ಮನಸ್ಸು ಶುದ್ದವಾಗಿದ್ದರೆ ಗೃಹಸ್ಥಾಶ್ರಮ ಧನ್ಯ

ಮನಸ್ಸು ಶುದ್ದವಾಗಿದ್ದರೆ ಗೃಹಸ್ಥಾಶ್ರಮ ಧನ್ಯ

image-78fb926f-7e06-4626-b780-fcb35b317ccb.jpg
Profile Vishwavani News May 19, 2022
image-96fab0a0-d722-4c95-8c78-213b6ff5e6ce.jpg
image-d5370be0-ced3-401d-b63a-72bfc5560ab9.jpg
ವಿದ್ವಾನ್ ನವೀನಶಾಸಿ.ರಾ.ಪುರಾಣಿಕ ಮನಸ್ಸು ದೇವಾಲಯವಾದರೆ ಹೃದಯವೇ ಪೂಜಾರಿ. ದೇವಾಲಯ ಶುದ್ಧವಾಗಿರಬೇಕಾದರೆ ಗರ್ಭಗುಡಿ ಶುದ್ಧವಾಗಿರುವುದು ಅನಿವಾರ್ಯ. ಹಾಗೆಯೇ ಗೃಹಸ್ಥನ ಮನಸ್ಸು ಶುದ್ಧವಾಗಿದ್ದರೆ ಮಾತ್ರವೇ ಗೃಹಸ್ಥಾಶ್ರಮವನ್ನು ಸಂತೋಷದಿಂದ ಕಳೆಯಲು ಸಾಧ್ಯ. ವಿವಾಹವಾದವರೆಲ್ಲರೂ ಗೃಹಸ್ಥಾಶ್ರಮಿಗಳೇ. ಆದರೆ ಅವರೆಲ್ಲರೂ ಗೃಹಸ್ಥಾಶ್ರಮದಲ್ಲಿ ಧನ್ಯವಾಗಿದ್ದೇವೆ ಎಂದು ಹೇಳಲಾಗದು. ಇತ್ತೀಚೆಗೆ ತೊಂಬತ್ತು ವರ್ಷದ ಅಜ್ಜ ತಮ್ಮ ಅರವತ್ತನೆ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು. ಅದೇ ಮಾಸದ ನಗೆ ಆ ಹಿರಿಯ ದಂಪತಿಗಳ ಮೊಗದಲ್ಲಿ. ಆರು ವರ್ಷಗಳು ಹೊಗಲಿ ಆರು ತಿಂಗಳು ಕೂಡಿಬಾಳದ ದಾಂಪತ್ಯ ಇಂದು ಕೆಲವೆಡೆ ಕಾಣುತ್ತೇವೆ. ತಿಂಗಳು, ವರ್ಷದೊಳಗೆ ದಾಂಪತ್ಯ ಜೀವನ ಹಳಸಲು ಕಾರಣವೇನು? ಮುಖ್ಯವಾಗಿ ಮನೆಯಲ್ಲಿ ನಗುವು ನಂದಾದೀಪವಾಗಿ, ದ್ವೇಷ ಸಿಟ್ಟು ಮತ್ತು ಮತ್ತೂಬ್ಬರನ್ನು ಕಂಡು ಅಸೂಯೆ ಪಡುವುದು ನಂದಿದ ದೀಪ ವಾಗಿರಬೇಕು. ಕಾಳ್ಗಿಚ್ಚಿಗೆ ಕಾರಣವಾದ ಮಾತುಗಳು ಇರಬಾರದು. ಚಾಣಕ್ಯ ತನ್ನ ನೀತಿಸಾರದಲ್ಲಿ ಹೀಗೆ ಹೇಳಿದ್ದಾನೆ. ಸಾನಂದಂ ಸದನಂ, ಸುತಾಶ್ಚ ಸುಧಿಯಃ, ಕಾಂತಾ ನೀ ದುರ್ಭಾಷಿಣೀ ಸನ್ಮಿತ್ರಂ,ಸುಧನಂ,ಸ್ವಯೋಷಿತಿ ರತಿಃ ಆಜ್ಞೆ ಪರಾಃ ಸೇವಕಾಃ| ಮಿಷ್ಟಾನ್ನ ಪಾನಂ ಗೃಹೇ ಸಾಧೋಃ ಸಂಗಮುಪಾಸತೇ ಹಿ ಸತತಂ, ಧನ್ಯೋ ಗೃಹಸ್ಥಾಶ್ರಮಃಛಿ ಆನಂದ ತುಂಬಿದ ಮನೆ, ಬುದ್ಧಿವಂತ ಮಕ್ಕಳು, ಮಾತಿಗೆ ಎದುರಾಡದ ಹೆಂಡತಿ, ಹಿತೈಷಿಗಳಾದ ಮಿತ್ರರು, ಒಳ್ಳೆಯ ಮೂಲದಿಂದ ಬಂದಿರುವ ಹಣ, ತನ್ನ ಪತ್ನಿಯೊಂದಿಗೆ ನಲಿಯುವಿಕೆ, ಆe ಮೀರದ ಸೇವಕರು, ಯೋಗ್ಯತೆ ತಕ್ಕ ಅತಿಥಿ ಸತ್ಕಾರ, ಶಿವಪೂಜೆ, ಮನೆಯಲ್ಲಿ ಪ್ರತಿ ದಿವಸ ಇಷ್ಟವಾದ ಅನ್ನ ಪಾನಗಳು, ನಿರಂತರವಾಗಿ ಮನೆಗೆ ಸಾಧು- ಸಜ್ಜನರ ಆಗಮನ ಇವು ಇzಗ ಅಂಥವರ ಜೀವನ ಗೃಹಸ್ಥಾಶ್ರಮ ಧನ್ಯ ಎಂದು. ಮನುಷ್ಯ ಸಂಘಜೀವಿ. ಬದುಕಿನಲ್ಲಿ ಬಂದು ಹೋಗುವ ಸಂಬಂಧಗಳು ಒಂದಲ್ಲ ಒಂದು ರೀತಿಯಲ್ಲಿ ವ್ಯಕ್ತಿಯ ಮೇಲೆ ಪರಿಣಾಮ ಬೀರಿರುತ್ತವೆ.  ಯಾವುದೇ ಸಂಬಂಧವಾಗಲಿ ಬದುಕಿನಲ್ಲಿ ಕೈ ಜಾರಿ ಹೋಗುವ ಮುನ್ನ ಅದನ್ನು ಕಾಪಾಡಿಕೊಳ್ಳಬೇಕು. ಸ್ನೇಹ, ಸೋದರ ಸಂಬಂಧ, ಕೌಟುಂಬಿಕ ಬಾಂಧವ್ಯ, ವೃತ್ತಿಪರ ಸ್ನೇಹ ಹೀಗೆ ಎಲ್ಲವೂ ಅಮೂಲ್ಯವಾದ ರತ್ನವಿದ್ದಂತೆ. ಯಾರಿಗೇ ಆಗಲಿ ಅತಿ ಮುಖ್ಯ ಸಂಬಂಧ ಎನಿಸುವುದು ಒಳ್ಳೆಯ ಸ್ನೇಹಿತ ಅಥವಾ ಸ್ನೇಹಿತೆ ಸಿಕ್ಕಾಗ. ಪ್ರಮುಖ ಸಂಬಂಧ ಎಂದರೆ ಬಾಳ ಸಂಗಾತಿ. ಎಷ್ಟೋ ಮಂದಿ ತಮ್ಮ ಪ್ರೀತಿ ಪಾತ್ರರೊಡನೆ ಅನೇಕ ಕಾರಣಗಳಿಗಾಗಿ ಮನಸ್ತಾಪ ಮಾಡಿಕೊಂಡು ದೂರ ಉಳಿಯುತ್ತಾರೆ. ಯಾವುದೇ ವ್ಯಕ್ತಿಯ ಮೌಲ್ಯ ಅವರು ಹತ್ತಿರವಿದ್ದಾಗ ತಿಳಿಯುವು ದಿಲ್ಲ. ದೂರವಾದಾಗ ಅದು ಅರ್ಥವಾಗುತ್ತದೆ. ‘ಕೋಪದಲ್ಲಿ ಕೊಯ್ದ ಮೂಗು ಮತ್ತೆ ಸಿಗುವುದಿಲ್ಲ’ ಎಂಬ ಗಾದೆ ಮಾತಿನಂತೆ ನಾವು ಸಂಬಂಧಗಳನ್ನು ಆದಷ್ಟು ಗಟ್ಟಿಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಬದುಕನ್ನು ನಡೆಸಬೇಕು. ಕೆಲವು ಸಂಬಂಧಗಳು ಹೇಗಿರುತ್ತವೆ ಅಂದರೆ, ಅವರು ನಮಗೆ ಎಷ್ಟೇ ಪ್ರೀತಿ ಕೊಟ್ಟರೂ ನಮಗೆ ಅವರ ಮೇಲೆ ಪ್ರೀತಿ ಉಂಟಾಗುವುದಿಲ್ಲ. ಎಷ್ಟೋ ಮಂದಿ ಪ್ರೀತಿ, ವಿಶ್ವಾಸದಿಂದ ಇದ್ದರೂ ಬೇರೆಯವರ ಮಾತನ್ನು ಕೇಳಿ ಮೂರ್ಖರಾಗಿ ಸಂಬಂಧಗಳಲ್ಲಿ ಬಿರುಕು ಮೂಡಿಸಿಕೊಳ್ಳುವುದೂ ಉಂಟು. ಈ ಎರಡು ವಿಚಾರಗಳಲ್ಲಿ ನಾವು ತಾಳ್ಮೆಯಿಂದ ವರ್ತಿಸಬೇಕು. ಆಗ ಮಾತ್ರ ಸಂಬಂಧ ಗಟ್ಟಿಯಾಗಿರುತ್ತೆ. ಉತ್ತಮ ಸಂಬಂಧಗಳು ಎಂದಿಗೂ ಶ್ರೇಷ್ಠ. ಸಂಬಂಧಗಳು ಮುರಿಯುವ ಮುನ್ನ ತಪ್ಪನ್ನು ಅರಿತು ಸರಿಪಡಿಸಿಕೊಳ್ಳುವುದು ಪ್ರeವಂತಿಕೆಯ ನಡೆ. ಮಕ್ಕಳಿಗೆ ಮಾರ್ಗದರ್ಶನ ಮಕ್ಕಳು ದಾರಿ ತಪ್ಪಿ ನಡೆದಾಗ ತಿದ್ದಿ ತೀಡಿ ಬುದ್ಧಿ ಹೇಳಬೇಕಾದದು ತಂದೆತಾಯಿಗಳ ಕರ್ತವ್ಯ. ಮಕ್ಕಳು ಮಾಡಿದ್ದೆಲ್ಲವನ್ನೂ ಒಪ್ಪಿಕೊಳ್ಳುವುದು ಎಷ್ಟು ಸರಿ? ದುಬಾರಿ ಮತ್ತು ಆಧುನಿಕ ವಿದ್ಯಭ್ಯಾಸ ದೊರೆತರಷ್ಟೇ ಸಾಲದು. ಮಕ್ಕಳಲ್ಲಿ ಉತ್ತಮ ಗುಣಗಳೂ ಇರಬೇಕು. ಇಲ್ಲವಾದಲ್ಲಿ ವಿದ್ಯಾರ್ಥಿನಿಯರೇ ಹಾಕಿ ಸ್ಟಿಕ್‌ನಿಂದ ಬೀದಿಯಲ್ಲಿ ಹೊಡೆದಾಡುವ ಸಂದರ್ಭ ಎದುರಾಗಿ, ಮಾನ ಹರಾಜಾಗಬಹುದು. ಮದುವೆಯಾದ ಮೇಲೆ ಅತಿಯಾಗಿ ಗಂಡನ ಮನೆಯಲ್ಲಿ ತವರು ಮನೆಯವರು ಮೂಗುತೂರಿಸುವುದು ಸರಿಯಾದ ಕ್ರಮವಲ್ಲ. ಒಳ್ಳೆಯ ಸಲಹೆಗಳನ್ನು ನೀಡಿ ಅವರ ಪ್ರೀತಿಗೂ ಪಾತ್ರರಾಗೋಣ. ಆಗ ತಂದೆ ತಾಯಿಗಳಿಗೂ ಸಂತೋಷ. ಹೆಂಡತಿ ಮೃದುಭಾಷಿಣಿ, ಹಿತ, ಮಿತ, ಸ್ಮಿತ ಭಾಷಿಣಿಯಾಗಿದ್ದಾಗ ಮನೆಗೆ ಎಲ್ಲಿಲ್ಲದ ಕಾಂತಿ. ಆದರೆ ಅವಳೇ ಪ್ರತಿಸ್ಪರ್ಧಿಯಾಗಿ ನಿಂತಾಗ, ಮನೆ ಮತ್ತು ಸಂಪ್ರದಾಯಗಳನ್ನ ಮುರಿದಾಗ ಅತೃಪ್ತಿ ತುಂಬಿರುತ್ತದೆ. ಯಾವುದಾದರೂ ರೀತಿಯಲ್ಲಿ ಶಾಕಾಯ ಲವಣಾಯ ಬಂದ ಹಣ ಮನೆ ಸೇರಬಾರದು. ಸಾತ್ವಿಕ ಮಾರ್ಗದಿಂದ ಬಂದ ‘ಸುಧನ’ ಮನೆ ತುಂಬಿರಬೇಕು. ಅನ್ಯಾಯೇನಾರ್ಜಿತಂ ವಿತ್ತಂ ದಶವರ್ಷಾಣಿ ತಿಷ್ಠತಿ| ಪ್ರಾಪ್ತೇತು ಏಕಾದಶೇ ವರ್ಷೇ ಸಮೂಲಂ ತು ವಿನಶ್ಯತಿಛಿ ಅನ್ಯಾಯದಿಂದ ಬಂದ ಹಣ ಹತ್ತು ವರ್ಷ ನಿಲ್ಲುತ್ತದೆ. ಆದರೆ ಹನ್ನೊಂದನೇ ವರ್ಷ ಆ ಹಣ ಮೂಲ ಸಹಿತ ಹೋಗುತ್ತದೆ ಎಂದು ಅನುಭವವಾಣಿಯ ಸೂಕ್ತ.. ಅತಿಥಿ ದೇವೋ ಭವ ಎಂಬ ಸಂಸ್ಕೃತಿ ನಮ್ಮದು. ಅನೇಕರು ಮನೆಗೆ ಬರುತ್ತಾರೆ. ಅವರಿಗೂ ಬೇಸರದ ಮಾತುಗಳನ್ನು ಆಡದೆ ಆತಿಥ್ಯ ಸ್ವೀಕರಿಸ ಬೇಕು ಎಂಬುದು ಗೀತೆಯ ಸಾರ. ಇಷ್ಟ ದೇವರ ಪೂಜಿಸಿ ನೈವೇದ್ಯ ಅರ್ಪಿಸಿ ಮನೆಯವರೆ ಸೇರಿ ಸೇವಿಸಿದಾಗ ಅದು ಮಹಾ ಪ್ರಸಾದವಾಗುತ್ತದೆ. ಈ ರೀತಿಯಾಗಿ ಬಾಳಿದಾಗ ಅಂಥವರ ಗೃಹಸ್ಥಾಶ್ರಮ ಧನ್ಯ.
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