ಎಕ್ಸ್ ಪೋನೆಂಟ್ ಎನರ್ಜಿ ಸಹಯೋಗದಲ್ಲಿ ಸೂಪರ್ ಆಟೋ ಎಫ್ಎಕ್ಸ್ ಗೆ 15 ನಿಮಿಷಗಳ ಅತಿ ಕ್ಷಿಪ್ರ ಚಾರ್ಜಿಂಗ್ ವ್ಯವಸ್ಥೆ ಆರಂಭಿಸಿದ ಮೋಂಟ್ರಾ ಎಲೆಕ್ಟ್ರಿಕ್
ಎಕ್ಸ್ ಪೋನೆಂಟ್ ಎನರ್ಜಿ ಸಂಸ್ಥೆಯ ರಾಪಿಡ್ ಚಾರ್ಜಿಂಗ್ ತಂತ್ರಜ್ಞಾನದ ನೆರವಿನಿಂದ ಪರಿಚಯಿಸ ಲಾಗಿರುವ ಈ ವಿನೂತನ 15 ನಿಮಿಷಗಳ ಕ್ಷಿಪ್ರ ಚಾರ್ಜ್ ಸೌಲಭ್ಯವು ಚಾಲಕರ ಕಾಯುವ ಸಮಯ ಕಡಿತಗೊಳಿಸುತ್ತದೆ; ಗ್ರಾಹಕರು ಹೆಚ್ಚು ಕಾಯುವ ಬದಲು ಹೆಚ್ಚಿನ ಸಮಯ ಕಾರ್ಯಾಚರಿಸಿ ಹೆಚ್ಚು ಹಣ ಗಳಿಸಲು ಸಾಧ್ಯವಾಗುತ್ತದೆ. ಈ ಸೌಲಭ್ಯವು ಆರಂಭಿಕ ಹಂತದಲ್ಲಿ ಬೆಂಗಳೂರು, ಚೆನ್ನೈ ಮತ್ತು ದೆಹಲಿ ಎನ್ಸಿಆರ್ ನ ಗ್ರಾಹಕರಿಗೆ ಲಭ್ಯವಾಗಲಿದೆ.
-
ಬೆಂಗಳೂರು: ಭಾರತದ ಸುಪ್ರಸಿದ್ಧ ಎಲೆಕ್ಟ್ರಿಕ್ ವಾಣಿಜ್ಯ ವಾಹನ ತಯಾರಿಕಾ ಸಂಸ್ಥೆಯಾಗಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಮೋಂಟ್ರಾ ಎಲೆಕ್ಟ್ರಿಕ್ ಕಂಪನಿ, ಎಕ್ಸ್ ಪೋನೆಂಟ್ ಎನರ್ಜಿ ಸಹಯೋಗದಲ್ಲಿ ತನ್ನ ಅತ್ಯಂತ ಜನಪ್ರಿಯ ಪ್ರಯಾಣಿಕ ತ್ರಿಚಕ್ರ ವಾಹನವಾಗಿರುವ ಸೂಪರ್ ಆಟೋ ಎಫ್ಎಕ್ಸ್ ಗಾಗಿ ಅತ್ಯಾಧುನಿಕ 15 ನಿಮಿಷಗಳ ಕ್ಷಿಪ್ರ ಚಾರ್ಜ್ ಸೌಲಭ್ಯವನ್ನು ಆರಂಭಿಸಿದೆ.
ಎಕ್ಸ್ ಪೋನೆಂಟ್ ಎನರ್ಜಿ ಸಂಸ್ಥೆಯ ರಾಪಿಡ್-ಚಾರ್ಜಿಂಗ್ ತಂತ್ರಜ್ಞಾನದ ಶಕ್ತಿಯೊಂದಿಗೆ ಈ ಸೌಲಭ್ಯ ಒದಗಿಸಲಾಗುತ್ತಿದ್ದು, ವಾಹನ ಚಾಲಕರು ಚಾರ್ಜಿಂಗ್ಗಾಗಿ ಸುದೀರ್ಘ ಸಮಯ ಕಾಯುವುದನ್ನು ತಪ್ಪಿಸಿ ಶೀಘ್ರವಾಗಿ ರಸ್ತೆಗೆ ಮರಳಿ ತಮ್ಮ ದೈನಂದಿನ ಕಾಯಕ ಮುಂದುವರಿಸಲು ಇದರಿಂದ ನೆರವಾಗಲಿದೆ. ಈ ಅತ್ಯಾಧುನಿಕ ಸೌಲಭ್ಯವನ್ನು ಆರಂಭಿಕವಾಗಿ ಬೆಂಗಳೂರು, ಚೆನ್ನೈ ಹಾಗೂ ದೆಹಲಿ ಎನ್ಸಿಆರ್ ಭಾಗಗಳಲ್ಲಿ ಜಾರಿಗೆ ತರಲಾಗುತ್ತಿದ್ದು, ಗ್ರಾಹಕರು ಈ ವಾಹನಕ್ಕೆ ಸುಲಭವಾಗಿ ಹೊಂದಾಣಿಕೆಯಾಗುವ ಎಕ್ಸ್ ಪೋನೆಂಟ್ ಎನರ್ಜಿ ಚಾರ್ಜಿಂಗ್ ಹಬ್ಗಳಿಗೆ ತೆರಳಿ ತಮ್ಮ ವಾಹನಗಳನ್ನು ವೇಗವಾಗಿ ಚಾರ್ಜ್ ಮಾಡಿಕೊಳ್ಳಬಹುದಾಗಿದೆ.
ಪ್ರಸ್ತುತ ದಿನಗಳಲ್ಲಿ ಎಲ್5ಎಂ ಎಲೆಕ್ಟ್ರಿಕ್ ಪ್ಯಾಸೆಂಜರ್ ತ್ರಿಚಕ್ರ ವಾಹನಗಳ ವಿಭಾಗದಲ್ಲಿ ಇಂತಹ ಅತಿ ವೇಗದ ಚಾರ್ಜಿಂಗ್ ವ್ಯವಸ್ಥೆಯು ಇನ್ನೂ ಅಪರೂಪದ ಸಂಗತಿಯಾಗಿಯೇ ಉಳಿದುಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ತನ್ನ ಜನಪ್ರಿಯ ಸೂಪರ್ ಆಟೋ ಎಫ್ಎಕ್ಸ್ ವಾಹನದ ಮೂಲಕ ಮೋಂಟ್ರಾ ಎಲೆಕ್ಟ್ರಿಕ್ ಸಂಸ್ಥೆಯು ಇಡೀ ಆಟೋಮೊಬೈಲ್ ರಂಗದಲ್ಲೇ ವಿನೂತನ ಕೊಡುಗೆ ಯೊಂದನ್ನು ಗ್ರಾಹಕರ ಮುಂದಿಡುತ್ತಿದೆ. ಈ ಮೂಲಕ ಕೇವಲ 15 ನಿಮಿಷಗಳಲ್ಲಿ ಬ್ಯಾಟರಿಯನ್ನು ಪೂರ್ಣವಾಗಿ ಕ್ಷಿಪ್ರ ಚಾರ್ಜ್ ಮಾಡಬಹುದಾಗಿದೆ.
ಈ ನೂತನ ಯೋಜನೆಯ ಘೋಷಣೆಯು ಮೋಂಟ್ರಾ ಎಲೆಕ್ಟ್ರಿಕ್ ರೂಪಿಸುವ ಪ್ರತಿಯೊಂದು ಹೊಸ ಯೋಜನೆಗೂ ದಿಕ್ಸೂಚಿಯಾಗಿ ನಿಲ್ಲುವ ಪೆಹ್ಲೆ ಆಪ್ (ಮೊದಲು ನೀವು) ಎಂಬ ಮೂಲ ತತ್ವದ ಚಿಂತನೆಯಿಂದ ಮೂಡಿಬಂದಿದೆ. ಇದರ ಮುಖ್ಯ ಅರ್ಥವೆಂದರೆ ಪ್ರತಿಯೊಂದು ಹೆಜ್ಜೆ ಯಲ್ಲೂ ಗ್ರಾಹಕರಿಗೆ ಮೊದಲ ಆದ್ಯತೆಯನ್ನು ನೀಡುವುದು, ಅವರ ಪ್ರತಿದಿನದ ಶ್ರಮದಾಯಕ ಸಂಗತಿಗಳು ಮತ್ತು ಸವಾಲುಗಳನ್ನು ಗ್ರಹಿಸುವುದು ಹಾಗೂ ಅವರ ದಿನನಿತ್ಯದ ಬದುಕಿಗೆ ನಿಜವಾಗಿಯೂ ಮಹತ್ವದ್ದಾಗಿರುವ ವಿಷಯಗಳ ಸುತ್ತಲೇ ಸೂಕ್ತ ಪರಿಹಾರಗಳನ್ನು ರೂಪಿಸುವು ದಾಗಿದೆ.
ಈ ಆಲೋಚನೆಯ ಹಿಂದಿರುವುದು ಸಂಸ್ಥೆಗೆ ಚಾಲಕರ ಇಜ್ಜತ್ ಅಥವಾ ಸ್ವಾಭಿಮಾನದ ಮೇಲಿರುವ ಅಪಾರವಾದ ಗೌರವ ಮತ್ತು ನಂಬಿಕೆ. ಒಂದು ಸೂಪರ್ ಆಟೋದ ಚುಕ್ಕಾಣಿ ಹಿಡಿದು ತಮ್ಮ ಬೆವರು ಸುರಿಸಿ ಕಷ್ಟಪಟ್ಟು ಜೀವನ ನಿರ್ವಹಣೆ ಮಾಡುವ ಪ್ರತಿಯೊಬ್ಬ ಪರಿಶ್ರಮಿ ಚಾಲಕರೂ ಸಮಾಜದಲ್ಲಿ ಅತ್ಯುನ್ನತ ಗೌರವಕ್ಕೆ ಅರ್ಹರಾಗಿದ್ದಾರೆ, ಮತ್ತು ಅವರ ಅಮೂಲ್ಯವಾದ ಸಮಯಕ್ಕೆ ನಿಜವಾದ ಮೌಲ್ಯ ನೀಡುವಂತಹ ದಕ್ಷ ಉತ್ಪನ್ನಗಳು ಅವರಿಗೆ ದೊರೆಯಲೇಬೇಕು ಎಂಬುದು ಸಂಸ್ಥೆಯ ಅಚಲ ಬದ್ಧತೆಯಾಗಿದೆ.
ಇಂತಹ ಗ್ರಾಹಕರಿಗೆ ಬ್ಯಾಟರಿಯು ಒದಗಿಸುವ ರೇಂಜ್ ಮತ್ತು ಚಾರ್ಜಿಂಗ್ಗಾಗಿ ಕಳೆಯುವ ಸಮಯವು ಅವರು ಆ ದಿನ ಎಷ್ಟು ದುಡಿಯಬಹುದು ಎಂಬುದರ ಮೇಲೆ ಪರಿಣಾಮ ಬೀರುತ್ತದೆ. ಚಾರ್ಜಿಂಗ್ ಕೇಂದ್ರಗಳಲ್ಲಿ ವಾಹನ ನಿಲ್ಲಿಸಿ ಕಾಯುತ್ತಾ ಕಳೆಯುವ ಪ್ರತಿಯೊಂದು ಗಂಟೆಯೂ ಒಬ್ಬ ಚಾಲಕನಿಗೆ ಯಾವುದೇ ಬಾಡಿಗೆ ಇಲ್ಲದೆ ಆದಾಯ ಕೈತಪ್ಪುವ ಸಂಪೂರ್ಣ ವ್ಯರ್ಥ ಸಮಯವಾಗಿರುತ್ತದೆ. ಮೋಂಟ್ರಾ ಎಲೆಕ್ಟ್ರಿಕ್ ಸಂಸ್ಥೆಯು ಆಟೋ ಚಾಲಕರು ನಿತ್ಯ ಎದುರಿಸುತ್ತಿದ್ದ ಈ ಸವಾಲನ್ನು ಸೂಕ್ಷ್ಮವಾಗಿ ಆಲಿಸಿತು ಮತ್ತು ಅದಕ್ಕೊಂದು ಶಾಶ್ವತ ಹಾಗೂ ಪರಿಣಾಮಕಾರಿ ತಾಂತ್ರಿಕ ಪರಿಹಾರವನ್ನು ಸೃಷ್ಟಿಸಲು ಎಕ್ಸ್ಪೋನೆಂಟ್ ಎನರ್ಜಿ ಜೊತೆಗೆ ಸೇರಿ ಕಾರ್ಯಪ್ರವೃತ್ತ ವಾಯಿತು.
ಈಗಾಗಲೇ ಮಾರುಕಟ್ಟೆಯಲ್ಲಿರುವ ಸೂಪರ್ ಆಟೋ ಎಫ್ಎಕ್ಸ್ ಯಾವುದೇ ಅಡೆತಡೆಯಿಲ್ಲದೆ ರಸ್ತೆಯ ಮೇಲೆ ನೈಜವಾಗಿ 150ಕ್ಕೂ ಹೆಚ್ಚು ಕಿಲೋಮೀಟರ್ ದೂರ ಕ್ರಮಿಸುವ ಅಸಾಧಾರಣ ಸಾಮರ್ಥ್ಯವನ್ನು ಹೊಂದಿದೆ. ಈಗ ಹೊಸದಾಗಿ 15 ನಿಮಿಷಗಳ ಕ್ಷಿಪ್ರ ಚಾರ್ಜ್ ಆಯ್ಕೆಯೂ ಸೇರ್ಪಡೆಯಾಗಿದೆ. ಈ ಮಹತ್ವದ ಬೆಳವಣಿಗೆಯು ವಾಹನದ ಮೌಲ್ಯವನ್ನು ಇನ್ನಷ್ಟು ಆಕರ್ಷಕವಾಗಿಯೂ ಬಲವಾಗಿಯೂ ಮಾಡಿದೆ. ನಿಲ್ದಾಣಗಳಲ್ಲಿ ವ್ಯರ್ಥವಾಗಿ ಕಾಯುವ ಸಮಯ ಅತ್ಯಲ್ಪಗೊಂಡು, ದುಡಿಯುವ ಸಮಯ ಹೆಚ್ಚಾಗಿ ಮತ್ತು ಚಾರ್ಜಿಂಗ್ ತಡವಾಗುವ ಯಾವುದೇ ಆತಂಕವಿಲ್ಲದೆ ಹೆಚ್ಚಿನ ಹಣವನ್ನು ಗಳಿಸಿಕೊಳ್ಳುವ ಅಪೂರ್ವ ಅವಕಾಶ ಇದಾಗಿದೆ.
ಈ ಕುರಿತು ಮಾತನಾಡಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಶ್ರೀ ದೀಪೇಂದ್ರ ಶರ್ಮಾ, "ಮೋಂಟ್ರಾ ಎಲೆಕ್ಟ್ರಿಕ್ ಸಂಸ್ಥೆಯಲ್ಲಿ ನಡೆಯುವ ಪ್ರತಿಯೊಂದು ಆಂತರಿಕ ಸಂಭಾಷಣೆ ಯೂ ಪೆಹ್ಲೆ ಆಪ್ ಎಂಬ ಮಂತ್ರದೊಂದಿಗೇ ಪ್ರಾರಂಭವಾಗುತ್ತದೆ. ನಮ್ಮ ಗ್ರಾಹಕರಿಗೆ ನಿಜವಾಗಿ ಯೂ ಯಾವುದು ಉಪಯುಕ್ತ ಮತ್ತು ಮಹತ್ವದ್ದು ಎಂಬುದನ್ನು ಅವರನ್ನೇ ನೇರವಾಗಿ ವಿಚಾರಿಸುವ ಮೂಲಕ ನಾವು ನಮ್ಮ ಕೆಲಸವನ್ನು ಆರಂಭಿಸುತ್ತೇವೆ. ಪ್ರತಿದಿನವೂ ಸೂಪರ್ ಆಟೋ ವಾಹನವನ್ನು ಬೀದಿಗಿಳಿಸಿ ಓಡಿಸುವ ಸಾಮಾನ್ಯ ಜನರ ಪಾಲಿಗೆ, ಚಾರ್ಜಿಂಗ್ ನಿಲ್ದಾಣಗಳಲ್ಲಿ ಕಾಯುತ್ತಾ ತಮ್ಮ ದುಡಿಮೆಯ ಅಮೂಲ್ಯ ಸಮಯವನ್ನು ಕಳೆದುಕೊಳ್ಳುವುದೇ ಎಲ್ಲಕ್ಕಿಂತ ದೊಡ್ಡ ತಲೆನೋವಾಗಿತ್ತು.
ವಾಹನವು ರಸ್ತೆಯ ಮೇಲೆ ಎಷ್ಟು ಹೆಚ್ಚು ಸಮಯ ಸಂಚರಿಸುತ್ತದೆಯೋ, ಅಷ್ಟು ಹೆಚ್ಚು ಹಣವನ್ನು ಗ್ರಾಹಕರು ಗಳಿಸಲು ಸಾಧ್ಯವಾಗುತ್ತದೆ. ಕೇವಲ 15 ನಿಮಿಷಗಳಲ್ಲಿ ಸಂಪೂರ್ಣ ಬ್ಯಾಟರಿ ಚಾರ್ಜ್ ಒದಗಿಸುವ ಈ ಸೌಲಭ್ಯವು ಆ ಕಳೆದುಹೋಗುತ್ತಿದ್ದ ಬೆಲೆಬಾಳುವ ಸಮಯವನ್ನು ಮರಳಿ ಅವರ ಕೈಗೇ ತಂದುಕೊಡುತ್ತದೆ. ನಾವು ಈ ತಂತ್ರಜ್ಞಾನವನ್ನು ವಾಹನಕ್ಕೆ ಕೇವಲ ಇನ್ನೊಂದು ಸಾಮಾನ್ಯ ಹೆಚ್ಚುವರಿ ವೈಶಿಷ್ಟ್ಯವನ್ನು ತುರುಕಿದಂತೆ ಯಾವತ್ತೂ ಪರಿಗಣಿಸಲಿಲ್ಲ. ಬದಲಾಗಿ, ನಮ್ಮ ನೆಚ್ಚಿನ ಗ್ರಾಹಕರು ದಿನನಿತ್ಯ ಅನುಭವಿಸುತ್ತಿದ್ದ ಅತ್ಯಂತ ವಾಸ್ತವಿಕ ಸಮಸ್ಯೆಯೊಂದನ್ನು ಸಶಕ್ತವಾಗಿ ಬಗೆಹರಿಸುವ ಮಾರ್ಗವಾಗಿ ನಾವು ಇದನ್ನು ಕಂಡುಕೊಂಡಿದ್ದೇವೆ" ಎಂದು ಹರ್ಷ ವ್ಯಕ್ತಪಡಿಸಿದರು.
ಸಂಸ್ಥೆಯ ಸಂಸ್ಥಾಪಕರು ಹಾಗೂ ಸಿಇಒ ಆಗಿರುವ ಅರುಣ್ ವಿನಾಯಕ್ ಮಾತನಾಡಿ, “ಮೋಂಟ್ರಾ ಎಲೆಕ್ಟ್ರಿಕ್ ಸಂಸ್ಥೆಯ ಜೊತೆಗೆ ಮತ್ತೊಮ್ಮೆ ಹೆಗಲಿಗೆ ಹೆಗಲು ಕೊಟ್ಟು ಪಾಲುದಾರ ರಾಗಲು ನಮಗೆ ಅತೀವ ಹೆಮ್ಮೆ ಎನಿಸುತ್ತಿದೆ. ಈ ಹಿಂದೆ ಎಲೆಕ್ಟ್ರಿಕ್ ಸರಕು ಸಾಗಣೆ ತ್ರಿಚಕ್ರ ವಾಹನಗಳ ಕ್ಷೇತ್ರದಲ್ಲಿ ನಾವು ಜೊತೆಯಾಗಿ ಕೈಗೊಂಡಿದ್ದ ಕಾರ್ಯವು, ಒಂದು ವಾಹನ ಮತ್ತು ಅದರ ಸಮಗ್ರ ಶಕ್ತಿ ಪರಿಸರ ವ್ಯವಸ್ಥೆ ಪರಸ್ಪರ ಹೊಂದಾಣಿಕೆಯಿಂದ ಒಟ್ಟಾಗಿ ಕೆಲಸ ಮಾಡುವಂತೆ ವಿನ್ಯಾಸಗೊಳಿಸಿದರೆ ಎಂತಹ ಮಹತ್ತರ ಸಾಧನೆ ಮಾಡಲು ಸಾಧ್ಯ ಎಂಬುದನ್ನು ಯಶಸ್ವಿಯಾಗಿ ತೋರಿಸಿಕೊಟ್ಟಿದೆ. ಇದೀಗ ಅದೇ ಯಶಸ್ವಿ ಪಾಲುದಾರಿಕೆಯನ್ನು ಮುಂದುವರಿಸಲು ನಾವು ಅತ್ಯಂತ ಉತ್ಸಾಹಭರಿತರಾಗಿದ್ದೇವೆ. ಎಕ್ಸ್ಪೋನೆಂಟ್ ನ ನವೀನ ಬ್ಯಾಟರಿ ತಂತ್ರಜ್ಞಾನ, ವಿಸ್ತಾರವಾದ ಚಾರ್ಜಿಂಗ್ ಜಾಲ ಮತ್ತು ಬರೋಬ್ಬರಿ 2.25 ಲಕ್ಷ ಕಿಲೋಮೀಟರ್ಗಳ ದೀರ್ಘ ಬ್ಯಾಟರಿ ವಾರಂಟಿಯು ವಾಹನ ಚಾಲಕರಿಗೆ ಎಲೆಕ್ಟ್ರಿಕ್ ಸಾರಿಗೆಯನ್ನು ದಿನನಿತ್ಯದ ಬದುಕಿನಲ್ಲಿ ಅತ್ಯಂತ ಸುಲಭಗೊಳಿಸಲು ನೆರವಾಗುತ್ತದೆ. ಮೋಂಟ್ರಾ ಸಂಸ್ಥೆಯು ಸಾಂಪ್ರದಾಯಿಕ ಆಟೋ ವಿಭಾಗಕ್ಕೆ ಒಂದು ವಿನೂತನ, ಆಧುನಿಕ ವಿನ್ಯಾಸದ ಸ್ಪರ್ಶವನ್ನು ನೀಡಿದ್ದು, ಭಾರತೀಯ ಆಟೋರಿಕ್ಷಾವೊಂದು ನೋಟದಲ್ಲಿ ಮತ್ತು ಚಾಲನಾ ಅನುಭವದಲ್ಲಿ ಹೇಗೆ ಇರಬೇಕೆಂಬುದಕ್ಕೆ ಮಾರುಕಟ್ಟೆಯಲ್ಲಿ ಹೊಸದೊಂದು ಉನ್ನತ ಮಾನದಂಡವನ್ನು ನಿಗದಿಪಡಿಸಿದೆ. ಅಂತಹ ಅತ್ಯುತ್ತಮ ವಾಹನಕ್ಕೆ ನಮ್ಮ ಅತ್ಯಾಧುನಿಕ ಶಕ್ತಿ ತಂತ್ರಜ್ಞಾನದ ಬಲವನ್ನು ಜೋಡಿಸಲು ನಮಗೆ ಅತ್ಯಂತ ಸಂತೋಷವಾಗುತ್ತಿದೆ” ಎಂದು ನುಡಿದರು.
ಇದೇ ತಿಂಗಳ ಆರಂಭದಲ್ಲಿ, ಮೋಂಟ್ರಾ ಎಲೆಕ್ಟ್ರಿಕ್, ಎಕ್ಸ್ಪೋನೆಂಟ್ ಎನರ್ಜಿ ಹಾಗೂ ಎಕ್ಸ್ಪೋ ನೆಂಟ್ ಒನ್ ಸಂಸ್ಥೆಗಳು ಒಗ್ಗೂಡಿ ಮೋಂಟ್ರಾ ಎಲೆಕ್ಟ್ರಿಕ್ನ ತ್ರಿಚಕ್ರ ವಾಹನಗಳಿಗಾಗಿ ಒನ್ ಪಾಸ್ ಎಂಬ ವಿನೂತನ ಸೌಲಭ್ಯವನ್ನು ಪರಿಚಯಿಸಿದ್ದವು. ಇದು ಸಂಪೂರ್ಣವಾಗಿ ಬದಲಾಗುವ, ಅಂದರೆ ವಾಹನದ ಬಳಕೆಗೆ ತಕ್ಕಂತೆ ಮಾತ್ರ ಹಣ ಪಾವತಿಸುವ ಪೇ-ಪರ್-ಯೂಸ್ ಮಾದರಿಯ ಎನರ್ಜಿ-ಆ್ಯಸ್-ಎ-ಸರ್ವೀಸ್ ಪರಿಹಾರವಾಗಿದೆ. ವಾಹನದ ನೈಜ ಬಳಕೆಗೆ ಅನುಗುಣವಾಗಿ ಶಕ್ತಿಯ ವೆಚ್ಚವನ್ನು ಸರಿದೂಗಿಸಿ ಹೊಂದಾಣಿಕೆ ಮಾಡುವ ಮೂಲಕ ಮತ್ತು ಬಡ ಚಾಲಕರಿಗೆ ಪರಿಸರಸ್ನೇಹಿ ಎಲೆಕ್ಟ್ರಿಕ್ ಸಾರಿಗೆಯನ್ನು ಆರ್ಥಿಕವಾಗಿ ಹೆಚ್ಚು ಸುಲಭಸಾಧ್ಯವನ್ನಾಗಿಸುವ ಮೂಲಕ, ಈ ನವೀನ ಯೋಜನೆಯು ಮೋಂಟ್ರಾ ಎಲೆಕ್ಟ್ರಿಕ್ನ ಪೆಹ್ಲೆ ಆಪ್ ತತ್ವವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದೆ.
ಸೂಪರ್ ಆಟೋ ಎಫ್ಎಕ್ಸ್: ಗ್ರಾಹಕರ ನೈಜ ಅಗತ್ಯಕ್ಕೆ ತಕ್ಕಂತೆ ರೂಪುಗೊಂಡ ವಾಹನ
ಅತ್ಯಂತ ವೇಗದ ಚಾರ್ಜಿಂಗ್ ಸೌಲಭ್ಯದ ಜೊತೆಗೆ, ಸೂಪರ್ ಆಟೋ ಎಫ್ಎಕ್ಸ್ ವಾಹನವು ಈ ಕೆಳಕಂಡ ಪ್ರಮುಖ ಅತ್ಯಾಧುನಿಕ ತಾಂತ್ರಿಕ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಯಲ್ಲಿ ತನ್ನ ಒಟ್ಟಾರೆ ಉತ್ಪನ್ನದ ಮೌಲ್ಯ, ಗತ್ತು ಹಾಗೂ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿದೆ:
- ಎಕ್ಸ್ ಪೋನೆಂಟ್ ಎನರ್ಜಿ ಸಹಯೋಗದ ಮೂಲಕ 15 ನಿಮಿಷಗಳ ಕ್ಷಿಪ್ರ ಚಾರ್ಜಿಂಗ್
- ರಸ್ತೆಯ ಮೇಲೆ 150+ ಕಿ.ಮೀ. ನೈಜ ರೇಂಜ್
- ಈ ವಿಭಾಗದಲ್ಲೇ ಅತ್ಯುತ್ತಮವಾದ 32% ಗ್ರೇಡೇಬಿಲಿಟಿ
- 60 ಎನ್ಎಂ ಟಾರ್ಕ್
- ಹಿಲ್ ಹೋಲ್ಡ್ ಅಸಿಸ್ಟ್
- ಪುಶ್ ಬಟನ್ ಮೂಲಕ ಕಾರಿನಂತಹ ಸ್ಟಾರ್ಟ್ ವ್ಯವಸ್ಥೆ
- ಕ್ಯಾಬಿನ್ ಒಳಗಿನ ಲೈಟ್, 12ವಿ ಮೊಬೈಲ್ ಚಾರ್ಜಿಂಗ್ ಸಾಕೆಟ್
- ವಿಭಾಗದಲ್ಲೇ ಅತ್ಯುತ್ತಮ ವಾರಂಟಿ: 5 ವರ್ಷಗಳು / 2.25 ಲಕ್ಷ ಕಿ.ಮೀ.*
- ಸೂಪರ್ ಆಟೋದ ಗ್ರಾಹಕ-ಸ್ನೇಹಿ ನಿಲುವನ್ನು ಬಲಪಡಿಸುವಂತಹ ಇತರ ಸೌಕರ್ಯ, ಅನುಕೂಲತೆ ಮತ್ತು ಕಾರ್ಯಕ್ಷಮತೆಯ ವೈಶಿಷ್ಟ್ಯಗಳು
ಒಟ್ಟಾರೆಯಾಗಿ, ಈ ವೈಶಿಷ್ಟ್ಯಗಳು ಒಂದು ಸರಳ ಕಲ್ಪನೆಯನ್ನು ಬಿಂಬಿಸುತ್ತವೆ, ಅದೇನೆಂದರೆ ತಂತ್ರಜ್ಞಾನವು ಗ್ರಾಹಕರಿಗಾಗಿ ಕೆಲಸ ಮಾಡಬೇಕೇ ಹೊರತು ಗ್ರಾಹಕರು ತಂತ್ರಜ್ಞಾನಕ್ಕಲ್ಲ ಎಂಬುದು.
ಬೆಂಗಳೂರು, ಚೆನ್ನೈ ಮತ್ತು ದೆಹಲಿ ಎನ್ಸಿಆರ್ನಾದ್ಯಂತ ಇರುವ ಎಕ್ಸ್ಪೋನೆಂಟ್ ಎನರ್ಜಿಯ 200ಕ್ಕೂ ಹೆಚ್ಚು ಚಾರ್ಜರ್ಗಳ ನೆಟ್ವರ್ಕ್ ಮೂಲಕ ಸೂಪರ್ ಆಟೋ ಎಫ್ಎಕ್ಸ್ ಗ್ರಾಹಕರು ಈ ಕ್ಷಿಪ್ರ ಚಾರ್ಜಿಂಗ್ ಸೌಲಭ್ಯವನ್ನು ಪಡೆಯಬಹುದಾಗಿದೆ.