Ultraviolette ನಿಂದ 'ಬ್ಯಾಟರಿ ಫ್ಲೆಕ್ಸ್' ಸೌಲಭ್ಯ ಪ್ರಾರಂಭ; ಸಂಸ್ಥೆಯ 6ನೇ ಎಕ್ಸ್ಪೀರಿಯನ್ಸ್ ಸೆಂಟರ್ ಉದ್ಘಾಟನೆ
ಪರಿಸರ ಸ್ನೇಹಿ ಯೋಜನೆಗಳಿಗೆ ಹಣಕಾಸು ನೆರವು ನೀಡುವ ಭಾರತದ ಪ್ರಮುಖ ಎನ್‌ಬಿಎಫ್‌ಸಿ ಸಂಸ್ಥೆಯಾದ 'ಇಕೋಫೈ' ಜೊತೆಗಿನ ಸಹಭಾಗಿತ್ವದಲ್ಲಿ Ultraviolette ಈ ಯೋಜನೆಯನ್ನು ಜಾರಿಗೆ ತಂದಿದೆ. ಸುಧಾರಿತ ಸಾರಿಗೆ ಉತ್ಪನ್ನಗಳನ್ನು ಜನಸಾಮಾನ್ಯರಿಗೂ ತಲುಪಿಸುವ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಹೆಚ್ಚಿನ ಜನರಿಗೆ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ.
-
ಬೆಂಗಳೂರು: ಭಾರತದ ಪ್ರತಿಷ್ಠಿತ ಅಟೋಮೊಬೈಲ್ ತಯಾರಿಕಾ ಸಂಸ್ಥೆಯಾದ Ultraviolette (Ultraviolette) ತನ್ನ X-47 ಬಿಡುಗಡೆಯ ಭರ್ಜರಿ ಯಶಸ್ಸಿನ ನಂತರ, ಇಂದು 'ಬ್ಯಾಟರಿ ಫ್ಲೆಕ್ಸ್' (ಬಿಎಎಎಸ್) ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯು ಇವಿ ವಾಹನ ಮಾಲೀಕತ್ವ ವಿಭಾಗದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದ್ದು, ದೇಶಾದ್ಯಂತ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ವಾಹನಗಳನ್ನು ಲಭ್ಯವಾಗು ವಂತೆ ಮಾಡಲಿದೆ.
ಪರಿಸರ ಸ್ನೇಹಿ ಯೋಜನೆಗಳಿಗೆ ಹಣಕಾಸು ನೆರವು ನೀಡುವ ಭಾರತದ ಪ್ರಮುಖ ಎನ್‌ಬಿಎಫ್‌ಸಿ ಸಂಸ್ಥೆಯಾದ 'ಇಕೋಫೈ' ಜೊತೆಗಿನ ಸಹಭಾಗಿತ್ವದಲ್ಲಿ Ultraviolette ಈ ಯೋಜನೆಯನ್ನು ಜಾರಿಗೆ ತಂದಿದೆ. ಸುಧಾರಿತ ಸಾರಿಗೆ ಉತ್ಪನ್ನಗಳನ್ನು ಜನಸಾಮಾನ್ಯ ರಿಗೂ ತಲುಪಿಸುವ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಹೆಚ್ಚಿನ ಜನರಿಗೆ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ. 'ಬ್ಯಾಟರಿ ಫ್ಲೆಕ್ಸ್' ಯೋಜನೆಯು ಉತ್ತಮ ಸೌಲಭ್ಯ ಮತ್ತು ವೆಚ್ಚ ದಕ್ಷತೆಯನ್ನು ನೀಡುವ ಮೂಲಕ ಸುಸ್ಥಿರ ಸಾರಿಗೆಯ ಅಳವಡಿಕೆಯನ್ನು ವೇಗಗೊಳಿಸಲಿದೆ. ಈ ಸಹಯೋಗವು ಭಾರತೀಯ ಗ್ರಾಹಕರಿಗೆ ಸುಧಾರಿತ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚು ಸುಲಭವಾಗಿ ಮತ್ತು ಆರ್ಥಿಕವಾಗಿ ಲಭ್ಯವಾಗುವಂತೆ ಮಾಡುವ ಬದ್ಧತೆಯನ್ನು ತೋರಿಸುತ್ತದೆ.
ಈ ಹೊಸ ಯೋಜನೆಯೊಂದಿಗೆ, ಗ್ರಾಹಕರು ಈಗ Ultraviolette X-47 ಅನ್ನು ಕೇವಲ ₹1,49,000 ಆರಂಭಿಕ ಬೆಲೆಯಲ್ಲಿ ತಮ್ಮದಾಗಿಸಿಕೊಳ್ಳಬಹುದು ಮತ್ತು ತಿಂಗಳಿಗೆ ಕೇವಲ ₹2,499 ರಿಂದ ಆರಂಭವಾಗುವ ಬ್ಯಾಟರಿ ಚಂದಾದಾರಿಕೆಯನ್ನು ಪಡೆಯಬಹುದು. ಈ ಮಾದರಿಯು ಗ್ರಾಹಕರಿಗೆ ಬೈಕ್ ನ ಚಾಸಿಸ್‌ಗೆ ಹಣ ಪಾವತಿಸಲು ಮತ್ತು ಬ್ಯಾಟರಿಗಾಗಿ ಪ್ರತ್ಯೇಕವಾಗಿ ಸ್ಥಿರ ಮಾಸಿಕ ಚಂದಾದಾರಿಕೆ ಶುಲ್ಕದ ಅಡಿಯಲ್ಲಿ ಹಣಕಾಸು ಸೌಲಭ್ಯ ಪಡೆಯಲು ಅವಕಾಶ ನೀಡುತ್ತದೆ.
