Year Ender 2025: ಈ ವರ್ಷ ಪ್ರವಾಸಿಗರು ಅತೀ ಹೆಚ್ಚು ಭೇಟಿ ಕೊಟ್ಟ ಸ್ಥಳಗಳಿವು; ಪಟ್ಟಿಯಲ್ಲಿ ಭಾರತದ ಯಾವ ತಾಣವಿದೆ?
2025ರ ಟ್ರಾವಲ್ ಡಾಟಾ ಮತ್ತು ಟ್ರೆಂಡ್‌ಗಳನ್ನು ಆಧರಿಸಿ ಜನರು ಸರ್ಚ್ ಮಾಡಿದ, ಬುಕ್ ಮಾಡಿದ ಮತ್ತು ಭೇಟಿ ನೀಡಿದ ಪ್ರವಾಸಿ ಸ್ಥಳಗಳ ಮಾಹಿತಿಯನ್ನು ನಾವಿಲ್ಲಿ ನಿಮಗಾಗಿ ನೀಡುತ್ತಿದ್ದೇವೆ. ಈ ಎಲ್ಲ ಪ್ರವಾಸಿ ಸ್ಥಳಗಳು ತಮ್ಮಲ್ಲಿರುವ ವೈಶಿಷ್ಟ್ಯಗಳಿಂದ ವಿಶ್ವದ ಪ್ರವಾಸಿಗಳನ್ನು ತಮ್ಮತ್ತ ಸೆಳೆಯುವಲ್ಲಿ 2025ರಲ್ಲಿ ಯಶಸ್ವಿಯಾಗಿವೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಡಿ. 12: ಮಾನವ ಸಂಘಜೀವಿ ಮಾತ್ರವಲ್ಲದೇ ಸಂಚಾರ ಪ್ರಿಯನೂ ಹೌದು. ಹೊಸ ಹೊಸ ಸ್ಥಳಗಳನ್ನು ಆವಿಷ್ಕಾರ ಮಾಡುವುದು, ಹೊಸ ಸ್ಥಳಗಳಿಗೆ ಭೇಟಿ ಕೊಟ್ಟು ಸಮಯವನ್ನು ಕಳೆಯುವುದು ನಮಗೆಲ್ಲ ಪ್ರಿಯವಾದ ಹವ್ಯಾಸವೇ ಹೌದು. ಹಾಗಾಗಿ ಜಗತ್ತಿನಲ್ಲೇ ಪ್ರವಾಸೋದ್ಯಮ(Toursim) ಎಂಬುದು ಅತೀ ದೊಡ್ಡ ವ್ಯವಹಾರವಾಗಿ ಬೆಳೆದು ನಿಂತಿದೆ. ಇದೀಗ 2025ಕ್ಕೆ ಬೈ ಬೈ ಹೇಳುವ ಹೊತ್ತು. ಈ ಸಂದರ್ಭದಲ್ಲಿ 2025ರಲ್ಲಿ ಘಟಿಸಿದ ಬೆಳವಣಿಗೆ, ನಡೆದ ವಿಚಾರಗಳನ್ನು ಮೆಲುಕು ಹಾಕುವುದು ಸಾಮಾನ್ಯ ಪರಿಪಾಠವಾಗಿದೆ. ಇದೇ ರೀತಿಯಲ್ಲಿ 2025ರಲ್ಲಿ ಪ್ರವಾಸಿಗರು ಅತೀ ಹೆಚ್ಚು ಭೇಟಿ ನೀಡಿದ ವಿಶ್ವದ ಪ್ರವಾಸಿ ಸ್ಥಳಗಳ(Tourist Place) ಮಾಹಿತಿ ಇಲ್ಲಿದೆ.
2025ರ ಟ್ರಾವಲ್ ಡಾಟಾ ಮತ್ತು ಟ್ರೆಂಡ್‌ಗಳನ್ನು ಆಧರಿಸಿ ಜನರು ಸರ್ಚ್ ಮಾಡಿದ, ಬುಕ್ ಮಾಡಿದ ಮತ್ತು ಭೇಟಿ ನೀಡಿದ ಪ್ರವಾಸಿ ಸ್ಥಳಗಳ ಮಾಹಿತಿಯನ್ನು ನಾವಿಲ್ಲಿ ನಿಮಗಾಗಿ ನೀಡುತ್ತಿದ್ದೇವೆ. ಈ ಎಲ್ಲ ಪ್ರವಾಸಿ ಸ್ಥಳಗಳು ತಮ್ಮಲ್ಲಿರುವ ವೈಶಿಷ್ಟ್ಯಗಳಿಂದ ವಿಶ್ವದ ಪ್ರವಾಸಿಗಳನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿವೆ.
