ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Tejas Fighter Jet Crash: ದುಬೈ ಏರ್‌ ಶೋನಲ್ಲಿ ಭಾರತದ ತೇಜಸ್‌ ಯುದ್ಧ ವಿಮಾನ ಪತನ

Dubai Air Show 2025: ದುಬೈಯಲ್ಲಿ ನಡೆಯುತ್ತಿರುವ ಏರ್‌ ಶೋದಲ್ಲಿ ಭಾರತದ ತೇಜಸ್‌ ಯುದ್ಧ ವಿಮಾನ ಪತನವಾಗಿದೆ. ಎಚ್‌ಎಎಲ್‌ ನಿರ್ಮಿತ ಈ ಲಘು ಯುದ್ಧ ವಿಮಾನ ಏಕಾಏಕಿ ಭೂಮಿಗೆ ಅಪ್ಪಳಿಸಿದೆ. ಪೈಲಟ್ ಮೃತಪಟ್ಟಿದ್ದಾರೆ. ಮಧ್ಯಾಹ್ನ 2:10ರ ವೇಳೆಗೆ ಈ ಘಟನೆ ನಡೆದಿದೆ.

ದುಬೈ ಏರ್‌ ಶೋನಲ್ಲಿ ತೇಜಸ್‌ ಯುದ್ಧ ವಿಮಾನ ಪತನ

ದುಬೈಯಲ್ಲಿ ಭಾರತದ ತೇಜಸ್‌ ಯುದ್ಧ ವಿಮಾನ ಪತನವಾಗಿದೆ. -

Ramesh Ballamoole
Ramesh Ballamoole Nov 21, 2025 4:28 PM

ದುಬೈ, ನ. 21: ದುಬೈಯಲ್ಲಿ ನಡೆಯುತ್ತಿರುವ ಏರ್‌ ಶೋದಲ್ಲಿ (Dubai Air Show) ಭಾರತದ ತೇಜಸ್‌ ಯುದ್ಧ ವಿಮಾನ ಪತನವಾಗಿದೆ. ಎಚ್‌ಎಎಲ್‌ (Hindustan Aeronautics Limited) ನಿರ್ಮಿತ ಈ ಲಘು ಯುದ್ಧ ವಿಮಾನ ಏಕಾಏಕಿ ಭೂಮಿಗೆ ಅಪ್ಪಳಿಸಿದೆ (Tejas Fighter Jet Crash). ಪೈಲಟ್ ಮೃತಪಟ್ಟಿದ್ದಾರೆ. ನವೆಂಬರ್‌ 21ರ ಮಧ್ಯಾಹ್ನ 2:10ರ ವೇಳೆಗೆ ಈ ಘಟನೆ ನಡೆದಿದೆ. ಏರ್‌ ಶೋ ನಡೆಯುತ್ತಿರುವ ಅಲ್ ಮಕ್ತುಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ತೇಜಸ್‌ ಪತನವಾಗುತ್ತಿದ್ದಂತೆ ದಟ್ಟ ಹೊಗೆ ವ್ಯಾಪಿಸಿದ್ದು, ವಿಡಿಯೊ ವೈರಲ್‌ ಆಗಿದೆ.

ʼʼವಿಶ್ವದ ಅತಿದೊಡ್ಡ ಏರ್‌ ಶೋಗಳಲ್ಲಿ ಒಂದಾದ, 2 ವರ್ಷಕ್ಕೊಮ್ಮೆ ನಡೆಯುವ ದುಬೈ ಏರ್ ಶೋ ವೇಳೆ ಈ ಅಪಘಾತ ಸಂಭವಿಸಿದೆʼʼ ಎಂದು ಮೂಲಗಳು ತಿಳಿಸಿವೆ. ಈ ಏರ್‌ ಶೋ 5 ದಿನಗಳಿಂದ ನಡೆಯುತ್ತಿದ್ದು, ಅಪಘಾತಕ್ಕೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ತೇಜಸ್‌ ಯುದ್ಧ ವಿಮಾನದ ಪತನದ ದೃಶ್ಯ:



