ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಮೆರಿಕ ಇರಾನ್ ಸಂಘರ್ಷ: ರಿಯಾದ್‌ನಲ್ಲಿ ಮತ್ತೊಬ್ಬ ಭಾರತೀಯ ಬಲಿ

ಅಮೆರಿಕ ಮತ್ತು ಇರಾನ್ ಸಂಘರ್ಷಕ್ಕೆ ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಭಾರತೀಯನೊಬ್ಬ ಬಲಿಯಾಗಿದ್ದಾನೆ. ಮಾರ್ಚ್ 18ರಂದು ಭಾರತೀಯ ಪ್ರಜೆ ಸಾವನ್ನಪ್ಪಿದ್ದು, ಈ ಮೂಲಕ ರಿಯಾದ್‌ನಲ್ಲಿ ಸಾವಿನ ಸಂಖ್ಯೆ 6ಕ್ಕೇರಿದೆ. ಎಂಟಿ ಸೇಫ್‌ಸೀ ವಿಷ್ಣು ತೈಲ ಟ್ಯಾಂಕರ್‌ನಿಂದ ರಕ್ಷಿಸಲ್ಪಟ್ಟ ೧೫ ಭಾರತೀಯ ಸಿಬ್ಬಂದಿ ಮಾರ್ಚ್ 20 ರಂದು ತವರಿಗೆ ಮರಳುವ ನಿರೀಕ್ಷೆಯಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ರಿಯಾದ್‌ನಲ್ಲಿ ಮತ್ತೊಬ್ಬ ಭಾರತೀಯ ಬಲಿ

ಸಂಗ್ರಹ ಚಿತ್ರ -

ರಿಯಾದ್: ಯುಎಸ್ (us), ಇಸ್ರೇಲ್ (Israel) ಸೇನಾ ಪಡೆಯು ನಡೆಸಿದ ದಾಳಿಗೆ ಪ್ರತಿಯಾಗಿ ಇರಾನ್ (Iran war) ಯುಎಸ್ ಮಿಲಿಟರಿ ನೆಲೆಗಳನ್ನು ಹೊಂದಿರುವ ರಾಷ್ಟ್ರಗಳ ಮೇಲೆ ಪ್ರತೀಕಾರದ ದಾಳಿ ನಡೆಸುತ್ತಿದೆ. ಇದೀಗ ಈ ದಾಳಿಗೆ ಸೌದಿ ಅರೇಬಿಯಾದ (Saudi Arabia) ರಿಯಾದ್‌ನಲ್ಲಿ (Riyadh) ಓರ್ವ ಭಾರತೀಯ ಪ್ರಜೆ ಸಾವನ್ನಪ್ಪಿದ್ದಾನೆ. ಮಾರ್ಚ್ 18ರಂದು ರಿಯಾದ್‌ನಲ್ಲಿ ಓರ್ವ ಭಾರತೀಯ ಸಾವನ್ನಪ್ಪಿದ್ದು, ಸಂಘರ್ಷದ ಪರಿಣಾಮ ಗಲ್ಫ್ ಪ್ರದೇಶದಲ್ಲಿ (Gulf region) ಸಾವನ್ನಪ್ಪಿರುವ ಭಾರತೀಯರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ ಎಂಬುದಾಗಿ ಗಲ್ಫ್ ಹೆಚ್ಚುವರಿ ಕಾರ್ಯದರ್ಶಿ ಅಸೀಮ್ ಮಹಾಜನ್ (Aseem Mahajan), ಭಾರತೀಯ ವಿದೇಶಾಂಗ ಸಚಿವಾಲಯಕ್ಕೆ ( Ministry of External Affairs) ಗುರುವಾರ ತಡರಾತ್ರಿ ಮಾಹಿತಿ ನೀಡಿದ್ದಾರೆ ಎಂದು ಶುಕ್ರವಾರ ತಿಳಿಸಿದೆ.

ಮಹಾಜನ್ ಅವರು ಮಾತನಾಡಿ, ನಾವು ಮೃತರ ಕುಟುಂಬಕ್ಕೆ ತೀವ್ರ ಸಂತಾಪವನ್ನು ಸೂಚಿಸುತ್ತೇವೆ. ರಿಯಾದ್‌ನಲ್ಲಿರುವ ನಮ್ಮ ಮಿಷನ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ ಮತ್ತು ಮೃತರ ದೇಹಗಳನ್ನು ಭಾರತಕ್ಕೆ ತರಲು ನಿರಂತರವಾಗಿ ಮೇಲ್ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದರು.

ಇಸ್ರೇಲ್‌-ಅಮೆರಿಕಕ್ಕೆ ಸವಾಲೊಡ್ಡಿದ ಕೆಲವೇ ಹೊತ್ತಲ್ಲಿ ಇರಾನ್‌ ಐಆರ್‌ಜಿಸಿ ವಕ್ತಾರ ಅಲಿ ಮೊಹಮ್ಮದ್ ನೈನಿಯ ಹತ್ಯೆ

ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಈವರೆಗೆ ಒಟ್ಟು ಆರು ಮಂದಿ ಭಾರತೀಯರು ಪ್ರಾಣ ಕಳೆದುಕೊಂಡಿದ್ದಾರೆ. ಒಬ್ಬರು ಕಾಣೆಯಾಗಿದ್ದಾರೆ ಎಂದು ಮಹಾಜನ್ ತಿಳಿಸಿದ್ದು, ಸೌದಿ ಅರೇಬಿಯಾ, ಓಮನ್, ಇರಾಕ್ ಮತ್ತು ಯುಎಇಗಳಲ್ಲಿನ ನಮ್ಮ ರಾಯಭಾರ ಕಚೇರಿಗಳು ಕಾಣೆಯಾಗಿರುವ ಭಾರತೀಯ ಪ್ರಜೆಗಳ ಬಗ್ಗೆ ಮತ್ತು ಮೃತ ಭಾರತೀಯರ ದೇಹಗಳನ್ನು ಬಹುಬೇಗನೆ ಭಾರತಕ್ಕೆ ಕಳುಹಿಸುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಸಂವಹನ ನಡೆಸುತ್ತಿರುವುದಾಗಿ ತಿಳಿಸಿದರು.