ಇದನ್ನೂ ಓದಿ: Karnataka Budget 2026: ಗರ್ಭಿಣಿ, ಬಾಣಂತಿಯರಿಗೆ ಅಂಗನವಾಡಿಗಳಲ್ಲಿ ರೇಷನ್ ಬದಲಿಗೆ ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆ
Ultravioletteನ ಸಿಇಒ ಮತ್ತು ಸಹ ಸಂಸ್ಥಾಪಕ ನಾರಾಯಣ್ ಸುಬ್ರಮಣಿಯಮ್ ಅವರು ಈ ಕುರಿತು ಮಾತನಾಡಿ, "₹2.5 ಲಕ್ಷ ಬೆಲೆಯಲ್ಲಿ ದೊರಕುತ್ತಿದ್ದ Ultraviolette ಬೈಕ್ ಗಳು ಸಮಾನ ಸಾಮರ್ಥ್ಯದ ಪೆಟ್ರೋಲ್ (ಐಸಿಇ) ಮೋಟಾರ್ ಸೈಕಲ್ ಗಳ ಬೆಲೆಗೆ ಸಮನಾಗಿದ್ದವು. ಈಗ, ₹1.5 ಲಕ್ಷ ಆರಂಭಿಕ ಬೆಲೆಯಲ್ಲಿ ಸವಾರರು ಎಲ್ಲಾ ವಿಭಾಗಗಳಿಗಿಂತ ಉತ್ತಮವಾದ ತಂತ್ರಜ್ಞಾನ, ವೈಶಿಷ್ಟ್ಯಗಳು ಮತ್ತು ಕಾರ್ಯಕ್ಷಮತೆಯನ್ನು ಪಡೆಯ ಲಿದ್ದಾರೆ. ತಿಂಗಳಿಗೆ ಕೇವಲ ₹2,499 ರಷ್ಟು ಕಡಿಮೆ ನಿರ್ವಹಣಾ ವೆಚ್ಚದೊಂದಿಗೆ (ಇದು ಪೆಟ್ರೋಲ್ ಗೆ ಮಾಡುವ ಸರಾಸರಿ ವೆಚ್ಚಕ್ಕಿಂತ ಕಡಿಮೆ), ನಾವು ಮೋಟಾರ್‌ಸೈಕಲ್ ಜಗತ್ತಿನಲ್ಲಿ 'ಕೈಗೆಟುಕುವ ದರ' ಎಂಬ ಪದಕ್ಕೆ ಹೊಸ ವ್ಯಾಖ್ಯಾನ ನೀಡುತ್ತಿದ್ದೇವೆ. ಇದೀಗ ಆರಂಭವಾಗಿರುವ ಬ್ಯಾಟರಿ ಫ್ಲೆಕ್ಸ್ ಸೌಲಭ್ಯವು ಭಾರತದಾದ್ಯಂತ ಸವಾರರಿಗೆ ಅತ್ಯಾಧುನಿಕ ಸಾರಿಗೆ ವ್ಯವಸ್ಥೆಯನ್ನು ಹೆಚ್ಚು ಪ್ರಾಯೋಗಿಕವಾಗಿ ಲಭ್ಯವಾಗುವಂತೆ ಮಾಡುತ್ತದೆ," ಎಂದು ತಿಳಿಸಿದರು.
ಬ್ಯಾಟರಿ ಫ್ಲೆಕ್ಸ್ ಯೋಜನೆಯು Ultraviolette ಬೈಕ್ ಖರೀದಿಸಲು ಬೇಕಾದ ಆರಂಭಿಕ ಹೂಡಿಕೆಯನ್ನು ಶೇ. 40 ರಷ್ಟು ತಗ್ಗಿಸುವ ಮೂಲಕ ಖರೀದಿ ವೆಚ್ಚವನ್ನು ಕಡಿಮೆ ಮಾಡು ತ್ತದೆ. ಚಂದಾದಾರಿಕೆ ಅವಧಿಯ ಕೊನೆಯಲ್ಲಿ, ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಬ್ಯಾಟರಿಯ ಮಾಲೀಕತ್ವವನ್ನು ಗ್ರಾಹಕರಿಗೆ ವರ್ಗಾಯಿಸಲಾಗುತ್ತದೆ. ಬ್ಯಾಟರಿ ಫ್ಲೆಕ್ಸ್ ಗಾಗಿ ನೋಂದಣಿ ಪ್ರಕ್ರಿಯೆಯು ಮಾರ್ಚ್ 5, 2026 ರಿಂದ ಪ್ರಾರಂಭವಾಗಲಿದ್ದು, ಭಾರತ ದಾದ್ಯಂತ ಸವಾರರಿಗೆ ಯಾವುದೇ ಅಡೆತಡೆ ಇಲ್ಲದೆ ಅತ್ಯಾಧುನಿಕ ಮೋಟಾರ್ ಸೈಕಲ್ ಅನುಭವವನ್ನು ಪಡೆಯಲು ಹೊಸ ಹಾದಿ ಮಾಡಿಕೊಡಲಿದೆ.
ಈ ಕುರಿತು ಮಾತನಾಡಿರುವ Ultraviolette ನ ಸಿಟಿಓ ಮತ್ತು ಸಹ- ಸಂಸ್ಥಾಪಕ ನೀರಜ್ ರಾಜಮೋಹನ್ ಅವರು, "ಪ್ರತಿಯೊಂದು ಎಲೆಕ್ಟ್ರಿಕ್ ವಾಹನದ ಯಶಸ್ಸಿನಲ್ಲಿ ಬ್ಯಾಟರಿ ತಂತ್ರಜ್ಞಾನವು ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ಬ್ಯಾಟರಿಗಳು ರಾಜಿಯಿಲ್ಲದ ಕಾರ್ಯಕ್ಷಮತೆ, ಸುರಕ್ಷತೆ ಮತ್ತು ದೀರ್ಘಕಾಲದ ಬಾಳಿಕೆ ನೀಡುವುದನ್ನು ಖಚಿತಪಡಿಸಿಕೊಳ್ಳಲು ನಾವು Ultraviolette ನಲ್ಲಿ ವರ್ಷಗಳ ಕಾಲ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಹೂಡಿಕೆ ಮಾಡಿದ್ದೇವೆ. ಈ 'ಬ್ಯಾಟರಿ ಫ್ಲೆಕ್ಸ್' ಆರಂಭಿಸುವುದರ ಮೂಲಕ, ನಾವು ಈ ಹೊಸತನವನ್ನು ನಮ್ಮ ಗ್ರಾಹಕರಿಗೆ ಹೆಚ್ಚು ಸುಲಭವಾಗಿ ಮತ್ತು ಆರಾಮದಾಯಕವಾಗಿ ಲಭ್ಯವಾಗುವಂತೆ ಮಾಡುತ್ತಿದ್ದೇವೆ. ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಹೊಂದಿಕೊಳ್ಳುವ ತಂತ್ರಜ್ಞಾನವನ್ನು ನಿರ್ಮಿಸುವ ಮತ್ತು ಅತ್ಯಾಧುನಿಕ ಸಾರಿಗೆ ಉತ್ಪನ್ನವನ್ನು ಎಂದಿಗಿಂತಲೂ ಹೆಚ್ಚು ಪ್ರಾಯೋಗಿಕವಾಗಿಸುವ ನಮ್ಮ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ," ಎಂದು ಹೇಳಿದರು.
'ಬ್ಯಾಟರಿ ಫ್ಲೆಕ್ಸ್' ಮೂಲಕ Ultraviolette ಸಂಸ್ಥೆಯು ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಗೆ ಇರುವ ಅಡೆತಡೆಗಳನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ, ಜಗತ್ತಿನಾದ್ಯಂತ ಇರುವ ಸವಾರರಿಗೆ ಕೈಗೆಟುಕುವ ದರ, ಅನುಕೂಲತೆ ಒದಗಿಸುತ್ತಿದೆ ಮತ್ತು ಸುಸ್ಥಿರತೆಯಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತಿದೆ.
ಬ್ಯಾಟರಿ ಫ್ಲೆಕ್ಸ್ ಚಾಲನೆ: 'ಇಕೋಫೈ' ಸಹಭಾಗಿತ್ವದಲ್ಲಿ ಬ್ಯಾಟರಿ ಫ್ಲೆಕ್ಸ್: 'ಬ್ಯಾಟರಿ- ಅಸ್- ಎ- ಸರ್ವಿಸ್' (ಬಿಎಎಎಸ್) ಸೌಲಭ್ಯ ಆರಂಭ.
Ultraviolette X-47 CROSSOVER ಅನ್ನು ಈಗ ಆರಂಭಿಕ ಶೇ. 40 ರಷ್ಟು ಕಡಿಮೆ ಬೆಲೆಯಲ್ಲಿ, ಅಂದರೆ ಕೇವಲ ₹1,49,000 ಆರಂಭಿಕ ಬೆಲೆಯಲ್ಲಿ ಖರೀದಿಸಬಹುದು.
- ಬ್ಯಾಟರಿ ಚಂದಾದಾರಿಕೆ ತಿಂಗಳಿಗೆ ಕೇವಲ ₹2,499 ರಿಂದ ಪ್ರಾರಂಭವಾಗಲಿದ್ದು, ಬ್ಯಾಟರಿ ಪ್ಯಾಕ್ ಮೇಲೆ 5 ವರ್ಷಗಳ ವಾರಂಟಿ ಇರಲಿದೆ.