ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಟೈಟಾನ್ ನ ಸೊಗಸಾದ ಸ್ಮಾರ್ಟ್ ಸರಣಿ: ಆಧುನಿಕ ವಿನ್ಯಾಸ ಮತ್ತು ಸ್ಮಾರ್ಟ್ ವಿಶೇಷತೆ ಹೊಂದಿರುವ ಟೈಟಾನ್ ಸ್ಮಾರ್ಟ್ ಇವೋಕ್ 2.0 ಬಿಡುಗಡೆ

ವಾಚ್ ಸರಣಿಯನ್ನು ಹೊಸತನ ಮತ್ತು ಶಾರ್ಪ್ ಎಡ್ಜಿ ಡಿಸೈನ್ ಅನ್ನು ಬಳಸಿ ರೂಪಿಸಲಾಗಿದೆ. ಟೈಟಾನ್ ಸ್ಮಾರ್ಟ್‌ ನ ಕುಶಲಗಾರಿಕೆ ಮತ್ತು ವಿನ್ಯಾಸ ಬುದ್ಧಿಮತ್ತೆಯ ಪರಂಪರೆಯ ಆಧಾರ ದಲ್ಲಿ ಟೈಟಾನ್ ತನ್ನೆಲ್ಲಾ ವಾಚ್ ಗಳನ್ನು ತಯಾರಿಸುತ್ತಿದ್ದು, ಇದೀಗ ಬಿಡುಗಡೆಯಾಗಿರುವ ಇವೋಕ್ 2.0 ಟೈಟಾನ್ ಬ್ರ್ಯಾಂಡ್‌ ನ “ಪ್ಯಾಶನ್ ಮೀಟ್ಸ್ ಫ್ಯಾಷನ್” ಎಂಬ ತತ್ವಕ್ಕೆ ಪೂರಕ ವಾಗಿ ಮೂಡಿ ಬಂದಿದೆ

ಟೈಟಾನ್ ನ ಸೊಗಸಾದ ಸ್ಮಾರ್ಟ್ ಸರಣಿ

-

Ashok Nayak
Ashok Nayak Nov 10, 2025 9:41 PM

ಬೆಂಗಳೂರು: ಟೈಟಾನ್ ಸಂಸ್ಥೆಯು ತನ್ನ ಪ್ರೀಮಿಯಂ ಸ್ಮಾರ್ಟ್‌ ವಾಚ್‌ ಸಾಲಿನಲ್ಲಿ ಇತ್ತೀಚಿನ ವಿಕಸನವಾದ ಹೊಸ ವಾಚ್ ಆಗಿರುವ ಟೈಟಾನ್ ಸ್ಮಾರ್ಟ್ ಇವೋಕ್ 2.0 ಅನ್ನು ಬಿಡುಗಡೆ ಮಾಡಿದೆ.

ಈ ವಾಚ್ ಸರಣಿಯನ್ನು ಹೊಸತನ ಮತ್ತು ಶಾರ್ಪ್ ಎಡ್ಜಿ ಡಿಸೈನ್ ಅನ್ನು ಬಳಸಿ ರೂಪಿಸಲಾಗಿದೆ. ಟೈಟಾನ್ ಸ್ಮಾರ್ಟ್‌ ನ ಕುಶಲಗಾರಿಕೆ ಮತ್ತು ವಿನ್ಯಾಸ ಬುದ್ಧಿಮತ್ತೆಯ ಪರಂಪರೆಯ ಆಧಾರದಲ್ಲಿ ಟೈಟಾನ್ ತನ್ನೆಲ್ಲಾ ವಾಚ್ ಗಳನ್ನು ತಯಾರಿಸುತ್ತಿದ್ದು, ಇದೀಗ ಬಿಡುಗಡೆಯಾಗಿರುವ ಇವೋಕ್ 2.0 ಟೈಟಾನ್ ಬ್ರ್ಯಾಂಡ್‌ ನ “ಪ್ಯಾಶನ್ ಮೀಟ್ಸ್ ಫ್ಯಾಷನ್” ಎಂಬ ತತ್ವಕ್ಕೆ ಪೂರಕವಾಗಿ ಮೂಡಿ ಬಂದಿದೆ. ಈ ಮೂಲಕ ಟೈಟಾನ್‌ ನ ಸಾಂಪ್ರದಾಯಿಕ ವಾಚ್- ಮೇಕಿಂಗ್ ಪರಂಪರೆಯ ಕುಶಲಗಾರಿಕೆಯನ್ನು ಆಧುನಿಕ ಜಗತ್ತಿನ ಬದಲಾಗು ತ್ತಿರುವ ತಂತ್ರಜ್ಞಾನದೊಂದಿಗೆ ಒಂದುಗೂಡಿಸಲಾಗಿದ್ದು, ಈ ವಾಚ್ ಅತ್ಯುತ್ತಮ ಕಾರ್ಯ ಕ್ಷಮತೆಯನ್ನು ಒದಗಿಸುವುದರ ಜೊತೆಗೆ ಆಧುನಿಕ ಜೀವನಶೈಲಿಗೆ ಸೊಗಸಾಗಿ ಹೊಂದಿ ಕೊಳ್ಳುತ್ತದೆ.

