ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಯುದ್ಧ ಮತ್ತೆ ಶುರು?: ತೈಲ ಮಾರಾಟ ಪರವಾನಿಗೆ ರದ್ದುಗೊಳಿಸಿ ಇರಾನ್ ಮೇಲೆ ದಾಳಿ ಆರಂಭಿಸಿದ ಅಮೆರಿಕ

ಹೊರ್ಮುಜ್ ಜಲಸಂಧಿಯಲ್ಲಿ ಮೂರು ಹಡಗುಗಳ ಮೇಲೆ ಇರಾನ್ ದಾಳಿ ನಡೆಸಿದ ಬಳಿಕ ಅಮೆರಿಕ ಇರಾನ್ ಮೇಲೆ ಪ್ರತಿ ದಾಳಿ ಪ್ರಾರಂಭಿಸಿದೆ. ಇರಾನ್ ನ ಮಿಲಿಟರಿ ಮತ್ತು ಬಂದರು ತಾಣಗಳ ಮೇಲೆ ಅಮೆರಿಕ ದಾಳಿ ನಡೆಸಿದೆ. ಇದು ಈಗ ಯುದ್ಧ ಮುಕ್ತಾಯ ಒಪ್ಪಂದ ಮಾತುಕತೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇರಾನ್ ಯುದ್ಧ ಮತ್ತೆ ಆರಂಭ

ಸಂಗ್ರಹ ಚಿತ್ರ -

ವಾಷಿಂಗ್ಟನ್: ಯುದ್ಧ ವಿರಾಮ ಒಪ್ಪಂದ (Armistice agreement) ಮಾತುಕತೆಯ ನಡುವೆ ಈಗ ಇರಾನ್ ಬಂದರು (Iran port) ಮತ್ತು ಮಿಲಿಟರಿ ತಾಣಗಳ (Iranian military) ಮೇಲೆ ಅಮೆರಿಕ ದಾಳಿ (US Strike) ನಡೆಸಿದೆ. ಹೊರ್ಮುಜ್ ಜಲಸಂಧಿಯಲ್ಲಿ (Strait of Hormuz) ಮೂರು ಸರಕು ಹಡಗುಗಳ ಮೇಲೆ ಇರಾನ್ ದಾಳಿ ನಡೆಸಿದ ಬಳಿಕ ಅಮೆರಿಕ ಈ ದಾಳಿ ನಡೆಸಿದೆ. ಕಳೆದ ಫೆಬ್ರವರಿ ತಿಂಗಳಾಂತ್ಯದಲ್ಲಿ ಪ್ರಾರಂಭವಾಗಿರುವ ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವಿನ ಯುದ್ಧ ಸತತ ಮಾತುಕತೆಯ ಪರಿಣಾಮವಾಗಿ ಒಪ್ಪಂದ ಕೊನೆಗೊಳ್ಳುವ ಹಂತವನ್ನು ತಲುಪಿತ್ತು. ಆದರೆ ಇದೀಗ ಮತ್ತೆ ದಾಳಿ ಆರಂಭವಾಗಿರುವುದು ಒಪ್ಪಂದ ಮಾತುಕತೆಗಳ ಮೇಲೆ ಪರಿಣಾಮ ಬೀರುವ ಆತಂಕವನ್ನು ಉಂಟು ಮಾಡಿದೆ.

ಹೊರ್ಮುಜ್ ಜಲಸಂಧಿಯಲ್ಲಿ ಮೂರು ಸರಕು ಹಡಗುಗಳ ಮೇಲೆ ಬುಧವಾರ ಇರಾನ್ ದಾಳಿ ನಡೆಸಿದೆ. ಇದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಲು ಪ್ರಾರಂಭಿಸಿದ ಯುಎಸ್ ಸೇನಾ ಪಡೆಯು ಇರಾನ್ ಮೇಲೆ ದಾಳಿಗಳನ್ನು ನಡೆಸಿತ್ತು. ಈ ಸಂಘರ್ಷ ಕೆಲವು ಗಂಟೆಗಳ ಕಾಲ ಮುಂದುವರಿಯುವ ಸಾಧ್ಯತೆ ಇದೆ ಎಂದು ಯುಎಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇಂಡೋನೇಷ್ಯಾದಲ್ಲಿ ಬಿಜು ಪಟ್ನಾಯಕ್ ಕೊಡುಗೆ ಸ್ಮರಿಸಿದ ನರೇಂದ್ರ ಮೋದಿ: ಎರಡು ರಾಷ್ಟ್ರಗಳನ್ನು ಬೆಸೆದ ಐತಿಹಾಸಿಕ ಕಥೆ