ಇರಾಕ್‌ನಲ್ಲಿ ಸುರಕ್ಷಿತವಾಗಿ ರಕ್ಷಿಸಲ್ಪಟ್ಟ ತೈಲ ಟ್ಯಾಂಕರ್ ಎಂಟಿ ಸಫೇಸಿಯಾ ವಿಷ್ಣುವಿನ ಹದಿನೈದು ಭಾರತೀಯ ಸಿಬ್ಬಂದಿಯನ್ನು ಗುರುವಾರ ದೇಶದಿಂದ ಕಳುಹಿಸಲಾಗಿದೆ. ಶುಕ್ರವಾರ ಅವರು ಸೌದಿ ಅರೇಬಿಯಾ ಮಾರ್ಗದ ಮೂಲಕ ಭಾರತಕ್ಕೆ ತೆರಳುವ ನಿರೀಕ್ಷೆ ಇದೆ. ಈ ನಡುವೆ ರಕ್ಷಿಸಲ್ಪಟ್ಟ 24 ಭಾರತೀಯ ನಾವಿಕರಲ್ಲಿ ಎಂಡಿ ಎಂಕೆಡಿ ವ್ಯೋಮ್‌ನ 16 ಮತ್ತು ಎಂಟಿ ಸ್ಕೈಲೈಟ್‌ನ 8 ಜನರು ಮೊದಲೇ ಒಮಾನ್‌ನಿಂದ ಭಾರತಕ್ಕೆ ಆಗಮಿಸಿದ್ದರು ಎಂದರು.

ಇದರೊಂದಿಗೆ ಪಶ್ಚಿಮ ಏಷ್ಯಾದಲ್ಲಿನ ಪ್ರಸ್ತುತ ವಿಮಾನಯಾನ ಪರಿಸ್ಥಿತಿಯ ಕುರಿತು ಮಾಹಿತಿ ನೀಡಿರುವ ವಿದೇಶಾಂಗ ಸಚಿವಾಲಯವು, ಪರಿಸ್ಥಿತಿಗಳು ಕ್ರಮೇಣ ಸುಧಾರಿಸುತ್ತಿವೆ. ಈ ಪ್ರದೇಶದಿಂದ ಹೆಚ್ಚುವರಿ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ. ಫೆಬ್ರವರಿ 28 ರಿಂದ ಸುಮಾರು 3,00,000 ಪ್ರಯಾಣಿಕರು ಭಾರತಕ್ಕೆ ಮರಳಿದ್ದಾರೆ ಎಂದು ಹೇಳಿದರು.

ವಿಮಾನಯಾನ ಸಂಸ್ಥೆಗಳು ಯುಎಇಯಿಂದ ಸುರಕ್ಷತೆಯನ್ನು ಪರಿಗಣಿಸಿ ಸೀಮಿತವಾಗಿ ಕಾರ್ಯಾಚರಣೆ ನಡೆಸುತ್ತಿದೆ. ಯುಎಇಯ ವಿವಿಧ ವಿಮಾನ ನಿಲ್ದಾಣಗಳಿಂದ ಶುಕ್ರವಾರ ಭಾರತಕ್ಕೆ ಸುಮಾರು 90 ವಿಮಾನಗಳು ಮರಳುವ ನಿರೀಕ್ಷೆಯಿದೆ. ಕತಾರ್ ಏರ್ ವೇಸ್ ಭಾರತಕ್ಕೆ 10 ನಿಗದಿತವಲ್ಲದ ವಿಮಾನಗಳನ್ನು ಕಳುಹಿಸಲಿದೆ. ಆದರೆ ಕುವೈತ್ ಮತ್ತು ಬಹ್ರೇನ್‌ನಲ್ಲಿನ ವಾಯುಪ್ರದೇಶವು ಮುಚ್ಚಲ್ಪಟ್ಟಿದೆ ಎಂದರು.

ಭೀಕರ ಯುದ್ಧದ ನಡುವೆಯೇ 19 ವರ್ಷದ ಕುಸ್ತಿಪಟು ಸೇರಿ ಇಬ್ಬರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿದ ಇರಾನ್!

ಇನ್ನು ಕುವೈತ್‌ನ ಜಜೀರಾ ಏರ್‌ವೇಸ್, ಸೌದಿ ಅರೇಬಿಯಾದ ಅಲ್ ಖೈಸುಮಾ ವಿಮಾನ ನಿಲ್ದಾಣದಿಂದ ಭಾರತದ ವಿವಿಧ ಸ್ಥಳಗಳಿಗೆ ವಿಶೇಷ ನಿಗದಿತವಲ್ಲದ ವಾಣಿಜ್ಯ ವಿಮಾನಗಳು ಸಂಚಾರ ನಡೆಸಲಿದೆ. ಇದರಲ್ಲಿ ಮೊದಲ ವಿಮಾನ ಕೊಚ್ಚಿಗೆ ಆಗಮಿಸಲಿದೆ ಎಂದು ಅವರು ತಿಳಿಸಿದರು.