ಇದನ್ನೂ ಓದಿ: Bangalore News: ಬ್ರಿಟಿಷ್ ಕೌನ್ಸಿಲ್‌ʼನ ಮೊದಲ ‘ಕ್ರಿಯೇಟಿವ್ ಕನ್ವರ್ಜೆನ್ಸ್: ಗ್ರೋತ್ ರೀಇಮ್ಯಾಜಿನ್’ ಬೆಂಗಳೂರಿನಲ್ಲಿ ಆರಂಭ

ಸ್ಮಾರ್ಟ್‌ ವಾಚ್ ಧರಿಸುವುದು ಎಂದರೇನು ಎಂಬುದನ್ನು ಮರುರೂಪಿಸುವಂತೆ ವಿನ್ಯಾಸ ಗೊಂಡಿರುವ ಟೈಟಾನ್ ಇವೋಕ್ 2.0 ಸ್ಮಾರ್ಟ್ ವಾಚ್ ಪ್ರತಿಯೊಂದು ಸಂದರ್ಭಕ್ಕೆ ಮತ್ತು ಆ ಕ್ಷಣದ ಭಾವನೆಗಳಿಗೆ ಸಂಪೂರ್ಣವಾಗಿ ಹೊಂದಿಕೊಳ್ಳುವಂತೆ ರೂಪಗೊಂಡಿದೆ. ದೈನಂದಿನಲ್ಲಿ ಧರಿಸುವ ಉಡುಗೆಯಿಂದ ಹಿಡಿದು ಸಂಜೆ ಹೊತ್ತಿನ ಕಾರ್ಯಕ್ರಮಕ್ಕೆ ಧರಿಸುವ ಉಡುಪುಗಳವರೆಗೆ ಎಲ್ಲಾ ರೀತಿಯ ದಿರಿಸಿಗೂ ಸೂಕ್ತ ರೀತಿಯಲ್ಲಿ ಹೊಂದಿ ಕೊಳ್ಳುತ್ತದೆ.

ಅಲ್ಲದೇ ವೈಯಕ್ತಿಕವಾಗಿ ಫಿಟ್ ಆಗುವ ವಿನ್ಯಾಸ ಹೊಂದಿದ್ದು, ಉನ್ನತ ಸೌಂದರ್ಯ ಮತ್ತು ವಿಶಿಷ್ಟ ಬುದ್ಧಿವಂತ ವಿಶೇಷತೆಗಳನ್ನು ಒದಗಿಸುತ್ತದೆ. ಆಧುನಿಕ ಸೊಬಗು ಮತ್ತು ಅತ್ಯು ತ್ಕೃಷ್ಟ ಕಾರ್ಯಕ್ಷಮತೆ ಸಮ್ಮಿಲನಗೊಂಡಿರುವ ಈ ಸ್ಮಾರ್ಟ್ ವಾಚ್ ಪ್ರೀಮಿಯಂ ರಿಸ್ಟ್‌ ವಾಚ್‌ ನ ಶ್ರೇಷ್ಠತೆಯ ಸಾಕಾರ ರೂಪವಾಗಿದೆ. ಜೊತೆಗಿ ಇತ್ತೀಚಿನ ವೇರೆಬಲ್ ತಂತ್ರಜ್ಞಾನ ಒದಗಿಸಿರುವ ಬುದ್ಧಿವಂತ ಸೌಕರ್ಯಗಳನ್ನೂ ಒದಗಿಸುತ್ತದೆ.