ಪರಮಾಣು ಅಭಿವೃದ್ಧಿ ಚಟುವಟಿಕೆಯನ್ನು ನಿಲ್ಲಿಸಲು ಇರಾನ್ ಒಪ್ಪಿಗೆ ನೀಡಿದ ಬಳಿಕ ಹೊರ್ಮುಜ್ ಜಲಸಂಧಿಯನ್ನು ಎಲ್ಲಾ ಹಡಗುಗಳಿಗೂ ತೆರೆಯುವ ಮಾತುಕತೆಯ ಮಧ್ಯೆ ಈ ದಾಳಿ ನಡೆದಿದೆ. ಇದರಿಂದ ಕಳೆದೆ ಫೆಬ್ರವರಿ ತಿಂಗಳಾಂತ್ಯದಲ್ಲಿ ಪ್ರಾರಂಭವಾಗಿರುವ ಉದ್ವಿಗ್ನತೆ ಕೆಲಕಾಲ ಮುಂದುವರಿಯುವ ಸಾಧ್ಯತೆ ಇದೆ. ಯಾಕೆಂದರೆ ಇದೀಗ ಮಧ್ಯಂತರ ಒಪ್ಪಂದದಡಿಯಲ್ಲಿ ಇರಾನಿನ ತೈಲ ಮಾರಾಟಕ್ಕೆ ಅವಕಾಶ ನೀಡಿದ ಪರವಾನಗಿಯನ್ನು ಯುನೈಟೆಡ್ ಸ್ಟೇಟ್ಸ್ ರದ್ದುಗೊಳಿಸಿದೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಯುಎಸ್ ಸೆಂಟ್ರಲ್ ಕಮಾಂಡ್, ಅಂತಾರಾಷ್ಟ್ರೀಯ ಜಲಮಾರ್ಗದಲ್ಲಿ ನಾಗರಿಕರನ್ನು ಹೊಂದಿದ್ದ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವುದಕ್ಕೆ ಪ್ರತಿಯಾಗಿ ದಾಳಿಗಳನ್ನು ನಡೆಸಲು ಅಮೆರಿಕನ್ ಪಡೆಗಳು ಪ್ರಾರಂಭಿಸಿವೆ. ಇರಾನಿನ ಮಿಲಿಟರಿ ಸ್ಥಳಗಳು, ಬಂದರು ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ದಾಳಿಗಳು ಕೆಲವು ಗಂಟೆಗಳ ಕಾಲ ಮುಂದುವರಿಯುವ ಸಾಧ್ಯತೆಯಿದೆ ಎಂದು ಹೇಳಿದೆ. ಕ್ವೆಶ್ಮ್ ಮತ್ತು ಬಂದರ್ ಅಬ್ಬಾಸ್‌ನಲ್ಲಿ ಸ್ಫೋಟಗಳಾಗಿರುವುದಾಗಿ ಇರಾನ್ ಮಾಧ್ಯಮಗಳು ಹೇಳಿವೆ.

ಹೊರ್ಮುಜ್ ಜಲ ಮಾರ್ಗದಲ್ಲಿ ಇರಾನ್ ಪಡೆಯು ಮೂರು ಟ್ಯಾಂಕರ್ ಗಳ ಮೇಲೆ ದಾಳಿ ನಡೆಸಿದ ಬಳಿಕ ಅಮೆರಿಕವು ಆಗಸ್ಟ್ 21 ರವರೆಗೆ ಇರಾನಿನ ತೈಲ ಉತ್ಪಾದನೆ, ವಿತರಣೆ ಮತ್ತು ಮಾರಾಟಕ್ಕೆ ಅಧಿಕಾರ ನೀಡಿದ ಪರವಾನಗಿಯನ್ನು ರದ್ದುಗೊಳಿಸಿದೆ. ಜಲಸಂಧಿಯಲ್ಲಿ ಇರಾನ್‌ನ ಕ್ರಮಗಳು ಸ್ವೀಕಾರಾರ್ಹವಲ್ಲ ಮತ್ತು ಇದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಇರಾನ್‌ನ ಉಪ ವಿದೇಶಾಂಗ ಸಚಿವ ಕಜೆಮ್ ಘರಿಬಬಾದಿ, ಇದು ಖಂಡನೀಯ. ಅಮೆರಿಕ ಮಧ್ಯಂತರ ಒಪ್ಪಂದವನ್ನು ಉಲ್ಲಂಘಿಸಿದೆ. ಇದರ ಪರಿಣಾಮಗಳಿಗೆ ಅಮೆರಿಕ ಸರ್ಕಾರವೇ ಜವಾಬ್ದಾರನಗಿದೆ ಎಂದು ಹೇಳಿದೆ.

