Shahid Afridi: ಮುಂದಿನ ಇಮ್ರಾನ್ ಖಾನ್ ಆಗ್ತಾರಾ ಶಾಹಿದ್ ಅಫ್ರಿದಿ? ಪಾಕ್ ಮುಂದಿನ ಪಿಎಂ ಈತನೇನಾ?
Pak News PM: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಭಾರತದ ಸೇನಾ ಪ್ರತಿಕ್ರಿಯೆಯನ್ನು ಟೀಕಿಸಿ, ಭಾರತದ ವಿರುದ್ಧ ವಿವಾದಾತ್ಮಕ ಭಾಷಣ ಮಾಡಿದ್ದಾರೆ. ಕರಾಚಿಯಲ್ಲಿ ಭಾನುವಾರ ನಡೆದ “ಯೌಮ್-ಎ-ತಶಾಕುರ್” (ಕೃತಜ್ಞತಾ ದಿನ) ರ‍್ಯಾಲಿಯಲ್ಲಿ ಮಾತನಾಡಿದ ಅಫ್ರಿದಿ, ಭಾರತ ನಡೆಸಿದ "ಆಪರೇಷನ್ ಸಿಂಧೂರ" ಟೀಕಿಸಿದ್ದಾರೆ.

ಶಾಹಿದ್ ಅಫ್ರಿದಿ

ಕರಾಚಿ: ಪಾಕಿಸ್ತಾನದ ಮಾಜಿ ಕ್ರಿಕೆಟಿಗ (Former Pakistani cricketer ) ಶಾಹಿದ್ ಅಫ್ರಿದಿ (Shahid Afridi) ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ (Pahalgam Terror Attack) ಭಾರತದ ಸೇನಾ ಪ್ರತಿಕ್ರಿಯೆಯನ್ನು ಟೀಕಿಸಿ, ಭಾರತದ ವಿರುದ್ಧ ವಿವಾದಾತ್ಮಕ ಭಾಷಣ ಮಾಡಿದ್ದಾರೆ. ಕರಾಚಿಯಲ್ಲಿ ಭಾನುವಾರ ನಡೆದ “ಯೌಮ್-ಎ-ತಶಾಕುರ್” (ಕೃತಜ್ಞತಾ ದಿನ) ರ‍್ಯಾಲಿಯಲ್ಲಿ ಮಾತನಾಡಿದ ಅಫ್ರಿದಿ, ಭಾರತ ನಡೆಸಿದ "ಆಪರೇಷನ್ ಸಿಂಧೂರ" ಟೀಕಿಸಿದ್ದಾರೆ. ಭಾರತ ನಡೆಸಿದ ದಾಳಿಯಿಂದಾಗಿ ಮಕ್ಕಳು ಸೇರಿದಂತೆ ಹಿರಿಯರು ಸಾವಿಗೀಡಾಗಿದ್ದು, ನಾಗರಿಕರ ಸಮಾಜದ ಸ್ಥಿತಿ ಶೋಚೀಯವಾಗಿದೆ ಎಂದು ಭಾರತವನ್ನು ದೂಷಿಸಿದ್ದು, ಪಾಕಿಸ್ತಾನ ಸೇನೆಯ ಪ್ರತೀಕಾರವನ್ನು ಶ್ಲಾಘಿಸಿದ್ದಾರೆ.
ನಮ್ಮ ಸೇನೆ ಹೇಳಿತ್ತು, ನಾವು ಪ್ರತಿಕ್ರಿಯಿಸಿದಾಗ ಇಡೀ ವಿಶ್ವವೇ ನೋಡುತ್ತದೆ ಎಂದು, ಈಗ ಇಡೀ ಜಗತ್ತು ಅದನ್ನು ನೋಡಿದೆ" ಎಂದು ಅಫ್ರಿದಿ ಹೇಳಿದ್ದಾರೆ. ನೀವು ನಮ್ಮ ಸೇನೆಯನ್ನು ಎದುರಿಸಿ ನಿಮ್ಮ ಶಕ್ತಿ ತೋರಿಸಿ. ನಮ್ಮ ಮಕ್ಕಳನ್ನು, ಪಾಕಿಸ್ತಾನದ ಭವಿಷ್ಯವನ್ನೇ ಕೊಂದಿರಿ, ನಾಗರಿಕರ ಮೇಲೆ ದಾಳಿ ಮಾಡಿದ್ದೀರಿ. ನಾನು, ನನ್ನ ಕುಟುಂಬ, ಸ್ನೇಹಿತರು, ಪಾಕಿಸ್ತಾನದ ಜನರು ಮತ್ತು ವಿದೇಶದಲ್ಲಿರುವ ಪಾಕಿಸ್ತಾನಿಗಳ ಪರವಾಗಿ ಪಾಕಿಸ್ತಾನ ಸೇನೆಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಮ್ಮ ಸೇನೆಗೆ ನನ್ನ ಸಲಾಮ್,” ಎಂದು ಅಫ್ರಿದಿ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Pakistan Diplomate Expels: ಪಾಕಿಸ್ತಾನಿ ರಾಜತಾಂತ್ರಿಕ ಅಧಿಕಾರಿಗೆ ಭಾರತ ತೊರೆಯಲು 24 ಗಂಟೆಗಳ ಗಡುವು
ಭಾರತ ಯಾವುದೇ ಸಾಕ್ಷ್ಯವಿಲ್ಲದೆ ಪಾಕಿಸ್ತಾನವನ್ನು ದೂಷಿಸುತ್ತದೆ ಎಂದು ಅಫ್ರಿದಿ ಆರೋಪಿಸಿದರು. ಇಂದು ನಾವೆಲ್ಲರೂ ಶಾಂತಿಗಾಗಿ ಒಗ್ಗಟ್ಟಿನಿಂದ ಬಂದಿದ್ದೇವೆ. ನಮ್ಮ ದೇಶ ಶಾಂತಿಯನ್ನು ಕಲಿಸುತ್ತದೆ. ಯಾವುದೇ ತನಿಖೆಯಿಲ್ಲದೆ, 10 ನಿಮಿಷಗಳಲ್ಲಿ ಪಾಕಿಸ್ತಾನವನ್ನು ದೂಷಿಸುವವರು, ನಾವು ಬಹಳಾ ದಿನಗಳಿಂದ ಭಯೋತ್ಪಾದನೆಗೆ ಬಲಿಯಾಗಿದ್ದೇವೆ ಎಂಬುದನ್ನು ನೆನಪಿಡಲಿ. ನಾವು ಸಾವಿರಾರು ಜನರನ್ನು ಕಳೆದುಕೊಂಡಿದ್ದೇವೆ” ಎಂದು ಅವರು ಹೇಳಿದರು.
