Sunita Williams: ಮುಂದಿನ 45 ದಿನ ಸುನೀತಾ ವಿಲಿಯಮ್ಸ್ ಹೊರಗೆ ಬರುವಂತಿಲ್ಲ!
ಬಾಹ್ಯಾಕಾಶದಿಂದ ಹಿಂದಿರುಗುವ ಗಗನಯಾತ್ರಿಗಳಿಗೆ ಭೂಮಿಯ ವಾತಾವರಣಕ್ಕೆ ಒಗ್ಗಿಕೊಳ್ಳಲು ಬೇಕಾದ ಎಲ್ಲಾ ರೀತಿಯ ಸಹಾಯವನ್ನು ಅಲ್ಲಿ ಮಾಡಲಾಗುತ್ತದೆ. ಹಾಗೆಯೇ ಸುನೀತಾ ವಿಲಿಯಮ್ಸ್ ಸೇರಿ ನಾಲ್ವರು ಗಗನಯಾತ್ರಿಗಳಿಗೆ ಹ್ಯೂಸ್ಟನ್ನ ಜಾನ್ಸನ್ ಸ್ಪೇಸ್ ಸೆಂಟರ್ನಲ್ಲಿ ರಿಹ್ಯಾಬಿಲಿಟೇಷನ್ (Rehabilitation) ನಡೆಯಲಿದೆ. ಇಲ್ಲಿ ಮುಂದಿನ 45 ದಿನಗಳ ಕಾಲ ಇವರ ಆರೋಗ್ಯದ ಮೇಲೆ ನಿಗಾ ಇಡಲಾಗುತ್ತದೆ.


ನ್ಯೂಯಾರ್ಕ್: ಅಮೆರಿಕದ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ (Sunita Williams) ಹಾಗೂ ಬುಚ್ ವಿಲ್ಮೋರ್ (Butch Wilmore) ಕೊನೆಗೂ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಅವರಿದ್ದ ಸ್ಪೇಸ್‌ಎಕ್ಸ್ ಕ್ಯಾಪ್ಸೂಲ್ (SpaceX Capsule) ಫ್ಲೋರಿಡಾ ಕಡಲಿಗೆ ಬಂದಿಳಿದಿದೆ. ಸ್ಪೇಸ್‌ಎಕ್ಸ್‌ನ ಸಿಬ್ಬಂದಿ ನೌಕೆಯಲ್ಲಿ ಅವರಿದ್ದಲ್ಲಿಗೆ ಧಾವಿಸಿ ಸುನೀತಾ ಹಾಗೂ ಬುಚ್‌ರನ್ನು ಕ್ಯಾಪ್ಸೂಲ್‌ನಿಂದ ಇಳಿಸಿ ಹ್ಯೂಸ್ಟನ್ ಜಾನ್ಸನ್ ಸ್ಪೇಸ್ ಸೆಂಟರ್ಗೆ ಕರೆದುಕೊಂಡು ಹೋಗಿದ್ದಾರೆ. ಸುನೀತಾ ಹಾಗೂ ಬುಚ್‌ರ ಆರೋಗ್ಯ ಸಂಬಂಧಿ ಮುಂದಿನ ಪ್ರಕ್ರಿಯೆಗಳಿಗೆ ಚಾಲನೆ ನೀಡಲಾಗಿದೆ.
ಗಗನಯಾತ್ರಿಗಳು ಭೂಮಿಯ ಗುರುತ್ವಾಕರ್ಷಣೆಗೆ ಒಗ್ಗಿಕೊಳ್ಳಲು ಬಾಹ್ಯಾಕಾಶ ಸಂಸ್ಥೆಗಳು ಪುನರ್ವಸತಿ ಕೇಂದ್ರ ತೆರೆಯುತ್ತವೆ. ಬಾಹ್ಯಾಕಾಶದಿಂದ ಹಿಂದಿರುಗುವ ಗಗನಯಾತ್ರಿಗಳಿಗೆ ಭೂಮಿಯ ವಾತಾವರಣಕ್ಕೆ ಒಗ್ಗಿಕೊಳ್ಳಲು ಬೇಕಾದ ಎಲ್ಲಾ ರೀತಿಯ ಸಹಾಯವನ್ನು ಅಲ್ಲಿ ಮಾಡಲಾಗುತ್ತದೆ. ಹಾಗೆಯೇ ಸುನೀತಾ ವಿಲಿಯಮ್ಸ್ ಸೇರಿ ನಾಲ್ವರು ಗಗನಯಾತ್ರಿಗಳಿಗೆ ಹ್ಯೂಸ್ಟನ್ನ ಜಾನ್ಸನ್ ಸ್ಪೇಸ್ ಸೆಂಟರ್ನಲ್ಲಿ ರಿಹ್ಯಾಬಿಲಿಟೇಷನ್ (Rehabilitation) ನಡೆಯಲಿದೆ. ಇಲ್ಲಿ ಮುಂದಿನ 45 ದಿನಗಳ ಕಾಲ ಇವರ ಆರೋಗ್ಯದ ಮೇಲೆ ನಿಗಾ ಇಡಲಾಗುತ್ತದೆ.
