ತುಂಡುಡುಗೆ ತೊಟ್ಟು ರೀಲ್ಸ್ ಮಾಡ್ತಿದ್ದ ಯುವತಿಗೆ ಬುದ್ಧಿವಾದ ಹೇಳಿದ ಅಜ್ಜಿ; ವಿಡಿಯೊ ವೈರಲ್
ಬೆಂಗಳೂರು ಮೂಲದ ಯುವತಿ ತುಂಡುಡುಗೆ ತೊಟ್ಟು ರಸ್ತೆಯಲ್ಲಿ ರೀಲ್ಸ್ ಮಾಡುತ್ತಿದ್ದ ವೇಳೆ ಅದೇ ಮಾರ್ಗದಲ್ಲಿ ಬರುತ್ತಿದ್ದ ಅಜ್ಜಿ ನೋಡಿದ್ದಾರೆ. ಯುವತಿಯ ಉಡುಗೆ ತೊಡುಗೆ ನೋಡಿದ ಅಜ್ಜಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತುಂಡುಡುಗೆ ತೊಟ್ಟಿದ್ದ ಯುವತಿಗೆ ಅಜ್ಜಿ ಬುದ್ಧಿವಾದ. -
ಬೆಂಗಳೂರು: ಸಾಮಾಜಿಕ ಮಾಧ್ಯಮಗಳಲ್ಲಿ ಜನರ ಗಮನ ಸೆಳೆಯಲು ಹಲವು ಯುವಕ ಯುವತಿಯರು ಚಿತ್ರ ವಿಚಿತ್ರ ರೀಲ್ಸ್ ಮಾಡಲು ಹೋಗಿ ಜನರಿಂದ ಛೀಮಾರಿ ಹಾಕಿಸಿಕೊಳ್ಳುವುದನ್ನು ನೋಡುತ್ತಿರುತ್ತೇವೆ. ಅಂತಹುದೇ ಒಂದು ಘಟನೆ ನಗರದಲ್ಲಿ (Bengaluru) ನಡೆದಿದೆ. ತುಂಡುಡುಗೆ ತೊಟ್ಟು ರಸ್ತೆಯಲ್ಲಿ ರೀಲ್ಸ್ ಮಾಡುತ್ತಿದ್ದ ಯುವತಿಗೆ ಅಜ್ಜಿ ಬುದ್ಧಿವಾದ ಹೇಳಿರುವ ವಿಡಿಯೊ ಎಲ್ಲೆಡೆ ವೈರಲ್ (Viral Video) ಆಗಿದೆ.
ಈ ಘಟನೆ ಯಾವಾಗ ನಡೆದಿದೆ ಎಂಬುದು ತಿಳಿದುಬಂದಿಲ್ಲ, ಆದರೆ, ಇದು ಬೆಂಗಳೂರು ಮೂಲದ ಶ್ರಿಯಾಂಶಿ ಎಂಬ ಯುವತಿ ಮಾಡಿದ ವಿಡಿಯೊ ಆಗಿದ್ದು, ಆ ಯುವತಿ ತನ್ನ ಇನ್‌ಸ್ಟಾದಲ್ಲಿ ಅಪ್ಲೋಡ್ ಮಾಡಿದ ಬಳಿಕ ಡಿಲೀಟ್ ಮಾಡಿದ್ದಾಳೆ ಎಂದು ತಿಳಿದುಬಂದಿದೆ.
Bengaluru influencer reportedly scolded over her clothes 👗🚫
— jeetwinapk (@jeetwin_apk) March 17, 2026
Viral video sparks debate on “modesty” vs personal freedom 🤔
Video later deleted after millions of views#Viral #Debate #Freedom #WomenRights #Trending pic.twitter.com/V5t6TF2qK8
ವಿಡಿಯೊದಲ್ಲಿ ಏನಿದೆ?
ತುಂಡುಡುಗೆ ತೊಟ್ಟು ರಸ್ತೆಯಲ್ಲಿ ರೀಲ್ಸ್ ಮಾಡುತ್ತಿದ್ದ ಯುವತಿಯ ಬಳಿ ಅಜ್ಜಿಯೊಬ್ಬರು ಬಂದು, ಬಟ್ಟೆಯ ಬಗ್ಗೆ ಮಾತನಾಡಿತ್ತಿರುವುದು ಸನ್ನೆಯ ಮುಖೇನ ತಿಳಿಯುತ್ತದೆ. ಯುವತಿಯ ಉಡುಗೆ ತೊಡುಗೆ ನೋಡಿ, ಏನಮ್ಮಾ ನಿನ್ನ ವೇಷ?, ದಯವಿಟ್ಟು ಉಡುಗೆ ತೊಡುಗೆ ಬದಲಿಸು ಎಂದು ಬುದ್ಧಿ ಮಾತು ಹೇಳಿದ್ದಾರೆ. ಅದಕ್ಕೆ ಆ ಯುವತಿ ನಗುತ್ತಾ ಪ್ರತಿಕ್ರಿಯಿಸಿ ಹಾಗೆಯೇ ಅಲ್ಲಿಂದ ತೆರಳಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಯುವತಿಗೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ವಿಡಿಯೊ ಡಿಲೀಟ್ ಮಾಡಿದ್ದಾಳೆ.
ಜಗತ್ತನ್ನೇ ಅಳಿಸಿದ್ದ ಪಂಚ್ ಬಾಳಲ್ಲಿ ತಂಗಾಳಿ: ಜಪಾನ್‌ನ ವೈರಲ್ ಮರಿ ಕೋತಿಗೆ ಸಿಕ್ಕೇ ಬಿಟ್ಳು ಗರ್ಲ್‌ಫ್ರೆಂಡ್