ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಗುವಿನ ಆರೋಗ್ಯಕ್ಕೆ ಆಯುರ್ವೇದ ಸ್ಪರ್ಶ: ಪೌಷ್ಟಿಕತೆ, ವ್ಯಾಧಿಕ್ಷಮತ್ವದ ಸುಧಾರಣೆಗೆ ಪೂರಕ ಆರೈಕೆ

Child Health: ಮಕ್ಕಳಲ್ಲಿ ಹಸಿವು ಕಡಿಮೆಯಾಗುವುದು, ದೇಹದ ತೂಕ ಇಳಿಕೆಯಾಗುವುದು ಹಾಗೂ ಪದೇ ಪದೆ ಶೀತ ಮತ್ತು ಕೆಮ್ಮು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಇಂತಹ ಸಮಸ್ಯೆಗಳನ್ನು ಆರಂಭದಲ್ಲಿಯೇ ಗುರುತಿಸಿ ಸೂಕ್ತ ಆರೈಕೆ ನೀಡುವುದು ಮಗುವಿನ ಬೆಳವಣಿಗೆ ಮತ್ತು ಆರೋಗ್ಯದ ದೃಷ್ಟಿಯಿಂದ ಬಹಳ ಮುಖ್ಯ.

ಮಕ್ಕಳ ಪೌಷ್ಟಿಕತೆ, ವ್ಯಾಧಿಕ್ಷಮತ್ವದ ಸುಧಾರಣೆಗೆ ಪೂರಕ ಕ್ರಮ

ಸಾಂದರ್ಭಿಕ ಚಿತ್ರ ಮತ್ತು ಒಳಚಿತ್ರದಲ್ಲಿ ಡಾ. ಪೂಜಾ -

Ramesh Ballamoole
Ramesh Ballamoole Nov 2, 2026 7:31 PM
  • ಡಾ. ಪೂಜಾ ಎಂ.ಎಸ್.

ಮಕ್ಕಳಲ್ಲಿ ಹಸಿವು ಕಡಿಮೆಯಾಗುವುದು, ದೇಹದ ತೂಕ ಇಳಿಕೆಯಾಗುವುದು ಹಾಗೂ ಪದೇ ಪದೆ ಶೀತ ಮತ್ತು ಕೆಮ್ಮು ಕಾಣಿಸಿಕೊಳ್ಳುವುದು ಪೋಷಕರಲ್ಲಿ ಆತಂಕ ಮೂಡಿಸುವ ಸಾಮಾನ್ಯ ಆರೋಗ್ಯ ಸಮಸ್ಯೆಗಳಾಗಿವೆ. ಇಂತಹ ಸಮಸ್ಯೆಗಳನ್ನು ಆರಂಭದಲ್ಲಿಯೇ ಗುರುತಿಸಿ ಸೂಕ್ತ ಆರೈಕೆ ನೀಡುವುದು ಮಗುವಿನ ಬೆಳವಣಿಗೆ ಮತ್ತು ಆರೋಗ್ಯದ ದೃಷ್ಟಿಯಿಂದ ಬಹಳ ಮುಖ್ಯ.

ಆಯುರ್ವೇದದ ದೃಷ್ಟಿಕೋನದಲ್ಲಿ ಹಸಿವು ಕಡಿಮೆಯಾಗುವುದನ್ನು ಅಗ್ನಿಮಾಂದ್ಯ ಎಂದು ಪರಿಗಣಿಸಲಾಗುತ್ತದೆ. ಪದೇ ಪದೆ ಅನಾರೋಗ್ಯಕ್ಕೆ ಒಳಗಾಗುವುದನ್ನು ಗಮನದಲ್ಲಿಟ್ಟುಕೊಂಡು ಮಗುವಿನ ವ್ಯಾಧಿಕ್ಷಮತ್ವ (ದೇಹದ ರೋಗಗಳನ್ನು ಎದುರಿಸುವ ಒಟ್ಟಾರೆ ಆರೋಗ್ಯದ ಸುಧಾರಣೆ) ಚಿಕಿತ್ಸೆಯ ಪ್ರಮುಖ ಉದ್ದೇಶಗಳಾಗಿ ಪರಿಗಣಿಸಲಾಗುತ್ತದೆ.

