ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಿಇಎಸ್ 2026ರ 'ದಿ ಫಸ್ಟ್ ಲುಕ್'ನಲ್ಲಿ ‘ಎಐ ಬದುಕಿಗೆ ಸಂಗಾತಿ’ ಎಂಬ ಪರಿಕಲ್ಪನೆ ಪ್ರದರ್ಶಿಸಿದ ಸ್ಯಾಮ್‌ಸಂಗ್

ಸ್ಯಾಮ್‌ಸಂಗ್‌ನ ಡಿವೈಸ್ ಎಕ್ಸ್‌ ಪೀರಿಯನ್ಸ್ (ಡಿಎಕ್ಸ್) ವಿಭಾಗದ ಸಿಇಓ ಮತ್ತು ಮುಖ್ಯಸ್ಥ ರಾದ ಟಿ.ಎಂ. ರೋಹ್ ಅವರು 'ದ ಫಸ್ಟ್ ಲುಕ್' ಅನ್ನು ಉದ್ಘಾಟಿಸಿ ಮಾತನಾಡಿ, ಕಂಪನಿಯ ಎಐ ಸಾಮರ್ಥ್ಯವನ್ನು ಮತ್ತು ವಿಶಾಲವಾದ ಎಐ-ಆಧರಿತ ಕನೆಕ್ಟೆಡ್ ಎಕೋಸಿಸ್ಟಮ್‌ ಮೂಲಕ ಸ್ಯಾಮ್‌ಸಂಗ್ ಹೇಗೆ ಬಳಕೆದಾರರ ದೈನಂದಿನ ಜೀವನದಲ್ಲಿ ಎಐ ಸಂಗಾತಿಯ ಅನುಭವವನ್ನು ನೀಡಬಲ್ಲದು ಎಂಬುದನ್ನು ವಿವರಿಸಿದರು.

‘ಎಐ ಬದುಕಿಗೆ ಸಂಗಾತಿ’ ಎಂಬ ಪರಿಕಲ್ಪನೆ ಪ್ರದರ್ಶಿಸಿದ ಸ್ಯಾಮ್‌ಸಂಗ್

-

Ashok Nayak
Ashok Nayak Jan 5, 2026 8:43 PM

ಜ.7 ರವರೆಗೆ ನಡೆಯಲಿರುವ ಕಂಪನಿಯ ವಿಶೇಷ ಉತ್ಪನ್ನ ಪ್ರದರ್ಶನದಲ್ಲಿ ಮುಂದಿನ ಪೀಳಿಗೆಯ ಎಐ ಚಾಲಿತ ಸಾಧನಗಳು ಮತ್ತು ಉತ್ಪನ್ನಗಳ ಅನಾವರಣ.

ಬೆಂಗಳೂರು: ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಇಂದು ಲಾಸ್ ವೇಗಾಸ್‌ನ ವಿನ್ ಹೋಟೆಲ್‌ನ ಲಾಟೂರ್ ಬಾಲ್‌ರೂಮ್‌ನಲ್ಲಿ ನಡೆದ ತನ್ನ ಸಿಇಎಸ್® 2026 ಕಾರ್ಯಕ್ರಮದ 'ದಿ ಫಸ್ಟ್ ಲುಕ್' ಸಮಾರಂಭದಲ್ಲಿ ತನ್ನ “ಕಂಪ್ಯಾನಿಯನ್ ಟು ಎಐ ಲಿವಿಂಗ್” (ಎಐ ಬದುಕಿಗೆ ಸಂಗಾತಿ) ಪರಿಕಲ್ಪನೆಯನ್ನು ಅನಾವರಣಗೊಳಿಸಿದೆ. ಎಐ ಈಗ ಸ್ಯಾಮ್‌ಸಂಗ್‌ನ ಫಿಲಾ ಸಫಿಯ ಭಾಗವಾಗಿದ್ದು, ಈ ಕಾರ್ಯಕ್ರಮದಲ್ಲಿ ಕೂಡ ಎಐ ಮೇಲೆ ಗಮನ ಕೇಂದ್ರೀಕರಿಸ ಲಾಗಿದೆ. ಎಐ ಈಗ ಕಂಪನಿಯ ಸಂಶೋಧನೆ ಮತ್ತು ಅಭಿವೃದ್ಧಿ, ಉತ್ಪನ್ನಗಳ ತಯಾರಿಕೆ, ಕಾರ್ಯಾಚರಣೆಗಳು ಮತ್ತು ಬಳಕೆದಾರರ ಅನುಭವವನ್ನು ಒಂದಕ್ಕೊಂದು ಸಂಪರ್ಕಿಸುವ ಅಡಿಪಾಯವಾಗಿ ಮಾರ್ಪಾಡಾಗಿದೆ.

ಸ್ಯಾಮ್‌ಸಂಗ್‌ನ ಡಿವೈಸ್ ಎಕ್ಸ್‌ ಪೀರಿಯನ್ಸ್ (ಡಿಎಕ್ಸ್) ವಿಭಾಗದ ಸಿಇಓ ಮತ್ತು ಮುಖ್ಯಸ್ಥ ರಾದ ಟಿ.ಎಂ. ರೋಹ್ ಅವರು 'ದ ಫಸ್ಟ್ ಲುಕ್' ಅನ್ನು ಉದ್ಘಾಟಿಸಿ ಮಾತನಾಡಿ, ಕಂಪನಿ ಯ ಎಐ ಸಾಮರ್ಥ್ಯವನ್ನು ಮತ್ತು ವಿಶಾಲವಾದ ಎಐ-ಆಧರಿತ ಕನೆಕ್ಟೆಡ್ ಎಕೋಸಿಸ್ಟಮ್‌ ಮೂಲಕ ಸ್ಯಾಮ್‌ಸಂಗ್ ಹೇಗೆ ಬಳಕೆದಾರರ ದೈನಂದಿನ ಜೀವನದಲ್ಲಿ ಎಐ ಸಂಗಾತಿಯ ಅನುಭವವನ್ನು ನೀಡಬಲ್ಲದು ಎಂಬುದನ್ನು ವಿವರಿಸಿದರು. ಈ ವಿಧಾನವು ಬಳಕೆದಾರರಿಗೆ ತಂತ್ರಜ್ಞಾನದಿಂದ ಕೇವಲ ಬೇಸಿಕ್ ಸೌಕರ್ಯ ಪಡೆಯುವ ಬದಲಾಗಿ ಹೆಚ್ಚಿನ ಸೌಲಭ್ಯ ಗಳನ್ನು ಪಡೆಯಲು ಅನುವು ಮಾಡಿ ಕೊಡುತ್ತದೆ ಮತ್ತು ಹೆಚ್ಚು ಅರ್ಥಪೂರ್ಣ ಕ್ಷಣ ಗಳನ್ನು ತಮ್ಮದಾಗಿಸಿಕೊಳ್ಳುವ ಅವಕಾಶಗಳನ್ನು ಒದಗಿಸುತ್ತದೆ.

