ಎಲ್ಲಿಯೇ ಇದ್ದರೂ ಯಾವುದೇ ಕ್ಷಣದಲ್ಲಾದರೂ ಆ್ಯಸಿಡಿಟಿಗೆ ತಕ್ಷಣ ಪರಿಹಾರ: ಡೈಜೀನ್ ಇನ್‌ಸ್ಟಾ ಆನ್ ದಿ ಗೋ ಉತ್ಪನ್ನ ಬಿಡುಗಡೆ ಮಾಡಿದ ಅಬಾಟ್
ತಕ್ಷಣವೇ ಬಳಸುವಂತೆ ಈ ಸ್ಯಾಶೆ ವಿನ್ಯಾಸಗೊಳಿಸಲಾಗಿದ್ದು, ನೀರು ಮಿಶ್ರಗೊಳಿಸುವ ಅಥವಾ ಅಳತೆ ಮಾಡಬೇಕಾದ ಅಗತ್ಯ ಇರುವುದಿಲ್ಲ. ಸ್ಯಾಚೆಯನ್ನು ಕಿತ್ತು, ಸಿಪ್ ಮಾಡಿ, ನೇರವಾಗಿ ಕುಡಿದು ಸಮಸ್ಯೆ ಯಿಂದ ರಿಲೀಫ್ ಪಡೆಯಬಹುದು. ಡೈಜೀನ್ ಇನ್‌ಸ್ಟಾ ಆನ್ ದಿ ಗೋ ಈಗ ಆಹ್ಲಾದಕರ ಮಿಂಟ್ ಫ್ಲೇವರ್ ನಲ್ಲಿ ಲಭ್ಯವಿದ್ದು, ಐದು ಸಿಂಗಲ್-ಯೂಸ್ ಸ್ಯಾಚೆಗಳ ಪ್ಯಾಕ್ ನ ಬೆಲೆ ₹50 ನಿಗದಿಪಡಿಸ ಲಾಗಿದೆ.


ಬೆಂಗಳೂರು: ಆ್ಯಸಿಡಿಟಿ ಸಮಸ್ಯೆಗೆ ಕೇವಲ 2 ಸೆಕೆಂಡುಗಳಲ್ಲಿ ರಿಲೀಫ್ ನೀಡಲು ಸಿದ್ಧವಾಗಿರುವ ಆಂಟಾಸಿಡ್ ಸೊಲ್ಯೂಷನ್ ಡೈಜೀನ್ ಇನ್‌ಸ್ಟಾ ಆನ್ ದಿ ಗೋ ಉತ್ಪನ್ನವನ್ನು ಅಬಾಟ್ ಸಂಸ್ಥೆಯು ಬಿಡುಗಡೆ ಮಾಡಿದೆ.
ಡೈಜೀನ್ ಇನ್‌ಸ್ಟಾ ಆನ್ ದಿ ಗೋ ಮೂಲಕ ಅಬಾಟ್ ಸಂಸ್ಥೆಯು ಈ ಕಾಲದ ವೇಗದ ಜೀವನಶೈಲಿಗೆ ಪೂರಕವಾಗಿರುವ ನೀರು ಮುಕ್ತ, ರೆಡಿ ಟು ಯೂಸ್ (ಬಳಕೆಗೆ ಸಿದ್ಧವಾದ) ಉತ್ಪನ್ನವನ್ನು ಪರಿಚಯಿ ಸಿದೆ. ಈ ಉತ್ಪನ್ನವು ಆಸಿಡಿಟಿ, ಎದೆ ಉರಿ ಮತ್ತು ಅಜೀರ್ಣಕ್ಕೆ ತ್ವರಿತವಾಗಿ ಮತ್ತು ಪರಿಣಾಮಕಾರಿ ಯಾಗಿ ರಿಲೀಫ್ ನೀಡುತ್ತದೆ.
1 ಬಿಡುವಿಲ್ಲದ ಜೀವನಶೈಲಿ ಹೊಂದಿರುವ ಜನರಿಗಾಗಿ ಅಭಿವೃದ್ಧಿಪಡಿಸಲಾದ ಈ ತ್ವರಿತ ಕಾರ್ಯ ನಿರ್ವಹಣೆಯ ಉತ್ಪನ್ನವು ಕೇವಲ 2 ಸೆಕೆಂಡುಗಳಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ತೊಂದರೆ ನಿವಾರಿಸಿ ಅನುಕೂಲತೆ ಒದಗಿಸುತ್ತದೆ. 10 ಎಂಎಲ್ ಸ್ಯಾಚೆಯ ಉತ್ಪನ್ನ ಸಿದ್ಧವಾಗಿದ್ದು, ಆಸಿಡಿಟಿ ಮತ್ತು ಗ್ಯಾಸ್- ಸಂಬಂಧಿತ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ತೊಡೆದು ಹಾಕುತ್ತದೆ.
