ಇತಿಹಾಸ ನಿರ್ಮಿಸಿದ ಟರ್ಕಿ: ಮಾನವ ರಹಿತ ಫೈಟರ್ ಜೆಟ್ ಕಿಜಿಲೆಲ್ಮಾ ಪರೀಕ್ಷೆ ಯಶಸ್ವಿ
ರಾಡಾರ್ ಮಾರ್ಗದರ್ಶನದ ಮೂಲಕ ಟರ್ಕಿಯು ಮೊದಲ ಬಾರಿಗೆ ಮಾನವ ರಹಿತ ಫೈಟರ್ ಜೆಟ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತು. ಮಾನವ ರಹಿತ ಫೈಟರ್ ಜೆಟ್ ಕಿಜಿಲೆಲ್ಮಾವನ್ನು ಗಾಳಿಯಲ್ಲಿ ಯಶಸ್ವಿಯಾಗಿ ಪರೀಕ್ಷೆ ನಡೆಸಿದ ಟರ್ಕಿ ಜಾಗತಿಕ ಯುದ್ಧ ವಾಯುಯಾನದಲ್ಲಿ ಇತಿಹಾಸ ನಿರ್ಮಿಸಿದೆ. ಈ ಕ್ಷಿಪಣಿಯನ್ನು ಬಳಸಿಕೊಂಡು ಗಾಳಿಯಲ್ಲಿ ನಿಖರವಾಗಿ ವಿಮಾನವನ್ನು ಗುರಿಯಾಗಿಸಲು ಪರೀಕ್ಷೆ ನಡೆಸಲಾಯಿತು.
(ಸಂಗ್ರಹ ಚಿತ್ರ) -
ಟರ್ಕಿ: ಮಾನವ ರಹಿತ ಫೈಟರ್ ಜೆಟ್ (unmanned fighter jet) ಕಿಜಿಲೆಲ್ಮಾವನ್ನು (Kizilelma) ಟರ್ಕಿ (turkey) ಯಶಸ್ವಿಯಾಗಿ ಪರೀಕ್ಷೆ ನಡೆಸಿತ್ತು. ಈ ಮೂಲಕ ಜಾಗತಿಕ ಯುದ್ಧ ವಾಯುಯಾನದಲ್ಲಿ ಇತಿಹಾಸ ನಿರ್ಮಿಸಿದ ಟರ್ಕಿ ಈ ಕ್ಷಿಪಣಿಯನ್ನು ಬಳಸಿಕೊಂಡು ಗಾಳಿಯಲ್ಲಿ ನಿಖರವಾಗಿ ವಿಮಾನವನ್ನು ಗುರಿಯಾಗಿಸಿತ್ತು. ರಾಡಾರ್ ಮಾರ್ಗದರ್ಶನದ ಮೂಲಕ ಕಾರ್ಯ ನಿರ್ವಹಿಸುವ ಈ ಜೆಟ್ ಮಾನವ ರಹಿತ ಯುದ್ಧ ವಿಮಾನಗಳಲ್ಲಿ ಒಂದು ಪ್ರಗತಿಯಾಗಿದೆ. ಸಿನೋಪ್ ಫೈರಿಂಗ್ ಶ್ರೇಣಿಯ (Sinop firing range) ಕರಾವಳಿಯಲ್ಲಿ ಈ ಜೆಟ್ ಅನ್ನು ಟರ್ಕಿ ಪರೀಕ್ಷಿಸಿತ್ತು.
ಅಸೆಲ್ಸನ್‌ನ ಮುರಾದ್ ಏಸಾ ರಾಡಾರ್‌ನಿಂದ ಕಾರ್ಯನಿರ್ವಹಿಸುವ ಫೈಟರ್ ಜೆಟ್ ಕಿಜಿಲೆಲ್ಮಾ ಸ್ವಯಂ ಚಾಲಿತವಾಗಿ ವೈಮಾನಿಕ ಗುರಿಯನ್ನು ನಿಗದಿ ಪಡಿಸಿ ಗಾಳಿಯಲ್ಲಿ ಬಿಯಾಂಡ್ ವಿಷುಯಲ್ ರೇಂಜ್ ಗೋಕ್ಡೋಗನ್ ಕ್ಷಿಪಣಿಯೊಂದಿಗೆ ಸೇರಿ ನಾಶಪಡಿಸಿತು. ಕಿಜಿಲೆಲ್ಮಾವನ್ನು ಟರ್ಕಿಯಲ್ಲೇ ತಯಾರಿಸಲಾಗಿದೆ. ಐದು ಎಫ್-15 ಫೈಟರ್ ಜೆಟ್‌ಗಳೊಂದಿಗೆ ಆಕಾಶದೆತ್ತರಕೆ ಹಾರುತ್ತದೆ.