ಈ ಕುರಿತು ಮಾತನಾಡಿದ ಟಿ.ಎಂ.ರೋಹ್ ಅವರು, "ಸ್ಯಾಮ್‌ಸಂಗ್ ಮೊಬೈಲ್, ವಿಶುವಲ್ ಡಿಸ್‌ಪ್ಲೇ, ಗೃಹೋಪಯೋಗಿ ಉಪಕರಣಗಳು ಮತ್ತು ಸೇವೆ ವಿಭಾಗಗಳಲ್ಲಿ ಹೆಚ್ಚು ಏಕೀಕೃತ ಮತ್ತು ಹೆಚ್ಚು ವೈಯಕ್ತೀಕರಿಸಿದ ಅನುಭವವನ್ನು ಒದಗಿಸುತ್ತಿದೆ. ನಮ್ಮ ಜಾಗತಿಕ ಕನೆಕ್ಟೆಡ್ ಎಕೋಸಿಸ್ಟಮ್‌ ಮೂಲಕ ಮತ್ತು ಎಲ್ಲಾ ವರ್ಗಗಳಲ್ಲಿ ಎಐ ಅನ್ನು ಅಳವಡಿಸುವ ಮೂಲಕ, ಸ್ಯಾಮ್‌ಸಂಗ್ ಹೆಚ್ಚು ಅರ್ಥಪೂರ್ಣ ದೈನಂದಿನ ಎಐ ಅನುಭವಗಳನ್ನು ನೀಡುವಲ್ಲಿ ಮುಂಚೂಣಿಯಲ್ಲಿದೆ" ಎಂದು ಹೇಳಿದರು.

ಇದನ್ನೂ ಓದಿ: Samsung: ಆಕರ್ಷಕ ವಿನ್ಯಾಸ, ಎಐ ಫೀಚರ್ ಗಳು, ಉತ್ತಮ ಬಾಳಿಕೆ ಮತ್ತು ಓಐಎಸ್ ಆಧರಿತ ನೋ ಶೇಕ್ ಕ್ಯಾಮೆರಾ ಹೊಂದಿರುವ ಗ್ಯಾಲಕ್ಸಿ ಎ17 5ಜಿ ಬಿಡುಗಡೆ ಮಾಡಿದ ಸ್ಯಾಮ್‌ಸಂಗ್

ಮನರಂಜನಾ ಸಂಗಾತಿ: ವೀಕ್ಷಣೆಗಿಂತ ಮೀರಿದ ಅನುಭವ ಒದಗಿಸುತ್ತಿದೆ

ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್‌ನ ವಿಶುವಲ್ ಡಿಸ್‌ಪ್ಲೇ (ವಿಡಿ) ವ್ಯವಹಾರದ ಅಧ್ಯಕ್ಷ ಮತ್ತು ಮುಖ್ಯಸ್ಥರಾದ ಎಸ್‌ಡಬ್ಲ್ಯೂ ಯಾಂಗ್ ಮತ್ತು ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಅಮೆರಿಕದ ವಿಡಿ ವ್ಯವಹಾರದ ಮುಖ್ಯ ಮಾರ್ಕೆಟಿಂಗ್ ಮತ್ತು ಪಾಲುದಾರಿಕೆ ಅಧಿಕಾರಿ ಸುಖಮನಿ ಮೋಹ್ತಾ ಅವರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಅವರು ಸ್ಯಾಮ್‌ಸಂಗ್‌ನ ಡಿಸ್‌ಪ್ಲೇ ಗಳು ಅತ್ಯುತ್ತಮ ಹಾರ್ಡ್‌ವೇರ್ ಮತ್ತು ವಿಶುವಲ್ ಇಂಟೆಲಿಜೆನ್ಸ್ ಅನ್ನು ಬಳಸಿಕೊಂಡು ಹೇಗೆ ನೈಜ ಮನರಂಜನಾ ಸಂಗಾತಿಯಾಗಿ ರೂಪುಗೊಂಡಿವೆ ಎಂಬುದನ್ನು ವಿವರಿಸಿದರು.

ಟಿವಿ ಉದ್ಯಮವನ್ನು ಇಪ್ಪತ್ತು ವರ್ಷಗಳ ಕಾಲ ಮುನ್ನಡೆಸಿದ ಅನುಭವ ಹೊಂದಿರುವ ಸ್ಯಾಮ್‌ಸಂಗ್ ಪೂರ್ಣ ಪ್ರಮಾಣದ ಎಐ ಟಿವಿ ಶ್ರೇಣಿಯನ್ನು ನಿರ್ಮಿಸಿದ್ದು, ಇದು ಬಳಕೆದಾರರು ತಮ್ಮ ಟಿವಿಯನ್ನು ನೋಡುವ ಬಗೆಯನ್ನು ಸಂಪೂರ್ಣವಾಗಿ ಹೊಸತಾಗಿ ಬದಲಿಸುತ್ತಿದೆ.

130-ಇಂಚಿನ ಮೈಕ್ರೋ ಆರ್ ಜಿ ಬಿ ಡಿಸ್‌ಪ್ಲೇ ಶ್ರೇಣಿಯ ಕೇಂದ್ರಬಿಂದುವಾಗಿದ್ದು, ಇದು ಗಾತ್ರ ಮತ್ತು ಚಿತ್ರದ ಗುಣಮಟ್ಟದಲ್ಲಿ ಒಂದು ಹಂತ ಮೇಲಕ್ಕೆ ಕೊಂಡೊಯ್ದಿದೆ. 130-ಇಂಚಿನ ಮೈಕ್ರೋ ಆರ್ ಜಿ ಬಿ ಬಣ್ಣಗಳ ಹೊಸ ಅಧ್ಯಾಯವನ್ನು ಆರಂಭಿಸಿದ್ದು, ಇದು ಸ್ಯಾಮ್‌ಸಂಗ್ ಟಿವಿಗಳಲ್ಲಿ ಈವರೆಗೆ ಕಂಡುಬರದ ಅತ್ಯಂತ ವಿಸ್ತಾರವಾದ ಮತ್ತು ವಿವರವಾದ ಬಣ್ಣದ ಸಾಮರ್ಥ್ಯ ಹೊಂದಿದೆ.

ಇದರ 'ಟೈಮ್‌ಲೆಸ್ ಫ್ರೇಮ್' ವಿನ್ಯಾಸವು ಗೊಂದಲಗಳನ್ನು ಕಡಿಮೆ ಮಾಡುತ್ತದೆ ಮತ್ತು ಚಿತ್ರವು ಅತ್ಯಂತ ಸಾಗಸಾಗಿ ಕಾಣಲು ಅನುವು ಮಾಡಿಕೊಡುತ್ತದೆ. ಮೈಕ್ರೋ ಗಾತ್ರದ ಆರ್ ಜಿ ಬಿ ಬೆಳಕಿನ ಮೂಲವು ಅಭೂತಪೂರ್ವ ಚಿತ್ರ ಗುಣಮಟ್ಟವನ್ನು ನೀಡುತ್ತದೆ, ಇದರಲ್ಲಿನ ಪ್ರತಿಯೊಂದು ಸೂಕ್ಷ್ಮ ಕೆಂಪು, ಹಸಿರು ಮತ್ತು ನೀಲಿ ಡಯೋಡ್‌ ಗಳು ಸ್ವತಂತ್ರವಾಗಿ ಹೊಳೆಯುವ ಮೂಲಕ ಬಣ್ಣವನ್ನು ಅದರ ಶುದ್ಧ ಮತ್ತು ಅತ್ಯಂತ ನೈಸರ್ಗಿಕ ರೂಪದಲ್ಲಿ ಕಾಣಿಸುತ್ತವೆ. 'ಮೈಕ್ರೋ ಆರ್ ಜಿ ಬಿ ಎಐ ಎಂಜಿನ್ ಪ್ರೊ' ಪ್ರತೀ ದೃಶ್ಯದಲ್ಲಿ ಆರ್ ಜಿ ಬಿ ಬಣ್ಣಗಳ ನಿಖರತೆಯನ್ನು ದಾಟಿಸುತ್ತದೆ ಮತ್ತು ಅದ್ಭುತವಾದ ಚಿತ್ರ ಗುಣಮಟ್ಟವನ್ನು ಒದಗಿಸುತ್ತದೆ.

ಈ ವೀಕ್ಷಣಾ ಅನುಭವವನ್ನು ಹೆಚ್ಚಿಸುವ ವಿಷನ್ ಎಐ ಕಂಪಾನಿಯನ್ (ವಿಎಸಿ) ತಂತ್ರ ಜ್ಞಾನವು ಬಳಕೆದಾರರಿಗೆ ಪೂರ್ಣ ಮನರಂಜನಾ ಸಂಗಾತಿಯಾಗಿ ಕಾರ್ಯನಿರ್ವಹಿಸುತ್ತದೆ; ಇದು ಮನೆಯ ಯಾವುದೇ ಭಾಗದಲ್ಲಿ ಇದ್ದರೂ ವೀಕ್ಷಣೆ ಸುಲಭ ಮಾಡುತ್ತದೆ, ಊಟದ ಪದ್ಧತಿಯನ್ನು ಮತ್ತು ಮನಸ್ಥಿತಿಯನ್ನು ಸುಧಾರಿಸುತ್ತದೆ.

ಇದರೊಂದಿಗೆ, ಬಳಕೆದಾರರು ಏನನ್ನು ವೀಕ್ಷಿಸಬೇಕು, ಏನನ್ನು ತಿನ್ನಬೇಕು ಮತ್ತು ಯಾವ ಸಂಗೀತವನ್ನು ಕೇಳಬೇಕು ಎಂಬ ಮಾರ್ಗದರ್ಶನವನ್ನು ಪಡೆಯಬಹುದು. ಇದು ವೀಕ್ಷಣೆ ಯನ್ನು ಮೀರಿದ ಟಿವಿ ಅನುಭವವನ್ನು ಒದಗಿಸುತ್ತದೆ.

ಸ್ಯಾಮ್‌ಸಂಗ್ ವೀಕ್ಷಣಾ ಅನುಭವವನ್ನು ವೈಯಕ್ತೀಕರಿಸಲು ಅದ್ಭುತವಾದ ಮೋಡ್‌ ಗಳನ್ನು ಸಹ ನೀಡುತ್ತದೆ. ಫುಟ್‌ಬಾಲ್ ಅಭಿಮಾನಿಗಳಿಗಾಗಿ, ಎಐ ಸಾಕರ್ ಮೋಡ್ ಪ್ರೊ ಇದ್ದು, ಈ ಸೌಲಭ್ಯವು ಕ್ರೀಡಾಂಗಣದ ಗುಣಮಟ್ಟಕ್ಕೆ ತಕ್ಕಂತೆ ಚಿತ್ರ ಮತ್ತು ಧ್ವನಿಯನ್ನು ಸರಿಹೊಂದಿಸುವ ಮೂಲಕ ಅತ್ಯಾಕರ್ಷಕ ಅನುಭವವನ್ನು ನೀಡುತ್ತದೆ. ಎಐ ಸೌಂಜ್ ಕಂಟ್ರೋಲರ್ ಪ್ರೊ ನಿಮಗೆ ಪ್ರೇಕ್ಷಕರ ಗದ್ದಲ, ಕಾಮೆಂಟರಿ ಅಥವಾ ಹಿನ್ನೆಲೆ ಸಂಗೀತದ ಧ್ವನಿಯನ್ನು ಹೆಚ್ಚಿಸಲು ಅಥವಾ ಕಡಿಮೆ ಮಾಡಲು ಅನುವು ಮಾಡಿಕೊಡುತ್ತದೆ.