ಬಾರ್ಸಿಲೋನಾ, ಸ್ಪೇನ್
2025ರಲ್ಲಿ ಅತೀ ಹೆಚ್ಚು ಬುಕ್ಕಿಂಗ್ ಆದ ಪ್ರವಾಸಿ ಸ್ಥಳಗಳಲ್ಲಿ ಬಾರ್ಸಿಲೋನಾ ಮೊದಲ ಸ್ಥಾನದಲ್ಲಿದೆ. ತನ್ನಲ್ಲಿರುವ ಆರ್ಕಿಟೆಕ್ಚರ್ ಸೌಂದರ್ಯತೆಯಿಂದಾಗಿ ಸ್ಪೇನ್‌ನ ಈ ಪ್ರವಾಸಿ ತಾಣ ಪ್ರವಾಸಿ ಪ್ರಿಯರನ್ನು ಪ್ರತೀ ವರ್ಷ ತನ್ನತ್ತ ಆಹ್ವಾನಿಸುತ್ತದೆ. ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿರುವ ಸ್ವೀಪಿಂಗ್ ಕರ್ವ್‌ನಿಂದ ಕಾಸ್ಮೋಪಾಲಿಟನ್ ಬೀಚ್ ವರೆಗೆ ಬಾರ್ಸಿಲೋನದಲ್ಲಿ ಪ್ರವಾಸಿಗರಿಗೆ ಏನುಂಟು? ಏನಿಲ್ಲ? ಎಂಬ ಭಾವನೆಯನ್ನು ಕೊಡುತ್ತದೆ. ಪ್ರವಾಸಿಗರು ಇಲ್ಲಿಗೆ ಭೇಟಿ ಕೊಟ್ಟಾಗ ಸಗ್ರಾಡ ಫೆಮಿಲಿಯಾ ಮ್ತು ಪಾರ್ಕ್ ಗ್ವೆಲ್, ಗೋಥಿಕ್ ಕ್ವಾರ್ಟರ್‌ನ ವಿಂಡಿಂಗ್ ಆಲಿ ವೇಸ್, ಲೈವ್ಲಿ ಟಾಪಸ್ ಬಾರ್‌ಗಳು ಮತ್ತು ಮೆಡಿಟರೇನಿಯನ್ ಸನ್ ಶೈನ್‌ಗೆ ಮಾರು ಹೋಗುತ್ತಾರೆ. ಈ ಎಲ್ಲ ವೈಶಿಷ್ಟ್ಯಗಳಿಂದಾಗಿ ಬಾರ್ಸಿಲೋನ 2025ರಲ್ಲೂ ಡಿಸೈನ್ ಪ್ರಿಯರ, ಫುಡ್ಡಿಗಳ ಮತ್ತು ಬೀಚ್ ಪ್ರಿಯರ ನೆಚ್ಚಿನ ತಾಣವಾಗಿ ಮೂಡಿ ಬಂದಿದೆ.
ಪ್ಯಾರಿಸ್, ಪ್ರಾನ್ಸ್
ಪ್ಯಾರಿಸ್ 2025ರಲ್ಲೂ ಪ್ರವಾಸಿ ಪ್ರಿಯರ ನೆಚ್ಚಿನ ತಾಣವಾಗಿ ಮೂಡಿಬಂದಿದೆ. ಯುರೋ ಮಾನಿಟರ್ ಇಂಟರ್ ನ್ಯಾಷನಲ್ ಪ್ರಕಾರ, 2025ರಲ್ಲಿ 18 ಮಿಲಿಯನ್ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ್ದಾರೆ. ಆರ್ಟ್, ರೋಮ್ಯಾನ್ಸ್, ಹಿಸ್ಟರಿ ಮತ್ತು ಫ್ಯಾಶನ್ ಪ್ರಿಯರ ನೆಚ್ಚಿನ ತಾಣವಾಗಿ ಫ್ರಾನ್ಸ್ ದೇಶದ ರಾಜಧಾನಿ ತನ್ನ ಛಾಪನ್ನು ಉಳಿಸಿಕೊಂಡಿದೆ.