ಹೊರ್ಮುಜ್ ಜಲ ಸಂಧಿಯಲ್ಲಿ ನಡೆದಿರುವ ದಾಳಿಯ ಕುರಿತು ಹೇಳಿಕೆ ನೀಡಿರುವ ಯುನೈಟೆಡ್ ಕಿಂಗ್‌ಡಮ್ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್ ಸೆಂಟರ್, ಓಮನ್ ಕರಾವಳಿಯಲ್ಲಿ ಪ್ರಯಾಣಿಸುತ್ತಿದ್ದ ಒಂದು ಟ್ಯಾಂಕರ್‌ ಮೇಲೆ ದಾಳಿಯಾಗಿದ್ದು, ಇದರಿಂದ ಬೆಂಕಿ ಕಾಣಿಸಿಕೊಂಡಿತ್ತು. ಇದರ ಮತ್ತೊಂದು ದ್ರವೀಕೃತ ನೈಸರ್ಗಿಕ ಅನಿಲ ಹೊತ್ತು ಸಾಗುತ್ತಿದ್ದ ಟ್ಯಾಂಕರ್ ಮೇಲೆ ದಾಳಿಯಾಗಿದೆ. ಆದರೆ ಇದರ ಜವಾಬ್ದಾರಿಯನ್ನು ಇರಾನ್ ವಹಿಸಿಕೊಂಡಿಲ್ಲ. ಎರಡು ಹಡಗುಗಳು ಹಾನಿಗೀಡಾಗಿದೆ ಎಂದು ಹೇಳಿದೆ.

ಜಲ ಮಾರ್ಗದಲ್ಲಿ ಅನುಮೋದಿತ ಹಡಗುಗಳ ಸಂಚಾರಕ್ಕೆ ಮಾತ್ರ ಟೆಹರಾನ್ ಪದೇ ಪದೇ ಹೇಳುತ್ತಿದೆ. ಇದರಿಂದ ಒಮಾನಿ ಕರಾವಳಿಯ ಬಳಿ ಪರ್ಯಾಯ ಮಾರ್ಗವನ್ನು ಬಳಸಿದ ಇತರ ಹಡಗುಗಳ ಮೇಲೆ ದಾಳಿಯಾಗಿರುವ ಶಂಕೆ ವ್ಯಕ್ತವಾಗಿದೆ. ಯುಕೆ ಏಜೆನ್ಸಿ ನೀಡಿರುವ ಮಾಹಿತಿ ಪ್ರಕಾರ ಮೂರು ದಾಳಿಗಳು ಒಮಾನ್ ಕರಾವಳಿಯಲ್ಲಿ ನಡೆದಿವೆ. ಈ ಹಡಗುಗಳು ಒಮಾನ್ ಬಳಿಯ ಮಾರ್ಗವನ್ನು ಬಳಸುತ್ತಿತ್ತು ಎಂಬುದನ್ನು ಇದು ಸೂಚಿಸಿವೆ.

ಘಟನೆ ಕುರಿತು ಹೇಳಿಕೆ ನೀಡಿರುವ ಕತಾರ್‌ನ ವಿದೇಶಾಂಗ ಸಚಿವಾಲಯದ ವಕ್ತಾರ ಮಜೀದ್ ಅಲ್-ಅನ್ಸಾರಿ, ಈ ದಾಳಿಯಲ್ಲಿ ಇರಾನ್ ಕತಾರ್ ಟ್ಯಾಂಕರ್ ಅಲ್ ರೆಕಯ್ಯತ್ ಅನ್ನು ಗುರಿಯಾಗಿಸಿಕೊಂಡಿದೆ. ಇದು ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ. ಇದಕ್ಕೆ ಸಂಪೂರ್ಣವಾಗಿ ಇರಾನ್ ಹೊಣೆಯಾಗಿದೆ ಎಂದು ತಿಳಿಸಿದೆ.

ಮತ್ತೆ ಸದ್ದು ಮಾಡಿದ ಸಿಂಧೂ ನದಿ ಜಲ ಒಪ್ಪಂದ; ಭಾರತದ ವಿರುದ್ಧ ಯುದ್ಧಕ್ಕೆ ಸಿದ್ಧ ಎಂದ ಪಾಕಿಸ್ತಾನ ಸೇನೆ

ಯುಎಸ್ ನೌಕಾಪಡೆಯ ಮೇಲ್ವಿಚಾರಣೆಯಲ್ಲಿರುವ ನಡೆಯುತ್ತಿರುವ ಬಹುರಾಷ್ಟ್ರೀಯ ಸಂಸ್ಥೆಯಾದ ಜಂಟಿ ಕಡಲ ಮಾಹಿತಿ ಕೇಂದ್ರವು ಸೋಮವಾರ ಹೊರ್ಮುಜ್ ಜಲ ಮಾರ್ಗದಲ್ಲಿ ಸಾಗುವ ಹಡಗುಗಳಲ್ಲಿ ಇರಾನಿನ ಮಾರ್ಗದಲ್ಲಿ ಉತ್ತರಕ್ಕೆ ಹೋಗುವ ಹಡಗುಗಳು ಟೆಹರಾನ್ ಗೆ ಹಾಗೂ ದಕ್ಷಿಣಕ್ಕೆ ಪ್ರಯಾಣಿಸುವವರು ಒಮಾನ್ ಮತ್ತು ಯುಎಸ್‌ ಜೊತೆ ಸಂವಹನ ನಡೆಸುವಂತೆ ಸೂಚಿಸಿತ್ತು.