ಬಳಕೆದಾರರು ಕೇವಲ ಮೌಖಿಕ ವಿನಂತಿಗಳನ್ನು ಮಾಡಬಹುದು ಮತ್ತು ವಿಎಸಿ ಸೌಲಭ್ಯವಿರುವ ಯಾವುದೇ ಟಿವಿ (ಮೈಕ್ರೋ ಆರ್ ಜಿ ಬಿ ಎಲ್ಇಡಿ, ಮೈಕ್ರೋ ಆರ್ ಜಿ ಬಿ, ಓಎಲ್ಇಡಿ, ನಿಯೋ ಕ್ಯೂಎಲ್ಇಡಿ, ಮಿನಿ ಎಲ್ಇಡಿ ಮತ್ತು ಯು ಎಚ್ ಡಿ ಟಿವಿ ಒಳಗೊಂಡಂತೆ) ಆ ವಿನಂತಿಗಳನ್ನು ಸಂದರ್ಭಕ್ಕೆ ತಕ್ಕಂತೆ ನಿರ್ವಹಿಸುತ್ತದೆ.

ವಿವಿಧ ರೀತಿಯ ಕಾರ್ಯಕ್ರಮಗಳ ಮೂಲಕ ವಿಎಸಿ ಒಟ್ಟಾರೆ ಜೀವನಶೈಲಿ ಅನುಭವ ವನ್ನೂ ತೀವ್ರಗೊಳಿಸುತ್ತದೆ. ಬಳಕೆದಾರರು ಟಿವಿಯಲ್ಲಿ ನೋಡುವ ಖಾದ್ಯಗಳ ರೆಸಿಪಿ ಗಳನ್ನು ತಕ್ಷಣವೇ ಟಿವಿಯನ್ನು ಕೇಳುವ ಮೂಲಕ ತಿಳಿದುಕೊಳ್ಳಬಹುದು ಮತ್ತು ಇದು ಆರೋಗ್ಯ ಮತ್ತು ಫಿಟ್‌ನೆಸ್ ಗುರಿಗಳಿಗೆ ಅನುಗುಣವಾಗಿ ಅತ್ಯಾಧುನಿಕ ಮಾಹಿತಿಯನ್ನು ಬಳಸಿಕೊಂಡು ಶಿಫಾರಸುಗಳನ್ನು ಮಾಡುತ್ತದೆ. ವಿಎಸಿ ಮಲ್ಟಿ-ಡಿವೈಸ್ ಕಾರ್ಯ ವೈಖರಿಯನ್ನು ಸಹ ಹೊಂದಿದ್ದು, ಇದು ಶಿಫಾರಸು ಮಾಡಿದ ರೆಸಿಪಿಗಳನ್ನು ನೇರವಾಗಿ 'ದಿ ಮೂವಿಂಗ್ ಸ್ಟೈಲ್' ನಂತಹ ಸಾಧನಗಳಿಗೆ ಮತ್ತು ಅಡುಗೆ ಮನೆಯ ಉಪಕರಣಗಳಿಗೆ ಕಳುಹಿಸಬಲ್ಲುದು. ಆ ಮೂಲಕ ನಿಜವಾಗಲೂ ಎಐ ಬದುಕಿಗೆ ಕೊಡುಗೆ ನೀಡಬಲ್ಲದು.

ಸ್ಯಾಮ್‌ಸಂಗ್ ಸತತ 11 ವರ್ಷಗಳಿಂದ ಜಾಗತಿಕ ಮಟ್ಟದ ಸೌಂಡ್‌ಬಾರ್ ಮಾರುಕಟ್ಟೆ ಯಲ್ಲಿ ಮುಂಚೂಣಿಯಲ್ಲಿದೆ. ಈ ವರ್ಷ, ಇದು ತನ್ನ ಏಕೀಕೃತ ಎಕೋಸಿಸ್ಟಮ್ ಅನ್ನು ಮತ್ತಷ್ಟು ಬೆಳೆಸಲು ಮ್ಯೂಸಿಕ್ ಸ್ಟುಡಿಯೋ 5 ಮತ್ತು 7 ಎಂಬ ಎರಡು ಹೊಸ ವೈಫೈ ಸ್ಪೀಕರ್‌ಗಳನ್ನು ಪರಿಚಯಿಸುತ್ತಿದೆ. ಈ ಮಾದರಿಗಳು ವಿಶಾಲ ವ್ಯಾಪ್ತಿಯ ಸೌಂಡ್ ಸಿಸ್ಟಮ್ ಸಂಯೋಜನೆಗಳಿಗೆ ಬೆಂಬಲ ಒದಗಿಸುತ್ತವೆ ಮತ್ತು ಯಾವುದೇ ಸ್ಥಳದ ಅಂದವನ್ನು ಹೆಚ್ಚಿಸುತ್ತವೆ. ಪ್ರಸಿದ್ಧ ವಿನ್ಯಾಸಕ ಎರ್ವಾನ್ ಬೌರೌಲೆಕ್ ಅವರ 'ಡಾಟ್ ಡಿಸೈನ್' ಪರಿಕಲ್ಪನೆಯನ್ನು ಈ ಮಾದರಿಗಳು ಹೊಂದಿವೆ.

ಸ್ಯಾಮ್‌ಸಂಗ್ ಬಳಕೆದಾರರ ಮನೆ ಮತ್ತು ಸೌಂದರ್ಯದೊಂದಿಗೆ ಸುಂದರವಾಗಿ ಬೆರೆಯುವ ಅನೇಕ ಹೊಸ ಉತ್ಪನ್ನಗಳನ್ನು ಸಹ ಅನಾವರಣಗೊಳಿಸಿದೆ. ಹೊಸ, ಅತ್ಯಂತ ತೆಳುವಾದ ಓಎಲ್ಇಡಿ ಎಸ್95ಎಚ್, ಆರ್ಟ್ ಗ್ಯಾಲರಿಯಂತಹ ಸೊಬಗನ್ನು ನೀಡುವ ಬೆಜೆಲ್ ಅನ್ನು ಹೊಂದಿದೆ. ಸ್ಯಾಮ್‌ಸಂಗ್‌ನ ಹೊಸ ಪೋರ್ಟಬಲ್ ಪ್ರೊಜೆಕ್ಟರ್, ದಿ ಫ್ರೀಸ್ಟೈಲ್+, ವಿಎಸಿ ಮೂಲಕ ಚಾಲಿತವಾಗಿದ್ದು, ಬಳಕೆದಾರರಿಗೆ ಗೋಡೆಗಳು, ಛಾವಣಿ ಗಳು ಮತ್ತು ಗೋಡೆಯ ಮೂಲೆಗಳಂತಹ ಏರು ತಗ್ಗಿನ ಮೇಲ್ಮೈಗಳಲ್ಲೂ ವೀಡಿಯೋ ವನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತದೆ.