ಈ ವರ್ಷ ಗಮನ ಸೆಳೆದ ಟಿವಿ ಕಾರ್ಯಕ್ರಮಗಳಿವು! ಇಲ್ಲಿದೆ ಪಟ್ಟಿ
ಲಂಡನ್, ಇಂಗ್ಲೆಂಡ್
ಲಂಡನ್ ಪಾಲಿಗೆ 2025 ಇನ್ನೊಂದು ಯಶಸ್ವಿ ಪ್ರವಾಸಿ ವರ್ಷವಾಗಿ ಬದಲಾಗಿದೆ. ಜಾಗತಿಕವಾಗಿ ಅತೀ ಹೆಚ್ಚು ಸರ್ಚ್‌ಗೆ ಒಳಗಾದ ತಾಣವಾಗಿಯೂ ಲಂಡನ್ ಮೂಡಿ ಬಂದಿದೆ. ಟ್ರಿಪ್ ಅಡ್ವೈಸರ್‌ನ ಟ್ರಾವೆಲರ್ಸ್ ವಾಯ್ಸ್ ಅವಾರ್ಡ್‌ನಲ್ಲಿ 2025ರ ಜಾಗತಿಕ ಟ್ರಾವೆಲ್ ಡೆಸ್ಟಿನೇಷನ್‌ನಲ್ಲಿ ಲಂಡನ್ ಪಾಲು ಪಡೆದುಕೊಂಡಿದೆ. ಇತಿಹಾಸ ಮತ್ತು ಆಧುನಿಕತೆಯ ಸಮಮಿಶ್ರಣ, ಶತಮಾನಗಳ ಇತಿಹಾಸವನ್ನು ಹೊಂದಿರುವ ಪ್ರವಾಸಿ ತಾಣಗಳು ಮತ್ತು ವಸ್ತು ಸಂಗ್ರಹಾಲಯಗಳು, ಥಿಯೇಟರ್‌ಗಳು, ಫುಡ್, ಫ್ಯಾಶನ್ ಮತ್ತು ಬಹು ವೈವಿಧ್ಯಮಯ ಶಕ್ತಿ ಲಂಡನ್ ಅನ್ನು ವಿಶ್ವದ ಜನಪ್ರಿಯ ಪ್ರವಾಸಿ ತಾಣವನ್ನಾಗಿಸಿದೆ.
ಜಪಾನ್
2025ರಲ್ಲೂ ಸಹ ಜಪಾನ್ ಪ್ರವಾಸಿ ಪ್ರಿಯರ ನೆಚ್ಚಿನ ತಾಣವಾಗಿ ಉಳಿದುಕೊಂಡಿದೆ. ಇಲ್ಲಿನ ಸೀಮಾತೀತ ಪಾರಂಪರಿಕ ಮತ್ತು ಆಧುನಿಕತೆಯ ಸಮ್ಮಿಶ್ರಣಕ್ಕೆ ಪ್ರವಾಸಿಗರು ಮಾರು ಹೋಗುತ್ತಾರೆ. ಪ್ರಾಚೀನ ಮಂದಿರಗಳು, ಮನ ಸೆಳೆಯುವ ಭೂಪ್ರದೇಶ ಮತ್ತು ಋತುಮಾನಕ್ಕೆ ಅನುಗುಣವಾಗಿ ತನ್ನಲ್ಲಿ ಸೌಂದರ್ಯವನ್ನು ಅಳವಡಿಸಿಕೊಳ್ಳುವ ಇಲ್ಲಿನ ಪ್ರಾಕೃತಿಕ ಸೌಂದರ್ಯಕ್ಕೆ ವಿಶ್ವದ ಪ್ರವಾಸಿಗರು ಮಾರು ಹೋಗುತ್ತಾರೆ. ಇನ್ನು, ಆಧುನಿಕತೆಯ ವಿಚಾರಕ್ಕೆ ಬಂದರೆ ಹೈ ಸ್ಪೀಡ್ ರೈಲುಗಳು ಮತ್ತು ಅಲ್ಟ್ರಾ ಸಾಮರ್ಥ್ಯದ ಮೂಲಭೂತ ಸೌಕರ್ಯ ಪ್ರವಾಸಿಗರ ಭೇಟಿಯನ್ನು ಸ್ಮರಣೀಯವನ್ನಾಗಿಸುತ್ತದೆ.