Shahid Afridi leading a so called 'victory rally' in Karachi.
— Mufaddal Vohra (@mufaddal_vohra) May 12, 2025
- Just like their army, everyone is delusional. pic.twitter.com/OnHRvmbzax
ಅಫ್ರಿದಿಯ ಟೀಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ. ಅನೇಕರು ಅಫ್ರಿದಿಯನ್ನು ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಹೋಲಿಸಿದ್ದಾರೆ, ಅವರು ಕ್ರಿಕೆಟ್ ಸ್ಟಾರ್‌ನಿಂದ ಜನಪ್ರಿಯ ರಾಜಕಾರಣಿಯಾಗಿ ಪರಿವರ್ತನೆಗೊಂಡಿದ್ದರು. “ಇಂತಹ ಮಾತುಗಳನ್ನು ಆಡಿ, ಮುಂದೆ ಅವರು ರಾಜಕೀಯಕ್ಕೆ ಇಳಿಯಲು ಬಯಸುತ್ತಾರೆ. ಅವರ ಗುರಿ ಮುಂದಿನ ಇಮ್ರಾನ್ ಖಾನ್ ಆಗುವುದು ಎಂದು ಖಚಿತವಾಗಿದೆ” ಎಂದು ಒಬ್ಬ ಎಕ್ಸ್ ಬಳಕೆದಾರ ಬರೆದಿದ್ದಾರೆ. “ಹೊಸ ಇಮ್ರಾನ್ ಖಾನ್ ರೂಪುಗೊಳ್ಳುತ್ತಿದ್ದಾನೆ,” ಎಂದು ಮತ್ತೊಬ್ಬ ಎಕ್ಸ್ ಬಳಕೆದಾರ ಬರೆದಿದ್ದಾರೆ. ಮತ್ತೊಂದು ಕಾಮೆಂಟ್‌ನಲ್ಲಿ, “ಅಫ್ರಿದಿ ಶೀಘ್ರದಲ್ಲೇ ಪಾಕಿಸ್ತಾನದ ಪ್ರಧಾನಿಯಾಗಲಿದ್ದಾರೆ. ಭಾರತವನ್ನು ಟೀಕಿಸುವ ಇಂತಹ ವ್ಯಕ್ತಿಗಳನ್ನು ಅಲ್ಲಿನ ಜನರು ಇಷ್ಟಪಡುತ್ತಾರೆ” ಎಂದು ಹೇಳಲಾಗಿದೆ.
ಪಾಕಿಸ್ತಾನದಲ್ಲಿ ರಾಜಕೀಯವಾಗಿ ಮಾತ್ರವಲ್ಲ, ಕ್ರಿಕೆಟ್ ಕ್ಷೇತ್ರದಲ್ಲೂ ಉದ್ವಿಗ್ನತೆಯ ವಾತಾವರಣವಿದೆ. ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) 2025 ರಾವಲ್ಪಿಂಡಿ ಕ್ರೀಡಾಂಗಣದಲ್ಲಿ ಪುನರಾರಂಭವಾಗಲಿದ್ದ ವೇಳೆ, ಮೇ 8 ರಂದು ಡ್ರೋನ್ ದಾಳಿಯಿಂದ ಕ್ರೀಡಾಂಗಣಕ್ಕೆ ಹಾನಿಯಾಗಿರಬಹುದು ಎಂದು ವರದಿಗಳು ತಿಳಿಸಿವೆ. ಹಾನಿಯಾಗಿದ್ದ ಕ್ರೀಡಾಂಗಣದ ಹೊರಗಿನ ದೃಶ್ಯಗಳು ವೈರಲ್ ಆಗಿವೆ, ಆದರೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಅಧಿಕೃತ ಮಾಹಿತಿ ನೀಡಿಲ್ಲ.
ಮೂರು ದಿನಗಳ ತೀವ್ರ ಘರ್ಷಣೆಯ ನಂತರ, ಭಾರತ ಮತ್ತು ಪಾಕಿಸ್ತಾನ ಶನಿವಾರ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದವು. ಆದರೆ, ಇಸ್ಲಾಮಾಬಾದ್ ಶ್ರೀನಗರ ಮತ್ತು ಇತರ ಪ್ರದೇಶಗಳಲ್ಲಿ ಡ್ರೋನ್ ದಾಳಿಗಳ ಮೂಲಕ ಕದನ ವಿರಾಮವನ್ನು ಉಲ್ಲಂಘಿದೆ ಎಂದು ವರದಿಯಾಗಿದೆ.