2026ರ ಟಿವಿ ಶ್ರೇಣಿಯು ಎಚ್ ಡಿ ಆರ್10+ ಅಡ್ವಾನ್ಸ್ಡ್ ಅನ್ನು ಬೆಂಬಲಿಸುತ್ತಿದ್ದು, ಇದು ಸುಧಾರಿತ ಬ್ರೈಟ್ ನೆಸ್, ಪ್ರಕಾರ ಆಧಾರಿತ ಆಪ್ಟಿಮೈಸೇಶನ್ ಮತ್ತು ಸುಧಾರಿತ ಗೇಮಿಂಗ್ ಅನುಭವವನ್ನು ನೀಡುತ್ತದೆ.

ಪ್ರಮುಖ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಎಚ್ ಡಿ ಆರ್10+ ಅಳವಡಿಕೆ ಹೆಚ್ಚುತ್ತಿರುವಂತೆ, ಸ್ಯಾಮ್‌ಸಂಗ್ ತನ್ನ 2026ರ ಟಿವಿ ಶ್ರೇಣಿಯಲ್ಲಿ ಎಚ್ ಡಿ ಆರ್10+ ಅಡ್ವಾನ್ಸ್ ಡ್ ಅನ್ನು ಪ್ರಾರಂಭಿಸಿದ ಮೊದಲ ಕಂಪನಿಯಾಗಿ ಹೊರಹೊಮ್ಮಲಿದೆ. ಸ್ಯಾಮ್‌ಸಂಗ್ ತನ್ನ ಎಲ್ಲಾ 2026 ರ ಟಿವಿಗಳಲ್ಲಿ ಕಂಪನಿಯ ಹೊಸ ಸ್ಪೇಷಿಯಲ್ ಸೌಂಡ್ ಸಿಸ್ಟಮ್ ಆದ 'ಎಕ್ಲಿಪ್ಸಾ ಆಡಿಯೋ' ಅನ್ನು ಸಹ ಒಳಗೊಂಡಿದೆ.

ಸ್ಯಾಮ್‌ಸಂಗ್ ತನ್ನ ಅತ್ಯಂತ ಸುಧಾರಿತ ಓಡಿಸ್ಸಿ ಗೇಮಿಂಗ್ ಮಾನಿಟರ್ ಶ್ರೇಣಿಯನ್ನು ಸಹ ಅನಾವರಣಗೊಳಿಸಿದ್ದು, ಇದು ರೆಸಲ್ಯೂಶನ್ ಮತ್ತು ರಿಫ್ರೆಶ್ ರೇಟ್‌ನ ಮಿತಿಗಳನ್ನು ಮೀರುವ ಐದು ಹೊಸ ಮಾದರಿಗಳನ್ನು ಪರಿಚಯಿಸಿದೆ. ಇದರಲ್ಲಿ ಸ್ಯಾಮ್‌ಸಂಗ್‌ನ ಮೊದಲ 6ಕೆ 3ಡಿ ಒಡಿಸ್ಸಿ ಜಿ9 ಪ್ರಮುಖವಾಗಿದೆ. ಈ 2026ರ ಶ್ರೇಣಿಯು ಗೇಮರ್ ಗಳಿಗೆ ಮತ್ತು ಕ್ರಿಯೇಟರ್ ಗಳಿಗೆ ವಿಶ್ವದ ಅತ್ಯುನ್ನತ ತಂತ್ರಜ್ಞಾನವನ್ನು ಒದಗಿಸುತ್ತಿದ್ದು, ಒಡಿಸ್ಸಿ ಜಿ6 ಮತ್ತು ಮೂರು ಹೊಸ ಒಡಿಸ್ಸಿ ಜಿ8 ಮಾಡೆಲ್ ಗಳನ್ನು ಪರಿಚಯಿಸುತ್ತಿದೆ.

ಈ ಎಲ್ಲಾ ಆವಿಷ್ಕಾರಗಳ ಕೇಂದ್ರದಲ್ಲಿ ಅತ್ಯಂತ ಶಕ್ತಿಶಾಲಿ ಟೈಜನ್ ಓಎಸ್ ಇದೆ. ಬಳಕೆ ದಾರರು ಈಗ ಏಳು ವರ್ಷಗಳವರೆಗೆ ಟೈಜನ್ ಓಎಸ್ ಅಪ್‌ಗ್ರೇಡ್‌ಗಳನ್ನು ಹೊಂದಬಹು ದಾಗಿದ್ದು, ಇದು ಟಿವಿಗಳು ಮನೆಗೆ ಬಂದ ದೀರ್ಘಕಾಲದ ನಂತರವೂ ಅಪ್ ಗ್ರೇಡ್ ಹೊಂದುತ್ತಲೇ ಇರುವಂತೆ ನೋಡಿಕೊಳ್ಳುತ್ತದೆ.