ಇದನ್ನೂ ಓದಿ: Health Tips: ಹೃದಯ ಆರೋಗ್ಯಕ್ಕೂ ಬೇಕು ಕಾಳಜಿ
ತಕ್ಷಣವೇ ಬಳಸುವಂತೆ ಈ ಸ್ಯಾಶೆ ವಿನ್ಯಾಸಗೊಳಿಸಲಾಗಿದ್ದು, ನೀರು ಮಿಶ್ರಗೊಳಿಸುವ ಅಥವಾ ಅಳತೆ ಮಾಡಬೇಕಾದ ಅಗತ್ಯ ಇರುವುದಿಲ್ಲ. ಸ್ಯಾಚೆಯನ್ನು ಕಿತ್ತು, ಸಿಪ್ ಮಾಡಿ, ನೇರವಾಗಿ ಕುಡಿದು ಸಮಸ್ಯೆಯಿಂದ ರಿಲೀಫ್ ಪಡೆಯಬಹುದು. ಡೈಜೀನ್ ಇನ್‌ಸ್ಟಾ ಆನ್ ದಿ ಗೋ ಈಗ ಆಹ್ಲಾದಕರ ಮಿಂಟ್ ಫ್ಲೇವರ್ ನಲ್ಲಿ ಲಭ್ಯವಿದ್ದು, ಐದು ಸಿಂಗಲ್-ಯೂಸ್ ಸ್ಯಾಚೆಗಳ ಪ್ಯಾಕ್ ನ ಬೆಲೆ ₹50 ನಿಗದಿಪಡಿಸಲಾಗಿದೆ.
ಈ ಕುರಿತು ಆಬಾಟ್ ನ ಮೆಡಿಕಲ್ ಅಫೇರ್ಸ್ ಡೈರೆಕ್ಟರ್ ಡಾ.ಜೆಜೋಯ್ ಕರಣಕುಮಾರ್ ಅವರು, “ಆಸಿಡಿಟಿ ಸಮಸ್ಯೆ ಎಚ್ಚರಿಕೆ ನೀಡದೆಯೇ ಬರುತ್ತದೆ. ಒತ್ತಡದ ಕೆಲಸದ ದಿನದಲ್ಲಿ, ಪ್ರಯಾಣದ ವೇಳೆ, ಅಥವಾ ದೈನಂದಿನ ಪ್ರಯಾಣದಲ್ಲಿ ಯಾವಾಗ ಬೇಕಾದರೂ ಆಸಿಡಿಟಿ ಕಾಡಬಹುದು. ಅದಕ್ಕಾಗಿ ಈ ಬಳಕೆಗೆ ಸಿದ್ಧವಾದ, ಸುಲಭವಾದ ಉತ್ಪನ್ನವು ಸೆಕೆಂಡುಗಳಲ್ಲಿ ತ್ವರಿತ ರಿಲೀಫ್ ನೀಡು ತ್ತದೆ ಮತ್ತು ಎರಡು ಗಂಟೆಗಳಿಗಿಂತ ಹೆಚ್ಚು ಕಾಲ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ವಿಶ್ವಾಸಾರ್ಹತೆಗೆ ಹೆಸರಾಗಿರುವ ಬ್ರ್ಯಾಂಡ್ ಈ ಉತ್ಪನ್ನವನ್ನು ಒದಗಿಸುತ್ತಿದ್ದು, ಪರಿಣಾಮಕಾರಿ ಉತ್ಪನ್ನದ ಮೂಲಕ ಅನುಕೂಲತೆ ಒದಗಿಸುತ್ತದೆ. ವಿಶೇಷವಾಗಿ ಕಾಂಪ್ಯಾಕ್ಟ್ ಆಗಿ, ಪಾಕೆಟ್ -ಫ್ರೆಂಡ್ಲಿ ಆಗಿರುವ ಫಾರ್ಮ್ಯಾಟ್ ನಲ್ಲಿರುವ ಈ ಉತ್ಪನ್ನ ಸುಲಭ ಬಳಕೆಗೆ ನೆರವಾಗುತ್ತದೆ” ಎಂದು ಹೇಳಿದರು.
