ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಣಿಪಾಲ್ ಆಸ್ಪತ್ರೆಯಲ್ಲಿ ದೇಶದ ಮೊದಲ ಎಐ ಆಧಾರಿತ ಎಲೆಕ್ಟಾ ಇವೋ

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಪ್ರತಿ ವರ್ಷ ಸುಮಾರು 14.6 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ದಾಖಲಾಗುತ್ತಿವೆ. ಈ ಹಿನ್ನೆಲೆ ಯಲ್ಲಿ ರೋಗಿಯ ಅಗತ್ಯಕ್ಕೆ ತಕ್ಕಂತೆ ಚಿಕಿತ್ಸೆಯನ್ನು ರೂಪಿಸುವ ತಂತ್ರಜ್ಞಾನಗಳ ಅಗತ್ಯ ಹೆಚ್ಚುತ್ತಿದ್ದು, ಎಲೆಕ್ಟಾ ಇವೋ ಈ ದಿಸೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಮಣಿಪಾಲ್ ಆಸ್ಪತ್ರೆಯಲ್ಲಿ ದೇಶದ ಮೊದಲ ಎಐ ಆಧಾರಿತ ಎಲೆಕ್ಟಾ ಇವೋ

-

Profile
Ashok Nayak Aug 6, 2026 4:16 PM

ಬೆಂಗಳೂರು: ಕ್ಯಾನ್ಸರ್ ಚಿಕಿತ್ಸೆಯಲ್ಲಿ ಹೊಸ ಮೈಲುಗಲ್ಲು ನಿರ್ಮಿಸಿರುವ ಮಣಿಪಾಲ್ ಆಸ್ಪತ್ರೆ, ಭಾರತದಲ್ಲೇ ಮೊದಲ ಬಾರಿಗೆ ಎಐ (ಕೃತಕ ಬುದ್ಧಿಮತ್ತೆ) ಆಧಾರಿತ ಅಡಾಪ್ಟಿವ್ ಸಿಟಿ-ಲಿನ್ಯಾಕ್ (CT-Linac) ವೇದಿಕೆ ಎಲೆಕ್ಟಾ ಇವೋ (Elekta Evo) ಅನ್ನು ಅಳವಡಿಸಿಕೊಂಡಿದೆ. ಈ ಅತ್ಯಾಧುನಿಕ ತಂತ್ರಜ್ಞಾನವು ವೈದ್ಯರಿಗೆ ಆನ್‌ಲೈನ್ ಅಡಾಪ್ಟಿವ್ ರೇಡಿಯೋಥೆರಪಿ (Adaptive Radiotherapy) ನೀಡಲು ನೆರವಾಗಲಿದ್ದು, ಪ್ರತಿಯೊಬ್ಬ ರೋಗಿಯ ದೇಹದಲ್ಲಿ ಚಿಕಿತ್ಸೆಯ ಅವಧಿ ಯಲ್ಲಿ ಉಂಟಾಗುವ ಬದಲಾವಣೆಗಳಿಗೆ ಅನುಗುಣವಾಗಿ ಚಿಕಿತ್ಸೆಯನ್ನು ಹೊಂದಾಣಿಕೆ ಮಾಡುವ ಮೂಲಕ ಹೆಚ್ಚು ನಿಖರ ಹಾಗೂ ವೈಯಕ್ತಿಕಗೊಳಿಸಿದ ಕ್ಯಾನ್ಸರ್ ಚಿಕಿತ್ಸೆಯನ್ನು ಸಾಧ್ಯವಾಗಿಸುತ್ತದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಪ್ರತಿ ವರ್ಷ ಸುಮಾರು 14.6 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ದಾಖಲಾಗುತ್ತಿವೆ. ಈ ಹಿನ್ನೆಲೆ ಯಲ್ಲಿ ರೋಗಿಯ ಅಗತ್ಯಕ್ಕೆ ತಕ್ಕಂತೆ ಚಿಕಿತ್ಸೆಯನ್ನು ರೂಪಿಸುವ ತಂತ್ರಜ್ಞಾನಗಳ ಅಗತ್ಯ ಹೆಚ್ಚುತ್ತಿದ್ದು, ಎಲೆಕ್ಟಾ ಇವೋ ಈ ದಿಸೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಇದನ್ನೂ ಓದಿ: Vishwavani Health: ಬಿಳಿ ಕೂದಲನ್ನು ಕಪ್ಪು ಮಾಡುತ್ತೆ ಈ ಒಂದು ಮ್ಯಾಜಿಕ್‌ ಸೊಪ್ಪು; ಕಾಡಲ್ಲಿ ಮಾತ್ರವಲ್ಲ ನಾಡಲ್ಲೂ ಸಿಗುತ್ತೆ! ವಿಡಿಯೊ ನೋಡಿ