ಮನೆಯ ಸಂಗಾತಿ: ದಿನವಿಡೀ ನಿಮಗೆ ಮಾರ್ಗದರ್ಶನ ನೀಡುವ ಕನೆಕ್ಟೆಡ್ ಸ್ಮಾರ್ಟ್ ಉಪಕರಣಗಳು

ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್‌ ನ ಡಿಜಿಟಲ್ ಅಪ್ಲೈಯನ್ಸ್ (ಡಿಎ) ವಿಭಾಗದ ಕಾರ್ಯ ನಿರ್ವಾಹಕ ಉಪಾಧ್ಯಕ್ಷ ಮತ್ತು ಮುಖ್ಯಸ್ಥರಾದ ಚೋಲ್ಗಿ ಕಿಮ್ ಮತ್ತು ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಅಮೆರಿಕಾದ ಡಿಎ ವಿಭಾಗದ ಇಂಟಿಗ್ರೇಟೆಡ್ ಮಾರ್ಕೆಟಿಂಗ್ ಮುಖ್ಯಸ್ಥರಾದ ಎಲಿಜಬೆತ್ ಆಂಡರ್ಸನ್ ಅವರು, ಗೃಹೋಪಯೋಗಿ ಉಪಕರಣಗಳನ್ನು ಒದಗಿಸುವುದರ ಜೊತೆಗೆ ಅವುಗಳನ್ನು ದೈನಂದಿನ ಕೆಲಸಗಳ ಒತ್ತಡವನ್ನು ನಿವಾರಿಸುವ ನೈಜ ಮನೆ ಸಂಗಾತಿಗಳಾಗಿ ರೂಪಿಸುವ ಸ್ಯಾಮ್‌ಸಂಗ್‌ನ ದೃಷ್ಟಿಕೋನವನ್ನು ವಿವರಿಸಿದರು. ಡಿಸೆಂಬರ್ 2025ರ ಹೊತ್ತಿಗೆ, ಸ್ಮಾರ್ಟ್ ಥಿಂಗ್ಸ್ ಈಗ 430 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾ ರರನ್ನು ಹೊಂದಿದೆ ಎಂದು ಚೋಲ್ಗಿ ಕಿಮ್ ಘೋಷಿಸಿದರು.

ಈ ಪರಿಕಲ್ಪನೆಯು ಫ್ಯಾಮಿಲಿ ಹಬ್ ಮೂಲಕ ಸಾಕಾರಗೊಳ್ಳುತ್ತಿದೆ. ಎಐ-ಆಧರಿತ ರೆಫ್ರಿಜರೇಟರ್ ಮನೆಯ ಕೇಂದ್ರಬಿಂದುವಾಗಿದೆ ಮತ್ತು ಈಗ, ಗೂಗಲ್ ಜೆಮಿನಿ ಜೊತೆಗೆ ಸಿದ್ಧಪಡಿಸಲಾದ ಎಐ ವಿಷನ್ ಗೆ ಅಪ್‌ಗ್ರೇಡ್ ಆಗುವುದರ ಮೂಲಕ ಇದು ಎಐ ಭವಿಷ್ಯ ವನ್ನು ಮರು ರೂಪಿಸುತ್ತಿದೆ. ಈ ಅಪ್‌ಡೇಟ್‌ ಮೂಲಕ ಎಐ ವಿಷನ್ ಆಹಾರ ಪದಾರ್ಥ ಗಳನ್ನು ಗುರುತಿಸುವಲ್ಲಿ ಈಗ ಇರುವ ಮಿತಿಗಳನ್ನು ಮೀರಿದ್ದು, ಫ್ರಿಡ್ಜ್‌ ನೊಳಗೆ ಏನನ್ನು ಇರಿಸಲಾಗಿದೆ ಮತ್ತು ಏನನ್ನು ಹೊರತೆಗೆಯಲಾಗಿದೆ ಎಂಬುದನ್ನು ಟ್ರ್ಯಾಕ್ ಮಾಡುತ್ತದೆ, ಇದರಿಂದ ಅಡುಗೆ ಯೋಜನೆ ಮತ್ತು ಆಹಾರ ನಿರ್ವಹಣೆ ಎಂದಿಗಿಂತಲೂ ಸರಳ ವಾಗುತ್ತದೆ. ಫ್ಯಾಮಿಲಿ ಹಬ್ ಇದುವರೆಗೆ 10 ಸಿಇಎಸ್ ಇನ್ನೋವೇಷನ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.

“ವಾಟ್ಸ್ ಫಾರ್ ಟುಡೇ?” ಎಂಬ ವೈಶಿಷ್ಟ್ಯದ ಮೂಲಕ, ಕೆಲವು ರೆಫ್ರಿಜರೇಟರ್‌ ಗಳು ಫ್ರಿಡ್ಜ್‌ ನಲ್ಲಿ ಏನಿದೆ ಎಂಬುದರ ಆಧಾರದ ಮೇಲೆ ರೆಸಿಪಿ ಶಿಫಾರಸುಗಳನ್ನು ಮಾಡುತ್ತವೆ. ರೆಸಿಪಿ ಯನ್ನು ಆಯ್ಕೆ ಮಾಡಿದಾಗ, ಬಳಕೆದಾರರು ಹಂತ-ಹಂತದ ಮಾರ್ಗದರ್ಶಕ ಸೂಚನೆ ಯನ್ನು ಪಡೆಯುತ್ತಾರೆ. ಆಯ್ಕೆ ಮಾಡಿದ ರೆಸಿಪಿಯ ಸಿದ್ಧತೆ ಪ್ರಾರಂಭಿಸಲು ಕನೆಕ್ಟೆಡ್ ಕುಕ್ಕಿಂಗ್ ಉಪಕರಣಗಳಿಗೂ ಸೂಚನೆ ಕಳುಹಿಸಬಹುದು. ವೀಡಿಯೋ ಟು ರೆಸಿಪಿ ವೈಶಿಷ್ಟ್ಯವು ಬಳಕೆದಾರರಿಗೆ ಶಿಫಾರಸು ಮಾಡಿದ ಅಡುಗೆ ವಿಡಿಯೋಗಳನ್ನು ಒದಗಿಸುತ್ತದೆ ಮತ್ತು ಆ ವಿಡಿಯೋಗಳನ್ನು ಸುಲಭವಾಗಿ ಅನುಸರಿಸಬಹುದಾದ ಹಂತಗಳಾಗಿ ಪರಿವರ್ತಿಸುತ್ತದೆ. ಈ ಮೂಲಕ ವೀಡಿಯೋವನ್ನು ಪಾಸ್ ಮಾಡದೆಯೇ ಅಥವಾ ನಿಲ್ಲಿಸದೆಯೇ ಮತ್ತು ವಾಪಸ್ ಹೋಗದೆಯೇ ಅಡುಗೆ ಮಾಡಲು ಸಹಕರಿಸುತ್ತದೆ.