ಕಿಜಿಲೆಲ್ಮಾ ಹೈ-ಸ್ಪೀಡ್ ಜೆಟ್ ನಿಗದಿತ ಗುರಿಯನ್ನು ಸ್ವಯಂ ಚಾಲಿತವಾಗಿ ಮುರಾದ್ ಏಸಾ ರಾಡಾರ್ ಮೂಲಕ ಪತ್ತೆ ಮಾಡಿ ಟ್ರ್ಯಾಕ್ ಮಾಡುತ್ತದೆ. ಅನಂತರ ಅದು ತನ್ನ ರೆಕ್ಕೆಯ ಕೆಳಗೆ ಇರುವ ಗೋಕ್ಡೋಗನ್ ಕ್ಷಿಪಣಿಯನ್ನು ಹಾರಿಸುತ್ತದೆ. ಉಡಾವಣೆಯಾದ ಕ್ಷಿಪಣಿಯು ಗುರಿಯ ಡ್ರೋನ್‌ಗೆ ನೇರವಾಗಿ ಬಡಿಯುತ್ತದೆ. ಕಿಜಿಲೆಲ್ಮಾ ಶತ್ರು ವಿಮಾನಗಳನ್ನು ದೂರದಿಂದಲೇ ಪತ್ತೆ ಮಾಡುತ್ತದೆ. ಅದನ್ನು ನೋಡದೆಯೇ ಗುರಿ ಇಟ್ಟು ಹೊಡೆಯುತ್ತದೆ. ಇದು ಗಾಳಿಯಿಂದ ನೆಲಕ್ಕೆ ಮತ್ತು ಗಾಳಿಯಿಂದ ಗಾಳಿಯಲ್ಲಿ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸುತ್ತದೆ.
Turkey's 'WORLD FIRST' drone strike with beyond-visual-range missile
— RT (@RT_com) November 30, 2025
Bayraktar’s Kizilelma flanked by jets as warhead roars away
Hitting 'jet-powered aerial target' in successful test pic.twitter.com/hCVM20t8yx
ಯುಎವಿಗಳು, ಸಿ4I ಮತ್ತು ಕೃತಕ ಬುದ್ಧಿಮತ್ತೆಯಲ್ಲಿ ಪರಿಣತಿ ಹೊಂದಿರುವ ಖಾಸಗಿ ಟರ್ಕಿಶ್ ರಕ್ಷಣಾ ಕಂಪೆನಿ ಬೇಕರ್ ನವೆಂಬರ್ 30ರಂದು ಪೈಲಟ್ ಪರೀಕ್ಷೆಯನ್ನು ನಡೆಸಿತು. ಕಿಜಿಲೆಲ್ಮಾ ವಿಮಾನವು ಮೆರ್ಜಿಫೊನ್‌ನ 5ನೇ ಮುಖ್ಯ ಜೆಟ್ ಬೇಸ್‌ನಿಂದ ಐದು ಎಫ್-15 ಫೈಟರ್ ಜೆಟ್‌ಗಳೊಂದಿಗೆ ಹಾರಿತು. ಉಡಾವಣೆಯಾದ ಗೋಕ್ಡೋಗನ್ ಕ್ಷಿಪಣಿಯು ಗುರಿ ಡ್ರೋನ್‌ಗೆ ನೇರವಾಗಿ ಅಪ್ಪಳಿಸಿತು. ಇದು ಜಾಗತಿಕ ಯುದ್ಧ ವಾಯುಯಾನದ ಇತಿಹಾಸದಲ್ಲಿ ಒಂದು ಹೆಗ್ಗುರುತು ಎಂದು ಟರ್ಕಿ ಬಣ್ಣಿಸಿದೆ.
ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಮಾಡ್ಯೂಲ್ ಭೇದಿಸಿದ ದೆಹಲಿ ಪೊಲೀಸರು; 3 ಜನರ ಬಂಧನ
ಈ ಕುರಿತು ಟರ್ಕಿಶ್ ಸಾಮಾಜಿಕ ಮಾಧ್ಯಮ ವೇದಿಕೆ ಎನ್ ಸೋಷಿಯಲ್ ನಲ್ಲಿ ಪೋಸ್ಟ್ ಮಾಡಿರುವ ಕಂಪೆನಿ, ವಿಶ್ವದಲ್ಲೇ ಮೊದಲ ಬಾರಿಗೆ ಮಾನವರಹಿತ ಯುದ್ಧ ವಿಮಾನವು ಬಿವಿಆರ್ ಗಾಳಿಯಲ್ಲಿ ಕ್ಷಿಪಣಿಯೊಂದಿಗೆ ತನ್ನ ಗುರಿಯನ್ನು ಹೊಡೆದಿದೆ ಎಂದು ಹೇಳಿದೆ.
ಈ ಕುರಿತು ಸಂದೇಶ ಹಂಚಿಕೊಂಡ ಬೇಕರ್ ಅಧ್ಯಕ್ಷ ಮತ್ತು ಮುಖ್ಯ ತಂತ್ರಜ್ಞಾನ ಅಧಿಕಾರಿ ಸೆಲ್ಚುಕ್ ಬೇರಕ್ತರ್, ನಾವು ಇಂದು ವಾಯುಯಾನ ಇತಿಹಾಸದಲ್ಲಿ ಹೊಸ ಯುಗಕ್ಕೆ ಬಾಗಿಲು ತೆರೆದಿದ್ದೇವೆ. ವಿಶ್ವದಲ್ಲಿ ಮೊದಲ ಬಾರಿಗೆ ಮಾನವರಹಿತ ಯುದ್ಧ ವಿಮಾನವು ರಾಡಾರ್ ಮಾರ್ಗದರ್ಶನದೊಂದಿಗೆ ಗಾಳಿಯಲ್ಲಿ ವೈಮಾನಿಕ ಗುರಿಯನ್ನು ಹೊಡೆದಿದೆ ಎಂದು ತಿಳಿಸಿದ್ದಾರೆ.