ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಷ್ಯಾದಿಂದ ಕಚ್ಚಾ ತೈಲ ಆಮದು; ಭಾರತದ ಮೇಲೆ ಶೇ.100 ರಷ್ಟು ಸುಂಕ ವಿಧಿಸಲು ಅಮೆರಿಕ ನಿರ್ಧಾರ!

ರಷ್ಯಾದಿಂದ ಕಚ್ಚಾ ತೈಲ ಮತ್ತು ಅನಿಲವನ್ನು ಖರೀದಿಸುವ ಭಾರತ ಸೇರಿದಂತೆ ಇತರ ದೇಶಗಳ ಶೇಕಡಾ 100 ರಷ್ಟು ಸುಂಕ (Tariff) ವಿಧಿಸಲು ಸಂಸತ್ತಿನಲ್ಲಿ ಮಸೂದೆ ಮಂಡಿಸಲು ಅಮೆರಿಕ ಸಜ್ಜಾಗಿದೆ. ಸುಂಕ ನಿರ್ಬಂಧ ಹೇರುವ ಕಾನೂನಿಗೆ ಸೇರಿಸಬೇಕು ಎನ್ನುವ ತಿದ್ದುಪಡಿಗೆ ಅಮೆರಿಕ ಸಂಸದರು ಸೂಚಿಸಿದ್ದಾರೆ.

ಭಾರತದ ಮೇಲೆ ಶೇ.100 ರಷ್ಟು ಸುಂಕ ವಿಧಿಸಲು ಅಮೆರಿಕ ನಿರ್ಧಾರ!

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Sep 16, 2026 9:12 AM

ವಾಷಿಂಗ್ಟನ್‌: ರಷ್ಯಾದಿಂದ ಕಚ್ಚಾ ತೈಲ ಮತ್ತು ಅನಿಲವನ್ನು ಖರೀದಿಸುವ ಭಾರತ ಸೇರಿದಂತೆ ಇತರ ದೇಶಗಳ ಶೇಕಡಾ 100 ರಷ್ಟು ಸುಂಕ (Tariff) ವಿಧಿಸಲು ಸಂಸತ್ತಿನಲ್ಲಿ ಮಸೂದೆ ಮಂಡಿಸಲು ಅಮೆರಿಕ ಸಜ್ಜಾಗಿದೆ. ಸುಂಕ (Us Tariff on India) ನಿರ್ಬಂಧ ಹೇರುವ ಕಾನೂನಿಗೆ ಸೇರಿಸಬೇಕು ಎನ್ನುವ ತಿದ್ದುಪಡಿಗೆ ಅಮೆರಿಕ ಸಂಸದರು ಸೂಚಿಸಿದ್ದಾರೆ. ಅಲ್ಲದೇ ತೆರಿಗೆ ವಿಧಿಸುವ ಪ್ರಸ್ತಾಪವನ್ನೇ ತೆಗೆದುಹಾಕಬೇಕು ಎನ್ನುವ ತಿದ್ದುಪಡಿಯನ್ನು ಕೆಲವು ಸಂಸದರು ಮುಂದಿಟ್ಟಿದ್ದಾರೆ.

ಸದ್ಯ ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (ಕೆಳಮನೆ) ಈ ಮಸೂದೆಯನ್ನು ಅಂತಿಮ ಮತದಾನಕ್ಕಾಗಿ ಮುಂದೂಡಿದ್ದು, ಇದು ಕಾನೂನಾಗಿ ಜಾರಿಗೆ ಬಂದರೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ತೈಲ ಖರೀದಿಸುವ ದೇಶಗಳ ಮೇಲೆ 100% ತೆರಿಗೆ ವಿಧಿಸುವ ಸಂಪೂರ್ಣ ಅಧಿಕಾರ ಸಿಗಲಿದೆ.

ಮಸೂದೆಯ ಮುಖ್ಯ ಉದ್ದೇಶವೇನು?