ಚಿಕಿತ್ಸೆಯ ಭಾಗವಾಗಿ ಸರ್ವಾಂಗ ಅಭ್ಯಂಗ (ದೇಹಕ್ಕೆ ಔಷಧೀಯ ತೈಲದಿಂದ ಮಸಾಜ್), ನಾಡಿ ಸ್ವೇದ ಹಾಗೂ ಘೃತದಿಂದ ಮಾತ್ರಾ ಬಸ್ತಿ ವಿಧಾನಗಳನ್ನು ಅನುಸರಿಸಲಾಗುತ್ತದೆ.

ಇಂತಹದ್ದೇ ಚಿಕಿತ್ಸಾ ಕ್ರಮವೊಂದರಲ್ಲಿ ಮೂರು ಬಾರಿ ಚಿಕಿತ್ಸಾ ಸಿಟ್ಟಿಂಗ್‌ಗಳ ನಂತರ ಮಗುವಿನ ದೇಹದ ತೂಕದಲ್ಲಿ ಹೆಚ್ಚಳ ಕಂಡುಬಂದಿತು. ಹಸಿವಿನಲ್ಲಿಯೂ ಸುಧಾರಣೆ ಕಂಡುಬಂದಿದ್ದು, ಪೋಷಕರ ಪ್ರಕಾರ ಪದೇಪದೇ ಕಾಣಿಸಿಕೊಳ್ಳುತ್ತಿದ್ದ ಶೀತ ಮತ್ತು ಕೆಮ್ಮಿನ ಆವರ್ತನೆಯೂ ಕಡಿಮೆಯಾಯಿತು. ಮಗುವಿನ ಒಟ್ಟಾರೆ ಆರೋಗ್ಯ ಮತ್ತು ಜೀವನದ ಗುಣಮಟ್ಟದಲ್ಲಿಯೂ ಸುಧಾರಣೆಯನ್ನು ಪೋಷಕರು ಗಮನಿಸಿದರು.

ಉಬ್ಬಿದ ರಕ್ತನಾಳಗಳ ನಿರ್ವಹಣೆಯಲ್ಲಿ ಆಯುರ್ವೇದದ ಪೂರಕ ಪಾತ್ರ: ಆರೋಗ್ಯಕರ ಕಾಲುಗಳತ್ತ ಹೊಸ ಹೆಜ್ಜೆ

ಈ ಪ್ರಕರಣವು ಮಕ್ಕಳ ಆರೋಗ್ಯ ಆರೈಕೆಯಲ್ಲಿ ಜೀರ್ಣಶಕ್ತಿ, ಪೌಷ್ಟಿಕತೆ ಮತ್ತು ವ್ಯಾಧಿಕ್ಷಮತ್ವದ ಮಹತ್ವವನ್ನು ಎತ್ತಿ ತೋರಿಸುತ್ತದೆ. ಆಯುರ್ವೇದ ಚಿಕಿತ್ಸೆಯ ಪೂರಕ ಪಾತ್ರವನ್ನು ವೈಜ್ಞಾನಿಕವಾಗಿ ದೃಢೀಕರಿಸಲು ಹೆಚ್ಚಿನ ಅಧ್ಯಯನ ಮತ್ತು ದೀರ್ಘಕಾಲದ ಅನುಸರಣೆ ಅಗತ್ಯ.

"ಮಕ್ಕಳಲ್ಲಿ ಕಂಡುಬರುವ ಪೌಷ್ಟಿಕಾಂಶದ ಕೊರತೆ, ಬೆಳವಣಿಗೆಯ ಸಮಸ್ಯೆಗಳು, ಜೀರ್ಣಾಂಗವ್ಯೂಹದ ತೊಂದರೆಗಳು, ಉಸಿರಾಟದ ಸಮಸ್ಯೆಗಳು, ಚರ್ಮರೋಗಗಳು, ಹಾಗೂ ಇತರ ಮಕ್ಕಳ ಆರೋಗ್ಯ ಸಮಸ್ಯೆಗಳ ಸಮಗ್ರ ಮೌಲ್ಯಮಾಪನ ಮತ್ತು ಸೂಕ್ತ ಚಿಕಿತ್ಸಾ ಮಾರ್ಗದರ್ಶನಕ್ಕಾಗಿ ಮೈಸೂರಿನ ಜೆಎಸ್‌ಎಸ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಕೌಮಾರಭೃತ್ಯ ವಿಭಾಗ (ಮಕ್ಕಳ ವಿಭಾಗ)ದಲ್ಲಿ ತಜ್ಞ ವೈದ್ಯರ ಸಮಾಲೋಚನೆ ಪಡೆಯಬಹುದುʼʼ ಎಂದು ವೈದ್ಯರು ತಿಳಿಸಿದ್ದಾರೆ.