಐಸಿಸ್ ನಾಯಕ ಇನ್ಮುಂದೆ ಆಫ್ರಿಕಾದ ಜನರನ್ನು ಭಯಭೀತರನ್ನಾಗಿಸಲು ಅಥವಾ ಅಮೆರಿಕನ್ನರ ವಿರುದ್ಧ ದಾಳಿ ನಡೆಸಲು ಸಂಚು ರೂಪಿಸಲು ಸಾಧ್ಯವಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. "ಆತನ ಅಂತ್ಯದೊಂದಿಗೆ ಐಸಿಸ್‌ನ ಜಾಗತಿಕ ಕಾರ್ಯಾಚರಣೆಗಳು ತೀವ್ರವಾಗಿ ಕುಂಠಿತಗೊಂಡಿವೆ. ಈ ಕಾರ್ಯಾಚರಣೆಯಲ್ಲಿ ಪಾಲುದಾರರಾದ ನೈಜೀರಿಯಾ ಸರ್ಕಾರಕ್ಕೆ ಧನ್ಯವಾದಗಳು ಎಂದು ಟ್ರಂಪ್‌ ಹೇಳಿದರು.

ಇರಾನ್‌ ಮೇಲೆ ಅಮೆರಿಕದಿಂದ ಮತ್ತಷ್ಟು ಭೀಕರ ದಾಳಿ? ಎಐ ಇಮೇಜ್‌ ಮೂಲಕ ಡೊನಾಲ್ಡ್‌ ಟ್ರಂಪ್‌ ನೀಡಿದ ಸೂಚನೆಗೆ ಜಗತ್ತೇ ಕಂಪಿಸಿದ್ದೇಕೆ?

ಅಬು-ಬಿಲಾಲ್ ಅಲ್-ಮಿನುಕಿ ಯಾರು?

ಅಬು-ಬಿಲಾಲ್ ಅಲ್-ಮಿನುಕಿ ಆಫ್ರಿಕಾದ ಸಹೇಲ್ ಪ್ರದೇಶದ ಭಯೋತ್ಪಾದಕ. ಅಮೆರಿಕದ ದಾಖಲೆಗಳ ಪ್ರಕಾರ, ಅವನು ಐಸಿಸ್‌ನ ಪ್ರಾಂತ್ಯಗಳ ಜನರಲ್ ಡೈರೆಕ್ಟರೇಟ್‌ನೊಂದಿಗೆ ಸಂಬಂಧ ಹೊಂದಿದ್ದನು ಮತ್ತು ಅಬು ಬಿಲಾಲ್ ಅಲ್-ಮಿನುಕಿ, ಅಬುಬಕರ್ ಮೈನೋಕ್ ಮತ್ತು ಅಬೋರ್ ಮೈನೋಕ್ ಸೇರಿದಂತೆ ಹಲವಾರು ಹೆಸರುಗಳಿಂದ ದಾಳಿಗಳನ್ನು ನಡೆಸುತ್ತಿದ್ದ.