ಉಕ್ರೇನ್ ಮೇಲಿನ ಯುದ್ಧಕ್ಕೆ ರಷ್ಯಾ ಬಳಸುತ್ತಿರುವ ಹಣಕಾಸಿನ ಮೂಲವನ್ನು ಸಂಪೂರ್ಣವಾಗಿ ಕತ್ತರಿಸುವುದು ಅಮೆರಿಕದ ಉದ್ದೇಶವಾಗಿದೆ. ರಷ್ಯಾದ ಕಚ್ಚಾ ತೈಲ ಮತ್ತು ಅನಿಲವನ್ನು ಖರೀದಿಸುವ ಮೂಲಕ ಭಾರತ ಮತ್ತು ಚೀನಾ ದೇಶಗಳು ಮಾಸ್ಕೋಗೆ ಭಾರಿ ಆರ್ಥಿಕ ನೆರವು ನೀಡುತ್ತಿವೆ ಎಂದು ಅಮೆರಿಕ ಗಂಭೀರವಾಗಿ ಪರಿಗಣಿಸಿದೆ. ಹಾಗಾಗಿ, ರಷ್ಯಾದಿಂದ ಇಂಧನ ಖರೀದಿಸುವುದನ್ನು ನಿಲ್ಲಿಸಲು ಈ ದೇಶಗಳ ಮೇಲೆ ತೀವ್ರ ಆರ್ಥಿಕ ಒತ್ತಡ ಹೇರಲು ಈ 100% ಸುಂಕದ ಅಸ್ತ್ರವನ್ನು ಬಳಸಲಾಗುತ್ತಿದೆ.

ಹಿಂದೆ ಸೆನೆಟ್ ಅಂಗೀಕರಿಸಿದ್ದ ಮಸೂದೆಯಲ್ಲಿ ಯಾವುದೇ ದೇಶದ ಹೆಸರನ್ನು ನೇರವಾಗಿ ಬರೆದಿರಲಿಲ್ಲ; ಕೇವಲ "ರಷ್ಯಾದಿಂದ ಅತಿ ಹೆಚ್ಚು ತೈಲ ಆಮದು ಮಾಡಿಕೊಳ್ಳುವ 5 ದೇಶಗಳು" ಎಂದು ಹೇಳಲಾಗಿತ್ತು. ಆದರೆ, ಪ್ರಸ್ತುತ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮಂಡಿಸಿರುವ ತಿದ್ದುಪಡಿಯಲ್ಲಿ ಭಾರತ, ಚೀನಾ, ಸ್ಲೋವಾಕಿಯಾ, ಹಂಗೇರಿ ಮತ್ತು ಅಜೆರ್ಬೈಜಾನ್ ದೇಶಗಳ ಹೆಸರನ್ನು ನೇರವಾಗಿ ಉಲ್ಲೇಖಿಸಲಾಗಿದೆ.

ಭಾರತದ ಮೇಲಾಗುವ ಪರಿಣಾಮವೇನು?

ಉಕ್ರೇನ್ ಯುದ್ಧ ಆರಂಭವಾದಾಗಿನಿಂದ ಭಾರತವು ರಷ್ಯಾದಿಂದ ಭಾರಿ ರಿಯಾಯಿತಿ ದರದಲ್ಲಿ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ, ಭಾರತದ ಒಟ್ಟು ತೈಲ ಆಮದಿನಲ್ಲಿ ರಷ್ಯಾದ ಪಾಲು ಶೇಕಡಾ 50 ಕ್ಕಿಂತ ಹೆಚ್ಚಾಗಿದೆ. ಒಂದು ವೇಳೆ ಈ ಮಸೂದೆ ಪೂರ್ಣ ಪ್ರಮಾಣದಲ್ಲಿ ಕಾನೂನಾಗಿ ಜಾರಿಗೆ ಬಂದರೆ, ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಸಾಫ್ಟ್‌ವೇರ್, ಜವಳಿ, ಕೃಷಿ ಉತ್ಪನ್ನಗಳು ಮತ್ತು ಔಷಧಗಳ ಮೇಲೆ 100% ವರೆಗೆ ಸುಂಕ ಬೀಳಬಹುದು.ಇದರಿಂದ ಭಾರತದ ರಫ್ತು ಉದ್ಯಮಕ್ಕೆ ಭಾರಿ ಪೆಟ್ಟು ಬೀಳಲಿದ್ದು, ಭಾರತ-ಅಮೆರಿಕ ಮುಕ್ತ ವ್ಯಾಪಾರ ಮಾತುಕತೆಗೆ ಹಿನ್ನಡೆಯಾಗಲಿದೆ.