ಸ್ಯಾಮ್‌ಸಂಗ್, ಫುಡ್ ನೋಟ್ ಎಂಬ ಹೊಸ ವಾರಾಂತ್ಯದ ವರದಿ ಫೀಚರ್ ಅನ್ನು ಸಹ ಅನಾವರಣಗೊಳಿಸಿದ್ದು, ಈ ಫೀಚರ್ ಬಳಕೆದಾರರ ಆಹಾರ ಸೇವನೆಯ ಮಾದರಿಗಳು ಮತ್ತು ಯಾವ ವಸ್ತುಗಳನ್ನು ಮರುಖರೀದಿ ಮಾಡಬೇಕು ಎಂಬ ವಿವರಗಳನ್ನು ನೀಡುತ್ತದೆ. ಹೆಚ್ಚುವರಿಯಾಗಿ, ವಾಯ್ಸ್ ಐಡಿ ಮೂಲಕ ಫ್ಯಾಮಿಲಿ ಹಬ್ ಕುಟುಂಬದ ಸದಸ್ಯರ ನಡುವೆ ವ್ಯತ್ಯಾಸವನ್ನು ಗುರುತಿಸಿ ಪ್ರತೀ ವ್ಯಕ್ತಿಗೆ ಸಂಬಂಧಿಸಿದ ಕಂಟೆಂಟ್ ಅನ್ನು ಪ್ರದರ್ಶಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ವಾರದುದ್ದಕ್ಕೂ ಪ್ರಮುಖ ಮಾಹಿತಿಗಳನ್ನು ನೀಡುತ್ತಲೇ ಇರುತ್ತದೆ.

ಲಾಂಡ್ರಿ ರೂಮ್‌ ನಲ್ಲಿ, ಬೀಸ್ಪೋಕ್ ಎಐ ಲಾಂಡ್ರಿ ಕಾಂಬೋ ಸೌಲಭ್ಯವು ಬಟ್ಟೆಗಳನ್ನು ಒಂದು ಯಂತ್ರದಿಂದ ಇನ್ನೊಂದಕ್ಕೆ ವರ್ಗಾಯಿಸುವ ಅಗತ್ಯವನ್ನು ನಿವಾರಿಸುತ್ತದೆ. ಈ ವರ್ಷದ ಈ ಹೊಸ ಮಾದರಿಯು ವೇಗದ ಸೂಪರ್ ಸ್ಪೀಡ್ ಸೈಕಲ್ ಮತ್ತು ಸುಧಾರಿತ ಡ್ರೈಯಿಂಗ್ ಕಾರ್ಯಕ್ಷಮತೆಯೊಂದಿಗೆ ಬರುತ್ತದೆ. ಮೇಲಾಗಿ, ಸ್ಯಾಮ್‌ಸಂಗ್‌ನ ಹೊಸ ಬೀಸ್ಪೋಕ್ ಎಐ ಏರ್ ಡ್ರೆಸ್ಸರ್ ಬಟ್ಟೆಗಳ ಮೇಲಿನ ಸುಕ್ಕುಗಳನ್ನು ಹೋಗಲಾಡಿಸಲು ಬಲವಾದ ಗಾಳಿ ಮತ್ತು ಸ್ಟೀಮ್ ಜೆಟ್‌ಗಳನ್ನು ಬಳಸುವ 'ಆಟೋ ವಿಂಕಲ್ ಕೇರ್' ವೈಶಿಷ್ಟ್ಯವನ್ನು ಹೊಂದಿದೆ. ಈ ವೈಶಿಷ್ಟ್ಯ ಬಳಸುವ ಬಳಕೆದಾರರು ಕೇವಲ ತಮ್ಮ ಶರ್ಟ್ ಅನ್ನು ಹ್ಯಾಂಗ್ ಮಾಡಿ ಕಾಯಬೇಕಷ್ಟೆ.

ಕ್ವಾಲ್ ಕಮ್ ಡ್ರಾಗನ್ ವಿಂಗ್ ಪ್ರೊಸೆಸರ್ ಅನ್ನು ಹೊಂದಿರುವ ಬೀಸ್ಪೋಕ್ ಎಐ ಜೆಟ್ ಬಾಟ್ ಸ್ಟೀಮ್ ಅಲ್ಟ್ರಾ ರೋಬೋಟ್ ವ್ಯಾಕ್ಯೂಮ್ ಅನಾವರಣ ಮಾಡಲಾಗಿದ್ದು, ಇದು ಮನೆಯಲ್ಲಿ ಬಿದ್ದಿರುವ ಕಾಫಿ, ಜ್ಯೂಸ್ ಅಥವಾ ನೀರಿನಂತಹ ದ್ರವಗಳನ್ನು ಗುರುತಿಸಲು ಆಕ್ಟಿವ್ ಸ್ಟೀರಿಯೋ 3ಡಿ ಸೆನ್ಸರ್ ಅನ್ನು ಹೊಂದಿದೆ. ಇದರ ಕ್ಯಾಮೆರಾವು ರೋಬೋಟ್ ವ್ಯಾಕ್ಯೂಮ್ ಅನ್ನು ನೀವು ಮನೆಯಿಂದ ದೂರವಿರುವಾಗ ಮಾನಿಟರಿಂಗ್ ಸಾಧನವಾಗಿ ಬಳಸಲು ಅನುಮತಿಸುತ್ತದೆ, ನಿಮ್ಮ ಸಾಕುಪ್ರಾಣಿಗಳ ಬಗ್ಗೆ ಮತ್ತು ಯಾವುದೇ ಶಂಕಾಸ್ಪದ

ಚಟುವಟಿಕೆಯ ಬಗ್ಗೆ ನಿಮಗೆ ತಿಳಿಸುತ್ತದೆ. ಜೊತೆಗೆ, ಸ್ಮಾರ್ಟ್ ಬಿಕ್ಸ್ ಬಿ ನೊಂದಿಗೆ, ಬಳಕೆದಾರರು ತಮ್ಮ ರೋಬೋಟ್ ವ್ಯಾಕ್ಯೂಮ್‌ನೊಂದಿಗೆ ಸಂಭಾಷಣೆಯ ರೂಪದಲ್ಲಿ ಮಾತನಾಡಿ ಕೆಲಸಗಳನ್ನು ಸುಲಭವಾಗಿ ಮಾಡಿಸಬಹುದು.