"ದುಬೈ ವಾಯು ಪ್ರದರ್ಶನದ ವೇಳೆ ಶುಕ್ರವಾರ ಐಎಎಫ್‌ನ (ಭಾರತೀಯ ವಾಯು ಪಡೆ) ತೇಜಸ್ ವಿಮಾನ ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಪೈಲಟ್‌ ಮರಣ ಹೊಂದಿದ್ದಾರೆ. ಈ ದುಃಖದ ಸಮಯದಲ್ಲಿ ಮೃತರ ಕುಟುಂಬಕ್ಕೆ ಬಂಬಲವಾಗಿ ನಿಲ್ಲುತ್ತೇವೆ. ಅಪಘಾತದ ಕಾರಣವನ್ನು ಕಂಡುಹಿಡಿಯಲು ವಿಚಾರಣಾ ನ್ಯಾಯಾಲಯವನ್ನು ರಚಿಸಲಾಗುತ್ತಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2 ವರ್ಷಗಳ ಅವಧಿಯಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅಭಿವೃದ್ಧಿಪಡಿಸಿದ ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್ ಆಗಿರುವ ಈ ಏಕ-ಸೀಟಿನ ತೇಜಸ್ ಫೈಟರ್ ಜೆಟ್ ಪತನವಾಗುತ್ತಿರುವುದು ಇದು 2ನೇ ಬಾರಿ. 2024ರ ಮಾರ್ಚ್‌ನಲ್ಲಿ ತೇಜಸ್‌ ಜೆಟ್‌ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಪತನವಾಗಿತ್ತು. 24 ವರ್ಷಗಳ ಇತಿಹಾಸದಲ್ಲಿ ಅದೇ ಮೊದಲ ಬಾರಿಗೆ ತೇಜಸ್‌ ನೆಲಕ್ಕುರುಳಿತ್ತು. ಅದೃಷ್ಟವಶಾತ್‌ ಪೈಲಟ್‌ ಅಪಾಯದಿಂದ ಪಾರಾಗಿದ್ದರು.

ತೇಜಸ್ 4.5 ತಲೆಮಾರಿನ ಯುದ್ಧ ವಿಮಾನವಾಗಿದ್ದು, ಹಾರಾಟದ ವೇಳೆ ಇಂಧನ ತುಂಬಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಟೇಕಾಫ್ ಅಥವಾ ಲ್ಯಾಂಡಿಂಗ್ ಸಮಯದಲ್ಲಿ ಪೈಲಟ್ ಸುರಕ್ಷಿತವಾಗಿ ಹೊರಬರುವಂತೆ ಸೀಟ್‌ ವಿನ್ಯಾಸಗೊಳಿಸಲಾಗಿದೆ.

ತಮಿಳುನಾಡಿನಲ್ಲಿ ಭಾರತೀಯ ವಾಯುಪಡೆಯ ವಿಮಾನ ಪತನ

ತೇಜಸ್‌ನ ವೈಶಿಷ್ಟ್ಯ

  • ತೇಜಸ್‌ನ ಮೊದಲ ಪರೀಕ್ಷಾರ್ಥ ಹಾರಾಟವು 2001ರಲ್ಲಿ ನಡೆಯಿತು. ಅದಾದ ಬಳಿಕ 24 ವರ್ಷಗಳ ಇತಿಹಾಸದಲ್ಲಿ ಈ ಲಘು ವಿಮಾನ ಪತನವಾಗುತ್ತಿರುವುದು ಇದು 2ನೇ ಬಾರಿ.
  • ತೇಜಸ್ 4,000 ಕೆಜಿ ಗರಿಷ್ಠ ಪೇಲೋಡ್ ಸಾಮರ್ಥ್ಯವನ್ನು ಹೊಂದಿದ್ದು, ಏಕ-ಪೈಲಟ್, ಏಕ-ಎಂಜಿನ್ ವಿಮಾನವಾಗಿ ಕಾರ್ಯನಿರ್ವಹಿಸುತ್ತದೆ. ಇದು 13,300 ಕೆಜಿ ಗರಿಷ್ಠ ಟೇಕ್ಆಫ್ ತೂಕದೊಂದಿಗೆ ಕಾರ್ಯನಿರ್ವಹಿಸುತ್ತದೆ.
  • ತೇಜಸ್ ಲಘು ಯುದ್ಧ ವಿಮಾನವು 4.5 ಪೀಳಿಗೆಯ, ಬಹು ಉಪಯೋಗಿ ಯುದ್ಧ ವಿಮಾನವಾಗಿದ್ದು, ಆಕ್ರಮಣ ನಡೆಸಲೆಂದೇ ವಿನ್ಯಾಸಗೊಳಿಸಲಾಗಿದೆ. ಇದು ನೆಲದ ಕಾರ್ಯಾಚರಣೆ ವೇಳೆಯೂ ನೆರವಾಗಬಲ್ಲದು.
  • ರಕ್ಷಣಾ ಯೋಜನೆಗೆ ಉತ್ತೇಜನವಾಗಿ ಆಗಸ್ಟ್‌ನಲ್ಲಿ ಭಾರತೀಯ ವಾಯುಪಡೆಗೆ 97 ಎಲ್‌ಸಿಎ ತೇಜಸ್ ಮಾರ್ಕ್ 1ಎ ಫೈಟರ್ ಜೆಟ್‌ಗಳನ್ನು ಖರೀದಿಸುವ ಯೋಜನೆಯನ್ನು ಕೇಂದ್ರ ಅನುಮೋದಿಸಿತು.