ಮಣಿಪಾಲ್ ಆಸ್ಪತ್ರೆಯ ರೇಡಿಯೇಷನ್ ಆಂಕಾಲಜಿ ವಿಭಾಗವು ಈಗಾಗಲೇ ಈ ತಂತ್ರಜ್ಞಾನವನ್ನು ತನ್ನ ದೈನಂದಿನ ಚಿಕಿತ್ಸಾ ವ್ಯವಸ್ಥೆಯಲ್ಲಿ ಅಳವಡಿಸಿಕೊಂಡಿದೆ. ಎಲೆಕ್ಟಾ ಇವೋ ಬಳಸಿ ಸ್ಥಳೀಯ ವಾಗಿ ಮುಂದುವರಿದ ಹಂತದ ರೆಕ್ಟಲ್ ಕ್ಯಾನ್ಸರ್ ಹೊಂದಿದ್ದ ಮೊದಲ ರೋಗಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ. ರೋಗಿಯು ನಿಯೋಅಡ್ಜುವೆಂಟ್ ಕೀಮೋ-ರೇಡಿಯೋಥೆರಪಿಯನ್ನು ಅತ್ಯಲ್ಪ ಅಡ್ಡಪರಿಣಾಮಗಳೊಂದಿಗೆ ಪೂರ್ಣಗೊಳಿಸಿದ್ದು, ಇದು ಈ ತಂತ್ರಜ್ಞಾನದ ಪರಿಣಾಮ ಕಾರಿತ್ವವನ್ನು ಸಾಬೀತುಪಡಿಸಿದೆ.

ಎಲೆಕ್ಟಾದ ಟೈಮಿಯಾ (TIMEA) ಪ್ರದೇಶದ ಮುಖ್ಯಸ್ಥ ಫಿರಾಸ್ ಅಲ್ ಹಸನ್ ಮಾತನಾಡಿ, "ಭಾರತ ದಲ್ಲಿ ಅಡಾಪ್ಟಿವ್ ರೇಡಿಯೇಷನ್ ಥೆರಪಿಯನ್ನು ಮತ್ತಷ್ಟು ವಿಸ್ತರಿಸುವಲ್ಲಿ ಇದು ಮಹತ್ವದ ಮೈಲಿಗಲ್ಲು. ಎಐ-ಸಕ್ರಿಯ ಇಮೇಜಿಂಗ್ ಮತ್ತು ಆನ್‌ಲೈನ್ ಅಡಾಪ್ಟಿವ್ ಸಾಮರ್ಥ್ಯಗಳನ್ನು ಹೊಂದಿರುವ ಎಲೆಕ್ಟಾ ಇವೋ ವೈದ್ಯರಿಗೆ ರೋಗಿಯ ಚಿಕಿತ್ಸೆಯ ಪ್ರತಿಯೊಂದು ಹಂತದಲ್ಲೂ ಹೆಚ್ಚು ನಿಖರವಾದ ನಿರ್ಧಾರಗಳನ್ನು ಕೈಗೊಳ್ಳಲು ನೆರವಾಗುತ್ತದೆ. ಈ ತಂತ್ರಜ್ಞಾನವನ್ನು ಭಾರತಕ್ಕೆ ಪರಿಚಯಿಸಲು ಮಣಿಪಾಲ್ ಆಸ್ಪತ್ರೆಯೊಂದಿಗೆ ಕೈಜೋಡಿಸಿರುವುದು ನಮಗೆ ಹೆಮ್ಮೆಯ ವಿಚಾರ" ಎಂದರು.