ಕೇರ್ ಕಂಪ್ಯಾನಿಯನ್: ರಿಯಾಕ್ಟಿವ್‌ನಿಂದ ಪ್ರೊಆಕ್ಟಿವ್ ಕೇರ್ ಕಡೆಗೆ ಅಂತಿಮವಾಗಿ, ಸ್ಯಾಮ್‌ಸಂಗ್ ರಿಸರ್ಚ್ ಅಮೆರಿಕಾದ (ಎಸ್ ಆರ್ ಎ) ಡಿಜಿಟಲ್ ಹೆಲ್ತ್ ವಿಭಾಗದ ಉಪಾಧ್ಯಕ್ಷ ಮತ್ತು ಮುಖ್ಯಸ್ಥರಾದ ಪ್ರವೀಣ್ ರಾಜಾ ಅವರು ಸ್ಯಾಮ್‌ಸಂಗ್‌ನ ಸಮಗ್ರ ಉತ್ಪನ್ನ ಎಕೋಸಿಸ್ಟಮ್ ಮೂಲಕ ಬುದ್ಧಿವಂತ ಸೌಲಭ್ಯ ಒದಗಿಸುವ ದೀರ್ಘಕಾಲದ ದೃಷ್ಟಿಕೋನವನ್ನು ಅನಾವರಣಗೊಳಿಸಿದರು. ಎಐ ಮೂಲಕ ಫೋನ್‌ಗಳು, ಉಪಕರಣ ಗಳು ಮತ್ತು ಧರಿಸಬಹುದಾದ ಸಾಧನಗಳು ಬಳಕೆದಾರರಿಗೆ ಸಂಭಾವ್ಯ ಆರೋಗ್ಯ ಸಮಸ್ಯೆಗಳು ಉಂಟಾಗುವ ಮೊದಲೇ ಅವುಗಳನ್ನು ತಡೆಯಲು ಸಹಾಯ ಮಾಡುತ್ತವೆ ಎಂದು ತಿಳಿಸಿದರು.

ಮುನ್ನೆಚ್ಚರಿಕೆಯ ಆರೋಗ್ಯ ಕ್ರಮಗಳ ಪ್ರಾಮುಖ್ಯತೆಯನ್ನು ತಿಳಿದಿರುವ ಸ್ಯಾಮ್‌ಸಂಗ್, ಸಂಶೋಧನಾ ಪಾಲುದಾರಿಕೆಗಳ ಮೂಲಕ ಡೆಮೆನ್ಷಿಯಾ ಪತ್ತೆಹಚ್ಚುವ ತನ್ನ ಸಾಮರ್ಥ್ಯ ವನ್ನು ಹೆಚ್ಚಿಸಿಕೊಳ್ಳುತ್ತಿದೆ. ಇದರಲ್ಲಿ ಧರಿಸಬಹುದಾದ ಸಾಧನಗಳು ಮನುಷ್ಯನ ಚಲನ ವಲನ, ಮಾತು ಮತ್ತು ಸಾಮಾಜಿಕ ತೊಡಗಿಸಿಕೊಳ್ಳುವಿಕೆಯಲ್ಲಿನ ಸೂಕ್ಷ್ಮ ಬದಲಾವಣೆ ಗಳನ್ನು ದಾಖಲಿಸುತ್ತವೆ; ಆ ಬದಲಾವಣೆಗಳು ದೀರ್ಘಕಾಲದ ಅರಿವಿನ ಸಾಮರ್ಥ್ಯದ ಬದಲಾವಣೆಗಳ ಸೂಚಕಗಳಾಗಿರಬಹುದಾಗಿದೆ.

ಸ್ಯಾಮ್‌ಸಂಗ್ ನಾಕ್ಸ್ ಮತ್ತು ನಾಕ್ಸ್ ಮ್ಯಾಟ್ರಿಕ್ಸ್ ಈ ಹೈಪರ್-ಪರ್ಸನಲೈಸ್ಡ್ ಎಕೋಸಿಸ್ಟಮ್‌ ನ ಅಡಿಪಾಯವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಪ್ರತಿ ಹಂತದಲ್ಲೂ ಬಳಕೆದಾರರ ಡೇಟಾವನ್ನು ಸುರಕ್ಷಿತವಾಗಿ ರಕ್ಷಿಸುತ್ತವೆ. ಎಐ ನಿರಂತರವಾಗಿ ವಿಕಸನಗೊಳ್ಳುತ್ತಿರುವಂತೆ, ನಾಕ್ಸ್ ಮತ್ತು ನಾಕ್ಸ್ ಮ್ಯಾಟ್ರಿಕ್ಸ್ ಕೂಡ ಅಷ್ಟೇ ವೇಗವಾಗಿ ಬೆಳೆಯುತ್ತಿವೆ. ನಿರಂತರ ಬದಲಾವಣೆಗಳ ನಡುವೆಯೂ ಭದ್ರತೆಯನ್ನು ಕಾಪಾಡಿಕೊಳ್ಳಲು, ಸ್ಯಾಮ್‌ಸಂಗ್‌ನ ಭದ್ರತಾ ವ್ಯವಸ್ಥೆಗಳು ಎಐ ತರಬೇತಿ ಪ್ರಕ್ರಿಯೆಗಳ ಮೂಲಕ ಡೇಟಾವನ್ನು ರಕ್ಷಿಸುತ್ತಿವೆ ಮತ್ತು 'ರೆಡ್ ಟೀಮ್ ಅನಾಲಿಸಿಸ್' ಮೂಲಕ ಮಾದರಿಗಳನ್ನು ಅನುಮೋದಿಸುವ ಮೂಲಕ ಎಐ ಅಪಾಯಗಳನ್ನು ಸತತವಾಗಿ ಗುರುತಿಸುತ್ತಿವೆ.

ಸಿಇಎಸ್ ನಲ್ಲಿನ ಸ್ಯಾಮ್‌ಸಂಗ್ ಎಕ್ಸಿಬಿಷನ್ ಝೋನ್ ಜನವರಿ 4-7 ರವರೆಗೆ ಸಾರ್ವಜನಿಕ ರಿಗೆ ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ, Samsung Newsroom ಗೆ ಭೇಟಿ ನೀಡಿ.