ಗ್ರಾಹಕರ ಪ್ರತಿಕ್ರಿಯೆ ಪಡೆದು ಈ ಹೊಸ ಫಾರ್ಮ್ಯಾಟ್ ಅನ್ನು ಅಭಿವೃದ್ಧಿಪಡಿಸಲಾಗಿದ್ದು, ಆಸಿಡಿಟಿಯನ್ನು ನಿರ್ವಹಿಸಲು ವೇಗವಾದ, ಪರಿಣಾಮಕಾರಿ ಮತ್ತು ಸುಲಭ ಬಳಕೆಯ ಉತ್ಪನ್ನ ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಅಬಿವೃದ್ಧಿ ಪಡಿಸಲಾಗಿದೆ. ಗ್ರಾಹಕರ ಪ್ರತಿಕ್ರಿಯೆ ಗಳು ಆಬಾಟ್ ಗೆ ರಿಲೀಫ್ ಉತ್ಪನ್ನವನ್ನು ಮರುಕಲ್ಪನೆ ಮಾಡಲು ಮಾರ್ಗದರ್ಶನ ನೀಡಿದವು. ಇದರಿಂದಾಗಿ ಆಧುನಿಕ ಜೀವನಶೈಲಿಗೆ ಹೊಂದಿಕೊಳ್ಳುವ ನೀರು ಬಳಕೆ ಅಗತ್ಯವಿಲ್ಲದ, ಸಿಂಗಲ್- ಯೂಸ್ ಸ್ಯಾಚೆ ರೂಪದಲ್ಲಿರುವ ಉತ್ಪನ್ನ ಸೃಷ್ಟಿಯಾಯಿತು. ಗ್ರಾಹಕರ ಸಮಸ್ಯೆಗಳು ಮತ್ತು ಆದ್ಯತೆಗಳನ್ನು ಎಚ್ಚರಿಕೆಯಿಂದ ಆಲಿಸುವ ಮೂಲಕ ಅಬಾಟ್ ಸಂಸ್ಥೆಯು ಇಂದಿನ ವೇಗದ ಜಗತ್ತಿನ ಅಗತ್ಯಗಳನ್ನು ಪೂರೈಸುವ ಉತ್ಪನ್ನವನ್ನು ರಚಿಸಿದೆ.
ಉತ್ಪನ್ನ ಬಿಡುಗಡೆಗೆ ಪೂರಕವಾಗಿ ಸಂಸ್ಥೆಯು “ಆಸಿಡಿಟಿ ಕಹೀನ್ ಭೀ ಹೋ, ಡೈಜೀನ್ ಇನ್‌ಸ್ಟಾ ಆನ್ ದಿ ಗೋ” ಎಂಬ ಹೊಸ ಜಾಹೀರಾತು ಅಭಿಯಾನವನ್ನು ಪ್ರಾರಂಭಿಸಿದೆ. ಈ ಡಿಜಿಟಲ್ ಫಸ್ಟ್ ಜಾಹೀರಾತು ಯೋಜನೆಯು ಹೊರಾಂಗಣಗಳು, ರೀಟೇಲ್ ಟಚ್ ಪಾಯಿಂಟ್ ಗಳು ಮತ್ತು ಆನ್ ಲೈನ್ ಪ್ಲಾಟ್‌ಫಾರ್ಮ್ ಗಳಲ್ಲಿ ಕಾಣಿಸಿಕೊಳ್ಳಲಿದೆ. ಈ ಜಾಹೀರಾತು ಅಭಿಯಾನದಲ್ಲಿ ಮಲ್ಟಿಪ್ಲೆಕ್ಸ್ ಫಿಲ್ಮ್, ಬಸ್ ಫಿಲ್ಮ್ ಮತ್ತು ಅಡ್ವೆಂಚರ್ ಫಿಲ್ಮ್ ನಂತಹ ಆಕರ್ಷಕ ಜಾಹೀರಾತುಗಳು ಸೇರಿವೆ.
ಡೈಜೀನ್ ಇನ್‌ಸ್ಟಾ ಆನ್ ದಿ ಗೋ ಭಾರತದ ನಂ.1 ಆಂಟಾಸಿಡ್ ಬ್ರ್ಯಾಂಡ್ ಡೈಜೀನ್ ಶ್ರೇಣಿಗೆ ಹೊಸ ಸೇರ್ಪಡೆಯಾಗಿದ್ದು, ಗ್ರಾಹಕರಿಗೆ ಆಸಿಡಿಟಿಯನ್ನು ನಿರ್ವಹಿಸಲು ಹೊಸ ಆಯ್ಕೆಯನ್ನು ಒದಗಿಸು ತ್ತದೆ. ಈಗ ಭಾರತದಾದ್ಯಂತ ಪ್ರಮುಖ ಫಾರ್ಮಸಿಗಳಲ್ಲಿ ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ. ಈ ಉತ್ಪನ್ನವು ಅಬಾಟ್ ನ ಡೈಜೀನ್ ಜೆಲ್ ಮತ್ತು ಟ್ಯಾಬ್ಲೆಟ್ ಗಳ ಶ್ರೇಣಿಗೆ ಸೇರಿದೆ.