ಮಣಿಪಾಲ್ ಆಸ್ಪತ್ರೆ, ಯಲಹಂಕದ ರೇಡಿಯೇಷನ್ ಆಂಕಾಲಜಿ ವಿಭಾಗದ ಲೀಡ್ ಕನ್ಸಲ್ಟೆಂಟ್ ಡಾ. ವಿಕ್ರಮ್ ಮೈಯಾ ಅವರು, "ರೋಗಿಯ ದೇಹದಲ್ಲಿ ಆಗುವ ಬದಲಾವಣೆಗಳಿಗೆ ಅನುಗುಣವಾಗಿ ಪ್ರತಿದಿನ ಚಿಕಿತ್ಸೆಯನ್ನು ಪರಿಷ್ಕರಿಸುವ ಸಾಮರ್ಥ್ಯ ಎಲೆಕ್ಟಾ ಇವೋಗೆ ಇದೆ. ಇದರಿಂದ ಟ್ಯೂಮರ್‌ ಗೆ ಹೆಚ್ಚು ನಿಖರವಾಗಿ ರೇಡಿಯೇಷನ್ ನೀಡುವುದರ ಜೊತೆಗೆ ಆರೋಗ್ಯಕರ ಅಂಗಾಂಶಗಳನ್ನು ರಕ್ಷಿಸಬಹುದು. ಸರ್ವೈಕಲ್, ರೆಕ್ಟಲ್ ಹಾಗೂ ಪ್ರೋಸ್ಟೇಟ್ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಯಲ್ಲಿ ಆರಂಭಿಕ ಫಲಿತಾಂಶಗಳು ಅತ್ಯಂತ ಆಶಾದಾಯಕವಾಗಿದ್ದು, ಅಡ್ಡಪರಿಣಾಮಗಳು ಸಹ ಅತ್ಯಲ್ಪವಾಗಿವೆ" ಎಂದು ತಿಳಿಸಿದರು.

ಐರಿಸ್™ ಎಐ-ಆಧಾರಿತ ಇಮೇಜಿಂಗ್ ತಂತ್ರಜ್ಞಾನದಿಂದ ಕಾರ್ಯನಿರ್ವಹಿಸುವ ಎಲೆಕ್ಟಾ ಇವೋ, ಟ್ಯೂಮರ್ ಮತ್ತು ಸುತ್ತಮುತ್ತಲಿನ ಅಂಗಾಂಶಗಳನ್ನು ಅತ್ಯಂತ ಸ್ಪಷ್ಟವಾಗಿ ಗುರುತಿಸಲು ನೆರವಾಗುತ್ತದೆ. ಎಐ ನೆರವಿನ ಕಾಂಟೂರಿಂಗ್, ವೇಗದ ಚಿಕಿತ್ಸಾ ಯೋಜನೆ ಮತ್ತು ನಿಖರ ಡೋಸ್ ಲೆಕ್ಕಾಚಾರದ ಮೂಲಕ ವೈದ್ಯರಿಗೆ ಹೆಚ್ಚಿನ ಕಾರ್ಯಕ್ಷಮತೆ ಹಾಗೂ ಆತ್ಮವಿಶ್ವಾಸದೊಂದಿಗೆ ಚಿಕಿತ್ಸೆ ನೀಡಲು ಇದು ಸಹಕಾರಿಯಾಗಿದೆ.

ಪ್ರಸ್ತುತ, ಯಲಹಂಕದ ಮಣಿಪಾಲ್ ಆಸ್ಪತ್ರೆಯಲ್ಲಿ ಈ ತಂತ್ರಜ್ಞಾನವನ್ನು ಸರ್ವೈಕಲ್, ರೆಕ್ಟಲ್ ಹಾಗೂ ಪ್ರೋಸ್ಟೇಟ್ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ಬಳಸಲಾಗುತ್ತಿದ್ದು, ಇದು ವೈಯಕ್ತಿಕಗೊಳಿಸಿದ, ಅತ್ಯಾಧುನಿಕ ಹಾಗೂ ಸುರಕ್ಷಿತ ಕ್ಯಾನ್ಸರ್ ಚಿಕಿತ್ಸೆಗೆ ಹೊಸ ದಿಕ್ಕನ್ನು ತೆರೆದಿದೆ.