ಗ್ರೀಸ್
2025ರಲ್ಲಿ ಗ್ರೀಸ್ ಪ್ರವಾಸೋದ್ಯಮ ಪಟ್ಟಿಯಲ್ಲಿ ಇನ್ನಷ್ಟು ಎತ್ತರದ ಸ್ಥಾನಕ್ಕೇರಿದೆ. ಕಾಂಡೇ ನಾಸ್ಟ್ ಟ್ರಾವೆಲ್ಲರ್ ರೀಡರ್ಸ್ ಚಾಯ್ಸ್ ಅವಾರ್ಡ್‌ನಲ್ಲಿ ಗ್ರೀಸ್ ಈ ವರ್ಷ ಪ್ರವಾಸಿಗರಿಂದ ಅತೀ ಹೆಚ್ಚು ವೋಟ್ ಪಡೆದುಕೊಂಡ ತಾಣವಾಗಿ ಮೂಡಿಬಂದಿದೆ. ಮನಮೋಹಕ ದ್ವೀಪ ಪ್ರದೇಶಗಳು, ಸಮ್ಮೊಹಕ ಬೀಚ್ ಗಳು, ಸುಂದರ ಗ್ರಾಮಗಳು, ಪ್ರಾಚೀನ ರಚನೆಗಳು ಮತ್ತು ಸಮ್ಮೋಹಕ ಮೆಡಿಟರೇನಿಯನ್ ಸಂಸ್ಕೃತಿ ಗ್ರೀಸ್ ಸೊಬಗಿಗೆ ಇನ್ನಷ್ಟು ಮೆರುಗು ನೀಡಿದೆ.
ಜೈಪುರ, ಭಾರತ
2025ರಲ್ಲಿ ಜಾಗತಿಕ ಟ್ರಾವೆಲ್ ಕವರೇಜ್‌ನಲ್ಲಿ ಭಾರತದ ರಾಜಸ್ಥಾನದಲ್ಲಿರುವ ಜೈಪುರ ವಿಶ್ವದ ಟಾಪ್ 5 ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಪಿಂಕ್ ಸಿಟಿಯೆಂದೇ ಹೆಸರುವಾಸಿಯಾಗಿರುವ ಜೈಪುರದಲ್ಲಿ ಯುನೆಸ್ಕೊ ಮಾನ್ಯತೆಯ ಮೂರು ವಿಶ್ವ ಪಾರಂಪರಿಕ ತಾಣಗಳಿವೆ. ದಿ ವಾಲ್ಡ್ ಸಿಟಿ, ದಿ ಮೆಜೆಸ್ಟಿಕ್ ಅಂಬರ್ ಪೋರ್ಟ್ ಮತ್ತು ಖಗೋಳ ವಿಸ್ಮಯವಾಗಿರುವ ಜಂತರ್ ಮಂತರ್ ಈ ಮೂರು ಪ್ರಮುಖ ತಾಣಗಳಾಗಿವೆ. ಇವುಗಳನ್ನು ಹೊರತುಪಡಿಸಿ, ವೈವಿಧ್ಯಮಯ ಬಝಾರ್ ಗಳು (ಟೆಕ್ಸ್ ಟೈಲ್ಸ್, ಜ್ಯುವೆಲ್ಲರಿ, ಹ್ಯಾಂಡಿ ಕ್ರಾಫ್ಟ್), ರಾಜರ ಕಾಲದ ಅರಮನೆಗಳು, ಹೆರಿಟೇಜ್ ಹೊಟೇಲ್‌ಗಳು ಮತ್ತು ಇಲ್ಲಿ ಸಿಗುವ ಬಾಯಲ್ಲಿ ನೀರೂರಿಸುವ ಖಾದ್ಯಗಳು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ.