ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪ್ರಧಾನಿ ಮೋದಿ ನಿರ್ಗಮಿಸಿದ 2 ದಿನಗಳ ನಂತರವೇ ಇರಾನ್ ಮೇಲೆ ದಾಳಿ ನಡೆಸಲು ಅವಕಾಶ ಸಿಕ್ಕಿತು: ಇಸ್ರೇಲ್ ಸ್ಪಷ್ಟನೆ

ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್‌ನಿಂದ ಭಾರತಕ್ಕೆ ಹಿಂದಿರುಗಿದ ಬಳಿಕವೇ ಇರಾನ್ ಮೇಲೆ ದಾಳಿ ನಡೆಸಲಾಯಿತು. ದಾಳಿಗೂ ಅವರ ಭೇಟಿಗೂ ಯಾವುದೇ ರಾಜಕೀಯ ಸಂಬಂಧ ಇಲ್ಲ ಎಂದು ಭಾರತದಲ್ಲಿನ ಇಸ್ರೇಲ್ ರಾಯಭಾರಿ ರೂವನ್ ಅಜರ್ ಸ್ಪಷ್ಟಪಡಿಸಿದ್ದಾರೆ. ದಾಳಿ ಮಿಲಿಟರಿ ಅಗತ್ಯತೆ ಮತ್ತು ಸೂಕ್ತ ಸಮಯದ ಆಧಾರದ ಮೇಲೆ ನಡೆದಿದ್ದು, ಮೋದಿ ದೇಶ ತೊರೆದ ಎರಡು ದಿನಗಳ ನಂತರವೇ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಮೋದಿ ಭೇಟಿಗೂ ಇರಾನ್ ದಾಳಿಗೆ ಸಂಬಂಧವಿಲ್ಲ: ಇಸ್ರೇಲ್ ರಾಯಭಾರಿ

ನರೇಂದ್ರ ಮೋದಿ-ಬೆಂಜಮಿನ್ ನೆತನ್ಯಾಹು (ಸಂಗ್ರಹ ಚಿತ್ರ) -

Profile
Sushmitha Jain Mar 16, 2026 5:11 PM

ನವದೆಹಲಿ, ಮಾ. 16: ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಇಸ್ರೇಲ್ (Israel) ಭೇಟಿಯನ್ನು ಮುಗಿಸಿ ಭಾರತಕ್ಕೆ (India) ಮರಳಿದ ಎರಡು ದಿನಗಳ ನಂತರವಷ್ಟೇ ಇರಾನ್ (Iran) ವಿರುದ್ಧದ ಮಿಲಿಟರಿ ದಾಳಿಗೆ ಇಸ್ರೇಲ್ ಅನುಮೋದನೆ ನೀಡಿತು ಎಂದು ಭಾರತದಲ್ಲಿನ ರಾಯಭಾರಿ ರೂವನ್ ಅಜರ್ (Reuven Azar) ಸೋಮವಾರ ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರ ಭೇಟಿ ಮತ್ತು ಇರಾನ್ ಮೇಲಿನ ದಾಳಿಯ ಸಮಯದ ನಡುವೆ ಯಾವುದೇ ರಾಜಕೀಯ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

"ಪ್ರಧಾನಿ ಮೋದಿ ಇಸ್ರೇಲ್‌ಗೆ ಬರುವ ಮೊದಲೇ ನಮ್ಮ ಪ್ರದೇಶದಲ್ಲಿ ಪರಿಸ್ಥಿತಿ ಅತ್ಯಂತ ಉದ್ವಿಗ್ನವಾಗಿತ್ತು. ಆದರೆ ಇರಾನ್ ಮೇಲೆ ದಾಳಿ ನಡೆಸುವ ಕಾರ್ಯಾಚರಣೆಗೆ ಅವಕಾಶ ಸಿಕ್ಕಿದ್ದೇ ಮೋದಿ ಇಸ್ರೇಲ್‌ನಿಂದ ನಿರ್ಗಮಿಸಿದ ನಂತರ. ದಾಳಿಗೆ ಅನುಮೋದನೆ ನೀಡುವ ಕ್ಯಾಬಿನೆಟ್ ನಿರ್ಧಾರವು ಅವರು ಹೋದ ಎರಡು ದಿನಗಳ ನಂತರವಷ್ಟೇ ನಡೆಯಿತು" ಎಂದು ಅಜರ್ ವಿವರಿಸಿದ್ದಾರೆ.

ಭಾರತದಲ್ಲಿನ ಇಸ್ರೇಲ್‌ ರಾಯಭಾರಿ ರೂವನ್ ಅಜರ್ ಹೇಳಿಕೆ:



<blockquote class="twitter-tweet"><p lang="en" dir="ltr"><a href="https://twitter.com/hashtag/WATCH?src=hash&amp;ref_src=twsrc%5Etfw">#WATCH</a> | Delhi: &quot;It was evident that the situation is very volatile in our region even before Prime Minister Modi came (on February 25–26, 2026). When it comes to the decision to strike, the operational opportunity came only after PM Modi left. The cabinet decision to approve the… <a href="https://t.co/FzsbiU2O2j">pic.twitter.com/FzsbiU2O2j</a></p>&mdash; ANI (@ANI) <a href="https://twitter.com/ANI/status/2033446088724640057?ref_src=twsrc%5Etfw">March 16, 2026</a></blockquote> <script async src="https://platform.twitter.com/widgets.js" charset="utf-8"></script>

ಘಟನೆಯ ಹಿನ್ನೆಲೆ

ಪ್ರಧಾನಿ ಮೋದಿ ಫೆಬ್ರವರಿ 25 ಮತ್ತು 26ರಂದು ಇಸ್ರೇಲ್‌ಗೆ ಭೇಟಿ ನೀಡಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಅವರು ದೆಹಲಿಗೆ ಮರಳಿದ ಎರಡು ದಿನಗಳ ನಂತರ, ಅಂದರೆ ಫೆಬ್ರವರಿ 28ರ ಬೆಳಗಿನ ಜಾವ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ಬೃಹತ್ ದಾಳಿ ನಡೆಸಿದ್ದವು. ಈ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮತ್ತು ಹಲವು ಪ್ರಮುಖ ಅಧಿಕಾರಿಗಳು ಸಾವನ್ನಪ್ಪಿದ್ದರು.

ಇರಾನ್‌ನ ಮೃತ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಬಳಸುತ್ತಿದ್ದ ವಿಮಾನ ಧ್ವಂಸಗೊಳಿಸಿದ ಇಸ್ರೇಲ್‌

ರಾಜಕೀಯ ಟೀಕೆಗಳು

ಇದೇ ವೇಳೆ ಕಾಂಗ್ರೆಸ್ ಮೋದಿ ಅವರ ಈ ಭೇಟಿಯನ್ನು ಅವಮಾನದಿಂದ ಕೂಡಿದ ಮತ್ತು ತಪ್ಪು ಸಮಯದ ಭೇಟಿ ಎಂದು ಟೀಕಿಸಿದೆ. ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಇರುವಾಗ ಮೋದಿ ಇಸ್ರೇಲ್‌ಗೆ ಹೋಗಿದ್ದು ಮಿಲಿಟರಿ ದಾಳಿಗೆ ರಾಜಕೀಯ ಬೆಂಬಲ ನೀಡಿದಂತೆ ಎಂಬ ಅಭಿಪ್ರಾಯ ಮೂಡಿಸಿದೆ ಎಂದು ಕಾಂಗ್ರೆಸ್ ನಾಯಕರಾದ ಸಲ್ಮಾನ್ ಖುರ್ಷಿದ್ ಮತ್ತು ಜೈರಾಮ್ ರಮೇಶ್ ಕಿಡಿಕಾರಿದ್ದಾರೆ. ಮೋದಿ ಅವರ ಇಸ್ರೇಲ್ ಭೇಟಿಯು ಅಂತರಾಷ್ಟ್ರೀಯ ವ್ಯವಸ್ಥೆಯಲ್ಲಿ ಭಾರತದ ನಿಲುವಿಗೆ ವ್ಯತಿರಿಕ್ತವಾಗಿದೆ ಎಂದು ಅವರು ದೂರಿದ್ದಾರೆ.

ಇಸ್ರೇಲ್ ರಾಯಭಾರಿ ಈ ಎಲ್ಲ ಆರೋಪಗಳನ್ನು ತಳ್ಳಿಹಾಕಿದ್ದು, ದಾಳಿಯ ನಿರ್ಧಾರವು ಕೇವಲ ಮಿಲಿಟರಿ ಅಗತ್ಯತೆ ಮತ್ತು ಸರಿಯಾದ ಸಮಯದ ಲಭ್ಯತೆಯನ್ನು ಆಧರಿಸಿತ್ತು ಎಂದು ಪುನರುಚ್ಚರಿಸಿದ್ದಾರೆ.