ಚಿಕಿತ್ಸೆ ಮತ್ತು ತರಬೇತಿ
ಮೂಳೆ, ಸ್ನಾಯು ಸವೆತ ಆಗದಂತೆ ಚಿಕಿತ್ಸೆ
ಬೇಬಿ ಸಿಂಡ್ರೋಮ್ನಿಂದ ಹೊರಬರುವಂತೆ ಸೂಕ್ತ ಚಿಕಿತ್ಸೆ
ದೇಹದ ಸಮತೋಲನ ಕಾಪಾಡಿಕೊಳ್ಳುವಂತೆ ಸೂಕ್ತ ಚಿಕಿತ್ಸೆ
ದೃಷ್ಟಿ ದೋಷ ಉಂಟಾಗದಂತೆ ತಜ್ಞ ವೈದ್ಯರಿಂದ ಚಿಕಿತ್ಸೆ
ನೆಲದ ಮೇಲೆ ನಿಧಾನವಾಗಿ ನಡೆಯಲು ಸಹಾಯ
ಮೊದಲು ಮೃದುವಾದ ಮೇಲ್ಮೈ ಜಾಗದಲ್ಲಿ ನಡೆಸುವುದು
ಕಾಲುಗಳನ್ನು ಬಲಪಡಿಸಲು ವ್ಯಾಯಾಮ ಮಾಡಿಸುವುದು
ಬ್ಯಾಲೆನ್ಸ್ ಕಾಯ್ದುಕೊಳ್ಳಲು ತರಬೇತಿ ನೀಡುವುದು
ಆಹಾರ, ಅಗತ್ಯ ಔಷಧಿಗಳನ್ನು ದೇಹದ ಪರಿಸ್ಥಿತಿಗೆ ಅನುಗುಣವಾಗಿ ನೀಡುವುದು
ಪುನರ್ವಸತಿ ಹಲವಾರು ವಾರಗಳವರೆಗೆ ನಡೆಯುವುದು
ನಾಸಾ ವೈದ್ಯಕೀಯ ತಂಡದಿಂದ ನಿರಂತರ ಮೇಲ್ವಿಚಾರಣೆ
ಸುನಿತಾ ವಿಲಿಯಮ್ಸ್ 9 ತಿಂಗಳ ಸುದೀರ್ಘ ಅವಧಿಯಲ್ಲಿ ಸ್ಪೇಸ್‌ನಲ್ಲಿ ವಿವಿಧ ಕಾರ್ಯಗಳಲ್ಲಿ ಸಕ್ರಿಯರಾಗಿದ್ದರು. ಬಾಹ್ಯಾಕಾಶ ನಿಲ್ದಾಣದ ನಿರ್ವಹಣೆ ಮತ್ತು ಕ್ಲೀನಿಂಗ್ ಮಾಡಿದ್ದರು. ಫುಟ್ಬಾಲ್ ಮೈದಾನದ ಗಾತ್ರದಲ್ಲಿರುವ ಈ ನಿಲ್ದಾಣಕ್ಕೆ ನಿರಂತರ ನಿರ್ವಹಣೆ ಅಗತ್ಯ. ಅವರು ಅಲ್ಲಿರುವ ಹಳೆಯ ಉಪಕರಣಗಳನ್ನು ಬದಲಾಯಿಸಲು ಸಹಾಯ ಮಾಡಿದರು. ಜೊತೆಗೆ ಒಂದಷ್ಟು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಿದರು. ಬಾಹ್ಯಾಕಾಶ ನಿಲ್ದಾಣದ ಹಲವಾರು ಪ್ರಮುಖ ಸಂಶೋಧನಾ ಪ್ರಾಜೆಕ್ಟ್ಗಳಲ್ಲಿ ಕೆಲಸ ಮಾಡಿದ್ದರು. ಗುರುತ್ವಾಕರ್ಷಣೆಯು ಬಾಹ್ಯಾಕಾಶದಲ್ಲಿನ Fluid systems ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಮೇಲೂ ಸಂಶೋಧನೆ ಮಾಡಿದರು. ಬಾಹ್ಯಾಕಾಶದಲ್ಲಿ ವಾಟರ್ ರಿಕವರಿ ಮತ್ತು Fuel cellಗಳ ಹೊಸ ರಿಯಾಕ್ಟರ್‌ಗಳನ್ನು ಅಭಿವೃದ್ಧಿಪಡಿಸುವ ಕುರಿತು ಸಂಶೋಧನೆ ನಡೆಸಿದ್ದರು.
ಇದನ್ನೂ ಓದಿ: Sunita Williams: ಸುನೀತಾ ವಿಲಿಯಮ್ಸ್ ಇದ್ದ ಕ್ಯಾಪ್ಸೂಲ್ ನೀರಿಗೆ ಇಳಿದಿದ್ದೇಕೆ?