ಫ್ಯಾಷನ್ ಸಂವೇದನೆ ಮತ್ತು ಪರಿಷ್ಕೃತ ವಿನ್ಯಾಸ ಹೊಂದಿರುವ ಇವೋಕ್ 2.0 ನಿಜವಾಗಿ ಯೂ “ಸ್ಮಾರ್ಟ್ ನೆವರ್ ಲುಕ್ಡ್ ದಿಸ್ ಗುಡ್” (ಸ್ಮಾರ್ಟ್ ಈ ಥರ ಯಾವತ್ತೂ ಕಂಡಿರಲಿಲ್ಲ) ಎಂಬ ಥೀಮ್‌ ಆಧರಿತವಾಗಿ ರೂಪುಗೊಂಡಿದೆ.

ವಿನ್ಯಾಸ ಮತ್ತು ವೈಯಕ್ತೀಕರಣ ಸೌಲಭ್ಯ ಪರಿಷ್ಕರಣೆ ಇವೋಕ್ 2.0 ಸ್ಮಾರ್ಟ್ ವಾಚ್ ನ ಪ್ರಮುಖ ವಿಶೇಷತೆಗಳು

  • ಪ್ರೀಮಿಯಂ ಮೆಟಲ್ ಕೇಸ್: 43 ಎಂಎಂ ರೌಂಡ್ ಮೆಟಲ್ ಕೇಸ್ ಅನ್ನು ಪರಿಷ್ಕೃತಗೊಳಿಸಿ ಜೋಡಿಸಲಾಗಿದೆ.
  • ಆಕರ್ಷಕ ಸೂಪರ್ ಅಮೋಲೆಡ್ ಡಿಸ್‌ಪ್ಲೇ: 1.32” ಸ್ಕ್ರೀನ್ 466×466 ರೆಸಲ್ಯೂಶನ್ ಮತ್ತು 1000 ನಿಟ್ಸ್ ವರೆಗಿನ ಬ್ರೈಟ್‌ನೆಸ್ ಹೊಂದಿರುವ ಡಿಸ್ ಪ್ಲೇ ಹೊರಾಂಗಣದಲ್ಲಿ ಇರುವಾಗಲೂ ಸೊಗಸಾಗಿ ಕಾಣುತ್ತದೆ.
  • ಲೈಟ್‌ ವೇಟ್ & ಸ್ಲೀಕ್ ಫಿಟ್: 11 ಎಂಎಂ ಸ್ಲಿಮ್ ಕೇಸ್ ಇದ್ದು, ಎಲ್ಲಾ ರೀತಿಯ ಮಣಿಗಟ್ಟುಗಳಿಗೂ ಮತ್ತು ಸ್ಟೈಲ್ ಗಳಿಗೂ ಸೂಕ್ತವಾಗಿ ಹೊಂದಿಕೊಳ್ಳುತ್ತದೆ. ದಿನವಿಡೀ ಆರಾಮದಾಯಕ ಬಳಕೆಗಾಗಿ ವಿನ್ಯಾಸಗೊಂಡಿದೆ.
  • ವಿಭಿನ್ನವಾದ ಸ್ಟ್ರ್ಯಾಪ್ ಡಿಸೈನ್: ಡ್ಯುಯಲ್- ಟೋನ್ ಮ್ಯಾಗ್ನೆಟಿಕ್ ಸ್ಟ್ರ್ಯಾಪ್ ಹೊಂದಿದ್ದು, ಸೊಗಸಾಗಿ ಕಾಣುತ್ತದೆ ಮತ್ತು ಅನುಕೂಲಕರವಾಗಿ ಫಿಟ್ ಆಗುತ್ತದೆ.
  • ರೋಟರಿ ಕ್ರೌನ್ & ಕಸ್ಟಮ್ ಬಟನ್‌ ಗಳು: ಸಹಜ, ಟ್ಯಾಕ್ಟೈಲ್ ಕಂಟ್ರೋಲ್‌ ಗಳು ಇದರಲ್ಲಿದ್ದು, ವಾಚ್ ಬಳಕೆಯನ್ನು ಸುಗಮ ಮಾಡುತ್ತವೆ. ಪ್ರಮುಖ ಫೀಚರ್‌ ಗಳನ್ನು ಸುಲಭವಾಗಿ ಬಳಸಿಕೊಳ್ಳಲು ಅನುವು ಮಾಡಿಕೊಡುತ್ತದೆ.
  • ಅಡ್ವಾನ್ಸ್ ಡ್ ಪ್ರೊಸೆಸರ್ ವಿತ್ ಫ್ಲೂಯಿಡಿಕ್ ಯುಐ: ಅಪ್ಲಿಕೇಶನ್‌ ಗಳಲ್ಲಿ ಸುಗಮ ಕಾರ್ಯನಿರ್ವಹಣೆ ಸಾಧ್ಯವಾಗಿಸುತ್ತದೆ, ಲ್ಯಾಗ್- ಫ್ರೀ ಅನುಭವ ಒದಗಿಸುತ್ತದೆ.
  • 3ಡಿ ಡೈನಾಮಿಕ್ ವಾಚ್ ಫೇಸ್‌ ಗಳು: ಮೋಷನ್ ಮತ್ತು ಡೆಪ್ತ್‌ ಇರುವ ವಾಚ್ ಫೇಸ್ ಗಳು ಸೊಗಸಾದ ವಿಷುವಲ್‌ ಗಳನ್ನು ನೀಡುತ್ತವೆ. ವೈಯಕ್ತಿಕ ಸ್ಟೈಲ್ ಹೊಂದಲು ಅನುವು ಮಾಡಿಕೊಡುತ್ತದೆ.
  • ಇಂಟಿಗ್ರೇಟೆಡ್ ಹೆಲ್ತ್ & ಅಪ್ ಅನುಭವ: ಆಂಡ್ರಾಯ್ಡ್ ಮತ್ತು ಐಓಎಸ್ ಎರಡ ರಲ್ಲೂ ಟೈಟಾನ್ ಸ್ಮಾರ್ಟ್ ಅಪ್‌ ನೊಂದಿಗೆ ಸುಲಭವಾಗಿ ಸಿಂಕ್ ಆಗುತ್ತದೆ. ವೈಯಕ್ತಿಕ ಆರೋಗ್ಯ ಪಾಲನೆಗಾಗಿ 24×7 ಹಾರ್ಟ್- ರೇಟ್ ಮಾನಿಟರಿಂಗ್, ಎಸ್ ಪಿ ಓ₂ ಟ್ರ್ಯಾಕಿಂಗ್, ವಿವರವಾದ ಸ್ಲೀಪ್ ಅನಾಲಿಸಿಸ್, ಪರ್ಫಾರ್ಮೆನ್ಸ್ ಡೇಟಾ ಮತ್ತು ಉತ್ತಮವಾದ ಯೋಗಕ್ಷೇಮ ಒಳನೋಟಗಳನ್ನು ನೀಡುತ್ತದೆ.

ಈ ಹೊಸ ಉತ್ಪನ್ನ ಬಿಡುಗಡೆ ಕುರಿತು ಮಾತನಾಡಿದ ಟೈಟಾನ್ ಕಂಪನಿ ಲಿಮಿಟೆಡ್‌ ನ ಸ್ಮಾರ್ಟ್ ವೇರೆಬಲ್ಸ್ ಬಿಸಿನೆಸ್ ಹೆಡ್ ಶ್ರೀ ಸೀನಿವಾಸನ್ ಕೃಷ್ಣಮೂರ್ತಿ ಅವರು, “ಇವೋಕ್ 2.0 ಬಿಡುಗಡೆ ಮಾಡುವ ಮೂಲಕ ಟೈಟಾನ್ ಸ್ಮಾರ್ಟ್ ಪ್ರೀಮಿಯಂ ಫ್ಯಾಷನ್ ಅನ್ನು ಹೊಸ ತಂತ್ರಜ್ಞಾನದೊಂದಿಗೆ ಸುಲಭವಾಗಿ ಒಂದುಗೂಡಿಸುವ ಸ್ಮಾರ್ಟ್‌ ವಾಚ್‌ ಗಳನ್ನು ರಚಿಸುವ ತನ್ನ ಬದ್ಧತೆಯನ್ನು ಸಾರಿದೆ. ಇವೋಕ್ 2.0 ನಮ್ಮ ಬೆಳೆಯುತ್ತಿರುವ ಪ್ರೀಮಿಯಂ ಸ್ಮಾರ್ಟ್‌ ವಾಚ್‌ ಗಳ ಪೋರ್ಟ್‌ಫೋಲಿಯೋಗೆ ಪ್ರಮುಖ ಸೇರ್ಪಡೆಯಾಗಿದ್ದು, ಇದನ್ನು ಸೊಬಗು ಮತ್ತು ಬುದ್ಧಿಮತ್ತೆ ಎರಡನ್ನೂ ಬಯಸುವ ಜೀವನಶೈಲಿ ಕೇಂದ್ರಿತ, ತಂತ್ರಜ್ಞಾನ ಆಸಕ್ತ ಗ್ರಾಹಕರಿಗಾಗಿ ವಿನ್ಯಾಸಗೊಳಿಸಲಾಗಿದೆ. ವೇರೆಬಲ್‌ ಗಳು ದೈನಂದಿನ ಜೀವನದ ಅವಿಭಾಜ್ಯ ಭಾಗವಾಗುತ್ತಿರುವ ಈ ಸಂದರ್ಭದಲ್ಲಿ ಈ ಉತ್ಪನ್ನವು ಬಳಕೆದಾರ ಕೇಂದ್ರಿತ, ಅರ್ಥಪೂರ್ಣ ಅನುಭವಗಳನ್ನು ಒದಗಿಸುವ ಟೈಟಾನ್ ಸ್ಮಾರ್ಟ್‌ ನ ಬದ್ಧತೆ ಯನ್ನು ಸಾರುತ್ತದೆ” ಎಂದು ಹೇಳಿದರು.

₹8,499/- ಬೆಲೆಯಲ್ಲಿ ಲಭ್ಯವಿರುವ ಟೈಟಾನ್ ಇವೋಕ್ 2.0 ವಾಚ್ ಗ್ಲೇಸಿಯರ್ ಬ್ಲೂ, ಟೈಡಲ್ ಬ್ಲೂ ಮತ್ತು ಕೊಕೋ ಬ್ರೌನ್ ಎಂಬ ಮೂರು ವಿಶಿಷ್ಟ ಡ್ಯುಯಲ್- ಟೋನ್ ಮೆಟಲ್ ಸ್ಟ್ರ್ಯಾಪ್‌ ಗಳಲ್ಲಿ ಬರುತ್ತದೆ. ಈ ಸಂಗ್ರಹವು ಈಗ ಟೈಟಾನ್ ವರ್ಲ್ಡ್, ಫಾಸ್ಟ್ರಾಕ್, ಹಿಲಿಯೋಸ್ ಸ್ಟೋರ್‌ ಗಳು ಮತ್ತು ಆಯ್ದ ಪ್ರೀಮಿಯಂ ರಿಟೇಲ್ ಔಟ್‌ ಲೆಟ್‌ ಗಳಲ್ಲಿ ಲಭ್ಯವಿದೆ. ಹಾಗೆಯೇ www.titan.co.in ಮತ್ತು ಪ್ರಮುಖ ಇ- ಕಾಮರ್ಸ್ ಪ್ಲಾಟ್‌ ಫಾರ್ಮ್‌ ಗಳಲ್ಲಿ ಆನ್‌ ಲೈನ್‌ ನಲ್ಲಿ ಲಭ್ಯವಿದೆ.