ಸೋಶಿಯಲ್ ಮೀಡಿಯಾಗಳಿಗೆ ಹೊಸ ರೂಲ್ಸ್ ತಂದ ಕೇಂದ್ರ ಸರ್ಕಾರ
ಭಾರತ ಸರ್ಕಾರ ಮೆಸೇಜಿಂಗ್ ಅಪ್ಲಿಕೇಷನ್ ಸಂಬಂಧಿಸಿದಂತೆ ಒಂದು ಹೊಸ ಪ್ರಮುಖ ನಿರ್ದೇಶನವನ್ನು ಜಾರಿ ಮಾಡಿದೆ. ಇದರಿಂದಾಗಿ ಬಳಸುವ ಕೋಟ್ಯಂತರ ಜನರ ಬಳಕೆ ವಿಧಾನದಲ್ಲಿ ಬದಲಾವಣೆ ಆಗುವುದು ಅನಿವಾರ್ಯವಾಗಲಿದೆ. ಇನ್ನು ಮುಂದೆ ಈ ಮೆಸೇಜಿಂಗ್ ಆ್ಯಪ್‌ಗಳನ್ನು ನೀವು ಬಳಸಬೇಕಾದರೆ ನಿಮ್ಮ ಬಳಿ ಆಕ್ಟಿವ್ ಸಿಮ್ ಕನೆಕ್ಷನ್ ಇರಬೇಕಾಗಿರುವುದು ಕಡ್ಡಾಯ.